Kodagu
ಪ್ರವಾಸಿಗರ ಹೆಸರಿನಲ್ಲಿ ಕೊಡಗಿನ ಮೂಲನಿವಾಸಿಗಳ ಮೇಲೆ ಅವ್ಯಾಹತ ದೌರ್ಜನ್ಯ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ
ಪ್ರವಾಸಿಗರ ಹೆಸರಿನಲ್ಲಿ ಕೊಡಗಿನ ಮೂಲನಿವಾಸಿಗಳ ಮೇಲೆ ಅವ್ಯಾಹತ ದೌರ್ಜನ್ಯ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ
ಜಬ್ಬೂಮಿ ಸಂಘಟನೆ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ ಎಚ್ಚರಿಕೆ.
ಜನಮಿತ್ರ ಮಡಿಕೇರಿ : ಕೊಡಗಿನಲ್ಲಿ ಪ್ರವಾಸಿಗರ ದೌರ್ಜನ್ಯ ಮಿತಿ ಮೀರಿದ್ದು, ಇದಕ್ಕೆ ರಾಜಕೀಯ ಮತ್ತು ಕೋಮು ಬಣ್ಣದ ಜೊತೆಗೆ ನಕಲಿ ಮಹಿಳಾ ದೌರ್ಜ್ಯನ್ಯವನ್ನೂ ಸೇರಿಸಿ ಸ್ಥಳೀಯ ಮೂಲ ನಿವಾಸಿಗಳ ಆತ್ಮ ಸ್ಥೈರ್ಯ ಕುಗ್ಗಿಸುವ ಕಾರ್ಯ ನಡೆಯುತ್ತಿದೆ. ಸಂಬAಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಕೊಡಗು ಮತ್ತು ಮೂಲ ನಿವಾಸಿಗಳ ಉಳಿವಿಗಾಗಿ ಹೋರಾಟ ಅನಿವಾರ್ಯ ಎಂದು ಜಬ್ಬೂಮಿ ಸಂಘಟನೆ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ ಎಚ್ಚರಿಸಿದ್ದಾರೆ.
ಕೊಡಗಿನ ಮಾದಾಪುರ ಸಮೀಪದ, ಕೋಟೆ ಬೆಟ್ಟ ತಪ್ಪಲಿನಲ್ಲಿ ನಡೆದ ಘಟನೆಯಲ್ಲಿಯೂ ಸ್ಥಳೀಯರ ವಿರುದ್ಧ ದೌರ್ಜನ್ಯ ಎದ್ದುಕಾಣುತಿದ್ದು, ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಗೆ ಮೊದಲಿಗೆ ರಾಜಕೀಯ ಬಣ್ಣ ಬಳಿಯಲು ಯತ್ನಿಸಿದ್ದು, ನಂತರ ಸ್ಥಳೀಯರಿಂದ ಸರಗಳ್ಳತನ ಎಂದು ಬಿಂಬಿಸಿ, ವೀಡಿಯೋ ಮತ್ತು ಹೇಳಿಕೆಯನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡಲಾಯಿತು. ಸ್ಥಳೀಯರು ವಾಸ್ತವಾಂಶದ ವಿವರವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಗಿಟ್ಟ ನಂತರ, ಪೊಲೀಸ್ ಇಲಾಖೆಯೆ ಸರಗಳ್ಳತನದ ಆರೋಪವನ್ನು ನಿರಾಕರಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ನಡೆದ ಘಟನೆ ಎಂದೂ ಮತ್ತು ಗಲಾಟೆಯ ಸಂದರ್ಭದಲ್ಲಿ ತಡೆಯಲು ಹೋದ ಯುವತಿಯ ಸರ ಬಿದ್ದು ಹೋಗಿದೆ ಎಂದು ಹೇಳಿದರು.
ಆದರೆ ಇದೀಗ ಪೋಲೀಸರು ಮಹೀಳಾ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಲ್ಲದೆ, ಇಂದು ಮುಂಜಾನೆ ಸ್ಥಳೀಯ ಯುವಕರ ಮನೆಗೆ ತೆರಳಿ, ಯುವಕರನ್ನು ಹುಡುಕಾಡಿ, ಕುಟುಂಬಸ್ಥರಿಗೆ ಮಾನಸಿಕ ಹಿಂಸೆ ಕೊಟ್ಟದಲ್ಲದೆ, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೇ ಗೊಂದಲದಲ್ಲಿರುವAತೆ ಕಂಡುಬರುತಿದ್ದು, ಜಿಲ್ಲಾ ವರಿಷ್ಟಾಧಿಕಾರಿಗಳ ಹೇಳಿಕೆಯಲ್ಲಿಯೇ ಕ್ಷುಲ್ಲಕ ವಿಚಾರದ ಗಲಾಟೆ ಎಂದು ನಮೂದಾಗಿರುವಾಗ ಮತ್ತೆ ಮಹಿಳಾ ದೌರ್ಜನ್ಯದ ಪ್ರಕರಣ ಯಾವ ಕಾರಣಕ್ಕೆ ದಾಖಲಾಗಿದೆ ಎಂದು ಸ್ಪಷ್ಟ ಪಡಿಸಬೇಕಿದೆ. ಅಲ್ಲದೆ ಸಾಮಾಜಿ ಮಾದ್ಯಮದಲ್ಲಿ ಹರಿದಾಡಿದ ಇದೇ ಘಟನೆಗೆ ಸಂಬAಧಿಸಿದ ಮತ್ತೊಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ಥಳೀಯ ಯುವಕರಿಬ್ಬರಿಗೆ ಬೆದರಿಕೆ ಹಾಕುತಿದ್ದು, ಆ ಯುವಕರಿಬ್ಬರೂ ಭಯಬೀತರಾದಂತೆ ಕಾಣುತಿದ್ದಾರೆ. ಆ ನಂತರ ಯುವಕರಿಬ್ಬರೂ ನಾಪತ್ತೆಯಾಗಿದ್ದು ಯಾರ ಸಂಪರ್ಕಕ್ಕೂ ಬಂದಿಲ್ಲ ಎಂಬ ಮಾಹಿತಿ ಇದೆ. ಹೀಗಿರುವಾಗ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆ ವೀಡಿಯೋದಲ್ಲಿ ಧಮಖಿ ಹಾಕಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು.
ಕೊಡಗಿನಲ್ಲಿ ಪ್ರವಾಸಿಗರ ಹೆಸರಿನಲ್ಲಿ ಸ್ಥಳೀಯರ ಮೇಲೆ ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ನಡೆಯುತಿದ್ದು, ಮೋಜು ಮಸ್ತಿಯ ಹೆಸರಿನಲ್ಲಿ ಬರುವ ಪ್ರವಾಸಿಗರಿಂದ ಅನೈತಿಕ ಚಟುವಟಿಕೆಗಳು ಮತ್ತು ಕೊಡಗಿನ ಪರಿಸರಕ್ಕೆ ಮಾರಕ ಕೃತ್ಯಗಳು ಹೆಚ್ಚಾಗುತಿದ್ದು ಇದಕ್ಕೆ ನಿನ್ನೆ ನಡೆದ ಘಟನೆಯೊಂದು ನಿದರ್ಶನವಾಗಿದೆ.
ಪೊಲೀಸ್ ವರಿಷ್ಟಾಧಿಕಾರಿಗಳ ಮೇಲೆ ನಮಗೆ ವಿಶ್ವಾಸವಿದ್ದು, ಸ್ಥಳೀಯರು ಸಂಘಟಿತರಾಗಿ ಪ್ರವಾಸಿಗರಿಗೆ ಪ್ರತಿರೋದ ಒಡ್ಡಿದರೆ ಏನಾಗಬಹುದು ಎಂಬ ಕಲ್ಪನೆ ಇದೆ ಎಂದು ಭಾವಿಸುತ್ತೇವೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಸೂಕ್ತ ತನಿಖೆಯೋಂದಿಗೆ ಕೊಡಗಿನ ಸ್ಥಳೀಯ ಮೂಲ ನಿವಾಸಿಗಳ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ, ಕೊಡಗಿನ ಪರಿಸರ ಮತ್ತು ಸ್ಥಳೀಯರ ಉಳಿವಿಗಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಬಹುದು ಎಂದು ರಾಜೀವ್ ಬೋಪಯ್ಯ ಎಚ್ಚರಿಸಿದ್ದಾರೆ.
Kodagu
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಮನವಿ
ಮಡಿಕೇರಿ : ಎಫ್ ಎಂ ಕೆ ಎಂ ಸಿ ಕಾಲೇಜು ಮಡಿಕೇರಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಘಟಕ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪಿನಂತೆ ಖಾಯಂಗೊಳಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರೊಡನೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ
ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ಅವರು ಚರ್ಚೆ ನಡೆಸಿ ಉಚ್ಚ ನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸಲು ಮಾನ್ಯ ಸಚಿವರಿಗೆ ಮನವಿ ಮಾಡಿದರು. ಸಚಿವರು ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಅಶೋಕ್ ಆಲೂರು ಎಫ್ಎಂ ಕೆಎಂಸಿ ಕಾಲೇಜಿನ ಪ್ರಾಂಶುಪಾಲರಾದ ರಾಘವ್ ಉನ್ನತ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಉಪನ್ಯಾಸಕರು ಭಾಗವಹಿಸಿದ್ದರು
Kodagu
ಕೇಂದ್ರ ಬಜೆಟ್ ಋಣ ಸಂದಾಯದ ಬಜೆಟ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ 2024-25 ರ ಬಜೆಟ್ ಮಂಡನೆ ಮಾಡಿದ್ದು ಇದು ದೇಶದ ಬಜೆಟ್ ಅಲ್ಲಾ.ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ ಟೀಕಿಸಿದ್ದಾರೆ.
ಬಿಹಾರ ಮತ್ತು ಆಂದ್ರಪ್ರದೇಶದ ಜೆಡಿಯು ಹಾಗೂ ಟಿಡಿಪಿ ಎನ್.ಡಿ.ಎ ಸರ್ಕಾರಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಋಣ ತೀರಿಸಲು 140 ಕೋಟಿ ಜನತೆಯ ತೆರಿಗೆ ಹಣವನ್ನು ಬಳಕೆ ಮಾಡಿದ್ದಾರೆ ಎಂದು ಟೀಕಿಸಿರುವ ಧರ್ಮಜಾ ಉತ್ತಪ್ಪ ರವರು ಕರ್ನಾಟಕ ರಾಜ್ಯವನ್ನು ಮೋದಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
26 ಸಾವಿರ ಕೋಟಿ ಬಿಹಾರ ರಾಜ್ಯಕ್ಕೆ ,15 ಸಾವಿರ ಕೋಟಿ ಆಂಧ್ರಪ್ರದೇಶದ ರಾಜ್ಯಕ್ಕೆ ನೀಡಿ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಧರ್ಮಜಾ ಉತ್ತಪ್ಪ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿದ್ದಾರೆ.
ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನವಾಗಿ ಕಾಣವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಕಡೆಗಣಿಸಿರುವುದು ಸ್ಪಷ್ಟವಾಗಿದೆ.ಪ್ರತಿ ಬಾರಿ ಅತಿ ಹೆಚ್ಚಿನ ಲೋಕ ಸಭಾ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಆರಿಸಿ ಕರ್ನಾಟಕ ಜನತೆ ಕಳುಹಿಸುತ್ತಿದ್ದರೂ ಕರ್ನಾಟಕಕ್ಕೆ ಎನ್.ಡಿ.ಎ ಸರ್ಕಾರ ಅನ್ಯಾಯ ಮಾಡುತ್ತಿರುವುದು ಕಾಣಿಸುತ್ತಿದೆ. ಕರ್ನಾಟಕ ರಾಜ್ಯ ಅತಿವೃಷ್ಠಿಯಿಂದ ತತ್ತರಿಸುತ್ತಿರುವ ಸಂಧರ್ಭದಲ್ಲಿ
ವಿಶೇಷ ಪ್ಯಾಕೆಜ್ ನಿರೀಕ್ಷೆ ಮಾಡಲಾಗಿತ್ತು.ಆದರೆ ರಾಜ್ಯದ ಜನತೆಯ ಮೇಲಿನ ಆಕ್ರೋಶ ವೋ ಅಥವಾ ರಾಜ್ಯ ಸರ್ಕಾರದ ಮೇಲಿನ ಆಕ್ರೋಶ ವೋ ಗೊತ್ತಿಲ್ಲ.ಪ್ರತಿ ಬಾರಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ
.ಜಿ,ಎಸ್,ಟಿ ಹಂಚಿಕೆಯಲ್ಲಿಯೂ ರಾಜ್ಯದ ಪಾಲಿನ ಹಣ ಕಡಿತಗೊಳಿಸಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂದು ಧರ್ಮಜಾ ಬೇಸರ ವ್ಯಕ್ತಪಡಿಸಿದ್ದಾರೆ.
Kodagu
ಸಿಎನ್‌ಸಿ ಯಿಂದ ಜು.24 ರಂದು ವಿರಾಜಪೇಟೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ
ಮಡಿಕೇರಿ: ಸಿದ್ದಾಪುರದ ಭೂತಪೂರ್ವ ಬಿಬಿಟಿಸಿಯ ೨೪೦೦ ಎಕರೆ ಕಾಫಿ ತೋಟಗಳು, ಇದೀಗ ಆರೆಂಜ್ ಕೌಂಟಿ ರೆಸಾರ್ಟ್ ಒಡೆತನದ ಪುನರ್ ನಾಮಕರಣಗೊಂಡ “ರಾಮಪುರಂ ಹೋಲ್ಡ್ಡಿಂಗ್ಸ್ ಇವಾಲ್ವ್ ಬ್ಯಾಕ್ ಎಲ್ಖಿಲ್”- ಬೀಟಿಕಾಡ್ ಬ್ಲಾಕ್ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.೨೪ ರಂದು ವಿರಾಜಪೇಟೆ ಗಡಿಯಾರ ಕಂಬದ ಬಳಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ೧೦.೩೦ ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ವಿರೋಧಿಸಿ ಹಕ್ಕೊತ್ತಾಯ ಮಂಡಿಸಲಾಗುವುದು. ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಸರ್ವ ಕೊಡವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.