Connect with us

Hassan

ಜು.20 ರಂದು ಕಸಾಪದಲ್ಲಿ ಜಿಲ್ಲಾ ಪ್ರಾಥಮಿಕ ಜಿಲ್ಲಾ ಶಿಕ್ಷಕರ ಕೋ-ಆಪರೇಟಿವ್ ಸಭೆ, ಪ್ರತಿಭಾ ಪುರಸ್ಕಾರ : ಡಿ. ರಮೇಶ್

Published

on

ಹಾಸನ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ-ಆಪರೇಟಿವ್ ಸೊಸೈಟಿಯ ಮೊದಲನೆ ವಾರ್ಷಿಕ ಮಹಾಸಭೆಯ ಅಂಗವಾಗಿ ೨೦೨೪ ಜುಲೈ ೨೦ರ ಶನಿವಾರ ಅಪರಾಹ್ನ ೨.೩೦ಕ್ಕೆ ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಿ. ರಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಶೇಕಡ ೯೦ಕ್ಕಿಂತ ಹೆಚ್ಚು ಅಂಕಪಡೆದ ಷೇರುದಾರ ಪ್ರಾಥಮಿಕ ಶಾಲಾ ಮಾಡಿಕೊಂಡಿದ್ದಾರೆ. ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ೯೮ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ. ಸೊಸೈಟಿಯ ಷೇರುದಾರ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ, ಸೊಸೈಟಿಯ ೧೦ಕ್ಕಿಂತ ಹೆಚ್ಚು ಷೇರು ಪಡೆದ ಹಾಗೂ ೧ ಲಕ್ಷಕ್ಕಿಂತ ಹೆಚ್ಚು ಎಫ್.ಡಿ ಇಟ್ಟಂತಹ ಷೇರುದಾರರಿಗೆ ಸನ್ಮಾನ ಕಾರ್ಯಕ್ರಮ (೭೦ ಷೇರುದಾರು) ನಡೆಯಲಿದೆ ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದಂತಹ ಸ್ವರೂಪ್ ಪ್ರಕಾಶ್ ನೆರವೇರಿಸಲಿದ್ದು, ಪ್ರತಿಭಾ ಪುರಸ್ಕಾರವನ್ನ ಕರ್ನಾಟಕ ಸರ್ಕಾರದ ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ

ಸಚಿವರಾದ ಕೆ.ಎನ್. ರಾಜಣ್ಣರವರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಹಾಸನ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್‌ರವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಡಿ. ರಮೇಶರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್ ಎಲ್ ಮಲ್ಲೇಶಗೌಡ ಹಾಗೂ ಜಿಲ್ಲಾ ಹಂತದ ಅಧಿಕಾರಿಗಳು ಸಂಘ ಸಂಸ್ಥೆಯ ಅಧ್ಯಕ್ಷರುಗಳು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದುವರೆಗೆ ನಮ್ಮ ಸೊಸೈಟಿಗೆ ೧೩೪೩ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಷೇರುದಾರರಾಗಿದ್ದು, ೨೪,೮೫,೦೦೦ ಸಾವಿರ ಷೇರು ಸಂಗ್ರಹವಾಗಿದೆ. ೧೭,೫೦,೦೦೦/-ಈixeಜ ಆeಠಿosiಣ ಇಟ್ಟಿರುತ್ತಾರೆ. ಸುಮಾರು ೬೫ಲಕ್ಷ ಷೇರುದಾರರಿಗೆ ಸಾಲ ನೀಡಲಾಗಿದೆ. ಮಾಸಿಕ ಒಂದು ಲಕ್ಷಕ್ಕೂ ಹೆಚ್ಚು ಆರ್ ಡಿ ಸಂಗ್ರಹ ಮಾಡಲಾಗುತ್ತಿದೆ ಎಂದರು. ಒಟ್ಟಾರೆ ನಮ್ಮ ಸೊಸೈಟಿಯು ಇಲ್ಲಿಯವರೆಗೆ ರೂ ೧,೨೧,೧೩,೯೨೫ ವಹಿವಾಟು ಮಾಡಿದ್ದು ರೂ ೩,೦೧,೯೦೪ ರೂಗಳ ಖರ್ಚು ಆಗಿದ್ದು ೧,೦೯,೫೭೫ ರೂಪಾಯಿಗಳು ಉಳಿತಾಯ ಮಾಡಲಾಗಿದೆ. ಉಳಿತಾಯದ ಬಾಬನ್ನು ಎಲ್ಲಾ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಟ್ ಅನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ, ಶಿಕ್ಷಕರಿಂದ ಪಾರದರ್ಶಕವಾಗಿ ಉತ್ತಮ ಕಾರ್ಯ

ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಾಲದ ಮೊತ್ತ ಹೆಚ್ಚಳ ಶಿಕ್ಷಕರಿಗೆ ಕ್ಯಾಂಟೀನ್ ತೆರೆಯುವುದರ ಜೊತೆಗೆ ಶಿಕ್ಷಕರ ಅವರ ಕುಟುಂಬಕ್ಕೆ ಸಹಕಾರ ನೀಡುವುದು ನಮ್ಮ ಸೊಸೈಟಿಯ ಉದ್ದೇಶವಾಗಿದೆ. ಇದೆ ಶನಿವಾರ ಅಪರಾಹ್ನ ೨.೩೦ಕ್ಕೆ ನಡೆಯುವ ನಮ್ಮ ಸೊಸೈಟಿಯ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು ಷೇರುದಾರರು ನೌಕರರು ಹಾಸನ ಜಿಲ್ಲೆಯ ಸರ್ಕಾರಿ ನೌಕರ / ಶಿಕ್ಷಕರುಗಳ ಸಂಘದ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸೊಸೈಟಿಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಆಪರೇಟಿವ್ ಸೊಸೈಟಿ ಗೌರವ ಕಾರ್ಯದರ್ಶಿ ವೈ.ಎಸ್. ತಮ್ಮಣ್ಣಶೆಟ್ಟಿ, ನಿರ್ದೇಶಕರಾದ ಟಿ.ಹೆಚ್. ರಾಜು, ಎಸ್.ಎನ್. ಶುಭಮಂಗಳ, ಹೆಚ್.ಆರ್. ಪೂರ್ಣೇಶ್, ಎಂ.ಆರ್. ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ

Published

on

ಹಾಸನ: ನಗರದ ಪ್ರತಿಷ್ಠಿತ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿರುವ ಡಾ.ಎಸ್.ಎ.ನಿತಿನ್ ಅವರು ಈ ಬಾರಿಯ ಜಿಲ್ಲಾಡಳಿತದ ಗಣರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾಡಳಿತ ಅಭಿನಂದಿಸುತ್ತಿದ್ದು, ಈ ಸಲ ವೈದ್ಯಕೀಯ ಕ್ಷೇತ್ರದಿಂದ ಡಾ.ನಿತಿನ್ ಅವರನ್ನು ಆಯ್ಮೆ ಮಾಡಲಾಗಿದೆ. 2001 ರಿಂದ ಆಯುರ್ವೇದ ವೈದ್ಯರಾಗಿ ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದ ಇವರು, 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹಾಸನದ ಪ್ರತಿಷ್ಠಿತ ರಾಜೀವ್ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ವೈದ್ಯರಾಗಿ, ಶೈಕ್ಷಣಿಕ ಸಲಹೆಗಾರರಾಗಿ, ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರಿಂದ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಸದಸ್ಯರಾಗಿದ್ದಾರೆ.
2017 ರಲ್ಲಿ ರಾಷ್ಟ್ರೀಯ ಜೈನ್ ಯುವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜರಾಗಿದ್ದಾರೆ,
ವೈದ್ಯ ಸೇವೆ ಜೊತೆಗೆ ಜನಪರ ಕೆಲಸ ಕಾರ್ಯವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ರೋಗಿಗಳ ಔಷಧ ಚೀಟಿಯನ್ನೂ ಕನ್ನಡದಲ್ಲೇ ಬರೆಯುತ್ತಿರುವುದು ಇವರ ಕನ್ನಡ ಪ್ರೀತಿಗೆ ಹಿಡಿದ ಕನ್ನಡಿ.
ಜಿಲ್ಲೆ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ, ವಿವಿಧ ರೋಗ-ರುಜಿನಗಳ ಬಗ್ಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಲೇಖನ ಬರೆದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ರೀತಿಯ 250ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ. ಅಲ್ಲದೆ ಈಗಿನ ಸಂದರ್ಭಕ್ಕೆ ಆಯುರ್ವೇದ ಮಹತ್ವದ ಬಗ್ಗೆಯೂ ಹತ್ತಾರು ಲೇಖನ ಬರೆದು ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಅರಿವು, ಜಾಗೃತಿ ಕೆಲಸವನ್ನೂ ಮಾಡುತ್ತಿರುವ ಅಪರೂಪದ ವೈದ್ಯರು. ಜೊತೆಗೆ 200ಕ್ಕೂ ಹೆಚ್ಚು ಹನಿಗವನ, 100ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, 100ಕ್ಕೂ ಹೆಚ್ಚು ಆರೋಗ್ಯ ಮಾಹಿತಿ ಕುರಿತು ಉಪನ್ಯಾಸ, 70ಕ್ಕೂ ಹೆಚ್ಚು ಆರೋಗ್ಯ ಶಿಬಿರ ಮಾಡಿದ್ದಾರೆ. ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರವಣಬೆಳಗೊಳದ ಎಸ್.ಎನ್.ಅಶೋಕ್ ಕುಮಾರ್-ಜಿ.ಪಿ.ಶ್ಯಾಮಲಾದೇವಿ ಅವರ ಸುಪುತ್ರರಾದ ನಿತಿನ್ ಅವರು, ಪ್ರಾಥಮಿಕ ಶಿಕ್ಷಣವನ್ನೇ ಶ್ರವಣಬೆಳಗೊಳದಲ್ಲೇ ಮುಗಿಸಿ ಪ್ರೌಢಶಿಕ್ಷಣವನ್ನು ಮಾವಿನಕೆರೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದರು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್, ಎಂಡಿ ಪಡೆದರು. ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಪಿಹೆಚ್ಡಿ ಪಡೆದರು.

Continue Reading

Hassan

ಅರೇಳ್ಳಿ: ಜ.26 ರಂದು 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ

Published

on

ಹಾಸನ: ಸಂವಿಧಾನ ದಿನಾಚರಣೆ ಅಂಗವಾಗಿ ಜನವರಿ 26ರ ರಂದು ಬೇಲೂರು ತಾಲೂಕಿನ ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುವುದು ಎಂದು ದಲಿತ ಮುಖಂಡರಾದ ಅರೆಹಳ್ಳಿ ನಿಂಗರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಭೀಮ ಕೋರೆಂಗಾವ್ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ ಕೇವಲ ೫೦೦ ಜನ ಮಹರ್ ಸೈನಿಕರು ೨೮,೦೦೦ ಪೇಶ್ವೆ ಸೈನಿಕರನ್ನು ಬಗ್ಗುಬಡಿದ ವಿಜಯದ ದಿನವೇ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷವೂ ಹರೇಹಳ್ಳಿಯಲ್ಲಿ ಆಚರಿಸಲಾಗುತ್ತಿದ್ದು ಅದೇ ರೀತಿ ಈ ವರ್ಷವೂ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು. ಜನವರಿ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಂಬೇಡ್ಕರ್ ಭಾವಚಿತ್ರ ಹಾಗೂ ವಿಜಯ ಸ್ತಂಭದ ಮೆರವಣಿಗೆ ನಡೆಯಲಿದೆ ಎಂದರು.

ಅದೇ ದಿನ ಸಂಜೆ ೬ ಸುಮಾರಿಗೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್, ಅಂಬೇಡ್ಕರ್ ಅನುಯಾಯಿ ಹಾಗೂ ನಟ ಚೇತನ್ ಅಹಿಂಸಾ, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಕಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು, ಅರೆಹಳ್ಳಿ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿರೂಪಾಕ್ಷ, ಲಿಂಗರಾಜು, ವಿಜಯೋತ್ಸವ ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಮೇಶ್, ಸಿದರಾಜು, ದಿನೇಶ್, ಸೋಮಶೇಖರ್ ಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ

Published

on

ಹಾಸನ: ನಗರದ ಡೈರಿ ವೃತ್ತ, ಅರಸೀಕೆರೆ ರಸ್ತೆ ಬಳಿ ಕೈಗಾರಿಕ ಪ್ರದೇಶದಲ್ಲಿ ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ ಸಮಾರಂಭಕ್ಕೆ ಶುಕ್ರವಾರದಂದು ಗುದ್ದಲಿ ಪೂಜೆ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಮಾತನಾಡಿ, ಎರಡನೇ ಅಂತಸ್ಥಿತನ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿದೆ. ಈ ಕಟ್ಟಡ ಸಂಘಕ್ಕೆ ಉಪಯೋಗವಾಗಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.

ಎಫ್.ಕೆ.ಸಿ.ಸಿ.ಐ. ಐಟಿ-ಬಿಟಿ ಸಮಿತಿ ಅಧ್ಯಕ್ಷ ಹೆಚ್.ಎ. ಕಿರಣ್ ಮಾತನಾಡಿ, ಸಂಘದ ಎರಡನೇ ಹಂತದ ಶಿಲನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಕಳೆದ ಎರಡು ದಶಕಗಳಿಂದ ನಮ್ಮ ಸಂಘದ ಕಾರ್ಯಕ್ರಮಗಳು ಹಾಗೂ ಕಾರ್ಯವ್ಯಾಪ್ತಿ ಜಿಲ್ಲಾಧ್ಯಂತ ಹರಡಿದೆ. ಎರಡು ಸಾವಿರ ಜನ ಇದ್ದಂತಹ ಉದ್ಯಮಿಗಳು ಜಿಲ್ಲಾಧ್ಯಂತ ಈಗ ೨೦ ಸಾವಿರಕ್ಕೂ ಹೆಚ್ಚುಜನ ಉದ್ಯಮಿಗಳು ಇದ್ದಾರೆ. ಈ ಭಾಗವು ಕೂಡ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಇ-ಖಾತೆ ವಿಚಾರವಾಗಿಯೂ ಕೂಡ ನಗರಸಭೆ ಅಧ್ಯಕ್ಷರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.

ನಿರ್ಮಾಣವಾಗುತ್ತಿರುವ ಎರಡನೇ ಅಂತಸ್ಥಿನ ಕಟ್ಟಡವು ಕೈಗಾರಿಕ ಉದ್ಯಮಿಗಳ ಕಾರ್ಯಕ್ರಮಕ್ಕೆ ಮತ್ತು ಇಂಡಸ್ಟ್ರಿಯಲ್ ಕಾರ್ಯಕ್ರಮ ನಡೆಸುವುದಕ್ಕೆ ಒಂದು ಹಾಲ್ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಅಂತಸ್ಥನ್ನು ಸ್ಕಿಲ್ ಡೆವಲಪ್ ಮೆಂಟ್ ಗೆ ಈಗಾಗಲೇ ಉದ್ಘಾಟನೆಗೊಂಡಿದೆ. ಉದ್ಯಮಿಗಳ ಹಲವಾರು ಜನರಿಗೆ ಕಾರ್ಯಕ್ರಮವನ್ನು ಸದ್ಯದಲ್ಲೆ ಮಾಡಲಾಗುವುದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಹೆಚ್.ಎ.ಡಿ.ಎಸ್.ಎಸ್.ಐ.ಎ. ಅಧ್ಯಕ್ಷ ಆರ್. ಶಿವರಾಮ್, ಉಪಾಧ್ಯಕ್ಷ ಪ್ರಕಾಶ್ ಎಸ್. ಯಾಜಿ, ಪ್ರಧಾನ ಕಾರ್ಯದರ್ಶಿ ಎನ್. ಸುದರ್ಶನ್, ಲಘು ಒದ್ಯೋಗ ಭಾರತೀ ಪ್ರಸನ್ನ ಕುಮಾರ್ ಮತ್ತು ಶಿವಾನಂದ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!