Connect with us

Hassan

ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ

Published

on

ಹಾಸನ : ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ
ಜೆಡಿಎಸ್ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ
ನಮ್ಮದು ರಾಷ್ಟ್ರೀಯ ಪಕ್ಷ, 303 ಸೀಟ್ ತಗೊಂಡಿರುವವರ ಹತ್ತಿರ ಒಂದು ಸೀಟ್ ಇರುವವರು ಬಂದಿದ್ದಾರೆ
ಬಂದಿರುವಂತಹ ನೆಂಟರು ಯಾರು ಮನೆಯಲ್ಲಿ ಇರ್ತಾರೆ ಅವರ ತತ್ವ, ಸಿದ್ಧಾಂತ, ರಾಷ್ಟ್ರೀಯತೆ ಎಲ್ಲಾ ಮೈಗೂಡಿಸಿಕೊಳ್ಳಬೇಕು
ನಮ್ಮದು ರಾಷ್ಟ್ರೀಯತೆ, ದೇಶ ಮೊದಲು ವ್ಯಕ್ತಿ ಕೊನೆ ಎಂಬುದು ಅಜೆಂಡಾ
ಇದನ್ನೆಲ್ಲಾ ಒಪ್ಪಿಕೊಂಡು ಬಂದಿದ್ದಾರೆ
ನಮ್ಮಲ್ಲಿ ವಂಶಪಾರಂಪಾರಿಕ ಆಡಳಿತಕ್ಕೆ ಅವಕಾಶ ಇರುವುದಿಲ್ಲ
ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲ
ಅದನ್ನು ಮನದಟ್ಟು ಮಾಡಿಕೊಂಡು, ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕೆಂದು ಬಂದಿರುವುದು ಬಹಳ ಸ್ವಾಗತ ಮಾಡುವಂತಹ ವಿಚಾರ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ವಿಚಾರ
ನನ್ನ ಬದಲಿಗೆ ಬೇರೆಯವರಿಗೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ
ಸಿಟ್ಟಿಂಗ್ ಇರುವವರು ಸಿಟ್ಟಿಂಗ್ ಇರಬೇಕೆಂದಿಲ್ಲ, ಸ್ಟ್ಯಾಂಡಿಂಗ್ ಆಗಬಹುದು
ಬೇರೆಯವರು ಸಿಟ್ಟಿಂಗ್ ಆಗಬಹುದು ಕಾದುನೋಡೋಣ
ಸೀಟ್ ಹಂಚಿಕೆ ತೀರ್ಮಾನ ಮಾಡಿಲ್ಲ
ಆರ್‌ಪಿಐ ಕೂಡ ಹಾಸನವನ್ನು ಕೇಳುತ್ತಿದ್ದಾರೆ
ಗೆಲುವು ಒಂದೇ ಮಾನದಂಡ, ನಾವೆಲ್ಲ ಕುಳಿತು ತೀರ್ಮಾನ ಮಾಡ್ತಿವಿ
ಗಣಪತಿ ಮುಂದೆ ಹೇಳುತ್ತಿದ್ದೇನೆ, ಬಿಜೆಪಿಯ ಕಾರ್ಯಕರ್ತನೇ ಅಭ್ಯರ್ಥಿಯಾಗಿ ಅವರೇ ಬೆಂಬಲ ಕೊಡಬೇಕಾಗಿ ಬರಬಹುದು
ಗಣೇಶನ ಆಶೀರ್ವಾದ ಇದೆ, ಯಾರಿಗೆ ಗೊತ್ತು
ನಮ್ಮ ಆಚಾರ, ವಿಚಾರ ಒಪ್ಪಿಕೊಳ್ಳಲಿ
ನಾನು ಫ್ರೆಂಡ್ಲಿಯಾಗಿ ಹೋಗಲ್ಲ, ಅವರು ಬಂದಿರೋದು, ಅವರು ಫ್ರೆಂಡ್ಲಿಯಾಗಿ ಇರಬೇಕು
ನಮ್ಮ ಮನೆಗೆ ಗೆಸ್ಟ್ ಬಂದಿರೋದು, ಕಾಫಿ, ಟೀ, ಊಟನೂ ಕೊಡ್ತಿವಿ
ನಾವು ಕೊಡುವ ಮೆನು ಊಟ ಮಾಡಬೇಕಷ್ಟೇ
ಅವರು ನನಗೆ ಇದೇ ಬೇಕು, ಅದೇ ಬೇಕು ಅಂತ ಹೇಳಂಗಿಲ್ಲ
ಬಂದಿರೋದು ನಮ್ಮ ಮನೆಗೆ, ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಗೆಸ್ಟ್‌ನ ಒಳ್ಳೆಯ ರೀತಿ ನೋಡಿಕೊಳ್ಳುತ್ತೇವೆ
ಅತಿಥಿ ಸತ್ಕಾರ ಮಾಡುತ್ತೇನೆ..

ಶಿವಮೊಗ್ಗ ಗಲಾಟೆ ಪ್ರಕರಣ ಹಾಗೂ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರ

ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಮಾಜಿಶಾಸಕ ಪ್ರೀತಂಗೌಡ ಆಕ್ರೋಶ
ಹಾಸನದಲ್ಲಿ ಶಾಸಕ ಪ್ರೀತಂಗೌಡ ಹೇಳಿಕೆ
ಶಿವಮೊಗ್ಗದಲ್ಲಿ ಪದೇ ಪದೇ ಜಿಹಾದಿ ಮನಸ್ಥಿತಿ, ದೇಶ ವಿರೋಧಿ ಇರುವಂತಹ ವ್ಯಕ್ತಿಗಳು ಇಡೀ ಸಮಾಜದ ಶಾಂತಿಯನ್ನು ಕದಡುವ ಕೆಲಸ ಮಾಡ್ತಿದ್ದಾರೆ
ಯಾರು ಮಂತ್ರಿಗಳಿಗೆ ಫೀಡ್‌ಬ್ಯಾಕ್ ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ
ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡ್ತಾರೆ, ಯಾಕೆ ಈ ಆತುರ
ಇವತ್ತು ರಾಗಿಗುಡ್ಡದಲ್ಲಿ ಆಗಿರುವುದು ನಾಳೆ ಹಾಸನದಲ್ಲಿ ಆದರೆ, ಬಿಟಿಎಂ ಲೇಔಟ್‌ನಲ್ಲಿ ಆದರೆ, ರಾಮಲಿಂಗಾರೆಡ್ಡಿ ಅವರ ಮನೆ ಮೇಲೆ ಆದರೆ ಯಾರೂ ಜವಾಬ್ದಾರರು
ಬೇಸಿಕ್ ಕಾಮನ್‌ಸೆನ್ಸ್ ಇಲ್ಲದೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ
ವೆಸ್ಟ್‌ಬೆಂಗಾಲ್‌ನಲ್ಲಿ ಏನು ನಡಿತಿದೆ, ಜಮ್ಮುಕಾಶ್ಮೀರನಲ್ಲಿ 370 ರದ್ದು ಮಾಡುವ ಮುಂಚೆ ಯಾವ ಪರಿಸ್ಥಿತಿ ಇತ್ತು ಆ ಪರಿಸ್ಥಿತಿ ಕರ್ನಾಟಕಕ್ಕೆ ತರಲು ಹೊರಟಿದ್ದಾರೆ
ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ
ನಿಮಗು ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಇದೆ
ಅವರಿಗೆ ಸಮಾಜ ಒಳ್ಳೆಯ ರೀತಿ ಇರಬೇಕೆಂದರೆ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಯಾವುದೇ ಧರ್ಮದಲ್ಲಿದ್ದರು ಸಹಿಸುವ ಕೆಲಸ ಮಾಡಬಾರದು
ಯಾರು ಹೇಳಿಕೆ ಕೊಡುತ್ತಿದ್ದಾರೆ ಅವರಿಗೆ, ಅವರ ಕುಟುಂಬಸ್ಥರು ಬುದ್ದಿ ಹೇಳಬೇಕು
ಬೇರೆಯವರಿಗೆ ಜ್ವರ ಬಂದಿದೆ ಎಂದು ಹಣೆ ಮುಟ್ಟಿ ನೋಡಿದರೆ ಟೆಂಪ್ರೇಚರ್ ಗೊತ್ತಾಗುತ್ತೆ
ಇವರೆಲ್ಲಾ ಎಸಿ ಕಾರಿನಲ್ಲಿ ಕುಳಿತಿರ್ತರೆ
ಪಕ್ಕದವನಿಗೆ ಜ್ವರ ಬಂದರೆ ನನ್ನ ಟೆಂಪ್ರೇಚರ್ ಸರಿ ಇದೆಯಾ ಅಂತ ಮುಟ್ಟಿ ನೋಡಿಕೊಳ್ತಾರೆ ಅದಲ್ಲ
ಪಕ್ಕದಲ್ಲಿ ಇರುವವರಿಗೆ ಬಂದಿರುವ ವೈರಲ್ ಫೀವರ್ ನಿಮಗೆ ಬರಲು ಎರಡು ದಿನ, ಇಪ್ಪತ್ತು ದಿನ, ಇಪ್ಪತ್ತು ವರ್ಷ ಬೇಕಾಗುತ್ತೆ
ರಾಮಲಿಂಗಾರೆಡ್ಡಿ ಅವರೇ ಸ್ವಲ್ಪ ಸಮಾಧಾನವಾಗಿರಿ
ರಾಮಲಿಂಗಾರೆಡ್ಡಿ ಅವರೇ ನಿಮಗೂ ಸಂಸಾರ ಇದೆ, ನಿಮಗೂ ಮಕ್ಕಳಿದ್ದಾರೆ, ಅವರಿಗೂ ಮಕ್ಕಳಿದ್ದಾರೆ
ಇನ್ನೂ ಹತ್ತು ವರ್ಷ ಆದ್ಮೇಲೆ ನಿಮ್ಮ ಈ ಮನಸ್ಥಿತಿ ಮುಂದುವರಿದರೆ ದೇಶ ಯಾವ ಸ್ಥಿತಿಗೆ ಹೋಗುತ್ತೆ
ಆಫ್ಘಾನಿಸ್ತಾನದಲ್ಲಿ, ಪಾಕಿಸ್ತಾನದಲ್ಲಿ ಏನಾಗುತ್ತಿದೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ವಾ

ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ

ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ
ಬರಗಾಲ ಎರಡು ಮೂರು ವರ್ಷ ಸತತವಾಗಿರುತ್ತೆ
ಆದರೆ ನಾವು ಈ ವರ್ಷ ಎಷ್ಟು ನೀರು ಬೇಕು ಅಂತ ತಮಿಳುನಾಡು ಜೊತೆ ವಾದ ಮಾಡ್ತಿದ್ದೀವಿ
ಮುಂದಿನ ಎರಡು ಮೂರು ವರ್ಷಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರದ ರೀತಿಯಲ್ಲಿ ಎಷ್ಟು ಟಿಎಂಸಿ ನೀರುವ ಬೇಕು ಎನ್ನುವ ಅಂಕಿ ಅಂಶವನ್ನು ಕೋರ್ಟ್‌ಗೆ ತಿಳಿಸಬೇಕು
ಮುಂದಿನ ವರ್ಷ ಮಳೆ ಬರುತ್ತೆ ಅಂತಾ ಯಾರಾದರೂ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರಾ, ಸರ್ಕಾರಕ್ಕೆ ಮಾಹಿತಿ ಇದೆಯಾ
ಯಾವತ್ತೂ ಕೂಡ ಸರ್ಕಾರ ನಡೆಸುವವರು ಮುಂದಿನ ಎರಡು ಮೂರು ವರ್ಷಗಳ ಬಗ್ಗೆ ಯೋಚನೆ ಮಾಡಿ ತಮ್ಮ ನಿರ್ಧಾರ ಮಾಡಬೇಕು
ಸರ್ಕಾರ ಸರಿಯಾಗಿ ಟ್ರಿಬ್ಯೂನಲ್‌ಗೆ ಅರ್ಥ ಮಾಡಿಕೊಡಬೇಕೆಂದು ಒತ್ತಾಯ ಮಾಡುತ್ತೇನೆ

 

ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವು ನಾಯಕರು ಸೇರ್ಪಡೆ ವಿಚಾರ

ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾಜಿಶಾಸಕ ಪ್ರೀತಂಗೌಡ ತಿರುಗೇಟು
ಹಾಸನದಲ್ಲಿ ಮಾಜಿಶಾಸಕ ಪ್ರೀತಂಗೌಡ ಹೇಳಿಕೆ
ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ
ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ
ಪ್ರೀತಂಗೌಡಗೆ ಕಾಂಗ್ರೆಸ್ ಗಾಳ ವಿಚಾರ
ಪ್ರೀತಂಗೌಡ ರಾಜಕಾರಣ ಬಂದಿರುವುದು ತತ್ವ ಸಿದ್ದಾಂತದ ಆಧಾರದ ಮೇಲೆ, ಕೆಲಸ ಮಾಡಲು
ಆರು ಸಾವಿರ ಓಟು ಇದ್ದ ಪಕ್ಷಕ್ಕೆ ಬಂದಿದ್ದು, ಈಗ 78 ಸಾವಿರಕ್ಕೆ ಹೋಗಿದೆ
ಇದನ್ನು ಬಿಟ್ಟು ನಾಲ್ಕು ಸಾವಿರ ಓಟು ಪಡೆದ ಪಕ್ಷಕ್ಕೆ ಹೋಗ್ತಾರಾ
ನಾವೇ ಮನೆ ಕಟ್ಟಿ, ಬಣ್ಣ ಹೊಡೆದು ಗೃಹಪ್ರವೇಶ ಮಾಡಿ, ಬೇರೆ ಹೊಸ ಮನೆ ಕಟ್ಟುವ ಅವಶ್ಯಕತೆ ಏನಿದೆ
ನೆಂಟರು ಬಂದರು ಅಂತ ಹೇಳಿ ಬೇರೆ ಫಾರ್ಮ್‌ಹೌಸ್, ಗೆಸ್ಟ್‌ಹೌಸ್‌ಲಿ ಹೋಗಿ ಮಲಗಲ್ಲ
ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ
ಬಂದಿರುವ ನೆಂಟರು ಸೋಮವಾರ ನಾನ್‌ವೆಜ್ ಕೇಳಿದ್ರೆ ಸಿಗಲ್ಲ, ಶನಿವಾರ ನಾನ್‌ವೆಜ್ ಇರಲ್ಲ
ಪಥ್ಯಗಳಿರುತ್ತೆ, ಇದು ನಮ್ಮ ಮನೆ ಪರಿಸ್ಥಿತಿ
ಅವರು ಬಂದು ನಾನ್‌ವೆಜ್ ಅಂದರೆ ರಾಂಗ್ ಅಡ್ರೆಸ್‌ಗೆ ಅಂತ
ಭಾರತೀಯ ಜನತಾ ಪಾರ್ಟಿಯಿಂದಲೇ ಹಾಸನದಲ್ಲಿ ಅಭ್ಯರ್ಥಿ ಆಗ್ತಾರೆ
ಜೆಡಿಎಸ್ ಅನಿವಾರ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡ್ತಾರೆ, ಅದಕ್ಕೆ ನಾನು ಅವರಿಗೆ ಸ್ವಾಗತ ಕೋರಿದ್ದು

Continue Reading
Click to comment

Leave a Reply

Your email address will not be published. Required fields are marked *

Hassan

ಬೆಳ್ಳಂಬೆಳಿಗ್ಗೆ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ

Published

on

ಹಾಸನ : ಬೆಳ್ಳಂಬೆಳಿಗ್ಗೆ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ

ಬೈಕ್ ಸವಾರನನ್ನು ಸೊಂಡಲಿನಿಂದ ಎತ್ತಿ ಬಿಸಾಡಿದ ಪುಂಡಾನೆ

ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಕಲ್ಲಗಂಡಿ ಗ್ರಾಮದಲ್ಲಿ ಘಟನೆ

ಅರೇಹಳ್ಳಿ ಪಟ್ಟಣದ ಡೆಸಿನ್ ಡಿಸೋಜಾ (55) ಕಾಡಾನೆ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ

ರೋಟರಿ ಶಾಲೆಯಲ್ಲಿ ವಾಚ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡೆಸಿನ್ ಡಿಸೋಜಾ

ಇಂದು ಬೆಳಿಗ್ಗೆ ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಒಂಟಿಸಲಗ

ಬೈಕ್‌ ಎಳೆದಾಡಿ ಸೊಂಡಿಲಿನಿಂದ ಎಸೆದು ಕಾಫಿ ತೋಟದೊಳಗೆ ಹೋಗಿರುವ ಕಾಡಾನೆ

ಗಾಯಾಳುವಿಗೆ ಸಮೀಪ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ

ಎರಡು ಕಾಡಾನೆಗಳು ರಸ್ತೆ ದಾಟುತ್ತಿದ್ದ ವೇಳೆ ದಾಳಿ ನಡೆಸಿರುವ ಒಂದು ಕಾಡಾನೆ

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ

Continue Reading

Hassan

ಇದುವರೆಗೂ ಎಸ್‌ಐಟಿ ಸಹಾಯವಾಣಿಗೆ ಬಂದಿರುವ 30 ಕ್ಕೂ ಹೆಚ್ಚು ಕರೆಗಳು

Published

on

HASSAN-BREAKING

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ

ದೂರು ನೀಡಲು ಸಹಾಯವಾಣಿ ತೆರೆದಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)

ಇದುವರೆಗೂ ಎಸ್‌ಐಟಿ ಸಹಾಯವಾಣಿಗೆ ಬಂದಿರುವ 30 ಕ್ಕೂ ಹೆಚ್ಚು ಕರೆಗಳು

ಹೆಲ್ಪ್‌ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮತ್ತೊಮ್ಮೆ ಮನವಿ

ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರು

ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂಜರಿಯುತ್ತಾರೆ ಎಂಬ ಉದ್ದೇಶದಿಂದ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ದೂರು ನೀಡಲು ಸಹಾಯವಾಣಿ (6360938947) ತೆರೆದಿದ್ದ ಎಸ್‌ಐಟಿ

ಅಂದಿನಿಂದ ಇಲ್ಲಿಯವರೆಗೆ ಸಹಾಯವಾಣಿಗೆ ಬಂದಿರುವ ಒಟ್ಟು ಕರೆಗಳು 30

ಆದರೆ ಇದುವರೆಗೂ ದೂರು ನೀಡದೆ ಇರುವ ಸಂತ್ರಸ್ತ ಮಹಿಳೆಯರು

ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿದರೆ, ನೀವು ಹೇಳಿದ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಲು ಸಿದ್ದವಿದ್ದೇವೆ ಎಂದಿರುವ ಎಸ್‌ಐಟಿ ಅಧಿಕಾರಿಗಳು

ಗುರುತು ಹಾಗೂ ಮಾಹಿತಿಯನ್ನು ಗೌಪ್ಯತೆ ಕಾಪಾಡಲಾಗುತ್ತದೆ

ಅಲ್ಲದೇ ನೇರವಾಗಿ ಅಧಿಕಾರಿಗಳನ್ನೂ ಸಂಪರ್ಕಿಸಬಹುದು ಎಂದು ತಿಳಿಸಿರುವ ಎಸ್‌ಐಟಿ

  • ಈಗಾಗಲೇ ಪ್ರಜ್ವಲ್ ರೇವಇದುವರೆಗೂ-ಎಸ್ಐಟಿ-ಸಹಾಯವಾಣಣ್ಣ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳು

ಸಹಾಯವಾಣಿ ಮೂಲಕ ಎಸ್‌ಐಟಿ ಅಧಿಕಾರಿಗಳನ್ನು ಸಂಪರ್ಕಿಸಿರುವ ಸಂತ್ರಸ್ತೆಯರು

ಯಾವೆಲ್ಲ ಆರೋಪ ಮಾಡಿದ್ದಾರೆ, ಏನೆಲ್ಲ ಹೇಳಿಕೆ ನೀಡಿದ್ದಾರೆ ಎಂಬುದು ಗೌಪ್ಯ

ಅಲ್ಲದೇ ಹೆಲ್ಪ್‌ಲೈನ್‌ ಮೂಲಕ ದಾಖಲಾಗುವ ಹೇಳಿಕೆಗಳನ್ನೂ ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಇನ್ನಷ್ಟು ಸಂಕಷ್ಟ

Continue Reading

Hassan

ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

Published

on

ನಂಜನಗೂಡು ಮೇ.23

ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಬುದ್ಧ ಪೂರ್ಣಿಮೆ ಪ್ರಯುಕ್ತ ಗುರುವಾರ ಭಕ್ತ ಸಾಗರವೇ ಹರಿದು ಬಂದಿತು.

ಇಂದು ಗುರುವಾರ ಬೆಳಗಿನ ಜಾವ ಐದು ಗಂಟೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

ಬುದ್ಧ ಪೂರ್ಣಿಮೆ ಪ್ರಯುಕ್ತ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಗೆ ಫಲಪಂಚಾಮೃತಾಭಿಷೇಕ, ಕ್ಷೀರ, ಎಳನೀರು ಹಾಗೂ ಗಂಗಾ ಜಲದ ಅಭಿಷೇಕಗಳನ್ನು ನೆರವೇರಿಸಿ ಬಗೆಬಗೆಯ ಪುಷ್ಪಗಳು ಹಾಗೂ ಬಿಲ್ವಪತ್ರೆಯಿಂದ ಶ್ರೀ ನಂಜುಂಡೇಶ್ವರ ಸ್ವಾಮಿಯನ್ನು ಅಲಂಕೃತಗೊಳಿಸಿ ನಂತರ ಮಹಾಮಂಗಳಾರತಿಯೊಂದಿಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಕಪಿಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಉರುಳು ಸೇವೆ, ಧೂಪ ದೀಪದ ಸೇವೆ, ತುಲಾಭಾರ ಸೇವೆ ಮಾಡಿ ಭಕ್ತಿ ಭಾವ ಮೆರೆದಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದಾರೆ. ಆಗಮಿಸಿದ ಭಕ್ತರಿಗೆ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!