Connect with us

National - International

ಮಣಿಪುರ ಸಿಎಂ ರಾಜೀನಾಮೆ: ರಾಷ್ಟ್ರಪತಿ ಆಡಳಿತ ಜಾರಿ

Published

on

ಮಣಿಪುರ: ಮಣಿಪುರ ಮಾಜಿ ಮುಖ್ಯಮಂತ್ರಿ ಬೀರೆನ್‌ ಸಿಂಗ್‌ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ದಿಢೀರ್‌ ರಾಜೀನಾಮೆ ಘೋಷಿಸಿದ್ದರು.

ರಾಜೀನಾಮೆ ನೀಡಿದ ಬಳಿಕ ಮೂರು ದಿನಗಳು ಕಳೆದರೂ ಆಡಳಿತಾರೂಢ ಬಿಜೆಪಿ ಪಾರ್ಟಿಯೂ ತಮ್ಮ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲು ವಿಫಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಘರ್ಷ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

https://x.com/ANI/status/1890039001022968040

Continue Reading

National

UNESCO ಹಬ್ಬಗಳ ಪಟ್ಟಿಗೆ ಸೇರಿದ ಭಾರತದ ದೀಪಾವಳಿ

Published

on

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಯನ್ನು ಇದೀಗ ಯುನೆಸ್ಕೋದ  ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರಿಸಲಾಗಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಯುನೆಸ್ಕೋದ ಮುಖ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಕೆಲಸ ಮಾಡುವ ಈ ಅಂತರ್ ಸರ್ಕಾರಿ ಸಮಿತಿಯ ಅಧಿವೇಶನವನ್ನು ಭಾರತ ಇದೇ ಮೊದಲ ಬಾರಿಗೆ ಆಯೋಜಿಸಿದೆ. ಸಮಿತಿಯ 20ನೇ ಅಧಿವೇಶನವೂ ಡಿ.8 ರಿಂದ ಕೆಂಪುಕೋಟೆಯಲ್ಲಿ ಆರಂಭವಾಗಿದ್ದು, ಡಿ.13ರವರೆಗೆ ನಡೆಯಲಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಮತ್ತು ಪ್ರಪಂಚದಾದ್ಯಂತ ಜನರು ಈ ನಿರ್ಧಾರದಿಂದ ಖುಷಿಯಾಗಿದ್ದಾರೆ. ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಇದು ನಮ್ಮ ನಾಗರಿಕತೆಯ ಆತ್ಮ. ಇದು ಬೆಳಕು ಮತ್ತು ಸದಾಚಾರವನ್ನು ಸಂಕೇತಿಸುತ್ತದೆ. ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆಯಿಂದಾಗಿ ಈ ಹಬ್ಬದ ಜಾಗತಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ. ಭಗವಾನ್ ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡಲಿ ಎಂದು ತಿಳಿಸಿದರು.

Continue Reading

National - International

ಭಾರತ-ರಷ್ಯಾ ಆರ್ಥಿಕ ಬಲ ಹೆಚ್ಚಿಸಲು ವಿಷನ್- 2030: ಪಿಎಂ ಮೋದಿ-ಪುಟಿನ್‌ ಮಧ್ಯೆ ದ್ವಿಪಕ್ಷೀಯ ಒಪ್ಪಂದ

Published

on

ನವದೆಹಲಿ: ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಹೆಚ್ಚಿಸಲು ವಿಷನ್ 2030  ದಾಖಲೆಗೆ ಸಹಿ ಹಾಕಿವೆ. ಈ ಮೂಲಕ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ  ಹಲವಾರು ವ್ಯಾಪಾರ ಮಾರ್ಗಗಳನ್ನ ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ತಿಳಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ಆರ್ಥಿಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು, ನಾವು ʻವಿಷನ್ 2030ʼ ದಾಖಲೆಗೆ ಸಹಿ ಹಾಕಿದ್ದೇವೆ. ಇಂದು, ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ಈ ಒಪ್ಪಂದವು ಆದ್ಯತೆಯ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಅಲ್ಲದೇ ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಆರ್ಥಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಸಹ-ಉತ್ಪಾದನೆ ಮತ್ತು ಸಹ-ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತವೆ ಎಂಬ ವಿಶ್ವಾಸ ನನಗಿದೆ ಎಂದು  ಹೇಳಿದರು.

ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ FTA ಅನ್ನು ಸಾಕಾರಗೊಳಿಸಲು ಎರಡೂ ದೇಶಗಳು ಹೊಸ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ ಎಂದರು. ಇದೇ ಸಮಯದಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಜಾಗತಿಕ ಏಕತೆಯನ್ನು ಕೋರಿದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ – ರಷ್ಯಾ ಒಟ್ಟಾಗಿ ಸಾಗಲಿವೆ ಎಂದು ತಿಳಿಸಿದರು.

ಇನ್ನೂ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪುಟಿನ್, ಭಾರತದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ರಷ್ಯಾ ನಡುವಿನ ಅಭಿವೃದ್ಧಿ ಹೆಚ್ಚಿಸಲು ನಾನು, ಪ್ರಧಾನಿ ಮೋದಿ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Continue Reading

National - International

ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ : ಪಿಎಂ ಮೋದಿ

Published

on

ನವದೆಹಲಿ:  ಶೀಘ್ರದಲ್ಲೇ ಭಾರತವೂ,  ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ  ಹಾಗೂ 30 ದಿನಗಳ ಗುಂಪು ಪ್ರವಾಸಿ (ಗ್ರೂಪ್‌ ಟೂರಿಸ್ಟ್‌ ವೀಸಾ – Group Tourist Visa) ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ) ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಡಿಸಿದರು. ರಷ್ಯಾದ ನಾಗರಿಕರಿಗೆ ಇ-ಟೂರಿಸ್ಟ್‌ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನ ಶೀಘ್ರದಲ್ಲೇ ಆರಂಭಿಸಲಿದ್ದೇವೆ. ಈ ತೀರ್ಮಾನ ಪ್ರಕಟಿಸಲು ನನಗೆ ತುಂಬಾ ಹರ್ಷವಾಗಿದ್ದು, ಮುಂದಿನ 30 ದಿನಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದರು.

ಉಭಯ ದೇಶದ ನಾಗರಿಕರಿಗೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಈ ನಿರ್ಧಾರವು ಭಾರತ-ರಷ್ಯಾದ ಸಂಬಂಧವನ್ನು ಅದರಲ್ಲೂ ವಿಶೇಷವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು  ತಿಳಿಸಿದರು.

ಇ-ಟೂರಿಸ್ಟ್‌ ವೀಸಾ ಎಂದರೇನು?
ಇ-ಪ್ರವಾಸಿ ವೀಸಾ ಅಂದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ. ಇದು ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆ ಆಗಿರುತ್ತದೆ. ಇದನ್ನು ಪಡೆಯಲು ನೀವು ವೀಸಾ ಕಚೇರಿಗೆ ಭೇಟಿ ನೀಡುವ ಅಗತ್ಯ ಇರೋದಿಲ್ಲ. ಪ್ರವಾಸಿಗರು ಮನರಂಜನೆ, ಪ್ರಯಾಣ ಅಥವಾ ಸಂಬಂಧಿಕರನ್ನ ಭೇಟಿ ಮಾಡುವಂತಹ ಉದ್ದೇಶಗಳಿಗಾಗಿ ಇ-ಟೂರಿಸ್ಟ್‌ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ ಮುಂದೇನು?
ಇ-ಪ್ರವಾಸಿ ವೀಸಾಗಾಗಿ ಅರ್ಜಿ ಸಲ್ಲಿಸಿದ ಬಳಿಕ, ನೀವು ಇಮೇಲ್ ಮೂಲಕ ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರವನ್ನು (ETA) ಅನ್ನು ಸ್ವೀಕರಿಸುತ್ತೀರಿ. ಈ ಅಧಿಕಾರವು ನಿಮ್ಮ ಪಾಸ್‌ಪೋರ್ಟ್‌ಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಮಾಡಲಾಗಿರುತ್ತದೆ. ಜೊತೆಗೆ ಭಾರತದ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಸಾಂಪ್ರದಾಯಿಕ ವೀಸಾಗಳಿಗಿಂತ ಅಧಿಕ ಸರಳ ಮತ್ತು ವೇಗವಾಗಿ ನಡೆಯುತ್ತದೆ.
Continue Reading

Trending

error: Content is protected !!