Mandya
ಕುಮಾರಸ್ವಾಮಿ ಬೆಂಬಲಿಸಿ – ಮಾಜಿ ಶಾಸಕ ಅನ್ನದಾನಿ
ಮಂಡ್ಯ: ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದಲಿತರಿಗೆ ನೋವು ಕೊಟ್ಟಿದ್ದು, ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಜಾತ್ಯಾತೀತ ಜನತಾದಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷ ಡಾಕ್ಟರ್ ಕೆ.ಅನ್ನದಾನಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಈ ಸಂದರ್ಭದಲ್ಲಿ ದಲಿತರಿಗೆ ನೋವು ಉಂಟು ಮಾಡಿದೆ. ಯಾವುದೇ ಜನಪರ ಕೆಲಸಗಳನ್ನು ಮಾಡದೆ ಅಂಬೇಡ್ಕರ್ ಗೆ ಅಪಮಾನ ಮಾಡಿದೆ ಎಂದು ದೂರಿದರು.
ಎಚ್.ಡಿ.ದೇವೇಗೌಡರು ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತಂದಿದ್ದಾರೆ. ಅಂಬೇಡ್ಕರ್ ಅವರ ಆಶಯವನ್ನು ಪೂರೈಸಿದ್ದಾರೆ. ಸ್ಥಳೀಯವಾಗಿ ಮೀಸಲಾತಿ ಕಲ್ಪಿಸಿದ್ದಾರೆ ಎಂದು ನುಡಿದರು.
ಗಂಗಾ ಕಲ್ಯಾಣ ಯೋಜನೆಯನ್ನು ದೇವೇಗೌಡರು ಜಾರಿಗೆ ತಂದಿದ್ದು, ಇದನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ಕಾಂಗ್ರೆಸ್ ಪಕ್ಷ 98 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎನ್ ಡಿಎ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಹಲವಾರು ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪರವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಕೇಂದ್ರಕ್ಕೆ ಹೋದರೆ ಮತ್ತಷ್ಟು ಅವಕಾಶಗಳು ಸಿಗುವ ಸಾಧ್ಯತೆ ಇದೆ. ಆದ ಕಾರಣ ಅವರನ್ನು ಬೆಂಬಲಿಸಬೇಕು ಎಂದು ವಿನಂತಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭದ್ರಾಚಲ ಮೂರ್ತಿ, ಸಾತನೂರು ಜಯರಾಮ, ಶಂಕರ್, ಪಾಪಯ್ಯ ಸೇರಿದಂತೆ ಇತರರಿದ್ದರು.
Mandya
ಸಚಿವ ಚಲುವರಾಯಸ್ವಾಮಿ ಕುಟುಂಬ ಸಮೇತ ಕೆ.ಆರ್.ಜಲಾಶಯಕ್ಕೆ ಬಾಗೀನ ಸಮರ್ಪಣೆ*
*ಸಚಿವ ಚಲುವರಾಯಸ್ವಾಮಿ ಕುಟುಂಬ ಸಮೇತ ಕೆ.ಆರ್.ಜಲಾಶಯಕ್ಕೆ ಬಾಗೀನ ಸಮರ್ಪಣೆ*
ಶ್ರೀರಂಗಪಟ್ಟಣ: ಸಚಿವ ಎನ್.ಚಲುವರಾಯಸ್ವಾಮಿ ಕುಟುಂಬ ಸಮೇತ ಕೆ.ಆರ್.ಜಲಾಶಯಕ್ಕೆ ಬಾಗೀನ ಸಮರ್ಪಿಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ವೇಧಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗೀನ ಅರ್ಪಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಹೋಗಲಿ ಎಂಬ ಹರಕೆ ಇತ್ತು. ಹಾಗಾಗಿ ನಾವು ಕುಟುಂಬ ಸಮೇತರಾಗಿ ಬಾಗೀನ ಸಲ್ಲಿಸಿ ಪೂಜೆ ಸಲ್ಲಿಸಿದ್ದೇವೆ ಎಂದರು.
ಇದ್ರಲ್ಲಿ ಹೊಸ ಸಂಪ್ರದಾಯ ಏನಿಲ್ಲ. ಕುಮಾರಸ್ವಾಮಿ ಗೆದ್ದ ಮೇಲೆ ಮಳೆ ಆಗಿ ಡ್ಯಾಂ ತುಂಬಿದೆ ಎಂಬ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿಕೆ ವಿಚಾರವಾಗಿ ಗರಂ ಆದ ಸಚಿವರು, ಮಾತನಾಡುವಾಗ ಕಾಮನ್‌ಸೆನ್ಸ್ ಇರಬೇಕು. ಹಿಂದೆ ಕುಮಾರಸ್ವಾಮಿ ರಾಜ್ಯದಲ್ಲಿರಲಿಲ್ಲವಾ.?
ಚೆನ್ನಪಟ್ಟಣದಲ್ಲಿ ಶಾಸಕರಾಗಿರಲಿಲ್ಲವಾ.? ಆಗ ಮಳೆಯಾಗಿತ್ತಾ..?
ಈಗ ದೆಹಲಿಯಲ್ಲಿ ಮಿನಿಸ್ಟರ್ ಆಗಿದ್ದಾರೆ. ದೆಹಲಿಯಲ್ಲಿ ಬರ್ತಿದ್ಯಾ ಮಳೆ. ಮುಡಾ ಹಗರಣ ಖಂಡಿಸಿ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಸಿಎಂ ಕುಟುಂಬಕ್ಕೆ ನಿವೇಶನ ಮಂಜೂರು ಮಾಡಿರೊ ಸರ್ಕಾರದ ಮೇಲೆ ಕ್ರಮ ಆಗಬೇಕು.
ಆಗ ಯಾರು ಸಿಎಂ ಆಗಿದ್ದರು. ಮೂಡದಲ್ಲಿ ಅಧಿಕಾರ ನಡೆಸುತ್ತಿದ್ದವರು ಯಾರು.
ಈಗ ಯಾರ ವಿರುದ್ದವಾಗಿ ಪಾದಯಾತ್ರೆ ಮಾಡ್ತಾರೆ.
ನಾವು ಸರ್ಕಾರ ರಚನೆ ಮಾಡಿದಾಗಿನಿಂದಲೂ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಪಾಲರ ಸಂವಿಧಾನಿಕ ಹುದ್ದೆಯನ್ನ ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ತಿದೆ.
ಸಿದ್ದರಾಮಯ್ಯ ಮೇಲೆ ಯಾವುದೇ ಕೇಸ್ ಆಗಿಲ್ಲ. ಪೊಲೀಸ್ ದೂರಾಗಿಲ್ಲ. ಕ್ರಿಮಿನಲ್ ಹಿನ್ನಲೆ ಹೊಂದಿರೊ ಆರ್.ಟಿ.ಐ ಕಾರ್ಯಕರ್ತನ ದೂರಿನ ಮೇಲೆ ಇವರು ಸರ್ಕಾರಕ್ಕೆ ನೊಟೀಸ್ ಕೊಡ್ತಾರೆ. ಗವರ್ನರ್ ಅವರು ಒಂದು ಪಕ್ಷದ ಕೈಗೊಂಬೆಯಾಗಬಾರದು.
ಅವರ ಸ್ಥಾನದ ಬಗೆಗೆ ಅಪಾರ ಗೌರವವಿದೆ. ಗೌರ್ನರ್ ಕುಳಿತಿರೊ ಪೀಠ ನಾಲ್ಕು ಜನರ ಬಾಯಿಗೆ ಆಹಾರ ವಾಗುವ ಹಾಗೆ ಇರಬಾರದು.
ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲೇ ಶುದ್ದವಾದ ಆಡಳಿತ ನಡೆಸಿರೊ ಸಿದ್ದರಾಮಯ್ಯರ ಮೇಲೆ ಹೇಗಾದ್ರು ಮಾಡಿ ಕಳಂತ ತರಬೇಕು ಎಂಬ ಪ್ರಯತ್ನ ಮಾಡಿದಾಗ ನಾವು ಅವರಿಗೆ ಹಲವು ಪ್ರಶ್ನೆಗಳನ್ನ ಕೇಳಿದ್ದೀವಿ. ಅವರು ಪಾದಯಾತ್ರೆ ಮಾಡುವ ವೇಳೆಗೆ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿ. ಬಿಜೆಪಿಯ ಆಡಳಿತದ ಸಂದರ್ಭದಲ್ಲಿ ಇದೇ ರೀತಿಯ ಅನೇಕ ಉದಾಹರಣೆ ಇವೆ.
ಇದಕ್ಕೆಲ್ಲಾ ಉತ್ತರ ಕೊಡಲಿ
ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ. ನಿನ್ನೆ ನೋಡಿದ್ರೆ ಹಾಸನದಲ್ಲಿ ನಮ್ಮ ಕುಟುಂಬದ ವಿರುದ್ದ ಷಡ್ಯಂತ್ರ ಮಾಡ್ತಾರೆ ಅಂತಾರೆ.
ಪಾದಯಾತ್ರೆಗೆ ಬೆಂಬಲ ಇಲ್ಲ ಎನ್ನುತ್ತಾರೆ. ಮತ್ತೆ ಬೆಂಬಲ ಕೊಡ್ತಾರೆ. ಕುಮಾರಸ್ವಾಮಿಯವರದ್ದು ಡಬಲ್ ಸ್ಟ್ಯಾಂಡ್ ನಡೆ ಆಗಿದೆ ಎಂದು ವಾಗ್ದಾಳಿ ನಡೆಸುದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
Mandya
ಕಾವೇರಿ ನದಿ ತಗ್ಗು ಪ್ರದೇಶಗಳಿಗೆ ಸಚಿವರು ಭೇಟಿ – ಪರಿಶೀಲನೆ
ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನೆರೆ ಹಾನಿಗೊಳಗಾದ ಪ್ರದೇಶಗಳಾದ ಎಣ್ಣೆ ಹೊಳೆ ಕೊಪ್ಪಲು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್, ಪಶ್ಚಿಮ ವಾಹಿನಿ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಆರ್.ಎಸ್ ಕನ್ನಂಬಾಡಿ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಕಾವೇರಿ ನದಿಗೆ ಬಿಡಲಾಗಿ ತಗ್ಗು ಪ್ರದೇಶಗಳು ಮುಳುಗಡೆಗೊಂಡಿದ್ದವು.
ಕೆಲವು ಪ್ರದೇಶಗಳು ರಭಸವಾಗಿ ಹರಿಯುತ್ತಿದ್ದ ನೀರಿಗೆ ಹಾನಿಯಾಗಿದ್ದು, ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ: ಕುಮಾರ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
*ಕಾರ್ಕಹಳ್ಳಿ ಬಳಿ ಎರಡು ಕಾಡಾನೆ ಪ್ರತ್ಯಕ್ಷ
ಭಾರತೀನಗರ : ಸಮೀಪದ ಕಾರ್ಕಹಳ್ಳಿ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷ ವಾಗಿದ್ದು, ಒಂದು ಎಕರೆಗೂ ಹೆಚ್ಚು ಕಬ್ಬಿನ ಫಸಲನ್ನು ನಾಶಪಡಿಸಿವೆ.
ಗ್ರಾಮದ ನಾಗರಾಜು ಬಿನ್ ಸಿದ್ದೇಗೌಡ ಉರುಫ್ ಸಣ್ಣೇಗೌಡ ಎಂಬುವರ ಕಬ್ಬಿನ ಗದ್ದೆಯಲ್ಲಿ ಕಳೆದ ಗುರುವಾರ ಸಂಜೆ ಕಾಡಾನೆಗಳು ಕಬ್ಬಿನ ಫಸಲನ್ನು ನಾಶಪಡಿಸಿತ್ತಿರುವುದನ್ನು ರೈತರು ಗಮನಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತಕ್ಷಣವೇ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಅತ್ತಿತ್ತ ಕದಲದಂತೆ ಕ್ರಮವಹಿಸಿದರು.
ರಾತ್ರಿ ವೇಳೆಗೆ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಪ್ರಯತ್ನ ನಡೆಯಿತ್ತಾದರೂ, ಕಾಡಾನೆಗಳು ಕಾಡಿನತ್ತ ತೆರಳದೆ ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯ ಬಲ ಭಾಗದಲ್ಲಿರುವ ಬಿದರಹಳ್ಳಿ ಗ್ರಾಮದ ಬಯಲು ಪ್ರದೇಶಕ್ಕೆ ನುಗ್ಗಿದವು ಎನ್ನಲಾಗಿದೆ.
ಹಗಲು ವೇಳೆಯಲ್ಲಿ ಆನೆಗಳನ್ನು ಕಾಡಿಗೆ ಓಡಿಸಲು ಯಾವುದೇ ಪ್ರಯತ್ನ ಮಾಡದೇ ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಂಡು ರಾತ್ರಿ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆ ನಡೆಸಿದ್ದಾರೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.