Hassan
ಸಂಸದರು ಮಾಡಬೇಕಿದ್ದ ರೈಲು ನಿಲುಗಡೆ ಕೆಲಸ ನಾನು ಮಾಡಿದ್ದೇನೆ ಕರಪತ್ರದಲ್ಲಿ ಸುಳ್ಳು ಪ್ರಚಾರ : ಹೇಮಂತ್ ಕುಮಾರ್
ಹಾಸನ: ಸಂಸದರು ಮಾಡಬೇಕಾಗಿದ್ದ ರೈಲು ನಿಲುಗಡೆ ಕೆಲಸವನ್ನು ನಾನು ದೆಹಲಿಗೆ ಹೋಗಿ ಮಾಡಿಸಲಾಗಿದ್ದು, ಈಗ ಚುನಾವಣೆ ಪ್ರಚಾರದಲ್ಲಿ ಪ್ರಜ್ವಲ್ ಅವರು ಕರಪತ್ರ ಮಾಡಿಸಿ ರೈಲು ನಿಲುಗಡೆ ನಾನು ಮಾಡಿಸಿದ್ದೀನಿ ಎಂದು ಬಿಂಭಿಸಿಕೊಳ್ಳುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ರಾಧಮ್ಮ ಜನಸ್ಪಂದನ ವೇದಿಕೆಯ ಹೇಮಂತ್ ಗವಿಶ್ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹೇಮಂತ್ ರಾಧಮ್ಮ ಜನಸ್ಪಂದನ ಆಲೂರುನಲ್ಲಿ ವಾಸವಾಗಿರುವ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕ್ರಮ ಸಂಖ್ಯೆ ೧೫ ನನ್ನ ಚಿಹ್ನೆಯ ಗುರುತು ಗ್ಯಾಸ್ ಸಿಲಿಂಡರ್ ಲೋಕಸಭಾ ಹಾಸನ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಸಂಸದರು ಮಾಡಬೇಕಾಗಿರುವ ಕೆಲಸವನ್ನು ದೆಹಲಿಯ ಮಟ್ಟದವರೆಗೂ ಹೋಗಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ಆಲೂರು ತಾಲೂಕಿಗೆ ರೈಲು ನಿಲುಗಡೆ ತಂದಿ ಕೊಟ್ಟಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಈ ನನ್ನ ಹೋರಾಟನವನ್ನು ಗಮನಿಸಿದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದರು. ಮಾಧ್ಯಮದ ಮುಖಾಂತರ ಸಾರ್ವಜನಿಕರಲ್ಲಿ ಗಮನ ಸೆಳೆಯುತ್ತಿರುವ ವಿಷಯ ಎಂದರೆ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಹಾಲಿ ಸಂಸದರು ಚುನಾವಣಾ ಪ್ರಚಾರಕ್ಕೆ ಬಳಸಿರುವ ಕರಪತ್ರಗಳಲ್ಲಿ ರೈಲ್ವೆ ಅಭಿವೃದ್ಧಿ ಎಂದು ನಮೂದಿಸಿರುವ ಪಟ್ಟಿಯಲ್ಲಿ ಆಲೂರು, ಮೊಸಳೆ ಹೊಸಳ್ಳಿ ಮತ್ತು ದುದ್ದ ಹಾಗೂ ಹಿರಿಸೇವೆ ರೈಲು ನಿಲುಗಡೆ ಮಾಡಿಸಿದ್ದೇನೆ ಎಂದು ನಮೂದಿಸಿದ್ದಾರೆ ಎಂದರು. ದಯವಿಟ್ಟು ಇದನ್ನು ಗಮನಿಸಿ ಸತ್ಯವನ್ನ ಸಾರ್ವಜನಿಕರಿಗೆ ಮತದಾರರಿಗೆ ತಿಳಿಸಬೇಕಾಗಿ ಮನವಿ ರೈಲ್ವೆ ಇಲಾಖೆಯಿಂದ ಮತ್ತು ವೇರ್ ಇಸ್ ಮೈ ಟ್ರೈನ್ ಆನ್ಸೆನ್ ಅಲ್ಲು ಪರಿಶೀಲನೆ ಮಾಡಬಹುದು. ಆಲೂರು ಹೊರತುಪಡಿಸಿ ಬೇರೆ ಎಲ್ಲಿಯೂ ರೈಲು ನಿಲುತ್ತಿಲ್ಲ. ನಿಲುಗಡೆ ಆದೇಶ ತಂದು ಇಲ್ಲ ಆದರೂ ಕೂಡ ಸುಳ್ಳು ಪ್ರಚಾರವನ್ನ ಮಾಡುತ್ತಾ ಸಾಧನೆ ಎಂದು ಬಿಂಬಿಸುತ್ತಾ ಮತದಾರರಲ್ಲಿ ಮತವನ್ನು ಕೇಳುತ್ತಿದ್ದಾರೆ. ನಾನು ಒಬ್ಬ ನರೇಂದ್ರ ಮೋದಿಜಿ ಭಕ್ತನಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಳೆದ ೨೪ ವರ್ಷ ತೊಡಗಿಸಿಕೊಂಡಿದ್ದು, ಬಿಜೆಪಿಯ ಜಿಲ್ಲಾ ಸಹವಕ್ತರನಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಾಮಾಣಿಕ ಸಿದ್ಧಾಂತದ ಅಡಿಯಲ್ಲಿ ರಾಧಮ್ಮ ಜನಸ್ಪಂದನ ಹುಟ್ಟು ಹಾಕಿ ಸೇವೆಯನ್ನು ಕೊಟ್ಟಿದ್ದೇನೆ ಎಂದು ಹೇಳಿದರು.
ನರೇಂದ್ರ ಮೋದಿಜಿಯ ಫೋಟೋವನ್ನು ಬಳಸಿ ಸುಳ್ಳು ಸುಳ್ಳು ಮಾಹಿತಿಗಳನ್ನು ಕೊಟ್ಟರೆ ಯಾರು ನಿಮಗೆ ಮತಗಳನ್ನು ಕೊಡುವುದಿಲ್ಲ. ತಕ್ಷಣವೇ ನಿಮ್ಮ ತಪ್ಪನ್ನು ತಿದ್ದಿಕೊಂಡು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಮಾಹಿತಿಯನ್ನು ಕೊಡಿ ಎಂದು ಈ ಮುಖಾಂತರ ತಿಳಿಸಿದ್ದೇನೆ. ಜೆಪಿಯಲ್ಲಿ ಇದ್ದರೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ ಉದ್ದೇಶ ನನ್ನ ಆಲೂರು ತಾಲೂಕಿಗೆ ಯಾವುದೇ ಅಭಿವೃದ್ಧಿಯು ಆಗಿಲ್ಲ. ನಾನು ಸಂಪೂರ್ಣವಾಗಿ ಎ.ಟಿ. ರಾಮಸ್ವಾಮಿ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದೆ ಆದರೆ ಅವರು ಬೇಡ ಎಂದು ತಿಳಿಸಿ ತಟಸ್ಥ ಎಂದು ಹೇಳಿದಕ್ಕೆ ನಾನೇ ಖುದ್ದಾಗಿ ಸ್ಪರ್ಧೆ ಮಾಡಿದ್ದೇನೆ. ನಮ್ಮ ಅಮೂಲ್ಯವಾದ ಮತಗಳು ವಿಚಾರವಂತರು ಆರ್.ಎಸ್.ಎಸ್. ಪ್ರತಿಯೊಬ್ಬರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್, ವಿಶ್ವನಾಥ್ ಇತರರು ಉಪಸ್ಥಿತರಿದ್ದರು.
Hassan
ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳಿಂದ ಮನವಿ
ಆಲೂರು: ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೆಚ್ಚು ಸೇವೆಗಳನ್ನು ನಿರ್ವಹಿಸುವ ಕಾರ್ಯವಹಿಸಿದ್ದು, ಕೆಲಸ ನಿರ್ವಹಿಸಲು ನಮಗೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ಹೆಚ್ಚುವರಿ ಭತ್ಯೆ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ನೀಡಬೇಕು ಎಂದು ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ನಂದಕುಮಾರ್ ಗೆ ಮನವಿ ಸಲ್ಲಿಸಿದರು.
ಆಲೂರು ಪಟ್ಟಣದ ಕಂದಾಯ ಇಲಾಖೆಗೆ ಭೇಟಿ ನೀಡಿದ ಗ್ರಾಮ ಆಡಳಿತ ಅಧಿಕಾರಿಗಳು ಮಾನ್ಯ ಘನ ಸರ್ಕಾರವು ರೈತಪರ/ ಸಮಾಜಮುಖಿ ಕೆಲಸಗಳಾದ ನಮೂನೆ 1 ರಿಂದ 5 (ದುರಸ್ಥಿ) ಇ_ ಅಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್ ಆಫ್ ಸಂಯೋಜನೆ, ನವೋದಯ, ಗರುಡ ಆಫ್, ಇ ಜನ್ಮ ತಂತ್ರಾಂಶಗಳ ಮೂಲಕ ಬಗರ್ ಹುಕುಂ, ಹಕ್ಕುಪತ್ರ, ಬೆಳೆ ಸಂರಕ್ಷಣೆ, ( ಬೆಳೆ ಕಟಾವ್, ಮೊಬೈಲ್ ಆಪ್) ಪಿ.ಎಂ. ಕಿಸಾನ್ ವೆಬ್ ಆಪ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ಸಿ- ವಿಜಯ್, ಹಾಗೂ ಇನ್ನೂ ಹತ್ತು ಹಲವಾರು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ಈ ಎಲ್ಲಾ ಕೆಲಸಗಳ ನಿರ್ವಹಣೆಗೆ ಮೊಬೈಲ್, ಸಿಮ್, ಹಾಗೂ ದಿನ ಬಳಕೆಗೆ ಮೊಬೈಲ್, ಡಾಟಾ, ಲ್ಯಾಪ್ ಟಾಪ್, ಪ್ರಿಂಟಿಂಗ್, ಸ್ಕ್ಯಾನರ್ ಸೌಲಭ್ಯ ೀ ಹಲವು ಕೆಲಸ ನಿರ್ವಹಣೆಗೆ ಮಾಸಿಕ ಹೆಚ್ಚುವರಿ ಭತ್ಯೆ 5000 ರೂಗಳನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಎಂ ಡಿ ಅಭಿಷೇಕ್, ಉಪಾಧ್ಯಕ್ಷ ಸಂಜೀವ್ ಚೌಹಣ್, ಕಾರ್ಯದರ್ಶಿ ದೇವೆಂದ್ರಪ್ಪ ಪೂಜಾರಿ, ಖಜಾಂಚಿ ರಾಘವೇಂದ್ರ ಭಂಡಾರಿ,ಗ್ರಾಮ ಆಡಳಿತ ಅಧಿಕಾರಿಗಳಾದ ರವಿ ನಾಯ್ಕ್. ಗೀತಾ. ಚಂದ್ರಶೇಖರ್ ಬಿ.ಎಸ್ ಹೇಮರಾಜ್, ಮನು, ಚಂದ್ರೇಶೇಖರ್, ರಂಗಸ್ವಾಮಿ ಕರಿಬಸವರಾಜು, ಮುಂತಾದವರು ಉಪಸ್ಥಿತರಿದ್ದರು.
ವರದಿ ಸತೀಶ್ ಚಿಕ್ಕಕಣಗಾಲು
Hassan
ಯುವ ರೈತನ ಮೇಲೆ ಚಿರತೆ ದಾಳಿ
ಹಾಸನ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವ ರೈತನ ಮೇಲೆ ಚಿರತೆ ದಾಳಿ
ಚಿರತೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ
ಚಿರತೆ ದಾಳಿಯಿಂದ ಯುವಕನ ಕೈ, ಕಾಲಿಗೆ ಗಾಯ
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದಲ್ಲಿ ಘಟನೆ
ನವೀನ್ (24) ಚಿರತೆ ದಾಳಿಯಿಂದ ಗಾಯಗೊಂಡ ರೈತ
ಎಂದಿನಂತೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ನವೀನ್
ಈ ವೇಳೆ ಏಕಾಏಕಿ ನವೀನ್ ಮೇಲೆ ದಾಳಿ ಮಾಡಿದ ಚಿರತೆ
ಕೈಯಲ್ಲಿ ಕುಡುಗೋಲು ಹಿಡಿದಿದ್ದರಿಂದ ಚಿರತೆ ವಿರುದ್ಧ ಸೆಣೆಸಾಡಿದ ನವೀನ್
ನವೀನ್ ಕಿರುಚಿಕೊಳ್ಳುತ್ತಿದ್ದಂತೆ ಓಡಿ ಬಂದ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು
ಕೂಡಲೇ ಕಾಡಿನೊಳಗೆ ಓಡಿ ಹೋದ ಚಿರತೆ
ಗಾಯಾಳು ನವೀನ್‌ಗೆ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ
ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಗೋಪನಹಳ್ಳಿ ಕೆರಗೋಡು ಭಾಗದಲ್ಲಿ ಹೆಚ್ಚಾಗಿರುವ ಚಿರತೆಗಳು
ಕೂಡಲೇ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ
Hassan
ದೇಶಾಭೀಮಾನ ಮೂಡಿಸುವ ವಿವಿಧ ಕಾರ್ಯಕ್ರಮ: ಹರ್ಷಿತ್
ಹಾಸನ: ಸ್ವಾತಂತ್ರ ದಿನಾಚರಣೆ ಅಂಗವಾಗಿ ಬಿಜೆಪಿ ಪಕ್ಷದವತಿಯಿಂದ ದೇಶಾಭಿಮಾನ ಮೂಡಿಸುವ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಸಹ ಸಂಚಾಲಕ ಹರ್ಷಿತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಮೃತ ಮಹೋತ್ಸವದ ಬಳಿಕ ಪ್ರತೀ ವರ್ಷ ದೇಶಾಭಿಮಾನ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅದರಂತೆ ಈ ವರ್ಷವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ೧೪ ರಂದು ಬೆಳಿಗ್ಗೆ ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ತಿರಂಗ ಯಾತ್ರೆ ಹಾಗೂ ಬೈಕ್ ರಾಲಿ ಏರ್ಪಡಿಸಲಾಗಿದೆ. ಸಮಾಜದಲ್ಲಿರುವ ಎಲ್ಲಾ ವರ್ಗದವರನ್ನು ಸೇರಿಸಿ ತ್ರಿವರ್ಣ ಧ್ವಜಾ ಹಿಡಿದುಕೊಂಡು ದೇಶ ಭಕ್ತಿಯ ಘೋಷಣೆ ಕೂಗಿ ಎಲಲಾರಲ್ಲೂ ಜಾಗೃತಿ ಮೂಡಿಸಲಾಗುವುದು. ಜೊತೆಗೆ ಅದೇ ದಿನ ಮಧ್ಯಾಹ್ನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸ್ವತಂತ್ರ ಸಿಕ್ಕ ಅವಧಿಯಲ್ಲಿ ದೇಶ ವಿಭಜನೆ, ದೇಶಕ್ಕೆ ಬಂದ ಸವಾಲುಗಳ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದರು. ಮತ್ತೊಂದು ಕಾರ್ಯಕ್ರಮ ಎಂದರೇ ಮನೆ ಮನೆ ಮೇಲೆ ತ್ರಿವರ್ಣ ಧ್ವಜಾ ಹಾರಿಸುವ ಕಾರ್ಯಕ್ರಮವಾಗಿದೆ. ಜೊತೆಗೆ ಜಿಲ್ಲೆಯಾದ್ಯಂತ ಇರುವ ಸ್ವತಂತ್ರ ಹೋರಾಟಗಾರರ ಪ್ರತಿಮೆ, ಹಾಗೂ ಹೋರಾಟ ಮಾಡಿರುವ ಪುತ್ಥಳಿಗಳನ್ನ ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ. ಗಿರೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪುನೀತ್, ನಗರಾಧ್ಯಕ್ಷ ಮಂಜು ಇತರರು ಉಪಸ್ಥಿತರಿದ್ದರು.
-
Mysore4 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan4 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.