Hassan
ಮಾಜಿ ಸಂಸದ ಪ್ರಜ್ವಲ್ ಪ್ರಕರಣಕ್ಕೆ ಇನ್ನಷ್ಟು ತಿರುವು ಸಂತ್ರಸ್ತೆಯರ ಕಾನೂನು ನೆರವಿಗೆ ಮುಂದಾದ ಹಿರಿಯ ವಕೀಲರ ತಂಡ: ಬಿ.ಟಿ. ವೆಂಕಟೇಶ್
ಹಾಸನ: ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸದಂತೆ ಸಂತ್ರಸ್ತೆಯರು ಹಲವು ವರ್ಷಗಳಿಂದಲೂ ತಮಗೆ ಆದ ಅನ್ಯಾಯ ಹೇಳಿಕೊಳ್ಳಲು ಮತ್ತು ಆತ್ಮಸ್ಥೈರ್ಯ ತುಂಬಿ ಅವರಿಗೆ ನ್ಯಾಯ ಒದಗಿಸಲು ಕಾನೂನು ನೆರವಿಗಾಗಿ ನಮ್ಮ ವಕೀಲರ ತಂಡವು ಸಜ್ಜಾಗಿದ್ದು, ಒಂದು ಕಾಲ್ ಮಾಡಿದರೇ ಸಾಕು ನಿಮ್ಮ ಸಹಾಯಕ್ಕೆ ಬರಲಿದೆ ಎಂದು ಎಂದು ಹೈಕೋರ್ಟ್ ನ ಹಿರಿಯ ವಕೀಲ ಬಿ.ಟಿ. ವೆಂಕಟೇಶ್ ತಿಳಿಸಿ ಅಭಯ ಹಸ್ತ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಾಜಿ ಸಂಸದ ಪ್ರಜ್ವಲ್ ಕೇಸಿನ ವಿಚಾರವಾಗಿ ಎಸ್ ಐಟಿ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರು ಸೇರಿದಂತೆ ತನಿಖೆಯನ್ನ ಗೌಪ್ಯವಾಗಿಡಲಾಗುವುದು. ಮಹಿಳಾ ವಕೀಲರು ಸಂತ್ರಸ್ತೆಯರ ಪರ ನಿಂತಿದ್ದು, ಭಯಪಡದೆ ದೂರನ್ನು ನೀಡಬಹುದಾಗಿದೆ. ಈಗಾಗಲೇ ಐದು ಪ್ರಕರಣಗಳು ದಾಖಲಾಗಿದ್ದು, ಉಳಿದವರು ಯಾವುದೇ ಭಯವಿಲ್ಲದೆ ಮತ್ತು ಅಂಜಿಕೆ ಇಲ್ಲದೆ ದೂರು ನೀಡಬಹುದಾಗಿದೆ. ನಿಮ್ಮ ಹೆಸರನ್ನ ಗೌಪ್ಯವಾಗಿ ಇಡಲಾಗುವುದು ಮತ್ತು ನಿಮಗೆ ಕಾನೂನಿನ ಮೂಲಕ ನೆರವು ನೀಡುವ ದೃಷ್ಟಿಯಿಂದ ಮಹಿಳಾ ವಕೀಲರ ಪಡೆಯನ್ನು ನೇಮಕ ಮಾಡಲಾಗಿದೆ ಎಂದರು. ಸಂತ್ರಸ್ತೆಯವರ ಪರ ನಾವು ಇದ್ದೇವೆ ಎಂದು ಈಗಾಗಲೇ ಹಾಸನದಲ್ಲಿ ಬೃಹತ್ ಹೋರಾಟ ನಡೆಸಿ

ಒಂದು ಸಂದೇಶ ಕೊಡಲಾಗಿದೆ. ಈಗಾಗಲೇ ಎಸ್.ಐ.ಟಿ. ಯಲ್ಲಿ ಐದು ಜನ ಮಹಿಳೆಯರು ದೂರು ದಾಖಲಿಸಿದ್ದು, ಆದರೇ ಹಲವಾರು ವರ್ಷಗಳಿಂದ ಆಗಿರುವ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗದ ಅನೇಕ ಸಂತ್ರಸ್ತೆಯರು ಇದ್ದಾರೆ. ಈಗಾಗಲೇ ಅವರಿಗೆ ಭಯಪಡಿಸಿ ಆಮಿಷ ಒಡ್ಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು. ಈಗಾಗಲೇ ಅನೇಕ ಸಂತ್ರಸ್ತೆಯರ ಮನೆ ಮುಂದೆ ಸಿಸಿ ಕ್ಯಾಮರ ಹಾಕುವುದರ ಜೊತೆಗೆ ನಿಗಾವಹಿಸಲಾಗಿದೆ. ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರುಗಳು ಸೇರಿದಂತೆ ತನಿಖೆಯನ್ನ ಗೌಪ್ಯವಾಗಿ ಇಡಲಾಗುವುದು ಒಂದು ವೇಳೆ ಸಂತ್ರಸ್ಯರ ಬೆಂಬಲಕ್ಕೆ ಮಹಿಳಾ ವಕೀಲರ ಸಹಾಯವನ್ನ ಪಡೆಯಬಹುದಾಗಿದೆ ಎಂದು ಹೇಳಿದರು.

ವಕೀಲರಾದ ಅಖಿಲ ವಿದ್ಯಾಸಂದ್ರ ಮತ್ತು ಹೈಕೋರ್ಟ್ ವಕೀಲರಾದ ಮೈತ್ರಿ ಮಾತನಾಡಿ, ಸಂಸದ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸಂತ್ರಸ್ತೆ ಮೇಲೆ ಮಾತ್ರ ಆಗಿರುವ ಅಪರಾದವಲ್ಲ. ಇಡೀ ಸಮಾಜದ ಮೇಲೆ ಆಗಿದೆ ಎಂದು ನಾವು ಪರಿಗಣಿಸಬೇಕಾಗಿದೆ. ನ್ಯಾಯ ಸಿಗಲೆಂದು ನಮ್ಮ ತಂಡ ಸನ್ನದವಾಗಿದೆ. ಇಲ್ಲಿವರೆಗೂ ಎಷ್ಟು ಜನರು ದೂರು ದಾಖಲಿಸಿದ್ದಾರೆ, ಇನು ಎಷ್ಟು ಜನರು

ದೂರು ದಾಖಲಿಸಿಲ್ಲ. ಲೀಗಲ್ ಸಪೋರ್ಟ್ ಸಿಗಬೇಕು. ನಮ್ಮ ತಂಡದ ಬಳಿ ಬಂದರೇ ವಿಷಯ ಹೊರಗೆ ಬರುತ್ತದೆ ಎನ್ನುವ ಭಯವಿದೆ. ನಮ್ಮ ವಕೀಲರ ತಂಡದ ಬಳಿ ಬಂದರೇ ಎಲ್ಲಾ ಸಂತ್ರಸ್ತೆಯರ ಹೆಸರು ಮತ್ತು ದೂರುಗಳು ಸೇರಿದಂತೆ ತನಿಖೆಯನ್ನ ಗೌಪ್ಯವಾಗಿ ಇಡಲಾಗುವುದು. ಒಂದು ವೇಳೆ ಸಂತ್ರಸ್ತರ ಬೆಂಬಲಕ್ಕೆ ಮಹಿಳಾ ವಕೀಲರ ಸಹಾಯವನ್ನು ಪಡೆಯಬಹುದರ ಜೊತೆಗೆ ಪ್ರಕರಣ ಮುಗಿಯುವವರೆಗೂ ನಿಮ್ಮ ಜೊತೆ ಇರಲಿದ್ದಾರೆ ಎಂದು ದೈರ್ಯ ತುಂಬಿದರು.

ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ ವಕೀಲರಾದ ವಿನಯ್ ಶ್ರೀನಿವಾಸ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ವಿಮಲಾ, ಎಂ.ಜಿ. ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಿಷನ್ ಸೇರಿದಂತೆ ಇನ್ನಿತರೆ ಉಪಕರಣಗಳು ಮಾಯ!
ಬೇಲೂರು: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ಬೆಲೆಬಾಳುವ ಬಡವರ ಉಪಯೋಗಕ್ಕಾಗಿ ಇರುವ ಸ್ಕ್ಯಾನಿಂಗ್ ಮಿಷನ್ ಸೇರಿದಂತೆ ಇನ್ನಿತರೆ ಉಪಕರಣಗಳು ಮಾಯವಾಗಿವೆ.
ಸರ್ಕಾರಿ ಆಸ್ಪತ್ರೆಯಲ್ಲಿದ್ದ 24 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸ್ಕ್ಯಾನಿಂಗ್ ಮಿಷನ್ ಕಳ್ಳತನ ಸೇರಿದಂತೆ ಇನ್ನಿತರೆ ಲಕ್ಷಾಂತರ ಬೆಲೆಬಾಳುವ ವೆಂಟಿಲೇಟರ್ ಮಾನಿಟರ್ ಗಳು ಮತ್ತು ಆಕ್ಸಿಜನ್ ಸಿಲೆಂಡರ್ ಗಳು ಸರ್ಕಾರಿ ಆಸ್ಪತ್ರೆ ಆಡಳಿತ ವರ್ಗ ಜಿಲ್ಲಾಡಳಿತ ಕಣ್ಣು ಮುಚ್ಚಿ ಕೂತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಅನುಕೂಲಕ್ಕಾಗಿದ್ದ ಸ್ಕ್ಯಾನಿಂಗ್ ಮಿಷನ್ ಕಳ್ಳತನವಾಗಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಪತ್ತೆಯಾಗಲು ಪ್ರಮುಖ ಕಾರಣ ಡಿಎಚ್ಒ ಇಲಾಖೆಯಿಂದ ಸ್ಕ್ಯಾನಿಂಗ್ ಡಾಕ್ಟರ್ ಬೇಲೂರಿಗೆ ಬೇಕೆಂಬುವ ಮನವಿಯಿಂದ ಸ್ಕ್ಯಾನಿಂಗ್ ಮಿಷನ್ ಪರಿಶೀಲಿಸುವಾಗ ಸ್ಕ್ಯಾನಿಂಗ್ ಮಿಷನ್ ಸರ್ಕಾರಿ ಆಸ್ಪತ್ರೆ ಕೊಠಡಿಯಿಂದ ಮಾಯವಾಗಿದೆ. ಇದು ಸಿಸಿಟಿವಿ ಪರಿಶೀಲಿಸುವ ವೇಳೆ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪ್ರದೀಪ್ ಎಂಬ ವ್ಯಕ್ತಿಯ ಸಹಾಯದಿಂದ ಖಾಸಗಿ ಆಂಬುಲೆನ್ಸ್ ಚಾಲಕ ಮತ್ತು ಮಾಲೀಕ ಸುಫಿಯಾನ್ ಎಂದು ತಿಳಿದು ಬಂದಿದೆ.
ಈ ಕಳ್ಳರನ್ನು ಉಳಿಸುವಂತಹ ಕೆಲಸವನ್ನು ಸರ್ಕಾರಿ ಆಸ್ಪತ್ರೆ ಆಡಳಿತ ವರ್ಗ ಮುಂದಾಗಿದ್ದು, ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಈಗಾಗಲೇ ಆಸ್ಪತ್ರೆಯಲ್ಲಿದ್ದಂತ 6 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಕ್ಕೂ ಹೆಚ್ಚು ವೆಂಟಿಲೇಟರ್ ಮಾನಿಟರ್ ಗಳು ಹಾಗೂ 10ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳು ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ಮಾಯವಾಗಿರುವ ಮಾಹಿತಿ ಅಲ್ಲಿನ ಪ್ರಮುಖರಿಂದ ಲಭ್ಯವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳು ಇದ್ದರೂ ಕೂಡ ಆಸ್ಪತ್ರೆ ಸಿಬ್ಬಂದಿಗಳು ವೈದ್ಯರು ಸ್ಟಾಪ್ ನರ್ಸ್ಗಳು ಸೇರಿ ಎಲ್ಲರ ಸಹಕಾರದಿಂದ ಖಾಸಗಿ ಆಂಬುಲೆನ್ಸ್ ಗಳ ಹಣಕ್ಕೆ ಬಲಿಯಾಗಿ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು ಖಾಸಗಿ ಆಂಬುಲೆನ್ಸ್ ಚಾಲಕರು ಆಸ್ಪತ್ರೆಯನ್ನೇ ಮನೆ ಮಾಡಿಕೊಂಡಿದ್ದಾರೆ ಜೊತೆಗೆ ಈ ರೀತಿಯ ಕಳ್ಳತನಕ್ಕೆ ಕೈಜೋಡಿಸಿದ್ದಾರೆಂದು ಆರೋಪಿಸಲಾಗುತ್ತಿದೆ ಈ ಎಲ್ಲಾ ಸತ್ಯಂಸವನ್ನ ವರ ತರಲು ಜಿಲ್ಲೆಯ ನಿಷ್ಠಾವಂತ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳಾಟವನ್ನ ಬಯಲಿ ತರುವರ ಎಂದು ಕಾದು ನೋಡಬೇಕಾಗಿದೆ.
Hassan
ಹಾಸನದಲ್ಲಿ ‘ರನ್‌ನಾಥನ್–2025’ ಓಟ ಸ್ಪರ್ಧೆ ಆಯೋಜನೆ
ಹಾಸನ: ಆರೋಗ್ಯಕರ ಜೀವನಶೈಲಿ ಮತ್ತು ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಹಾಸನ ಜಿಲ್ಲಾ ಕ್ರೀಡಾಂಗಣ, ಹಾಸನದಲ್ಲಿ ‘ರನ್‌ನಾಥನ್–2025’ ಸ್ಪ್ರಿಂಟ್ ಶೈನ್ ಫಿನಿಷ್ ಎಂಬ ಹೆಸರಿನ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆ ಡಿ. 21, 2025 ರಂದು ಬೆಳಿಗ್ಗೆ 8.30ಕ್ಕೆ ನಡೆಯಲಿದೆ ಎಂದು ಶುಭಾಶ್ ಅವರು ತಿಳಿಸಿದರು.
ಸ್ಪರ್ಧೆಯಲ್ಲಿ ವಿವಿಧ ವಯೋಮಾನದವರಿಗೆ ಅವಕಾಶ ಕಲ್ಪಿಸಲಾಗಿದ್ದು, 1ನೇ ತರಗತಿಯಿಂದ 10ನೇ ತರಗತಿ ಹಾಗೂ ಮುಕ್ತ ವಿಭಾಗದವರೆಗೆ ಪ್ರತ್ಯೇಕ ವಿಭಾಗಗಳಲ್ಲಿ ಓಟ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸುವ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನಗಳು ಮತ್ತು ಟ್ರೋಫಿಗಳು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಸ್ಪರ್ಧೆಯ ಪ್ರವೇಶ ಶುಲ್ಕವನ್ನು ರೂ.300 ಎಂದು ನಿಗದಿಪಡಿಸಲಾಗಿದ್ದು, ಆಸಕ್ತರು ಫೋನ್‌ಪೇ ಅಥವಾ ಗೂಗಲ್ ಪೇ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ನಿಯಮಗಳು ಅನ್ವಯವಾಗಲಿದ್ದು, ತೀರ್ಪುಗಾರರ ನಿರ್ಣಯ ಅಂತಿಮವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗಾಗಿ +91 73489 62434 / 94807 00803 ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.
Hassan
ಉತ್ತಮ ಸಮಾಜ ನಿರ್ಮಾಣಕ್ಕೆ ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ
ಹಾಸನ: ಉತ್ತಮ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಜವಾಹರ್ ನವೋದಯ ವಿದ್ಯಾಲಯ, ಮಾವಿನಕೆರೆ (ಹಾಸನ)ದಲ್ಲಿ ವಿದ್ಯಾಭ್ಯಾಸ ಮಾಡಿದ 14ನೇ ಬ್ಯಾಚ್ ಹಳೆಯ ವಿದ್ಯಾರ್ಥಿಗಳ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಚಕ್ರವರ್ತಿ ಅವರು ತಿಳಿಸಿದರು.
ನವೋದಯ ವಿದ್ಯಾಲಯ ಸಮಿತಿ, ನ್ಯೂ ದೆಹಲಿಯ ಆದೇಶದಂತೆ ದೇಶದಾದ್ಯಂತ ಡಿಸೆಂಬರ್ ತಿಂಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ಹಾಸನ ಜಿಲ್ಲೆಯ ಮಾವಿನಕೆರೆ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಈ ವಿಶೇಷ ಕಾರ್ಯಕ್ರಮವನ್ನು 21,22 ರಂದು ಆಯೋಜಿಸಿದ್ದಾರೆ.

ಕಾರ್ಯಕ್ರಮದ ಮೂಲಕ ನವೋದಯ ವಿದ್ಯಾಲಯ ಮತ್ತು ಹಳೆಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು, ಪ್ರತಿವರ್ಷವೂ ವಿದ್ಯಾಲಯ ಹಾಗೂ ಸಮಾಜದ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ವಿದ್ಯಾರ್ಥಿಗಳು–ಪೋಷಕರು ಹಾಗೂ ಸ್ಥಳೀಯ ಸಮಾಜಕ್ಕಾಗಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವುದು, ಕಿರಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿಪರ ಮಾರ್ಗದರ್ಶನ (Career Guidance & Counselling) ನೀಡುವುದು ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿಸಿದರು.
ಉನ್ನತ ಶಿಕ್ಷಣದ ಅವಕಾಶಗಳ ಕುರಿತು ವಿದ್ಯಾರ್ಥಿಗಳನ್ನು ಕರ್ತ ಇನಿಶಿಯೇಟಿವ್, ಅಜೀಮ್ ಪ್ರೇಮಜಿ ವಿಶ್ವವಿದ್ಯಾಲಯ, ಸಾಧನ, ಅವಂತಿ ಹಾಗೂ COE ಮೊದಲಾದ ಸಂಸ್ಥೆಗಳೊಂದಿಗೆ ಸಂಪರ್ಕಿಸುವುದು, ಹಳೆಯ ವಿದ್ಯಾರ್ಥಿಗಳಿಂದ ಸಮಾಜಮುಖಿ ಹೊಸ ಯೋಜನೆಗಳನ್ನು ರೂಪಿಸುವುದು, ಶಾಲೆಯ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಕ್ಕೂ ಈ ಸಮ್ಮೇಳನದಲ್ಲಿ ಒತ್ತು ನೀಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಕವಿತಾ – ಇಂಜಿನಿಯರ್, ಕಾರ್ಪೊರೇಶನ್, ಹಾಸನ, ವಿನಯ್ – ಸರ್ಕಲ್ ಇನ್ಸ್‌ಪೆಕ್ಟರ್, ಹಾಸನ, ಡಾ. ವಿನೋದ್ –(Orthopaedician), ಹಾಸನ, ವಿಶ್ವಾಸ್ ಭಟ್, ಪ್ರಶಾಂತ್, ಪ್ರವೀಣ್ ಹಾಜರಿದ್ದರು.
-
State5 hours agoಟಾಟಾ ಸ್ಕಾಲರ್ಶಿಪ್ 2025–26: ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ: ₹1,00,000 ವರೆಗೆ ಆರ್ಥಿಕ ನೆರವು
-
Hassan19 hours agoಕುಡಿದ ಮತ್ತಿನಲ್ಲಿ ಯುವಕನೋರ್ವನ ಬರ್ಬರ ಹ*ತ್ಯೆ
-
Hassan4 hours agoಉತ್ತಮ ಸಮಾಜ ನಿರ್ಮಾಣಕ್ಕೆ ನವೋದಯ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ
-
Mandya9 minutes agoಡಿ.21ಕ್ಕೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂದ ರಾಜ್ಯ ಮಟ್ಟದ ಬೃಹತ್ ಕಾರ್ಯಕಾರಿ ಸಭೆ ಮತ್ತು ಚಿಂತನಾ ಸಮಾವೇಶ : ಪೂರ್ಣಿಮಾ ಗೊಮ್ಮಟೇಶ್
-
Mysore24 hours agoನಿಗಮ ಮಟ್ಟದ ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆ
-
Manglore3 hours agoಡಿ. 21ರಂದು ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿವೇತನ ಪರೀಕ್ಷೆ
-
Manglore3 hours agoಸ್ವದೇಶಿ ವಸ್ತುಗಳ ಬಳಕೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ – ಡಾ. ಕಲ್ಲಡ್ಕ ಪ್ರಭಾಕರ ಭಟ್
-
Hassan4 hours agoಹಾಸನದಲ್ಲಿ ‘ರನ್‌ನಾಥನ್–2025’ ಓಟ ಸ್ಪರ್ಧೆ ಆಯೋಜನೆ
