Mandya
ಸ್ವಂತ ಹೆಂಡತಿ ಗೆಲ್ಲಿಸಿಕೊಳ್ಳದವ ಎಚ್‌ಡಿಕೆ ಸೋಲಿಸುತ್ತೀಯಾ? – ಕೆ.ಅನ್ನದಾನಿ

90 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್
ಅಂಬೇಡ್ಕರ್ ಸೋಲಿಸಿ, ಕೊಡಬಾರದ ಹಿಂಸೆಕೊಟ್ಟಿದ್ದು ಕಾಂಗ್ರೆಸ್
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಕೆ.ಅನ್ನದಾನಿ
ಸ್ವಂತ ಹೆಂಡತಿ ಗೆಲ್ಲಿಸಿಕೊಳ್ಳದವ ಎಚ್‌ಡಿಕೆ ಸೋಲಿಸುತ್ತೀಯಾ?
ಮಂಡ್ಯ: ಸಂವಿಧಾನವನ್ನು ಬರೋಬ್ಬರಿ 90 ಬಾರಿ ತಿದ್ದುಪಡಿ ಮಾಡಿರುವ ಕಾಂಗ್ರೆಸ್ ಪಕ್ಷವು, ದಲಿತರನ್ನು ಮತ ಬ್ಯಾಂಕಾಗಿ ಇಟ್ಟುಕೊಂಡಿದ್ದಾರೆ, ನಿಜವಾದ ಜಾತಿವಾದಿ ಹಾಗೂ ಕೋಮುವಾದಿ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ, ಅಧಿಕಾರಿ ಸಿಗದ ಕಾರಣ ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದು ಮಾಜಿ ಶಾಸಕ ಮತ್ತು ಜೆಡಿಎಸ್ ರಾಜ್ಯ ಪ.ಜಾತಿ ವರ್ಗದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 98 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಅಧಿಕಾರ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ನಾಯಕರು ದಲಿತರನ್ನು ಮತ ಬ್ಯಾಂಕಾಗಿ ಇಟ್ಟುಕೊಂಡಿದ್ದಾರೆಯೇ ಹೊರತು, ಇದುವರೆಗೂ ನ್ಯಾಯ ದೊರಕಿಸಿಕೊಟ್ಟಿಲ್ಲ. ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಎಂದರೆ ಕಾಂಗ್ರೆಸ್ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.
ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಎರಡು ಬಾರಿ ಸೋಲಿಸಿದರು. ಅವರು ಕಾನೂನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಬಾರದ ಹಿಂಸೆ ಕೊಟ್ಟು ಅವರೇ ರಾಜೀನಾಮೆ ನೀಡುವಂತೆ ಮಾಡಿದರು. ಅವರು ಮರಣವಾದಾಗ ಅವರ ಮೃತದೇಹವನ್ನು ಹೂಳಲು ಒಂದಿಂಚು ಜಾಗ ನೀಡಲಿಲ್ಲ. ಅವರ ಮೃತದೇಹವನ್ನು ಮುಂಬೈಗೆ ತೆಗೆದುಕೊಂಡು ಹೋಗಲು ಸಹ ವಿಮಾನದ ವೆಚ್ಚ ಭರಿಸಲಿಲ್ಲ. ಅವರ ಹೆಸರೇಳಿಕೊಂಡು ದಲಿತರ ಮತ ಕೇಳುತ್ತಿದ್ದೀರಲ್ಲಾ, ನಿಮಗೆ ನೈತಿಕತೆ ಇದೆಯೇ ಎಂದು ಹರಿಯಾಯ್ದರು.
ಡಾ.ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಮಂತ್ರಿ ಹುದ್ದೆ ತಪ್ಪಿಸಿದ್ದು ಇದೇ ಕಾಂಗ್ರೆಸ್‌ನವರು ಇದಕ್ಕೆ ಕಾಂಗ್ರೆಸ್‌ನ ಮಹಾನಾಯಕರು ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ದಲಿತರ ಮತ ಕೇಳಬಾರದು? ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ತಿದ್ದಲು ಯಾವುದೇ ಪಕ್ಷದವರಿಗೆ ತಾಕತ್ತಿಲ್ಲ. ಒಂದು ವೇಳೆ ತಿದ್ದಲು ಪ್ರಯತ್ನಿಸಿದರೆ ರಕ್ತಪಾತವೇ ಹರಿಯುತ್ತದೆ. ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಇದೆಲ್ಲ ಕಾಂಗ್ರೆಸ್ನವರ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಿದರು. ಆದರೆ, 60 ವರ್ಷ ಈ ದೇಶವನ್ನಾಳಿದ ಕಾಂಗ್ರೆಸ್‌ನವರು ಏಕೆ ಅಭಿವೃದ್ಧಿ ಮಾಡಲಿಲ್ಲ? ನಿಮಗೆ ಯೋಗ್ಯತೆ ಇರಲಿಲ್ಲವೇ, ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಮುಖ್ಯಮಂತ್ರಿಯಾಗಬೇಕಿದ್ದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿ, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಯಾರು? 2008 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡದವರು ಯಾರು? ಇದರಲ್ಲಿ ಮಳವಳ್ಳಿ ಕ್ಷೇತ್ರದ ನಾಯಕನ ಪಾತ್ರವೂ ಇದೆ ಎಂದು ಶಾಸಕ ನರೇಂದ್ರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಅಂದು ಶಾಸಕ ಸ್ಥಾನದಿಂದ ಅನರ್ಹವಾಗಿದ್ದ ಪಿ.ಎಂ.ನರೇಂದ್ರಸ್ವಾಮಿಗೆ ದಂಡ ಕಟ್ಟಲು ಹಣವಿಲ್ಲದಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರೇ ಹಣ ಕಟ್ಟಿ, ನಿನ್ನನ್ನು ಶಾಸಕ ಸ್ಥಾನದಿಂದ ಉಳಿಸಿ, ರಾಜಕಾರಣದಲ್ಲಿ ಮುಂದುವರಿಯುವಂತೆ ಮಾಡಿದರು. ಇಂದು ಅವರನ್ನೇ ಪ್ರಶ್ನೆ ಮಾಡುತ್ತೀಯಾ? ದಲಿತ ನಾಯಕ ಮುಖ್ಯಮಂತ್ರಿ ಆಗಲು ದನಿಗೂಡಿಸುತ್ತಿಲ್ಲ. ಅಧಿಕಾರ ಶಾಶ್ವತವಲ್ಲ, ನಿನಗೂ ಮೊದಲೇ ಶಾಸಕನಾಗಿ ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಅರಿತು ಸ್ವಲ್ಪ ತಗ್ಗಿ-ಬಗ್ಗಿ ನಡೆಯಪ್ಪಾ ಎಂದು ಸಲಹೆ ನೀಡಿದರು.
ಬಹು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ನೀರಿನ ಹಂಚಿಕೆಯನ್ನು ಪರಿಹರಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಲೇಬೇಕು. ಅದಕ್ಕಾಗಿ ದಲಿತ ಜನಾಂಗದವರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಬಹುಮತಗಳ ಅಂತರದಿಂದ ಗೆಲ್ಲಿಸಬೇಕು. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮಾ.4ರ ಗುರುವಾರ ಬೆಳಿಗ್ಗೆ 10.30 ಗಂಟೆಗೆ ನಾಮಪತ್ರ ಸಲ್ಲಿಸುತ್ತಿದ್ದು, ಪ.ಜಾತಿ/ಪಂಗಡದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಪ.ಜಾತಿ ವರ್ಗದ ಅಧ್ಯಕ್ಷ ಸಾತನೂರು ಜಯರಾಮು, ಬಿಜೆಪಿ ಪ.ಜಾತಿ ವರ್ಗದ ಅಧ್ಯಕ್ಷ ನಿತ್ಯಾನಂದ, ಮುಖಂಡರಾದ ವೈರಮುಡಿ, ಪಾಪಯ್ಯ, ನರಸಿಂಹ, ಬೊಮ್ಮರಾಜು, ಕಾಂತರಾಜು, ಭದ್ರಾಚಲಮೂರ್ತಿ, ಶಂಕರ್ ಇದ್ದರು.
Mandya
ಅಮಾಯಕರನ್ನು ವಂಚಿಸುತ್ತಿರುವವರ ವಿರುದ್ದ ಕ್ರಮಕ್ಕೆ ಮ.ರ.ವೇ ಒತ್ತಾಯ

ಶ್ರೀರಂಗಪಟ್ಟಣ :ಅನಕ್ಷರಸ್ಥ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಪಡೆದು ವಂಚಿಸಿದ್ದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆAಟ್ (ಬಿಸಿ) ಯೋಗಾನಂದ ನನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಬಾಬುರಾಯನಕೊಪ್ಪಲಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ತೆರಳಿ ಶಾಖಾ ವ್ಯವಸ್ಥಾಪಕ ವೆಂಕಟೇಶ್‌ಬಾಬು ಅವರನ್ನ ಭೇಟಿ ಮಾಡಿ, ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾಂದ್ಯಂತ ವಂಚಸುತ್ತಿದ್ದಾರೆ. ತಾಲೂಕಿನ ಚಂದಗಾಲು ಗ್ರಾಮದ ೭೬ವರ್ಷ ವಯಸ್ಸಿನ ವೃದ್ಧ ಅನಕ್ಷರಸ್ಥ ರಂಗಣ್ಣ ಅವರಿಗೆ ಮೇಳಾಪುರ ಗ್ರಾಮದ ಬ್ಯಾಂಕ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆಂಟ್ ಯೋಗಾನಂದ ಎಂಬ ವ್ಯಕ್ತಿ ೨೪೦೦-೦೦ ಹಣ ಡ್ರಾ ಮಾಡಿ, ಕೇವಲ ೧೨೦೦-೦೦ ರು. ಹಣ ನೀಡಿ ವಂಚಿಸಿರುವುದು ಸಾಕ್ಷ್ತ ಸಮೇತ ಸಾಬೀತಾಗಿದೆ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳ ವ್ಯವಸ್ಥಾಪಕ ವೆಂಕಟೇಶ್‌ಬಾಬು ನೋಡೋಣ, ಕಾಲಾವಕಾಶ ಕೊಡಿ, ಕ್ರಮ ವಹಿಸೋಣ ಎಂಬ ಹಾರಿಕೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಸಿಟ್ಟಿಗೆದ್ದ ಸಂಘಟನೆ ಮುಖಂಡರು, ನೆಲದ ಮೇಲೆ ಕುಳಿತು ವ್ಯವಸ್ಥಾಪಕರ ವಿರುದ್ದ ಅಸಮಧಾನ ಹೊರಹಾಕಿದರು. ವಂಚಿಸಿರುವ ವ್ಯಕ್ತಿಯೇ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದರೂ ಸಹ ವ್ಯವಸ್ಥಾಪಕರಿಂದ ಈ ರೀತಿಯ ಉಡಾಫೆ ಉತ್ತರ ಕೇಳಿಬರುತ್ತಿದೆ ಹೊರತಾಗಿ, ನ್ಯಾಯಯುತವಾಗಿ ಬಡವರ ಪರವಾದ ಒಂದೇ ಒಂದು ಮಾತು ಹೇಳದಿರುವುದು ಮಂಡ್ಯ ರಕ್ಷಣಾ ವೇದಿಕೆ ಖಂಡಿಸುತ್ತದೆ.
ಗ್ರಾಮದಲ್ಲಿನ ಬ್ಯಾಂಕ್ ರೈತರು, ಬಡವರು ಹಾಗೂ ವಿದ್ಯಾರ್ಥಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನ ನೀಡಿಲ್ಲ. ಈ ವರೆವಿಗೆ ಮುದ್ರ ಲೋನ್, ರೈತರಿಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ಕೇಳಿದರೆ ಇವರ ಬಳಿ ಯಾವುದೇ ಉತ್ತರಿವಿಲ್ಲ. ಈ ಬ್ಯಾಂಕ್ ಉಳ್ಳವರ ಪರವಾಗಿದೇ ವಿನಃ ಬಡವರ ಪರವಾಗಿಲ್ಲ. ಹಾಗಾಗಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಮುಂದೆ ಇದೇ ರೀತಿ ಏಜಂಟರ್‌ಗಳಿಂದ ವಂಚನೆಗಳಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ, ಬ್ಯಾಂಕ್‌ನ ಸಿಬ್ಬಂದಿಗಳನ್ನೇ ನೇರ ಹೊಣೆ ಮಾಡಿ, ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Mandya
ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ

ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಂದ ದಿಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿತ್ತು . ಈ ಸಮಾರಂಭದಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಮಾಕವಳ್ಳಿ ಗ್ರಾಮದ ಯುವ ಛಾಯಗ್ರಾಹಕ ಹಾಗೂ ಕಲಾವಿದರು ಆಗಿರುವಂತಹ ಸೋಮಶೇಖರ್ ಎಂ.ಕೆ. ರವರಿಗೆ ಯವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಸಿ.ಕೆ. ಸಂಧ್ಯಾ ಜಿಲ್ಲಾ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್. ಸಹಾಯಕ ನಿರ್ಧೇಶಕರು ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ ಅಲ್ಪಸಂಖ್ಯಾತರ ಸಮಾಜ ಕಲ್ಯಣ ಎಲಾಖೆ, ಹಾಗೂ ನಟರು ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ನಟಿ ಇನ್ನು ಅನೇಕ ಗಣ್ಯರುಗಳು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Mandya
ಜಿಲ್ಲಾಧಿಕಾರಿಗಳಿಂದ ಮೇಲುಕೋಟೆ ವೈರಮುಡಿ ಉತ್ಸವದ ಸಿದ್ದತೆ ಪರಿಶೀಲನೆ

ಮಂಡ್ಯ : ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೇಲುಕೋಟೆಯಲ್ಲಿ ನಡೆಯಲಿರುವ ವೈರಮುಡಿ ಉತ್ಸವದ ಸಿದ್ಧತೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದರು.
ಸಂಚಾರ ವ್ಯವಸ್ಥೆ ಪಾರ್ಕಿಂಗ್, ಭಕ್ತಾಧಿಗಳಿಗೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು
-
Kodagu20 hours ago
ಬೇಳೂರು ಬಾಣೆಯಲ್ಲಿ ಸ್ಟೇರಿಂಗ್ ಲಾಕ್ : ಕಾರು ಪಲ್ಟಿ
-
Kodagu17 hours ago
ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ: ಕೃತಾರ್ಥ ಮಂಡೆಕುಟ್ಟಂಡ
-
State13 hours ago
ಬಿಜೆಪಿ ಶೋಕಾಸ್ ನೋಟಿಸ್ ಕುರಿತು ಶಾಸಕ ಎಸ್ಟಿಎಸ್ ಫಸ್ಟ್ ರಿಯಾಕ್ಷನ್
-
Mysore17 hours ago
ಎಲ್ಲಾ ಪಕ್ಷದವರ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ: ಯತೀಂದ್ರ ಸಿದ್ದರಾಮಯ್ಯ
-
Mandya16 hours ago
ಭೂ ದಾಖಲೆ ಹೊಂದಿರುವವರನ್ನು ಓಕ್ಕಲೆಬ್ಬಿಸಬೇಡಿ : ಎನ್ ಚೆಲುವರಾಯಸ್ವಾಮಿ
-
Mandya12 hours ago
ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ
-
State10 hours ago
ಬಿಜೆಪಿಯಿಂದ ಆರು ವರ್ಷಗಳ ಕಾಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ
-
Hassan14 hours ago
1 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನರೆವೇರಿಸಿದ ಸ್ವರೂಪ್ ಪ್ರಕಾಶ್