Chikmagalur
ಹಲ್ಲೆಗೊಳಗಾಗಿದ್ದ ವಕೀಲ ಪ್ರೀತಂಗೆ ಜಾಮೀನು ಮಂಜೂರು
ಚಿಕ್ಕಮಗಳೂರಲ್ಲಿ ವಕೀಲರು vs ಪೊಲೀಸ್ ಗಲಾಟೆ ಪ್ರಕರಣ
ಹಲ್ಲೆಗೊಳಗಾಗಿದ್ದ ವಕೀಲ ಪ್ರೀತಂಗೆ ಜಾಮೀನು ಮಂಜೂರು
ಜಿಲ್ಲಾ ಮುಖ್ಯ ನ್ಯಾಯಾಧೀಶ ನಂದೀಶ್ ರಿಂದ ಜಾಮೀನು ಮಂಜೂರು
ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿ ಜಾಮೀನು ನೀಡಿದ ಕೋರ್ಟ್
ಐಪಿಸಿ ಸೆಕ್ಷನ್ 353ರ ಅಡಿ ಪ್ರೀತಂ ಮೇಲೆ ಪ್ರಕರಣ ದಾಖಲಿಸಿದ್ದ ಪೊಲೀಸರು
353, ಸರ್ಕಾರಿ ಅಧಿಕಾರಿಗೆ ಕೆಲಸಕ್ಕೆ ತೊಂದರೆ ನೀಡಿದಾಗ ಹಾಕುವ ಸೆಕ್ಷನ್
ಪ್ರೀತಂರನ್ನ ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವಕೀಲರು
ನವೆಂಬರ್ 30ರಂದು ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದ ಪ್ರಕರಣ
Chikmagalur
ಮಲೆಮನೆ: ಮರ ಬಿದ್ದು ಮನೆ ಜಖಂ.
ಕೊಟ್ಟಿಗೆಹಾರ: ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಮರವೊಂದು ಬಿದ್ದು ಮನೆ ಜಖಂ ಗೊಂಡಿರುವ ಘಟನೆ ನಡೆದಿದೆ.
ಬಾಳೂರು ಹೋಬಳಿಯ ಜಾವಳಿ ಸಮೀಪದ ಮಲೆಮನೆ ಗ್ರಾಮದ ಸುಧಾಕರ್ ಎಂಬವರ ಮನೆ ಮೇಲೆ ಬುಧವಾರ ಮುಂಜಾನೆ ಎಲ್ಲರೂ ಮಲಗಿದ್ದ ವೇಳೆ ಬೃಹತಾಕಾರದ ಬೈನೇಮರ ಬಿದ್ದು ಮನೆಯ ಮೇಲ್ಛಾವಣಿ ಹೆಂಚುಗಳು ಪುಡಿಯಾಗಿ ಹಾನಿ ಸಂಭವಿಸಿದೆ.ಅದೃಷ್ಟವಶಾತ್ ಮಲಗಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಪರಿಹಾರಕ್ಕೆ ಒತ್ತಾಯ: ಸುಧಾಕರ್ ಅವರು ಬಡ ಕುಟುಂಬದಿಂದ ಬಂದಿದ್ದು ಮೂಲತಃ ಕೃಷಿಕರಾಗಿದ್ದಾರೆ.ಬುಧವಾರ ಮರ ಬಿದ್ದು ಮನೆ ಕೂಡ ಜಖಂಗೊಂಡಿದೆ.ಮಳೆಗಾಲವಾದ್ದುದರಿಂದ ಮನೆಯು ಶಿಥಿಲವಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು ಮನೆ ದುರಸ್ತಿಗೆ ಪರಿಹಾರ ನೀಡಬೇಕೆಂದು ಸುಧಾಕರ್ ಆಗ್ರಹಿಸಿದ್ದಾರೆ
Chikmagalur
ಅಹಿಂದ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ
ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲದ ಆರೋಪ ಹೊರಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ ಎಂದು ಆರೋಪಿಸಿ ಅಹಿಂದ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಹನುಮಂತಪ್ಪ ವೃತ್ತದಿಂದ ಭಿತ್ರಿ ಪತ್ರಗಳನ್ನು ಹಿಡಿದು ಆಜಾದ್ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಬಿಜೆಪಿ, ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆ ಅಲ್ಲ ಪಾಪದ ಯಾತ್ರೆ. ಎಚ್.ಡಿ.ಕುಮಾರಸ್ವಾಮಿ, ವಿಜಯೇಂದ್ರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಸಾಕಷ್ಟು ಆರೋಪಗಳಿವೆ ಎಂದು ಟೀಕಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ, ಶಾಸಕ ಜಿ.ಎಚ್.ಶ್ರೀನಿವಾಸ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ನಯಾಜ್‌ಅಹ್ಮದ್, ದಲಿತ ಮುಖಂಡರಾದ ಅಣ್ಣಯ್ಯ, ವಸಂತಕುಮಾರ್, ನೇಕಾರ ಒಕ್ಕೂಟದ ಅಧ್ಯಕ್ಷ ನಾರಾಯಣ, ಅಹಿಂದ ಒಕ್ಕೂಟದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾಹುಲಿಯಪ್ಪಗೌಡ ಮತ್ತಿತರರು ಮಾತನಾಡಿದರು. ಲಕ್ಷ್ಮಣ ಹುಣಸೇಮಕ್ಕಿ, ಭರತ್, ಶಾಂತೇಗೌಡ ಮತ್ತಿತರರಿದ್ದರು.
Chikmagalur
ಬಣಕಲ್ ಸಮೀಪದ ರುದ್ರಭೂಮಿಯ ಬಳಿ ಸಿಕ್ಕಿದ ಮೊಬೈಲ್ ಅನ್ನು ಮಾಲೀಕನಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ
ಕೊಟ್ಟಿಗೆಹಾರ:ಬಣಕಲ್ ನ ರಿವರ್ ವ್ಯೂವ್ ಶಾಲೆ ಶಿಕ್ಷಕಿ ಶೀಲಾ ಗಾಮ ಅವರು ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಮೂವತ್ತು ಸಾವಿರ ಬೆಲೆ ಬಾಳುವ ಮೊಬೈಲ್ ಸಿಕ್ಕಿತ್ತು.
ಅದನ್ನು ಬಣಕಲ್ ವಾಟ್ಸಾಪ್ ಗ್ರೂಪ್ ನಲ್ಲಿ ಮೊಬೈಲ್ ಸಿಕ್ಕಿದೆ ಎಂಬುದಾಗಿ ಮಾಹಿತಿ ಹಾಕಿದ್ದರು. ಮೊಬೈಲ್ ಕಳೆದುಕೊಂಡ ಸ್ಥಳೀಯರಾದ ಶೇಖರ್ ಎಂಬವರು ಶಿಕ್ಷಕಿಗೆ ಕರೆ ಮಾಡಿ ಕಳೆದು ಹೋಗಿರುವ ಮೊಬೈಲ್ ನನ್ನದು
ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.ರಿವರ್ ವ್ಯೂವ್ ಶಾಲೆಯ ಬಳಿ ಶೇಖರ್ ಗೆ ತನ್ನ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ಈ ವಿಷಯವನ್ನು ವಿದ್ಯಾರ್ಥಿಗಳಿಗೂ ಕೂಡ ಪ್ರಾಮಾಣಿಕತೆ ಬಗ್ಗೆ ಸಂದೇಶ ರವಾನಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.