Connect with us

Hassan

ನೀಡಿದ ಭರವಸೆ ಈಡೇರಿಸುವಲ್ಲಿ ಬಿಜೆಪಿ ಸರಕಾರ ವಿಫಲ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆ ಮತ ನೀಡುವಂತೆ ಮರಿತಿಬ್ಬೇಗೌಡ ಮನವಿ

Published

on

ಹಾಸನ: ಹಾಸನ : ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ಕೇಂದ್ರ ಸರಕಾರವು ತಾನು ನೀಡಿದ ಭರವಸೆಯನ್ನು ಇದುವರೆಗೂ ಒಂದನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಈಬಾರಿ ಕಾಂಗ್ರೆಸ್ ಗಎ ಹೆಚ್ಚಿನ ಒಲವು ಇದ್ದು, ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಿ ಸೇವೆಗೆ ಅವಕಾಶ ಕಲ್ಪಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ೨೦೨೪ ಏಪ್ರಿಲ್ ೨೬ ರಂದು ನಡೆಯಲಿರುವ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ರವರ ಪರವಾಗಿ ಮತದಾರ ಬಂಧುಗಳಲ್ಲಿ ಮನವಿ. ಕಳೆದ ೧೦ ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಾನು ಕೊಟ್ಟ ಭರವಸೆಗಳಲ್ಲಿ ಬಂದನ್ನೂ ಪೂರೈಸಿರುವುದಿಲ್ಲ. ಪ್ರಧಾನಮಂತ್ರಿಗಳಿರು ಮೈಸೂರಿನ ಚುನಾವಣಾ ಪ್ರಚಾರಕ್ಕೆ ಬಂದಾಗ ಕನ್ನಡ ನಾಡಿನ ಜನತೆಗೆ ತಮ್ಮ ಅವಧಿಯಲ್ಲಿ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟಿರುವುದರ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು ಇದಕ್ಕೆ ಸಾಕ್ಷಿ ಎಂದರು. ಕೇಂದ್ರ ಸರ್ಕಾರ ಕನ್ನಡ ನಾಡಿನ ಜನತೆಯ ಬರಪರಿಹಾರ ಹಾಗೂ ಬಾಕಿ ತೆರಿಗೆ ನೀಡಿಲ್ಲ. ಯಾವುದೇ ನೀರಾವರಿ ಯೋಜನೆಗೆ ಅನುಮೋದನೆ ನೀಡಿಲ್ಲ. ಬಡವರ-ರೈತರ ಹಾಗೂ ಸಂವಿಧಾನ ವಿರೋಧಿ ಸರ್ವಾಧಿಕಾರಿ ಸರ್ಕಾರವಾಗಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನೇತರರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಸೂಚನೆಯಂತೆ ಅಧಿಕಾರಕ್ಕೆ ಬಂದ ೧೦ ತಿಂಗಳ ಅವಧಿಯಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಕನ್ನಡ ನಾಡಿನ ಪ್ರತಿ ಕುಟುಂಬಕ್ಕೂ ತಲುಪಿಸಿರುವುದು ಹೆಮ್ಮೆಯ ಸಂಗತಿ. ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ೫ ಗ್ಯಾರಂಟಿ ಯೋಜನೆಗಳಿಗೆ ೫೩,೦೦೦ ಕೋಟಿ ಮತ್ತು ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಗೆ ೮೯,೦೦೦ ಕೋಟಿ ಹಣವನ್ನು ನಿಗಧಿಗೊಳಿಸಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಜಿ, ರಾಹುಲ್‌ಜಿ ಇವರುಗಳ ನೇತೃತ್ವದಲ್ಲಿ ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ರಾಷ್ಟ್ರದ ಮತದಾರ ಬಂಧುಗಳಿಗೆ ನೀಡುವುದಾಗಿ ಭರವಸೆಕೊಟ್ಟಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ತತ್ವಸಿದ್ಧಾಂತಗಳ ಆಧಾರದ ಮೇಲೆ ರೂಪಿತವಾದ ಸಂವಿಧಾನದ ಸದಾಶಯದಂತೆ ಎಲ್ಲಾ ಸಮುದಾಯದ ಪ್ರತಿ ಕುಟುಂಬಕ್ಕೂ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿರುವ ಕಾಂಗ್ರೆಸ್ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ರವರ ಹಸ್ತದ ಗುರುತಿಗೆ ಮತ ನೀಡಬೇಕೆಂದು ಮತದಾರ ಬಂಧುಗಳಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಶಿವಣ್ಣಗೌಡ, ಮಂಜೇಗೌಡ, ರವಿಕುಮಾರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಗುಡ್ಡಗಾಡು ಓಟ: ಕಲಾ ಕಾಲೇಜು ಅತ್ಯುತ್ತಮ ಸಾಧನೆ

Published

on

ಹಾಸನ: ಹಾಸನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಅತ್ಯುತ್ತಮ ಸಾಧನೆ ಮೆರೆದಿದೆ.

ಪುರುಷರ ತಂಡವು ಸತತ ಎರಡನೇ ಬಾರಿ ತಂಡ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ಮಹಿಳೆಯರ ತಂಡವು ತಂಡ ಕೂಡ ದ್ವಿತೀಯ ಸ್ಥಾನ ಗಳಿಸಿದೆ.

ಪುರುಷರ ವಿಭಾಗದಲ್ಲಿ ಬಿ.ಕೆ. ಲಕ್ಷ್ಮಣ ತೃತೀಯ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ತಂಡದಲ್ಲಿ ಲಕ್ಷ್ಮಣ ಬಿ.ಕೆ., ಹೇಮಂತ್ ಕುಮಾರ್ ಬಿ.ಜೆ., ಶ್ರೀಜನ್ ಕೆ.ಎಸ್., ಜೀವನ್ ಕುಮಾರ್ ಟಿ.ಎಸ್., ಪ್ರಶಾಂತ್ ಎ.ಆರ್. ಹಾಗೂ ರಕ್ಷಿತ್ ಗೌಡ ಕೆ.ಎನ್. ಭಾಗವಹಿಸಿದ್ದರು.

ಮಹಿಳೆಯರ ತಂಡದಲ್ಲಿ ಬಿಂದುಶ್ರೀ ಜೆ.ಎಸ್., ಭಾವನಾ ಜಿ.ಎಚ್., ತೇಜಸ್ವಿನಿ ಸಿ.ಎಲ್., ಮಾನಸ ಕೆ.ವೈ., ಸಿಂಚನ ಸಿ.ಡಿ. ಮತ್ತು ಮಮತಾ ಎಂ.ಎಲ್. ಸ್ಪರ್ಧಿಸಿದ್ದರು.

ವಿಜೇತ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪವನ್ ಕೆ.ಜೆ. ಅವರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಇರ್ಷಾದ್ ಎಂ.ಬಿ., ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಪರೀಕ್ಷಾ ನಿಯಂತ್ರಕ ಡಾ. ಮುರಳೀಧರ ಕೆ.ಡಿ. ಮತ್ತು ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಕೆ.ಟಿ. ಅಭಿನಂದಿಸಿ ಶುಭ ಹಾರೈಸಿದರು.

Continue Reading

Hassan

ವಿದ್ಯಾರ್ಥಿಗಳ ಕೌಶಲ್ಯ ಮತ್ತು ಜ್ಞಾನ ವೃದ್ಧಿಗೆ ಎ.ಇ.ಡಿ.ಪಿ. ಸಹಕಾರಿ: ಡಾ. ನಾಗೇಶ್

Published

on

ಹಾಸನ, ಫೆ 12: ಕೌಶಲ್ಯಾಧರಿತ ಶಿಕ್ಷಣದಿಂದ ಉದ್ಯೋಗ ಖಾತ್ರಿಯ ವಿಫುಲ ಅವಕಾಶಗಳಿದ್ದು, ಅದಕ್ಕಾಗಿ ಪದವಿ ಶಿಕ್ಷಣದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಎ.ಇ. ಡಿ.ಪಿ. ಕಾರ್ಯಕ್ರಮದ ಮೂಲಕ ತರಬೇತುಗೊಳಿಸಲಾಗುತ್ತಿದೆ ಎಂದು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯ ನೋಡಲ್ ಆಫೀಸರ್ ಡಾ.ನಾಗೇಶ್ ಆರ್ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ರೂಸಾ ವತಿಯಿಂದ ನಡೆದ ಒಂದು ದಿನದ ಎ. ಇ. ಡಿ. ಪಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಅಳಿಸಿದಾಗ ವಿದ್ಯಾರ್ಥಿಗಳು ಕೌಶಲ್ಯ ಮತ್ತು ಜ್ಞಾನ ಎರಡಕ್ಕೂ ಮುಕ್ತರಾಗುತ್ತಾರೆ. ಅದೇ  ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದಲ್ಲಿ ಅಪ್ರೆಂಟಿಸ್ ಶಿಪ್ ಅನ್ನು ಪರಿಚಯಿಸಿದ್ದು,  ಕೌಶಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ ಇರ್ಷಾದ್ ಅವರು,  ವಿದ್ಯಾರ್ಥಿಗಳು ಪದವಿ ಕಲಿಯುವಾಗಲೇ ವೃತ್ತಿಪರ ತರಬೇತಿಗೆ ತೆರೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಕಡೆಯ ವರ್ಷದ ಪದವಿಯಲ್ಲಿ ಓದಿನ ಜೊತೆಗೆ ದುಡಿಮೆಗೂ ಸಹಕಾರಿಯಾಗಿದೆ ಎಂದರು. ಬಿ.ಕಾಂ. ರೀಟೇಲ್ ಆಪರೇಷನ್ ಕೋರ್ಸಿನಲ್ಲಿ ರಾಜ್ಯಾದ್ಯಂತ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳಿದ್ದು  ಶೇ. 90ರವರೆಗಿನ ಉದ್ಯೋಗ ಖಾತ್ರಿ ಇದೆ. ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ  ರೀಟೇಲ್ ಆಪರೇಷನ್ ಕೋರ್ಸ್ ಯಶಸ್ವಿಯಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ್ ಶತ್ರುಂಜಯ್, ಉಜ್ವಲ್ ಕಿರಣ್, ಶ್ರೀನಾಥ್ ಗಟ್ಟು, ಆರ್. ಸುಬ್ರಹ್ಮಣ್ಯನ್, ಹರೀಶ್ ಜಿ. ವಿ, ಜೈನಾ ಎಂ ಹರನ್ ಅವರು ಮೈಸೂರು, ಮಂಗಳೂರು, ಉಡುಪಿ, ಕಾರ್ಕಳ,  ತಿಪಟೂರು, ತುಮಕೂರು ಸೇರಿದಂತೆ ಹಲವೆಡೆಯಿಂದ ಆಗಮಿಸಿದ್ದ ಆರ್. ಓ . ವಿದ್ಯಾರ್ಥಿಗಳಿಗೆ ಎಇಡಿಪಿ ಬಗ್ಗೆ  ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ರಾಜು ಡಿ. ಎಸ್,  ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ್ ಕೆ.ಡಿ., ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಕೆ.ಟಿ, ಎಇಡಿಪಿ ಸಂಯೋಜಕರಾದ ಶಿವರಾಜ್ ಕುಮಾರ್ ಜೆ, ಕಛೇರಿ ಅಧೀಕ್ಷಕರಾದ ಮಾರುತಿ   ಕೆ. ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಹಾಜರಿದ್ದರು.

ರೂಸಾ ಸಂಯೋಜಕರಾದ ಡಾ. ದಿನೇಶ್ ಕೆ.ಎಸ್. ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಡಾ. ಸವಿತಾ ಕಾರ್ಯಕ್ರಮ ನಿರೂಪಿಸಿದರು. ಬನುಮಾ ಗುರುದತ್ ಪ್ರಾರ್ಥಿಸಿದರು.

Trending

error: Content is protected !!