Connect with us

Kodagu

ಭ್ರಷ್ಟ ಬಿಜೆಪಿ – ಸ್ವಾರ್ಥಿ ಜೆಡಿಎಸ್ ಸೋಲಿಸಿ ಹಾಸನ ಉಳಿಸಿದ ಮತದಾರರಿಗೆ ಧನ್ಯವಾದ ಹೇಳಿದ ಧರ್ಮೇಶ್

Published

on

ಹಾಸನ : ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಭಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಧನ್ಯವಾದಗಳನ್ನು ಸಲ್ಲಿಸುತ್ತದೆ. ಹಾಗೂ ಹಾಗೂ ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಅಬಿನಂಧನೆಗಳನ್ನು. ತಿಳಿಸುವುದಾಗಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ೩೧ ರಂದು ಹಾಸನದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ’ಸಮಾನ ಮನಸ್ಕರ ಸಮಾಲೋಚನಾ ಸಭೆ’ ನಡೆಸಿ ’ಭ್ರಷ್ಟ ಬಿಜೆಪಿ – ಸ್ವಾರ್ಥಿ ಜೆಡಿಎಸ್ ಸೋಲಿಸಿ; ಹಾಸನ ಉಳಿಸಿ’ ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳ ನಗರ ಗ್ರಾಮಾಂತರ ಮಟ್ಟದಲ್ಲಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಸ್ವತಂತ್ರವಾಗಿ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನದಲ್ಲಿ ಹಲವು ಸಾರ್ವಜನಿಕ ಸಭೆಗಳು, ಸಮಾಲೋಚನಾ ಸಭೆಗಗಳು, ಮಾಧ್ಯಮ ಗೋಷ್ಟಿಗಳು, ಸ್ಥಳೀಯ ಮಟ್ಟದ ಸಭೆಗಳು ಜೊತೆಗೆ ’ಜನ ಸತ್ತಿಲ್ಲ’ ಎನ್ನುವ ಬೀದಿ ನಾಟಕದ ಮುಖಾಂತರ ಲೋಕಸಭಾ ಕ್ಷೇತ್ರದಾದ್ಯಂತ ನಮ್ಮ ತಂಡ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದರು. ಈ ಅಭಿಯಾನದಲ್ಲಿ ನರೇಂದ್ರ ಮೋದಿಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಧುರಾಡಳಿತ ಹಾಗೂ ಕೇವಲ ಒಂದೇ ಕುಟುಂಬದ ಸ್ವಾರ್ಥಕ್ಕಾಗಿ ಜೆಡಿಎಸ್ ನಡೆಸಿದ ಅವಕಾಶವಾದಿ ರಾಜಕಾರಣ ಮತ್ತು ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಶೂನ್ಯ ಕೆಲಸದ ಕುರಿತು ಹಾಸನ ಲೋಕಸಭಾ ಕ್ಷೇತ್ರದ ಜನರಿಗೆ ಕರಪತ್ರ, ಸಭೆ, ಭಾಷಣ, ಚರ್ಚೆ ಮತ್ತು ಬೀದಿ ನಾಟಕದ ಮುಖಾಂತರ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು. ನಮ್ಮ ಒಕ್ಕೂಟ ಸ್ವತಂತ್ರವಾಗಿ ನಡೆಸಿದ ಈ ಮಹತ್ವದ ಪ್ರಯತ್ನಕ್ಕೆ ಮತದಾರರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಮತದಾರರು ಜಿಲ್ಲೆಯಲ್ಲಿನ ಒಂದೇ ಕುಟುಂಬದ ದುರಾಡಳಿತದ ವಿರುದ್ಧ ಮತಚಲಾಯಿಸಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ವಿಕೃತ ಮತ್ತು ದುಷ್ಟ ವ್ಯಕ್ತಿಯನ್ನು ಸೋಲಿಸಿ ಮಹಿಳೆಯರ ಘನತೆಯನ್ನು ಉಳಿಸಿ ಹಾಸನದ ಗೌರವವನ್ನು ಎತ್ತಿಹಿಡಿದ ಕಾರಣಕ್ಕೆ ನಮ್ಮ ಒಕ್ಕೂಟದ ಪರವಾಗಿ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಸೋತವರಿಗೂ ಮತ್ತು ಗೆದ್ದವರಿಗೂ ಇಬ್ಬರಿಗೂ ಕಲಿಯುವ ಪಾಠವಿದೆ. ಪಾಳೆಗಾರಿ, ಜಾತಿವಾದಿ ಮತ್ತು ದುರಂಹಕಾರದ ಆಡಳಿತವನ್ನು ಜನರು ಹೆಚ್ಚು ಕಾಲ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಜನರು ಈ ಚುನಾವಣೆಯ ಮೂಲಕ ನೀಡಿದ್ದಾರೆ. ನೂತನವಾಗಿ ಹಾಸನದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಶ್ ಪಟೇಲ್ ಅವರಿಗೆ ವಿಶೇಷ ಅಭಿನಂಧನೆಗಳನ್ನು ಸಲ್ಲಿಸುವುದರ ಜೊತೆಗೆ ಈ ಚುನಾವಣೆಯಲ್ಲಿ ಜನರು ನೀಡಿರುವ ಸ್ಪಷ್ಟ ಸಂದೇಶವನ್ನು ಅರ್ಥಮಾಡಿಕೊಂಡು, ಸದಾ ಜನರೊಂದಿಗೆ ಇದ್ದುಕೊಂಡು ಜನಪರವಾಗಿ ಕೆಲಸ ಮಾಡುತ್ತಾ, ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜನರ ಪರವಾಗಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಾ ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಧಾ ಜನಪರ ಕೆಲಸ ಮಾಡುವಂತೆ ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ರಾಜಶೇಖರ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಹೆಚ್.ಕೆ. ಸಂದೇಶ್, ಅಬ್ದೂಲ್ ಸಮಾದ್, ಟಿ.ಆರ್. ವಿಜಯಕುಮಾರ್,, ರಾಜು ಗೊರೂvರು, ಇರ್ಷಾದ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ

Published

on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ದೇವನೂರು- ಸುಳುಗೋಡು ಗ್ರಾಮದಲ್ಲಿ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಶನಿವಾರ ರಾತ್ರಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಗ್ರಾಮದ ರೈತ ಮುದ್ದಿಯಡ ದಿನು ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಕೊಂದು ಭಾಗಶ ತಿಂದಿದೆ.

ಸ್ಥಳಕ್ಕೆ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಮತ್ತು ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ಹುಲಿ ಸೆರೆ ಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ಹಾಗೂ ಗಬ್ಬದ ಹಸು ಆಗಿರುವುದರಿಂದ ವಿಶೇಷ ಪ್ರಕರಣದಲ್ಲಿ ಕೂಡಲೇ ಪರಿಹಾರವನ್ನು ನೀಡಬೇಕೆಂದು ನಿರ್ದೇಶನ ನೀಡಿದರು ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದರು.

ಇದಲ್ಲದೆ ಸಾಕಾನೆಗಳನ್ನು ಬಳಸಿ ಕಾಫಿ ಫಸಲಿಗೆ ನಷ್ಟವಾಗದಂತೆ ರಸ್ತೆಯ ಬದಿಯಲ್ಲಿ ಹುಲಿ ಸೆರೆಗೆ ಅರವಳಿಕೆ ನೀಡಿ ಕಾರ್ಯಚರಣೆ ಕೈಗೊಳ್ಳಲಾಗುವುದು. ಹಾಗೂ ಹುಲಿಯನ್ನು ಸಮೀಪದಲ್ಲಿ ಅರಣ್ಯ ಇರುವುದರಿಂದ ಅರಣ್ಯಕ್ಕೆ ಹುಲಿಯನ್ನು ಅಟ್ಟಲು ಕಾರ್ಯಚರಣೆಯನ್ನು ಸಹ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ, ತಿತಿಮತಿ ಆರ್. ಎಫ್. ಓ. ದೇವರಾಜ್ ಹಾಗು ಸಿಬ್ಬಂದಿಗಳು ಹಾಜರಿದ್ದರು.

Continue Reading

Kodagu

ಕ್ರೀಡಾ ಪರಂಪರೆ ಮುಂದುವರೆಸಲು ಶಾಸಕ ಎ.ಎಸ್. ಪೊನ್ನಣ್ಣ ಕರೆ

Published

on

ಶ್ರೀಮಂಗಲ: ಕ್ರೀಡೆ ಯಾವುದೇ ಇರಲಿ ಅದರಲ್ಲಿ ಕೊಡವ ಜನಾಂಗದಿಂದ ಒಬ್ಬ ಕ್ರೀಡಾಪಟು ಇದ್ದೇ ಇರುತ್ತಾರೆ. ಇದು ಕ್ರೀಡಾ ಸಾಧಕರ ಪರಂಪರೆಯಾಗಿ ಬಂದಿದೆ. ಕ್ರೀಡೆ ಹಾಗೂ ಸೇನೆಯಲ್ಲಿ ಕೊಡವ ಜನಾಂಗದ ಸಾಧನೆಯಿಂದ ಇಂದು ಹೆಸರುಗಳಿಸಿದ್ದೇವೆ, ಈ ಪರಂಪರೆಯನ್ನು ನಾವು ಮುಂದೆಯೂ ಮುಂದುವರೆಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯ ಪಟ್ಟರು.

ಹುದಿಕೇರಿ ಕೊಡವ ಸಮಾಜದಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿರುವ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಹಳ ಸುಂದರವಾದ ಲಾಂಛನ ನೋಡಲು ಸಂತೋಷವಾಗುತ್ತದೆ. ಹ ಗಂಡು ಹೆಣ್ಣು ಎಂಬ ಬೇಧ ಭಾವ ಕೊಡವ ಜನಾಂಗದಲ್ಲಿ ಕಂಡುಬರುವುದಿಲ್ಲ.ಐನ್ ಮನೆ ಸಾಂಸ್ಕೃತಿಕ ಹಿರಿಮೆಯನ್ನು ಮತ್ತು ಹೆಣ್ಣು ಗಂಡು ಇರುವ ಲಾಂಛನ ಬದುಕಿನಲ್ಲಿ ಸಮಪಾಲು ಎಂಬುದನ್ನು ಬಿಂಬಿಸುತ್ತದೆ ಎಂದು ವಿಶ್ಲೇಸಿದರು.

ಚೆಕ್ಕೇರ ಕುಟುಂಬದ ಬಗ್ಗೆ ಹೇಳಲು ಸಾಕಷ್ಟಿದೆ. ಈ ಕುಟುಂಬದ ಹಲವಾರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಚೆಕ್ಕೇರ ಪೂವಯ್ಯ ಮತ್ತು ರಾಜ್ಯ ಸರಕಾರ ವಾದದಲ್ಲಿ ಜಮ್ಮ ಬಾಣೆಯ ಹಿಡುವಳಿದಾರರ ಕೈಯಲ್ಲಿದೆ ಉಳಿಯುವುದ್ದಕ್ಕೆ ಎ. ಕೆ. ಸುಬ್ಬಯ್ಯ ಅವರ ಮೂಲಕ ಚೆಕ್ಕೇರ ಪೂವಯ್ಯ ವಕಾಲತ್ತು ಹಾಕಿ ಗೆಲುವು ಕೊಡಗಿಗೆ ಮಾಡಿದ ದೊಡ್ಡ ಕೊಡುಗೆ ಯಾಗಿದೆ.ಚೆಕ್ಕೇರ ಪೂವಯ್ಯ ಅವರು ಆರಂಭಿಸಿದ ಜಮ್ಮಾ ಬಾಣೆಯ ಹೋರಾಟಕ್ಕೆ ಸಹಕಾರ ನೀಡಿ ಈ ಹಕ್ಕನ್ನು ಕೊಡವ ಜನಾಂಗ ಬಾಂಧವರಿಗೆ ನೀಡಿದರು. ಭಾರತೀಯ ಕಾನೂನು ಸೆಕ್ಷನ್ 29, 59 ನನ್ನ ಜೀವ ಇರುವವರೆಗೆ ಮರೆಯುವುದಿಲ್ಲ. ಹಾಗೆಯೇ ಕಂದಾಯ ಕಾಯ್ದೆ ಸೆಕ್ಸ್ಷನ್ 18 ಮತ್ತು ಸೆಕ್ಸ್ಷನ್2 ರ ಅಡಿಯಲ್ಲಿ ಜಮ್ಮ ಭಾಣೆ ಹಕ್ಕನ್ನು ಜನಾಂಗ ಬಾಂಧವರಿಗೆ ನೀಡುವಲ್ಲಿ ಚೆಕ್ಕೇರ ಕುಟುಂಬವು ಬಹಳ ಶ್ರಮಿಸಿದೆ ಎಂದರು.

2002ರಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಂತರ ಹುದಿಕೇರಿಯಲ್ಲಿ ಇದೀಗ ದೊಡ್ಡ ಮಟ್ಟದ ಕ್ರೀಡಾಕೂಟ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಮೂಲಕ ಆಯೋಜಿಸಲಾಗುತ್ತಿದೆ. ಇಂತಹ ಪಂದ್ಯಾವಳಿ ನಡೆಸುವುದು ಹೆಮ್ಮೆಯ ವಿಚಾರ. ಕಳೆದ ಬಾರಿ ನಡೆದ ಕೊಡವ ಕೌಟುಂಬಿಕ ಹಾಕಿ ಹಬ್ಬ ಕುಂಡಿಯೋಳಂಡ ವಿಶ್ವ ದಾಖಲೆ ಬರೆಯಿತು. ಹಾಗೆಯೇ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟವು ವಿಶ್ವದಾಖಲೆ ಬರೆಯಲಿ ಎಂದು ಆಶಿಸುತ್ತೇನೆ ಎಂದರು.

ಹಲವು ರಾಜಕಾರಣಿಗಳು ಹಿಂದೆ ಒಂದು ಮುಂದೆ ಒಂದು ಮಾತನಾಡುತ್ತಾರೆ. ಆದರೆ ನನ್ನಲ್ಲಿ ನೇರ ನಡೆ ನುಡಿ ಇರುವುದರಿಂದ ಜನರ ಮೆಚ್ಚುಗೆ ಗಳಿಸಿದ್ದೇನೆ. ಮತಗಳಿಸುವ, ಕಳೆದುಕೊಳ್ಳುವ ಲೆಕ್ಕಾಚಾರದಲ್ಲಿ ನೇರ ನಡೆ ನುಡಿ ಬದಲಾಯಿಸಿಲ್ಲ. ಪ್ರಾಮಾಣಿಕತೆ ಇದ್ದಾಗ ಜನಾಂಗ ಉತ್ತಮ ಹೆಸರುಗಳಿಸಲು, ಈ ಮೂಲಕ ಜನಾಂಗ ಬೆಳೆಯಲು ಸಾಧ್ಯಎಂದರು.

 

ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಅವರು ಮಾತನಾಡಿ ಕೊಡಗಿನಲ್ಲಿ ಈಗ ಕ್ರೀಡಾಕೂಟದ ಸಮಯ. ಕೊಡಗು ಚಿಕ್ಕ ಜಿಲ್ಲೆಯಾದರೂ ಕ್ರೀಡೆ ಹಾಗೂ ಸೇನೆಗೆ ಹಲವಾರು ಪ್ರತಿಭೆಗಳನ್ನು ನೀಡಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ರೀಡೆ ಎನ್ನುವುದು ಆಂತರಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸುತ್ತದೆ. ಇದರಿಂದ ಬೇರೆ ಬೇರೆ ರೀತಿಯ ಕೌಶಲ್ಯವನ್ನು ಅರಿತುಕೊಳ್ಳಬಹುದು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಎದುರಾಳಿ ತಂಡವನ್ನು ಹೇಗೆ ಗೌರವದಿಂದ ನೋಡಬೇಕು. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಗೆಲುವು ಸಾಧಿಸಲು ಸಾಧ್ಯವಿಲ್ಲ. ವಿವೇಕಾನಂದರ ನುಡಿ, ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬಂತೆ ಸಮಸ್ಯೆಗಳನ್ನು ಎದುರಿಸಿ ಮರಳಿ ಪ್ರಯತ್ನವನ್ನು ಮಾಡಿದಾಗ ಕಾನೂನು ಬದ್ಧವಾಗಿ ಆಡಿದಾಗ ಕ್ರೀಡೆಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರು ಮರಳಿ ಮರಳಿ ಯತ್ನವ ಮಾಡಿದಾಗಲೇ ಅವರು ಸಾಧಿಸಲು ಸಾಧ್ಯವಾಗಿದೆ ಎಂದರು.

ಮತ್ತೋರ್ವ ಅತಿಥಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಮಾತನಾಡಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಚೆಕ್ಕೇರ ಕಪ್ ಪಂದ್ಯಾವಳಿ ಅಧ್ಯಕ್ಷ ಚಂದ್ರಪ್ರಕಾಶ್ ಮಾತನಾಡಿ ಕೊಡಗು ಜಿಲ್ಲೆಯ ನೆಲ ಗಾಳಿ ನೀರು ಪರಿಸರ ಮಳೆ ಬೆಳೆಯ ಆರಾಧಕರಾದ ಅತ್ಯಮೂಲ್ಯವಾದ ವಿಶೇಷ ಜನಾಂಗ ಕೊಡವ ಜನಾಂಗ. ನಮ್ಮ ಉಳಿವಿಗಾಗಿ ಇರುವ ಚಿಕ್ಕ ಕೊಡುಗೆ ಈ ಕೌಟುಂಬಿಕ ಕ್ರೀಡಾಕೂಟ. ಅದರಲ್ಲಿಯೂ ಈ ಕ್ರಿಕೆಟ್ ಹಬ್ಬ ವಿಶೇಷವಾದದ್ದು. ಆಟದ ವಿಷಯದಲ್ಲಿ ನಾವು ಸಹೋದರ- ಸಹೋದರಿ, ತಾಯಿ- ತಂದೆ,ಬಂಧು ಬಳಗ ಒಂದಾಗಿ ನಾವೆಲ್ಲ ಒಂದೇ ಕುಟುಂಬ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಗುರಿ ಹೊಂದಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತೇವೆ. ಈ ಕ್ರೀಡಾಕೂಟದ ಮೂಲಕ ಜನಾಂಗದಲ್ಲಿ ಒಗ್ಗಟ್ಟು, ಪ್ರೀತಿ ವಿಶ್ವಾಸ, ಬಾಂದವ್ಯ ಬಲಗೊಳ್ಳಲು ವೇದಿಕೆಯಾಗಲಿ ಎಂದರು.

ಯಾವುದೇ ಒಂದು ವಿಷಯ ಒಳ್ಳೆಯ ರೀತಿಯಲ್ಲಿ ಅದನ್ನು ಬೆಂಬಲಿಸಬೇಕು. ಸಮಾಜದಲ್ಲಿ ಹಲವಾರು ರೀತಿಯ ವಿಷಯಗಳು ಇರುತ್ತವೆ. ಅವುಗಳಲ್ಲಿ ನಮಗೆ ಬೇಕಾದ ಒಳ್ಳೆಯ ವಿಷಯವನ್ನು ಮಾತ್ರ ಪರಿಗಣಿಸಬೇಕು. ಹಾಗೆ ನೋಡಿದರೆ ಪ್ಲಾಸ್ಟಿಕ್ ಎನ್ನುವುದು ಬಹಳ ಕೆಟ್ಟ ವಿಷಯ ಆದರೆ ಅದಿಲ್ಲದೆ ನಮ್ಮ ಜೀವನ ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅದನ್ನು ನಿರ್ವಹಿಸುವುದು ಅಷ್ಟೇ ಮುಖ್ಯವಾಗಿದೆ. ಕ್ರೀಡೆಯನ್ನು ಕೊಡವ ಜನಾಂಗ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಚೆಕ್ಕೇರ ಕಪ್ ಕ್ರಿಕೆಟ್ ಕ್ರೀಡಾಕೂಟ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿದರು.

ಅಂಜಿಗೇರಿ ನಾಡ್ ತಕ್ಕ ಚೆಕ್ಕೇರ ರಾಜೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚೆಕ್ಕೇರ ಕುಟುಂಬ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಚೆಕ್ಕೇರ ಮೊ mಣ್ಣಯ್ಯ ಅವರು ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿ ಬ್ರಿಟಿಷ್ ಸರ್ಕಾರದಲ್ಲಿ ಎಂಟುವರೆ ವರ್ಷ ಸೆರೆವಾಸ ಅನುಭವಿಸಿದರು.ಚೆಕ್ಕೇರ ಮುತ್ತಣ್ಣ ಅವರು ಗೋಣಿಕೊಪ್ಪ ಕಾವೇರಿ ಕಾಲೇಜು ಹಾಗೂ ವಿರಾಜಪೇಟೆ ಕಾವೇರಿ ಕಾಲೇಜು ಸ್ಥಾಪನೆ ಮಾಡುವ ಮೂಲಕ ಪಿಯುಸಿ ಮೇಲ್ಪಟ್ಟು ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದರು. ಚೆಕ್ಕೇರ ಅಪ್ಪಯ್ಯ ಅವರು ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಿ ಕೂರ್ಗ್ ಸ್ಟಾರ್ ಎಂಬ ಬಿರುದು ಪಡೆದರು. ಈ ಸಂಗೀತ ಸಾಹಿತ್ಯದ ಪರಂಪರೆಯನ್ನು ಅವರ ಪುತ್ರ ತ್ಯಾಜರಾಜ್ ಹಾಗೂ ಮೊಮ್ಮಗ ಪಂಚಮ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಸೇನೆಯಲ್ಲಿ ಚೆಕ್ಕೇರ ಹರೀಶ್ ಅವರು ವೀರ ಮರಣ ಅಪ್ಪಿ ಹುತಾತ್ಮರಾಗಿದ್ದಾರೆ ಎಂದು ವಿವರಿಸಿದರು.

ಕ್ರಿಕೆಟ್ ಟೂರ್ನಮೆಂಟಿನ ವೆಬ್ ಸೈಟ್ ಅನ್ನು ಕುಟುಂಬದ ಅಧ್ಯಕ್ಷರಾದ ಕಾಶಿಕಾಳಯ್ಯ ಅವರು ಬಿಡುಗಡೆ ಮಾಡಿದರು. ಕುಟುಂಬದ ದಾಖಲೆಗಳನ್ನು ತಕ್ಕ ರಾಜೇಶ್ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಕುಟುಂಬದ ಪಟ್ಟೆದಾರ ಕಟ್ಟಿ ಕುಟ್ಟಣಿ ಹಾಜರಿದ್ದರ.

ಚೆಕ್ಕೇರಕುಟುಂಬದ ವಿಶೇಷತೆ: ತಾತಂಡ ಮತ್ತು ಅಳಮೇಂಗಡ ಕುಟುಂಬದ ನಂತರ ಕೌಟುಂಬಿಕ ಹಾಕಿ ಹಾಗೂ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ಮೂರನೇ ಕುಟುಂಬವಾಗಿ ಚೆಕ್ಕೇರ ಕುಟುಂಬಕ್ಕೆ ಹೆಗ್ಗಳಿಕೆ. ಎಂಟು ಬಾರಿ ಕೌಟುಂಬಿಕ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿರುವ ಚೆಕ್ಕೇರ ಕುಟುಂಬ ತಂಡದಿಂದ ಪಂದ್ಯಾವಳಿ ಆಯೋಜನೆ.2002ರಲ್ಲಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ ನಂತರ ಮತ್ತೆ 13 ವರ್ಷಗಳ ನಂತರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಕುಟುಂಬ. ಪಂದ್ಯಾವಳಿಯಲ್ಲಿ ಸಾಹಿತಿಗಳಿಗೆ ಉತ್ತೇಜನ ನೀಡಲು ಸಾಹಿತ್ಯ ಅಹ್ವಾನ, ನಗದು ಬಹುಮಾನ ನಿಗಧಿ.

ಪುಸ್ತಕ ಬುಡುಗಡೆ: ಇದೇ ವೇದಿಕೆಯಲ್ಲಿ ಪಂಚ ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿದ “ಪಾನೆಲಚಿಲ್ ಪೊನ್ನೆಳ್ತ್” ಪುಸ್ತಕವನ್ನು ಶಾಸಕರು ಬಿಡುಗಡೆ ಮಾಡಿದರು. ಈ ಸಂದರ್ಭ ಅತಿಥಿಗಳಾಗಿ ಉಳುವಂಗಡ ಕಮಲಾಕ್ಷಿ ಅವರು ಮಾತನಾಡಿದರು. ಈ ಸಂಧರ್ಭ ಚೆಕ್ಕೇರ ಪಂಚಮ್ ತ್ಯಾಜರಾಜ್ ಅವರು ರಚಿಸಿದ ಪಂದ್ಯಾವಳಿಯ ಹಾಡು ಬಿಡುಗಡೆ ಆಯಿತು.

ಚೆಕ್ಕೇರ ವಾಣಿ ಸಂಜು ಪ್ರಾರ್ಥಿಸಿ, ಅಧ್ಯಕ್ಷ ಚಂದ್ರ ಪ್ರಕಾಶ್ ಸ್ವಾಗತಿಸಿ,ಚೋಕಿರ ಅನಿತಾ ದೇವಯ್ಯ, ನೇರ್ಪಂಡ ಹರ್ಷ ಮಂದಣ್ಣ ನಿರೂಪಿಸಿ, ಚೆಕ್ಕೇರ ನಿರೂಪ ವಂದಿಸಿದರು.ಸಮಾರಂಭದಲ್ಲಿ ಮಹಿಳೆಯರು ಸೇರಿದಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಜನಾಂಗ ಭಾಂದವರು ಪಾಲ್ಗೊಂಡಿದ್ದರು.

Continue Reading

Kodagu

ಮಡಿಕೇರಿಯಲ್ಲಿ ನಾಳೆ ನಡೆಯುವ ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಬೆಂಬಲ

Published

on

ಮಡಿಕೇರಿ : ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ, ಮತ್ತು ಕೊಡವರ ಉಡುಪು ಹಾಗೂ ಸಂಸ್ಕೃತಿಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ, ಅಮಾಯಕ ಕೊಡವರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿ ನಾಳೆ ಮಡಿಕೇರಿಯಲ್ಲಿ, ವಿವಿಧ ಸಂಘಟನೆಗಳು ನಡೆಸಲು ಚಿಂತಿಸಿರುವ, ಶಾಂತಿಯುತ ಪ್ರತಿಭಟನೆಗೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.


ಘಟನೆ ನಡೆದು ತಿಂಗಳಾದರೂ ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ಕಟ್ಟೆಮಾಡು ಮಹಾದೇವರ ಸಮಿತಿಯ ತೀರ್ಮಾನ ಸಂವಿಧಾನ ವಿರೋದಿಯಾಗಿದ್ದರೂ, ಜಿಲ್ಲಾಧಿಕಾರಿಗಳು ಅದೇ ದಿನ ಸಮಿತಿಯ ವಿರುದ್ದ ಕ್ರಮ ಕೈಗೊಂಡು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕಿತ್ತು. ಆದರೆ ಮತ್ತೆ ಮತ್ತೆ ಸಮಯ ಅವಕಾಶ ನೀಡುವ ಮೂಲಕ ಗೊಂದಲವನ್ನು ಮುಂದುವರೆಸಿರುವ ಜಿಲ್ಲಾಡಳಿತದ ನಿಲುವನ್ನ ಪ್ರಶ್ನಿಸಿ ಮತ್ತು ಕೊಡವರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸಿದ ವ್ಯಕ್ತಿಯು ಒಂದು ರಾಜಕೀಯ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾದರೂ ಆತನ ವಿರುದ್ಧ ಕ್ರಮ ಕೈಗೊಳ್ಳದ ಆ ಪಕ್ಷದ ನಿಲುವನ್ನು ಖಂಡಿಸಿ, ದಿನಾಂಕ 20ನೇ ಸೋಮವಾರ ಮಡಿಕೇರಿಯಲ್ಲಿ, ವಿವಿಧ ಕೊಡವ ಸಂಘಟನೆಗಳು ನಡೆಸಲು ಚಿಂತಿಸುತ್ತಿರುವ , ಶಾಂತಿಯುತ ಬೃಹತ್ ಜಾತಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ.


ಶಾಂತಿ ಸಹಬಾಳ್ವೆ ಕೊಡವರ ರಕ್ತದಲ್ಲಿಯೇ ಇದ್ದು, ಶತಮಾನಗಳಿಂದ ಸರ್ವ ಜನಾಂಗ ಮತ್ತು ಧರ್ಮಗಳೊಂದಿಗೆ ಶಾಂತಿಯಿಂದ ಬಾಳುತ್ತಿದ್ದು, ಆದರೆ ಸ್ವಾಭಿಮಾನಕ್ಕೆ ದಕ್ಕೆ ಆದರೂ ನಾವೇ ಶಾಂತಿ ಕಾಪಾಡಬೇಕೆಂಬುದು ಬಾಲಿಶತನದ ಹೇಳಿಕೆಯಾಗಿದ್ದು, ನಾವು ಕಾನೂನಿನ ವ್ಯಾಪ್ತಿಯಲ್ಲಿ ಮತ್ತು ನಮ್ಮ ಸಂಸ್ಕೃತಿಯ ಪರವಾಗಿ ಇರುವಾಗ ಅದನ್ನು ಕಾಪಾಡದೇ ಮತ್ತು ಕಾನೂನಿನ ಕ್ರಮ ಕೈಗೊಳ್ಳದೆ ಶಾಂತಿ ಸಭೆ ಅಥವಾ ಮೌನವಾಗಿ ಇರುವುದರಲ್ಲಿ ಅರ್ಥವಿಲ್ಲ. ಮೊದಲು ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಲಿ ನಂತರ ಶಾಂತಿ ತನ್ನಾಲೇ ನೆಲೆಸಲಿದೆ ಎಂದು ಹೇಳಿದೆ.

Continue Reading

Trending

error: Content is protected !!