Connect with us

Kodagu

ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧೆ – ಕೆ.ಕೆ. ಮಂಜುನಾಥ್ ಕುಮಾರ್

Published

on

ವರದಿ : ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ
=================
ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿದ್ದರಿಂದ ಶಿಕ್ಷಕ ವರ್ಗಕ್ಕೆ ಅನ್ಯಾಯವಾಗಿದೆ. ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಸಂಬAಧಪಟ್ಟವರಿಗೆ ಮನವಿ ಸಲ್ಲಿಸಿ ಚಾಲನೆಗೆ ಕ್ರಮವಹಿಸಲಾಗಿದೆ. ಅಲ್ಲದೇ ಶಿಕ್ಷಕರ, ಉಪನ್ಯಾಸಕರ ಹಲವಾರು ಸಮಸ್ಯೆಗಳ ಬಗ್ಗೆ ತನಗೆ ಅರಿವಿದ್ದು, ತಾನು ಗೆದ್ದು ಬಂದರೆ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಮಂಜುನಾಥ್ ಕುಮಾರ್ ಹೇಳಿದರು.
ಕಾಂಗ್ರೆಸ್ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್ ಮಾತನಾಡಿ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿರುವ ಕಾಂಗ್ರೆಸ್ ಶಾಸಕರುಗಳು, ಪ್ರಮುಖರು, ಕಾರ್ಯಕರ್ತರು ಮಂಜುನಾಥ್ ಕುಮಾರ್ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ಶಿಕ್ಷಕರಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಂಜುನಾಥ್ ಕುಮಾರ್ ಅವರಿಗೆ ಅರಿವಿದೆ ಎಂದು ಹೇಳಿದರು. ನೈರುತ್ಯ ಕ್ಷೇತ್ರದಲ್ಲಿ ೧೯,೩೮೯ ಮತದಾರರಿದ್ದಾರೆ ಎಂದು ಅವರು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ರಾಜೇಶ್ ಯಲ್ಲಪ್ಪ, ನಗರಸಭಾ ನಾಮನಿರ್ದೇಶಿತ ಸದಸ್ಯ ಮಂಡೀರ ಸದಾ ಮುದ್ದಪ್ಪ, ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಸಿ.ಐ.ಪಿ.ಯು.ಸಿ ವಿದ್ಯಾರ್ಥಿಗಳಿಂದ ನಶಾಮುಕ್ತ ಭಾರತ ಅಭಿಯಾನದಡಿ ಪ್ರತಿಜ್ಞೆ ವಿಧಿ ಸ್ವೀಕಾರ

Published

on

ಪೊನ್ನಂಪೇಟೆ : ಕೊಡವ ಎಜುಕೇಷನ್ ಸೊಸೈಟಿಯ ಅಧೀನಕ್ಕೊಳಪಡುವ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಆರೋಗ್ಯವಂತ ಭಾರತಕ್ಕೆ ಆರೋಗ್ಯವಂತ ಯುವಜನತೆ ಎಂಬ ಧ್ಯೇಯ ವಾಕ್ಯದಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು ನಶಾಮುಕ್ತ ಭಾರತ ಅಭಿಯಾನದಡಿ ಮಾದಕ ವಸ್ತು ಸೇವನೆ ಮಾಡದಿರಲು ಭಾರತದ ಯುವಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರೂಪಿಸಿದೆ. ಆದ್ದರಿಂದ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅಭಿಯಾನದ ಸದುದ್ದೇಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಪ್ರಾರ್ಥನಾ ಸಭೆಯಲ್ಲಿ ದ್ವಿತೀಯ ಪಿ.ಯು.ವಿದ್ಯಾರ್ಥಿನಿ ಕು.ದಿತ್ತ್ಯಾ ದೇಚಮ್ಮ ಎಂ.ವಿ. ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿವೃಂದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರು ಹಾಜರಿದ್ದರು.

Continue Reading

Kodagu

ಫಿಜಿಯೋಥೆರಪಿಸ್ಟ್ ಆಗಿ ಕೊಡಗಿನ ಡಾ. ಚೆಕ್ಕೇರ ಪೂವಯ್ಯ

Published

on

ಶ್ರೀಮಂಗಲ: ಆಗಸ್ಟ್ 15 ರಿಂದ ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಆಶ್ರಯದಲ್ಲಿ ನಡೆಯುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ “ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್” ತಂಡದ ಫಿಜಿಯೋಥೆರಪಿಸ್ಟ್ ಆಗಿ ದ್ವಿತೀಯ ಬಾರಿಗೆ ಡಾ. ಚೆಕ್ಕೇರ ಪೂವಯ್ಯ ಅವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಇವರು ಐರ್ಲೆಂಡ್ ನಲ್ಲಿ ಫಿಜಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪೊನ್ನಂಪೇಟೆ ತಾಲೂಕು ಹುದಿಕೇರಿ ಹೈಸೊಡ್ಲೂರು ಗ್ರಾಮದ ಚೆಕ್ಕೇರ ರಮೇಶ್ ಹಾಗೂ ಗೀತಾ ದಂಪತಿಯ ಪುತ್ರ ರಾಗಿದ್ದಾರೆ.

Continue Reading

Kodagu

ಭಕ್ತಿಬಾವದಿಂದ‌ ಜರುಗಿದ ಶ್ರಾವಣ ಮಾಸದ ಶ್ರೀ ಶನೀಶ್ವರ ಪೂಜಾ ಕಾರ್ಯ:

Published

on

ವಿರಾಜಪೇಟೆ: ಆ:
ಶ್ರಾವಣ ಮಾಸದ ಪ್ರಥಮ ಶನಿವಾರ ದಿನದ ಅಂಗವಾಗಿ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಶನಿವಾರದ ಪೂಜಾ ಕೈಂಕಾರ್ಯಗಳು ಭಕ್ತಿ ಬಾವದಿಂದ ಜರುಗಿತು.


ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಯಿತು. ಅರ್ಚಕರಾದ ಸಂತೋಷ್ ಹೆಬ್ಬಾರ್ ಮತ್ತು ಪವನ್ ಕುಮಾರ್ ಭಟ್ ಸಾರಥ್ಯದಲ್ಲಿ ಪೂಜೆಗಳು ಆರಂಭಗೊಂಡಿತು. ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ,ಶನಿ ಜಪ,ರಾಹು ಕೇತು ಜಪ, ಕುಂಕುಮಾರ್ಚನೆ, ಮೃತ್ಯುಂಜಯ ಜಪ ಪೂಜಾದಿಗಳು ನಡೆಯಿತು. ಬಳಿಕ ಮಧ್ಯಾಹ್ನ ೧-೦೦ ಗಂಟೆಗೆ ಶ್ರೀ ಶನೀಶ್ವರ ಸ್ವಾಮಿಗೆ ಮಾಹಾ ಮಂಗಳಾರತಿ, ಮಾಹಾಪೂಜೆ ಸಲ್ಲಿಕೆಗೊಂಡಿತ್ತು.


ದೇವಾಲಯದಲ್ಲಿ ತಾ 17 ,24, 31 ರಂದು ಶ್ರಾವಣ ಶನಿವಾರದ ವಿಶೇಷ ಪೂಜೆಗಳು ನಡೆಯಲಿದೆ ಹಾಗೂ ಮಾಹಾಪೂಜೆಯ ಬಳಿಕ ಭಕ್ತಮಾಹಾಶಯರೀಗೆ ಅನ್ನಸಂತರ್ಪಣೆ ನಡೆಯಲಿದೆ.
ಮಾಹಾಪೂಜೆಯ ಸಂಧರ್ಭದಲ್ಲಿ ದೇಗುಲ ತಕ್ಕರಾದ ಚೊಕಂಡ ರಮೇಶ್ ಮತ್ತು ಕುಟುಂಬಸ್ಥರು, ಪುರೋಹಿತ ವರ್ಗ, ಗ್ರಾಮಸ್ಥರು ನಗರ ಮತ್ತು ಸ್ಥಳೀಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸಿ ಶ್ರೀ ಶನೀಶ್ವರ ದೇವರ ಅನುಗ್ರಹ ಪಡೆದು ಪುನಿತರಾದರು.

Continue Reading

Trending

error: Content is protected !!