Hassan
ರೈತರಿಗೆ ನೆರವಾಗದ ಸರಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ – ರವಿ ಕಿರಣ್ ಪೂಣಚ್ಚ
ಹಾಸನ: ರಾಜ್ಯದಲ್ಲಿ ಜನಪರವಾದಂತಹ ಯಾವುದೇ ಕೆಲಸಕ್ಕೆ ಹೊತ್ತು ಕೊಡದೇ ಅಧಿಕಾರದ ದುರ್ಭಳಕೆ ಮಾಡಿಕೊಂಡಂತಹ ಬಿಜೆಪಿ ಪಕ್ಷವು ಮತ್ತು ಕಾಂಗ್ರೆಸ್ ಸರ್ಕಾರ ಕೂಡ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪೂಣಚ್ಚ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಈಗ ರಾಜ್ಯದಲ್ಲಿ ಬಿಜೆಪಿ ಸರಕಾರವು ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಸರಕಾರ ಅಧಿಕರಲ್ಲಿ ಇದ್ದ ಅವಧಿಯಲ್ಲಿ ಸತತ ಹೋರಾಟದ ಫಲವಾಗಿ ರೈತ ವಿರೋಧಿ ಮೂರು ಕಾಯಿದೆಗಳನ್ನು ವಾಪಸ್ ಪಡೆದಿದೆ. ಆದರೆ ಈ ವರೆಗೆ ಕೇಂದ್ರ ಸರಕಾರ ನೀಡಿದ ಭರವಸೆಗಳನ್ನು ಈಡೇರಿಸಿರುವುದಿಲ್ಲ. ಈ ಹೋರಾಟದಲ್ಲಿ ಮೃತಪಟ್ಟ ೭೫೦

ರೈತರಿಗೆ ಪರಿಹಾರ ನೀಡುವುದಾಗಿ ಕೇಂದ್ರ ಭರವಸೆ ನೀಡಿತ್ತು ಆದರೆ ಈವರೆಗೆ ಅದರ ಬಗ್ಗೆ ಸರ್ಕಾರ ಗಮನಹರಿಸಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೂರು ಮಸಿದೆಯನ್ನು ಕಾಯಿದೆಯನ್ನು ವಾಪಸ್ ಪಡೆದು ಜನಪರ ಆಡಳಿತ ಕೊಡುವುದಾಗಿ ಹೇಳಿ ಬಂದಂತಹ ಕಾಂಗ್ರೆಸ್ ಸರಕಾರದ ಆಡಳಿತ ನಡೆಸಿ ಒಂದು ವರ್ಷಗಳಾಗಿದೆ. ಈಗ ೫ ಗ್ಯಾರಂಟಿಗಳನ್ನು ಮಾತ್ರ ಕೊಡುವ ಕರ್ತವ್ಯ

ಎಂದುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಕೇವಲ ಭರವಸೆ ಗಳನ್ನು ನೀಡಿ ರೈತರಿಗೆ ವಂಚನೆ ಮಾಡಿದೆ, ಕೊಬ್ಬರಿಗೆ ರೈತರಿಗೆ ಬೇಡಿಕೆಯಸ್ಟು ಬೆಂಬಲ ಬೆಲೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಬರ ಪರಿಹಾರ ನೀಡುವಲ್ಲಿ ಕೂಡ ಸರಕಾರಗಳು ವಿಫಲವಾಗಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದರು. ಸೋಲರ್ ಹಾಕಿಸಿ ಸಾಲ ಕೊಡುವುದಾಗಿ ಹೇಳಿದ್ದು, ಸಲಕರಣೆ ವೆಚ್ಚ ರೈತರೇ ಭರಿಸಬೇಕು. ಇನ್ನು ಭರದಿಂದ ರೈತರು ತತ್ತರಿಸಿ ಹೋಗಿದ್ದರೂ ಬರ ಪರಿಹಾರ ಇದುವರಿಗೂ ಕೊಟ್ಟಿರುವುದಿಲ್ಲ. ಕೇಂದ್ರವು ಕೂಡ ವಂಚನೆ ಮಾಡಿದೆ ಎಂದು ದೂರಿದರು. ಫಸಲು ಪಹಣಿ, ಪೋಡಿ, ದುರಸ್ತಿ ಹಾಗೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕೂಡ ಹೆಚ್ಚಿಸಿದ್ದು, ಈಗ ಜುಲೈ ೧೫ ರಿಂದ ವಿಧಾನ

ಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೂಡ ಒಂದು ದಿನ ಸರಕಾರದ ನಿಲುವುಗಳನ್ನು ವಿರೋಧಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇಲ್ಲಿ ಒಂದು ಪ್ರಾದೇಶಿಕ ಪಕ್ಷ ಇದ್ದು, ಅದು ಕೂಡ ರಾಷ್ಟ್ರೀಯ ಪಕ್ಷದ ಜೊತೆ ವಿಲಿನ ಆಗುವ ಹಂತಕ್ಕೆ ಬಂದಿದೆ. ಇಲ್ಲಿನ ನೆಲ ಜಲದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ಮೂರನೇ ಶಕ್ತಿ ರಾಜಕೀಯವಾಗಿ ಬರಬೇಕು. ಅದು ಪರ್ಯಾಯವಾಗಿರಬೇಕು. ಶೇಕಡ ೭೦ ರಿಂದ ೮೦ ಭಾಗ ಜನರು ಸುಮ್ಮನೆ ಕುಳಿತಿದ್ದು, ಸವೋಧಯ ಕನಾಟಕ ಪಕ್ಷವನ್ನು ತಂದು ಮತ್ತೆ ರಾಜ್ಯದಲ್ಲಿ ಗಟ್ಟಿಗೊಳಿಸಬೇಕು. ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಂತಹ ೧೮೭ ಕೋಟಿ ರೂಗಳ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡಲಾಗಿದೆ. ಕಳೆದ ಬಿಜೆಪಿ ಸರಕಾರ ೪೦ ಪಸೇಂಟ್ ಸರಕಾರ

ಕಮಿಷನ್ ತೆಗೆದುಕೊಳ್ಳುತ್ತಿರುವುದರ ಬಗ್ಗೆ ನೋಡುತ್ತಿದ್ದೇವು. ಈಗಿನ ಕಾಂಗ್ರೆಸ್ ಸರಕಾರದ ಮುಖ ಮತು ಪಕ್ಷ ಬೇರೆ ಇದೆ ಆದರೇ ಅದೆ ದಾರಿಯಲ್ಲಿ ಹೋಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಘು ಹಿರಿಸಾವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ವಾಜಿದ್, ತಾಲೂಕು ಅಧ್ಯಕ್ಷ ಶಾಂತರಾಜ್ ಅರಸ್ ಇತರರು ಉಪಸ್ಥಿತರಿದ್ದರು.
Hassan
ಭಾರಿ ಹೊಂಡದಲ್ಲಿ ಸಿಲುಕಿದ ಲಾರಿ: ಒಂದು ಗಂಟೆ ಕಾಲ NH-75 ಹೆದ್ದಾರಿ ಬಂದ್
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಗ್ರಾಮ ಸಮೀಪ ಲಾರಿಯೊಂದು ಭಾರೀ ಹೊಂಡದಲ್ಲಿ ಸಿಲುಕಿದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ಮಂಗಳೂರಿನಿಂದ ಗೂಡ್ಸ್ ತುಂಬಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಲಾರಿ, ದೋಣಿಗಾಲ್ ಸಮೀಪದ ಕಿರಿದಾದ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಭಾರೀ ಹೊಂಡದಲ್ಲಿ ಸಿಲುಕಿಕೊಂಡಿತ್ತು. ಮುಂದೆ ಚಲಿಸಲು ಆಗದೆ ನಿಂತ ಲಾರಿಯಿಂದ ಇತರೆ ವಾಹನಗಳು ಸಾಗಲಾರದೆ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮಂಗಳೂರು-ಬೆಂಗಳೂರು ಮಾರ್ಗದ ವಾಹನಗಳನ್ನು ಕಪ್ಪಳಿ ಗ್ರಾಮದ ಮೂಲಕ ಹಾಗೂ ಬೆಂಗಳೂರು-ಮಂಗಳೂರು ಮಾರ್ಗದ VoZಮಾನಗಳನ್ನು ಸುಬ್ರಮಣ್ಯ ರಸ್ತೆಯ ಮೂಲಕ ತಿರುಗಿಸಿ ಸಂಚಾರಕ್ಕೆ ಅವಕಾಶ ಮಾಡಿ, ವಾಹನ ದಟ್ಟಣೆಯನ್ನು ನಿಯಂತ್ರಿಸಿದರು. ನಂತರ ಕ್ರೇನ್ ಬಳಸಿ ಲಾರಿಯನ್ನು ಹೊಂಡದಿಂದ ಹೊರತೆಗೆದ ನಂತರ ಸಂಚಾರ ಸುಗಮಗೊಂಡಿತು.
Hassan
ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿ: ಸಕಲೇಶಪುರ ತಾಲೂಕಿನ 2 ಪಿಡಿಒಗಳು ಆಯ್ಕೆ
ಸಕಲೇಶಪುರ: ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ತಾಲೂಕಿನ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಆನೆಮಹಲ್ ಗ್ರಾಪಂ ಪಿಡಿಒ ವೇಣುಗೋಪಾಲ್ ಹಾಗೂ ಹಾನುಬಾಳು ಗ್ರಾ.ಪಂ. ಪಿಡಿಒ ಕೆ. ಹರೀಶ್ ಕರ್ನಾಟಕ ಸರ್ಕಾರಿ ನೌಕರರ ಫುಟ್ಬಾಲ್ ತಂಡದಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಈಗಾಗಲೇ ಹಲವಾರು ಟೂರ್ನಿಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರಮುಖ ಫುಟ್ಬಾಲ್ ಆಟಗಾರರಾಗಿ ಗುರುತಿಸಿಕೊಂಡಿರುವ ಅವರನ್ನು ಸ್ನೇಹಿತರು, ಸಹೋದ್ಯೋಗಿಗಳು ಅಭಿನಂದಿಸಿದ್ದಾರೆ.
Hassan
ಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ 2025-26ನೇ ಸಾಲಿನ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೌರವ ಮತ್ತು ಬಹುಮಾನ ವಿತರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಅರ್.ಟಿ. ದ್ಯಾವೇಗೌಡರು ಮಾತಾನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಅಗತ್ಯ. ಗೆಲುವು-ಸೋಲು ಮುಖ್ಯವಲ್ಲ, ಸ್ಪರ್ಧಾತ್ಮಕ ಮನೋಭಾವ ಮತ್ತು ಸೌಹಾರ್ದತೆ ಮುಖ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಚುರುಕಾಗಿ ತೊಡಗಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಹೊರತರುವುದು ಇಂತಹ ವೇದಿಕೆಗಳಿಂದ ಸಾಧ್ಯ. ನಮ್ಮ ಕಾಲೇಜು ವಿಶಾಲ ಆವರಣ, ಎಲ್ಲಾ ರೀತಿಯ ಕ್ರೀಡಾ ಮೈದಾನಗಳು ಹಾಗೂ ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ಹೆಚ್.ಜೆ. ಅಮರೇಂದ್ರ ಅವರು, ವಿದ್ಯಾರ್ಥಿಗಳು ಹೊರ ಕಾಲೇಜುಗಳಲ್ಲಿ ಭಾಗವಹಿಸಿ ವಿಜೇತರಾಗಿರುವುದು ಕಾಲೇಜಿಗೆ ಗೌರವ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಹೆಚ್.ಎಸ್. ನರಸಿಂಹನ್, ಪ್ರಾಧ್ಯಾಪಕರಾದ ಡಾ. ಎ.ಜೆ. ಕೃಷ್ಣಯ್ಯ, ಡಾ. ಶಿವಶಂಕರ್, ಮಂಜುನಾಥ್, ಸಂಯೋಜಕರು ಬಿ.ಎನ್. ಬೃಂದಾ, ಅರ್.ಬಿ. ಶೃತಿ ಸೇರಿದಂತೆ ಅನೇಕ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಬಾರಿ ಸಿವಿಲ್ ಇಂಜಿನಿಯರಿಂಗ್ ಬ್ರಾಂಚ್‌ನ ಕ್ರೀಡಾಕೂಟದಲ್ಲಿ ಕ್ರಿಕೆಟ್, ಸ್ವಿಮ್ಮಿಂಗ್, ವಾಲಿಬಾಲ್, ಕಬ್ಬಡಿ, ಥ್ರೋಬಾಲ್, ಪುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆದಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳು ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು.
-
Mysore23 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya7 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Hassan3 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Mandya16 minutes agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Special22 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Kodagu4 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Hassan2 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore9 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
