Kodagu
ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷರಾಗಿ ಅಪ್ಪಯ್ಯ ಆಯ್ಕೆ
Kodagu
ಮನವಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ : ಶಾಸಕ ಪೊನ್ನಣ್ಣ
ಗೋಣಿಕೊಪ್ಪ : ಅಂತರರಾಷ್ಟ್ರೀಯ ಆದಿವಾಸಿ ಬುಡಕಟ್ಟು ದಿನಾಚರಣೆಯ ಪ್ರಯುಕ್ತ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಪೊನ್ನಂಪೇಟೆ ತಾಲೂಕಿನ ನಾಣಚಿ ಭಾಗಕ್ಕೆ ಭೇಟಿ ನೀಡಿದರು.
ಹಾಡಿಯ ನಿವಾಸಿಗಳು ನೀಡಿದ ಹಲವು ಬೇಡಿಕೆಗಳಿದ್ದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಬಾಂಧವರಿಗೆ ಶುಭಾಶಯಗಳು ಕೋರಿದ ಶಾಸಕರು ಬಳಿಕ ಮಾತನಾಡಿ, ಸಂವಿಧಾನ ಬದ್ಧವಾಗಿ ತಾವುಗಳು ನೀಡಿರುವ ಮನವಿಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ತಾನು ಪ್ರಯತ್ನಿಸಿ ಈಗಾಗಲೇ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಕಳೆದ ಎರಡು ವರ್ಷದಲ್ಲಿ ಕಲ್ಪಿಸಿದ ಹತ್ತಾರು ಸೌಲಭ್ಯಗಳ ಬಗ್ಗೆ ನೆನಪಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 16ಕ್ಕೂ ಅಧಿಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದನ್ನು ನೆನಪಿಸಿದ ಶಾಸಕರು, ಬಹುತೇಕ ಎಲ್ಲಾ ಆದಿವಾಸಿ-ಬುಡಕಟ್ಟು ಜನಾಂಗದವರು ವಾಸಿಸುವ ಕಡೆ ರಸ್ತೆಗಳನ್ನು, ಕುಡಿಯುವ ನೀರನ್ನು, ಹಕ್ಕು ಪತ್ರಗಳನ್ನು ಒದಗಿಸಿದ್ದನ್ನು ಸ್ಮರಿಸಿದರು.
ಆದಿವಾಸಿ ಮಕ್ಕಳ ಅಭಿವೃದ್ಧಿಗಾಗಿ ಶಾಲೆಯನ್ನು ತೆರೆಯುವುದರೊಂದಿಗೆ, ಚಾಲ್ತಿಯಲ್ಲಿರುವ ಶಾಲೆಯ ಸೌಲಭ್ಯಗಳ ಉನ್ನತೀಕರಣ, ಮಕ್ಕಳಿಗೆ ಶಾಲಾ ಮೈದಾನ, ಕ್ರೀಡಾಪೋತ್ಸಹ ಈ ಹಿಂದೆ ಅಧಿಕಾರದಲ್ಲಿದ್ದ ಯಾರು ನೀಡದೆ ಇದ್ದು ತಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸವಲತ್ತುಗಳನ್ನು ನೀಡಿರುವುದನ್ನು ನೆನಪಿಸಿಕೊಳ್ಳುವಂತೆ ಮನವಿ ಮಾಡಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು, ಆದಿವಾಸಿ-ಬುಡಕಟ್ಟು ಜನಾಂಗದವರ ಏಳಿಗೆಗಾಗಿ ರೂಪಿಸಿದ ಕಾನೂನನ್ನು ನೆನಪಿಸಿಕೊಂಡ ಮಾನ್ಯ ಶಾಸಕರು, ಇಂದು ಎಲ್ಲಾ ಆದಿವಾಸಿ-ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಒದಗಿಸಲು ಈ ಕಾನೂನೇ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ. ಬಾಡಗ ವಲಯ ಅಧ್ಯಕ್ಷರಾದ ರವಿ, ಪಂಚಾಯಿತಿ ಸದಸ್ಯರಾದ ಬೋಪಣ್ಣ, ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ನಾಲ್ಕೇರಿ ವಲಯ ಅಧ್ಯಕ್ಷರಾದ ಕಟ್ಟಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷರು ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಗೋಣಿಕೊಪ್ಪ ವಲಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಅಪ್ಪಣ್ಣ, ಪಕ್ಷದ ಪ್ರಮುಖರು ಹರೀಶ್, ಬುಡಕಟ್ಟು ಜನಾಂಗದ ಅಧ್ಯಕ್ಷರು, ಸದಸ್ಯರು, ಹಾಡಿ ನಿವಾಸಿಗಳು ,ಐಟಿಡಿಪಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.
Kodagu
ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಪೊನ್ನಣ್ಣ ಭೇಟಿ
ವಿರಾಜಪೇಟೆ : ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ ತಾಲೂಕಿನ ಪ್ರವಾಸದಲ್ಲಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಳೆ ಹಾನಿಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಕುಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿ, ಬೇಗೂರಿಗೆ ಭೇಟಿ ನೀಡಿದ ಶಾಸಕರು ಮೊದಲಿಗೆ ತೀವ್ರ ಮಳೆಯಿಂದ ಹಾನಿಗೀಡಾಗಿ ಕುಸಿರಿದ್ದ ಸೇತುವೆಯ ವೀಕ್ಷಣೆಯನ್ನು ಮಾಡಿದರು. ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಇದರ ದುರಸ್ತಿಯ ಬಗ್ಗೆ ಕೂಡಲೇ ವರದಿ ನೀಡುವಂತೆ ಸೂಚಿಸಿದರು.

ಬಳಿಕ ಇದೆ ವ್ಯಾಪ್ತಿಯಲ್ಲಿ ಹಾಳಿಗೀಡಾದ ರಸ್ತೆ ಹಾಗೂ ಇದರಿಂದಾಗಿ ರಸ್ತೆಯು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದ ಶಾಸಕರು, ಇದರ ಬಗ್ಗೆ ವರದಿಯನ್ನು ನೀಡಿ ವೈಜ್ಞಾನಿಕವಾಗಿ ಇದರ ದುರಸ್ತಿ ಕಾರ್ಯಕ್ಕೆ ಯಾವುದೆಲ್ಲ ಕ್ರಮ ಕೈಗೊಳ್ಳಬೇಕೆಂಬ ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ಕೆ. ಬಾಡಗ ಪಂಚಾಯತಿ ಸದಸ್ಯರಾದ ಬೋಪಣ್ಣ, ಅಪ್ಪಣ್ಣ, ಪಕ್ಷದ ಪ್ರಮುಖರು,ಸ್ಥಳೀಯರು ಉಪಸ್ಥಿತರಿದ್ದರು.
Kodagu
ನೂತನ ಬಸ್ ಸ್ಟ್ಯಾಂಡ್ ಕಾಮಗಾರಿ ವೀಕ್ಷಿಸಿದ ಶಾಸಕ ಎ.ಎಸ್.ಪೊನ್ನಣ್ಣ
ಗೋಣಿಕೊಪ್ಪ : ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಗೋಣಿಕೊಪ್ಪಲು ಬಸ್ ಸ್ಟ್ಯಾಂಡ್ ನ ಕೊನೆ ಹಂತದ ಕಾಮಗಾರಿಯ ವೀಕ್ಷಣೆ ಹಾಗೂ ಪರಿಶೀಲನೆಯನ್ನು ನಡೆಸಿದರು.
ಅಂತಿಮ ಹಂತದ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕೊನೆ ಹಂತದ ಪರಿಶೀಲನೆಯನ್ನು ಮಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಗೋಣಿಕೊಪ್ಪಲುವಿನ ಜನಸಾಮಾನ್ಯರ, ವಿಶೇಷವಾಗಿ ಬಸ್ ಪ್ರಯಾಣಿಕರ ದಶಕಗಳ ಬೇಡಿಕೆ ಇದಾಗಿದ್ದು, ಇನ್ನು ಕೆಲವು ಸಮಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕಾಗಿ ತಯಾರಾಗಲಿದೆ.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ,ಉಪಾಧ್ಯಕ್ಷರು ಮಂಜುಳ, ಸದಸ್ಯರಾದ ಆಫ್ ಜಲ್, ಸಫುರ, ಗ್ಯಾರಂಟಿ ಅನುಷ್ಠಾನ ಸದಸ್ಯರು ಕಲೀದ್,ಹಾಗೂ ಪ್ರಮುಖರು ಉಪಸ್ಥಿತರಿದ್ದರು.
-
National9 hours agoಅಕ್ರಮ ಆಯುಧ ಪೂರೈಕೆದಾರ ಸಲೀಂ ಪಿಸ್ಟಲ್ ಬಂಧನ
-
Chikmagalur16 hours agoಬೇಲ್ ಮೇಲೆ ಬಂದಿದ್ದ ಆರೋಪಿಯ ಕೊಲೆ
-
Special14 hours agoವ್ಯಕ್ತಿ- ವಿಶೇಷ: ಕನ್ನಡ-ಫ್ರೆಂಚ್ ಸಾಂಸ್ಕೃತಿಕ ಕೊಂಡಿ ಡಾ.ವಸುಂಧರಾ ಫಿಲಿಯೋಜಾ
-
Special12 hours agoದುಡಿಯುವ ವರ್ಗಕ್ಕೆ ಆತ್ಮ ಗೌರವ ತಂದುಕೊಟ್ಟ ಕಾಯಕಯೋಗಿ ನುಲಿಯ ಚಂದಯ್ಯ.
-
Hassan7 hours agoಡಾ. ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ: ಹಾಸನ ಜಿಲ್ಲಾ ಡಾಕ್ಟರ್ ವಿಷ್ಣು ಸೇನಾ ಸಮಿತಿ ವತಿಯಿಂದ ಪ್ರತಿಭಟನೆ
-
Politics7 hours agoಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ: ಕೆ.ಎಸ್.ಈಶರಪ್ಪ
-
Mysore11 hours agoಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್ ಕಾಂಗ್ರೆಸ್ನಿಂದ ಉಚ್ಛಾಟನೆ
-
Hassan18 hours agoಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅ*ತ್ಯಾಚಾರ

