Connect with us

Hassan

ಅರಸಿಕಟ್ಟೆ ಅಮ್ಮನವರ ದೇವಾಲಯ ನಿರ್ವಹಣೆಯಲ್ಲಿ ಸಮಿತಿಯಿಂದ ಯಾವ ಅಕ್ರಮ ನಡೆದಿಲ್ಲ: ಎ.ಟಿ. ರಾಮಸ್ವಾಮಿ ಹೇಳಿಕೆ

Published

on

ಹಾಸನ: ಅರಕಲಗೂಡು ತಾಲೂಕಿನ ಅರಸಿಕಟ್ಟೆ ಅಮ್ಮನವರ ದೇವಾಲಯ ನಿರ್ವಹಣೆಯಲ್ಲಿ ಸಮಿತಿಯಿಂದ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇವಾಲಯ ನಿರ್ವಹಣೆ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ. ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅರಸಿಕಟ್ಟೆ ಅಮ್ಮ ದೇವಾಲಯದ ಸಮಿತಿ ವಿರುದ್ದ ಕೆಲವರು ಕಾನೂನು ಬಾಹಿರ ಸಮಿತಿ ರಚನೆ, ಕೆರೆ ಒತ್ತುವರಿ, ಕಂದಾಯ ಇಲಾಖೆಯ ಉಸ್ತುವಾರಿಯಲ್ಲಿ ೭೦ ಲಕ್ಷ ಅವ್ಯವಹಾರ ಹೀಗೆ ಅನೇಕ ಆರೋಪಗಳನ್ನು ಮಾಡಿದ್ದಾರೆ ಆದರೆ, ಇದೆಲ್ಲಾ ರಾಜಕೀಯ ಪಿತೂರಿ ಎಂದರು. ಸಮಿತಿ ವಿರುದ್ದ ಬಂದಿರುವ ಆರೋಪದ ಬಗ್ಗೆ ಬಂದಿರುವ ದೂರಿನ ಬಗ್ಗೆ ಸಂಭಂದಿಸಿದ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ಮಾಡಿ ಸತ್ಯಾ ಸತ್ಯತೆ ಬಗ್ಗೆ ತಿಳಿದುಕೊಳ್ಳುವ ಬದಲಾಗಿ ಯಾರೋ ರಾಜಕಾರಿಣಿಗಳ ಒತ್ತಡಕ್ಕೆ ಮಣಿದು ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು. ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಅಡುಗೆ, ಹಾಗೂ ಊಟದ ಕೋಣೆ ನಿರ್ಮಾಣ, ಕರೆ ದುರಸ್ತಿ, ಪ್ರಾಣಿಗಳ ವದೆಗೆ ಪ್ರತ್ಯೇಕ ಸ್ಥಾನ ನೀಡಿ ಅಭಿವೃದ್ದಿ ಮಾಡಲಾಗಿದೆ, ಜೊತೆಗೆ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುವಂತೆ ಕೆಲಸ ಮಾಡಲಾಗಿದೆ. ಇದಲ್ಲದೆ ಕಾಣಿಕೆ ಹುಂಡಿ ತುಂಬಿದಾಗ ಸಮಿತಿ ಸದಸ್ಯರ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಿ ಸಮಗ್ರ ಲೆಕ್ಕ ಪತ್ರ ಇಡಲಾಗಿದೆ. ಪ್ರತೀ ವಾರಕ್ಕೊಮ್ಮೆ ಸೇವಾ ಶುಲ್ಕ, ಮಳಿಗೆಗಳ ಆದಾಯ, ಜೊತೆಗೆ ಭಕ್ತರ ಕಾಣಿಕೆ ಹಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಲೆಕ್ಕ ಹಾಗೂ ದೇವಾಲಯಕ್ಕೆ ಬರುವ ಬೆಲೆ ಬಾಳುವ ವಸ್ತುಗಳಿಂದ ೮ ಲಕ್ಷ ನಗದು ಜೊತೆಗೆ ೫೦ ಸಾವಿರ ಕಾಣಿಕೆ ಹಣವನ್ನು ಬ್ಯಾಂಕ್ ಗೆ ಜಮೆ ಮಾಡಲಾಗಿದೆ. ಪ್ರಾಮಾಣಿಕವಾಗಿ ಎಲ್ಲಾ ರೀತಿಯ ಕೆಸವನ್ನ ಮಾಡಿದ್ದರು ನಮ್ಮ ವಿರುದ್ದ ದ್ವೇಷದ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ದೇವಾಲಯದ ಆವರಣದಲ್ಲಿ ಭಕ್ತರಿಗೆ ಅನುಕೂಲ ಆಗುವ ಕೆಲಸಗಳನ್ನು ಮಾಡಲು ಮುಂದಾದರೆ ಅವುಗಳಿಗೆ ರಾಜಕೀಯ ದ್ವೇಷದಿಂದ ಅಧಿಕಾರಿಗಳನ್ನು ಮುಂದೆ ಇಟ್ಟುಕೊಂಡು ಅಡ್ಡಿ ಮಾಡುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಪಟ್ಟಣದ ತಾಲೂಕು ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ

Published

on

ಮಹದೇವ್ ಸಿಸಿ ಭೇರ್ಯ
ಕೆ ಆರ್ ನಗರ – ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಡಿ ರವಿಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕೆಂಪೇಗೌಡ ಜಯಂತಿಯನ್ನು ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕು ಆಡಳಿತ ಮತ್ತು ತಾಲೂಕು ಒಕ್ಕಲಿಗರ ಸಂಘದ ಮುಖಂಡರು ಸೇರಿದಂತೆ ಗೆಲ್ಲ ಸಮಾಜದ ಜನರು ಸೇರಿ ವಿವಿಧ ಕಲಾತಂಡದೊಂದಿಗೆ ಕೆಂಪೇಗೌಡ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಸಾಲಿಗ್ರಾಮದ ತಾಲೂಕು ಕಚೇರಿ ಎದುರು ಆಚರಣೆ ಮಾಡಲು ತಾಲೂಕು ಆಡಳಿತ ಮತ್ತು ಒಕ್ಕಲಿಗರ ಸಂಘ ತೀರ್ಮಾನಿಸಲಾಗಿದ್ದು ಎರಡು ತಾಲೂಕಿನ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡೋಣ ಎಂದು ತಿಳಿಸಿದರು,

ಕಳೆದ ವರ್ಷ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲು ಪೂರ್ವಭಾವಿ ಸಭೆಯಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಕೆಆರ್ ನಗರ ಮತ್ತು ಸಾಲಿಗ್ರಾಮ ಎರಡು ತಾಲೂಕುಗಳು ಸೇರಲಿದ್ದು ಒಂದು ವರ್ಷ ಕೆಆರ್ ನಗರದಲ್ಲಿ ಮತ್ತೊಂದು ವರ್ಷ ಸಾಲಿಗ್ರಾಮದಲ್ಲಿ ಆಚರಣೆ ಮಾಡಲು ಒಕ್ಕಲಿಗ ಸಂಘದ ಅಧ್ಯಕ್ಷರು ಮತ್ತು ಸಮಾಜದ ಹಿರಿಯ ಮುಖಂಡರ ಸೂಚನೆಯಂತೆ ತಾಲೂಕು ಆಡಳಿತದಿಂದ ಕಳೆದ ವರ್ಷ ಕೆಆರ್ ನಗರದಲ್ಲಿ ಆಚರಣೆ ಮಾಡಲಾಗಿತ್ತು. ಕೆಲವು ಮುಖಂಡರು ಸಾಲಿಗ್ರಾಮದಲ್ಲಿ ಒಕ್ಕಲಿಗ ಸಮುದಾಯ ಭವನ ಆಗುವವರೆಗೆ ಕೆಆರ್ ನಗರದಲ್ಲಿ ಆಚರಣೆ ಮಾಡೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಮುದಾಯ ಭವನ ನಿರ್ಮಾಣಕ್ಕೂ ಜಯಂತಿಗೂ ಯಾವುದೇ ಸಂಬಂಧ ಇಲ್ಲ ಸಮುದಾಯ ಭವನವನ್ನ ಈ ಬಾರಿ ತಾಲೂಕಿನ ಮುಖಂಡರು ಮತ್ತು ಒಕ್ಕಲಿಗ ಸಂಘದ ಎಲ್ಲಾ ಮುಖಂಡರ ಮಾರ್ಗದರ್ಶನದಲ್ಲಿ ಭವನವನ್ನು ಕಟ್ಟೋಣ ಎಂದು ಸಾಲಿಗ್ರಾಮ ಭಾಗದ ಮುಖಂಡರು ಸಭೆಯಲ್ಲಿ ತಿಳಿಸಿದರು.

ಕಳೆದ ವರ್ಷ ಸಭೆಯಲ್ಲಿ ನಿರ್ಣಯ ಮಾಡಿದಂತೆ ಸಾಲಿಗ್ರಾಮ ತಾಲೂಕಿನಲ್ಲಿ ಹೆಚ್ಚು ಒಕ್ಕಲಿಗ ಸಮುದಾಯ ಇರುವುದರಿಂದ ಈ ವರ್ಷ ಸಾಲಿಗ್ರಾಮದಲ್ಲಿ ಆಚರಣೆ ಮಾಡಬೇಕು ಸಮಾಜದ ಮುಖಂಡರು ಎಂದು ಒತ್ತಾಯಿಸಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಮ್‌ಟಿ ಅಣ್ಣೇಗೌಡ ಮಾತನಾಡಿ. ಸಭೆಯಲ್ಲಿ ಸಾಲಿಗ್ರಾಮದಲ್ಲೇ ಈ ವರ್ಷ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲು ಸಮಾಜದ ಎಲ್ಲ ಮುಖಂಡರು ಒಮ್ಮತ ನಿರ್ಣಯ ಸೂಚಿಸಿರುವುದರಿಂದ ಸಾಲಿಗ್ರಾಮದಲ್ಲಿ ಆಚರಣೆ ಮಾಡೋಣ ಎರಡು ತಾಲೂಕಿನ ಒಕ್ಕಲಿಗ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಕೆ ಆರ್ ನಗರ ತಹಸಿಲ್ದಾರ್ ಸಿ ಎಸ್ ಪೂರ್ಣಿಮಾ, ಸಾಲಿಗ್ರಾಮ ತಹಸಿಲ್ದಾರ್ ನರಗುಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಹರೀಶ್, ಆರೋಗ್ಯ ಆಡಳಿತ ಅಧಿಕಾರಿ ಡಾಕ್ಟರ್ ನಟರಾಜ್, ಬಿಇಓ ಕೃಷ್ಣಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಟಿ ಅಣ್ಣೇಗೌಡ, ಮಿರ್ಲೆ ನಂದೀಶ್, ಮಂಜೇಗೌಡ ಪರಶುರಾಮ್, ಉದಯಶಂಕರ್, ಎಂ ಜೆ ರಮೇಶ್,

Continue Reading

Hassan

ಹಾಸನ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ

Published

on

ಹಾಸನ : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ

ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ, ಮೂವರ ಸ್ಥಿತಿ ಚಿಂತಾಜನಕ

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕೀರಿಹಳ್ಳಿ ಗಡಿ ಬಳಿ ಘಟನೆ

ಹಾಸನದ ಕಡೆಗೆ ಬರುತ್ತಿದ್ದ KA-57 F 4530 ನಂಬರ್‌ನ ಸಾರಿಗೆ ಬಸ್

ಧರ್ಮಸ್ಥಳಕ್ಕೆ ಭೇಟಿ ನೀಡಿ ದಾವಣಗೆರೆಗೆ ತೆರಳುತ್ತಿದ್ದ KA-17 MB-8067 ನಂಬರ್‌ನ ಕಾರು

ಕಾರಿನಲ್ಲಿದ್ದ ದಾವಣಗೆರೆ ಮೂಲದ ಚೇತನ್, ನಾಗರಾಜ್, ಚೇತನ್ ಎಂಬುವವರ ಸ್ಥಿತಿ ಚಿಂತಾಜನಕ

ಪುನೀತ್ ಎಂಬುವವರಿಗೆ ಸಣ್ಣಪುಟ್ಟ ಗಾಯ

ಗಾಯಾಳುಗಳು ಹಾಸನದ ಆಸ್ಪತ್ರೆಗೆ ರವಾನೆ

ಅಪಘಾತದಲ್ಲಿ ಸಾರಿಗೆ ಬಸ್‌ನ ನಿರ್ವಾಹಕನ ಕಣ್ಣಿಗೆ ಬಲವಾದ ಗಾಯ

ಬಸ್‌ನಲ್ಲಿದ್ದ ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Hassan

ದಿವ್ಯಾಂಗರಿಗಾಗಿ ಜೂ.೨೦ ರಿಂದ ಮೂರು ದಿನಗಳ ಕಾಲ ಉಚಿತ ಆರೋಗ್ಯ ಶಿಬಿರ : ಚರಣ್

Published

on

ಹಾಸನ: ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಆವರಣದಲ್ಲಿ ಜೂನ್ ೨೦, ೨೧ ಹಾಗೂ ೨೨ ರಂದು ಮೂರು ದಿನಗಳ ಕಾಲ ಬೆನ್ನು ಹುರಿ ಆಪಘಾತಕ್ಕೊಳಗಾದವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಗಾಲಿ ಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಭಾರತಿ ಸಂಸ್ಥೆಯ ಹಿರಿಯ ಮ್ಯಾನೇಜರ್ ಚರಣ್

ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸೇವ ಭಾರತಿ – ಸೇವಾಧಾಮ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಹಯೋಗದಲ್ಲಿ ಜೂನ್ ೨೦ ರಿಂದ ಮೂರು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಮತ್ತು ಗಾಲಿ ಕುರ್ಚಿ ಜಾಥಾವನ್ನು ಏರ್ಪಡಿಸಲಾಗಿದೆ.

ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಮೂರು ದಿನಗಳ ಕಾಲ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಿ.ಎನ್ ಶಿವಸ್ವಾಮಿ ಉದ್ಘಾಟಿಸಲಿದ್ದಾರೆ. ಕನ್ಯಾಡಿಯ ಸೇವಾ ಭಾರತಿಯ ಕಾರ್ಯದರ್ಶಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಎಸ್ ರತ್ನ, ಹಿಮ್ಸ್ ನಿರ್ದೇಶಕ ಡಾ.ಎಸ್ ವಿ ಸಂತೋಷ್ , ಜಿಲ್ಲಾ ಶಾಸ್ತ್ರ ಚಿಕಿತ್ಸಕ ಡಾ. ಲೋಕೇಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್ ಅನುಪಮಾ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು

. ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಒದಗಿಸಲಾಗಿದ್ದು ಜೊತೆಗೆ ಯೋಗ, ಪ್ರಾಣಾಯಾಮ, ಒತ್ತಡ ಗಾಯನಿರ್ವಹಣೆ, ಆಪ್ತ ಸಮಾಲೋಚನೆ, ಮನೋರಂಜನ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಅರ್ಹ ಫಲಾನುಭವಿಗಳಿಗೆ ಗಾಲಿ ಕುರ್ಚಿ, ಮೆಡಿಕಲ್ ಕಿಟ್ ಹಾಗೂ ನೀರಿನ ಹಾಸಿಗೆಗಳನ್ನು ಹಸ್ತಾಂತರಿಸಲಾಗುವುದು. ಕಾರ್ಯಗಾರದ ಕೊನೆಯ ದಿನ ಜೂನ್ ೨೨ರಂದು ಸೇವಾ ಭಾರತೀಯ ವತಿಯಿಂದ ಗಾಲಿ ಕುರ್ಚಿ ರಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಹಾಸಿಗೆ ಹಿಡಿದು ಬೆನ್ನು ಉರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಎಲ್ಲರಂತೆ ಬದುಕಲು ಧೈರ್ಯ ತುಂಬುವ ಹಾಗೂ ಜಾಗೃತಿ ಮೂಡಿಸಲು ಅಂದು ಬೆಳಗ್ಗೆ ೯ ಗಂಟೆಗೆ ಮಹಾರಾಜ ಉದ್ಯಾನವನದ ಮುಂಭಾಗದಿಂದ ಎನ್ನಾರ್ ಸರ್ಕಲ್ ಮೂಲಕ ರಾಲಿ ಸಾಗಲಿದೆ ಎಂದರು. ಜೂನ್ ೨೨ ರಂದು ಮದ್ಯಾಹ್ನ ೧೨ ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಎಸ್.ಎ. ನಿತಿನ್, ವಿ. ನಿರಂಜನ್ ನೆರ್ಲಿಗೆ, ಯೋಗನಾಥ್, ಗಂಗಾಧರ್ ಇತರರು ಪಾಲ್ಗೊಳ್ಳುವುದಾಗಿ ಹೇಳಿದರು.

ಸಂಘಟನಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಈ ಸಮಾಜದಲ್ಲಿ ಬೆನ್ನುಹುರಿ ಆಗತಕ್ಕೊಳಗಾದವರು ಮಾನಸಿಕ ಖಿನ್ನತೆಗೆ ಹಾಗೂ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಸರ್ಕಾರ ಈ ಬಗ್ಗೆ ಅಗತ್ಯ ಚಿಂತನೆ ನಡೆಸಬೇಕಿದೆ. ನಮಗೆ ನೀಡುತ್ತಿರುವ ೧೪೦೦ ರೂ ಗಳ ಸಹಾಯ ಧನ ೫,೦೦೦ಕ್ಕೆ ಹೆಚ್ಚಿಸಬೇಕು ಹಾಗೂ ನಮ್ಮನ್ನು ನೋಡಿಕೊಳ್ಳುವವರಿಗೆ ೨೦೦೦ ಸಹಾಯಧನ ನೀಡಬೇಕು, ವೀಲ್ ಚೇರ್, ನೀರಿನ ಹಾಸಿಗೆಗಳನ್ನು, ಮೆಡಿಕಲ್ ಕಿಟ್ ನೀಡಬೇಕು ಪ್ರತಿ ತಾಲೂಕಿನಲ್ಲಿಯೂ ಪುನಸ್ಟೇತನ ಕೇಂದ್ರಗಳನ್ನು ತೆರೆಯಬೇಕು ಎಂದು ಕೋರಿದರು. ಈ ಜಾಥದ ಮುಲಕ ಹಾಸಿಗೆ ಹಿಡಿದ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿವ್ಯಾಂಗರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡುವುದು. ಎಲ್ಲಾರಂತೆ ಬದಲು ದೈರ್ಯ ತುಂಬುವುದು ಆಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ನಾಗಾರ್ಜುನ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!