Connect with us

Mysore

ಈ ಸಾರಿ ಪ್ರತಾಪಸಿಂಹ ಸೋಲದಿದ್ದರೆ ನಾನು ಊರೇ ಬಿಟ್ಟು ಬಿಡುತ್ತೇನೆ – ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Published

on

ಮೈಸೂರು: ಈ ಸಾರಿ ಪ್ರತಾಪಸಿಂಹ ಸೋಲದಿದ್ದರೆ ನಾನು ಊರೇ ಬಿಟ್ಟು ಬಿಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದ ಸಂಸದರಿಗೆ ಆತಂಕ ಶುರುವಾಗಿ ಸಿಕ್ಕ ಸಿಕ್ಕವರಿಗೆಲ್ಲಾ ಕಾಲಿಗೆ ಬೀಳುತ್ತಿದ್ದಾರೆ. ಕನಿಷ್ಠ 50 ಕೋಟಿ ಎನಾದರೂ ಕೊಡುಗೆ ಇದ್ದರೂ ಹೇಳಿ?. ನೂರಕ್ಕೆ ನೂರರಷ್ಟು ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. 2024 ರ ಚುನಾವಣೆ ನಿಮ್ಮ ಕೊನೆ ಚುನಾವಾಣೆಯಾಗಿದೆ. ನಿಮ್ಮ ಕೇಂದ್ರ ಇಂಟಲಿಜೆನ್ಸ್ ತಂಡಕ್ಕೂ ಈಗಾಗಲೇ ಫಲಿತಾಂಶದ ವರದಿ ಗೊತ್ತಾಗಿದೆ‌. ಇದು ನಿಮಗೂ ಗೊತ್ತಾಗಿದೆ. 3 ಲಕ್ಷ ಅಂತರದಲ್ಲಿ ಸೋಲುತ್ತಾರೆ. 8 ಕ್ಷೇತ್ರದಲ್ಲಿ ಯೂ ಅಂತಹ ವಾತಾವರಣ ಇದೆ. ಮಡಿಕೇರಿ ಗೆ ಹೋದರೆ ನಿಮ್ಮವರೇ ನಿಮಗೆ ಹೊಡೆಯುತ್ತಾರೆಂದರು. ಐದು ರಾಜ್ಯದಲ್ಲಿ ನಾಲ್ಕುಕಡೆ ಕಾಂಗ್ರೆಸ್ ಗೆಲ್ಲಲಿದೆ.
ದಸರಾ ಬರುತ್ತಿರುವ ಈ ಸಂದರ್ಭದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಗೆ ಮತ ನೀಡಿದವರಲ್ಲಿ ಶೇ.6 ರಷ್ಟು ಮಂದಿ ಮುಸ್ಲಿಂರಿದ್ದಾರೆ. ನೀವು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡರೆ ಸಂಪೂರ್ಣ ಅವರ ಮತಗಳು ಕಾಂಗ್ರೆಸ್ ಗೆ ಬರಲಿದೆ. ಶೇ.43 ರಷ್ಟು ಮತಗಳಿಸಿರುವ ರಾಜ್ಯ ಕಾಂಗ್ರೆಸ್ ಗೆ ಆ ಶೇ.6ರಷ್ಟು ಸೇರಿ ಶೇ.49 ರಷ್ಟು ಮತ ಬರುವುದು ಸ್ಪಷ್ಟವಾಗಿದೆ. ಈಗಾಗಲೇ ಕೇಂದ್ರ ಬಿಜೆಪಿಗೆ ಈಗಾಗಲೇ ಸೋಲಿನ ಭಯ ಶುರುವಾಗಿದೆ. ನೂರಕ್ಕೆ 28 ಕ್ಕೆ 22ರಿಂದ 25 ನಾವು ಗೆಲ್ಲುತ್ತೇವೆ. ನಾನು ಈಶ್ವರಪ್ಪನವರಂತೆ ಹುಚ್ಚರಂತೆ 28 ಕ್ಕೆ 28 ನ್ನು ಗೆಲ್ಲುತ್ತೇವೆಂದು ಹೇಳಿಕೆ ನೀಡಲು ಹೋಗುವುದಿಲ್ಲ. ದೇವೇಗೌಡ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ, ಈಗ ಅವರ ಜಾತ್ಯಾತೀತ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಕಳೆದ ಜನವರಿ, ಫೆಬ್ರವರಿ ಯಲ್ಲಿ ಆರ್ ಎಸ್ ಎಸ್ ನ ಬೈದು ಈಗ ಯಾವ ಮುಖ ಹೊತ್ತು ಬಿಜೆಪಿ ಸಖ್ಯ ಬೆಳೆಸಿದ್ದಾರೆ. ಬಿಜೆಪಿ ಯವರ ಯೋಗ್ಯತೆಗೆ ಐದು ತಿಂಗಳಾದರೂ ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮಾಡಲು ನಿಮ್ಮಿಂದ ಆಗಿಲ್ಲ. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ‌. ಲೋಕಸಭಾ ಚುನಾವಣೆ ಮುಗಿಯುವವರೆಗೂ ನಳೀನ್ ಕುಮಾರ್ ಕಟೀಲ್ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬೇಕು. ಇನ್ನೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬಿಜೆಪಿಯಲ್ಲೇ ನಾಯಕರು ಬಟ್ಟೆ ಹರಿದುಕೊಳ್ಳುತ್ತಿರುವುದು ನೋಡುತ್ತಿದ್ದೇನೆ. ಬಹುಶಃ ಕುಮಾರಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದು ಸ್ಪಷ್ಟವಾಗಿದೆ ಎಂದರು.

ಇನ್ನೂ ಮಹಿಷ ದಸರಾ ಆಚರಣೆಗೆ ಸಂಸದರು ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬುದು ತಿಳಿಯುತ್ತಿಲ್ಲ.
ದೇವರ ದರ್ಶನಕ್ಕೂ ಮುನ್ನ ಮಹಿಷಸುರನ ಪ್ರತಿಮೆ ನಮಸ್ಕರಿಸುತ್ತಾರೆ. ಮಹಿಷಾಸುರ ನಿಮ್ಮ ಕುಟುಂಬಕ್ಕೆ ಎನೂ ಮಾಡಿದ್ದರೂ ಪ್ರತಾಪಸಿಂಹ ತಾತನಿಗೆ ಎನಾದರೂ ಮಾಡಿದ್ದಾರಾ? ದಸರಾ ಎಂದರೆ ಎಲ್ಲರನ್ನೂ ಪೂಜಿಸುವ ಹಬ್ಬವಾಗಿದೆ. ತೊಡೆ ತಟ್ಟಿ, ದಮ್ಕಿ ಹಾಕುವುದು ಆಗಲ್ಲ. ಒಬ್ಬರ ಪರವಾಗಿ ಕಾಂಗ್ರೆಸ್ ಸರ್ಕಾರ ನಡೆಯಲ್ಲ. ಪ್ರತಾಪಸಿಂಹರನ್ನು ಬಿಟ್ಟು ಶ್ರೀವತ್ಸಾವರಾಗಲಿ ಅಥವಾ ಇತರರಾಗಲಿ ಯಾರು ಹೇಳಿಲ್ಲ. ಬೆಡ್ ಶಿಟ್ ಕೊಡ್ತಿವಿ ಮಲಗಿಕೊಳ್ಳಿ ಎಂದರು.

Continue Reading
Click to comment

Leave a Reply

Your email address will not be published. Required fields are marked *

Mysore

ಆಮಿಷ ಗೊಳಕ್ಕಾಗಿ ಕ್ರೆಡಿಟ್ ಕಾರ್ಡ್  ಲಿಂಕ್ ನಿಂದ 90 ಸಾವಿರ   ಸಾಲವಾದ ಸರ್ಕಾರಿ ನೌಕರಿ ವಿ ಎ 

Published

on

ಎಷ್ಟೇ ಬುದ್ದಿವಂತರಾದರೂ ಆಮಿಷದ ವಂಚನೆಗೆ ಮೋಸ ಹೋಗುತ್ತಿರುವವರು ಜಾಸ್ತಿಯಾಗುತ್ತಿರುವುದು ಇದು ಒಂದು ಉದಾಹರಣೆಯಾಗಿದೆ.

ಸಾಲಿಗ್ರಾಮ ಪಟ್ಟಣದ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿರುವ ಆರತಿ ಇವರ ಕ್ರೆಡಿಟ್ ಕಾರ್ಡ್ ನಿಂದ ಮೊದಲು ಒಂದೇ ದಿನ ಅಪರಿಚಿತ   40 ಸಾವಿರ ತೆಗೆದು ನಂತರ 50  ಸಾವಿರ ಒಟ್ಟು 90 ಸಾವಿರ ರೂಗಳನ್ನು ಶಾಪಿಂಗ್ ಮಾಡುವ ನೆಪದಲ್ಲಿ,   ಸಾಲದ ರೂಪದಲ್ಲಿ ಪಡೆದು          ಆನ್ ಲೈನ್ ವಂಚನೆಯಿಂದ  ಮೋಸ   ಮಾಡಿರುತ್ತಾನೆ.

ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ

ಸಾರ್ವಜನಿಕರಲ್ಲಿ ಭಯ ಉಂಟಾಗಿದೆ : ತಮ್ಮ ಖಾತೆ ಗಳಲ್ಲಿ ಇಟ್ಟಿರುವ ಹಣ ಯಾವ ಯಾವ ರೂಪ, ತರಹ ಗಳಲ್ಲಿ ಹೋಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ, ಮೊಬೈಲ್ ಗಳಿಗೆ ಬರುವ ಮೆಸೇಜ್ ಅನ್ನು ಓಕೆ ಮಾಡಬಾರದು ಮತ್ತು ಅನಾಮಿ ಕರೆಗಳು ಬಂದರೆ ಸ್ವೀಕರಿಸಬಾರದು,  ದುಪ್ಪಟ್ಟು ಹಣ ಎಂಬ ಆಸೆಗೆ ಬಿದ್ದರೆ ನಮ್ಮ ಹಣ ಹೋಗುತ್ತದೆ, ದುರಾಸೆ ಬೇಡವೇ ಬೇಡ, ಭಯ ಉಂಟಾಗುತ್ತಿದೆ ಬಹಳ ಎಚ್ಚರಿಕೆ ಯಿಂದ ಇರಬೇಕು. ಮೊದಲು ಬ್ಯಾಂಕ್ ನ ಖಾತೆಯಲ್ಲಿ  ಇರುವ ಹಣವನ್ನು ಡ್ರಾ ಮಾಡಿಕೊಂಡು ಮನೆಯಲ್ಲಿ ಇಟ್ಟಿಕೊಳ್ಳುವುದು ಒಳ್ಳೆಯದು ಎಂದು  ಸಾರ್ವಜನಿಕರು ಅಲ್ಲಲ್ಲೇ ಮಾತಾಡಿಕೊಳ್ಳುತ್ತಿದ್ದರು

Continue Reading

Mysore

ಬಸ್ ನಲ್ಲಿ ಸಿಕ್ಕ ಪ್ರಯಾಣಿಕರ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ ಸಂತೋಷ್

Published

on

ಪಿರಿಯಾಪಟ್ಟಣ: ಸಾರಿಗೆ ಬಸ್ ನಲ್ಲಿ ಸಿಕ್ಕ ಮಹಿಳಾ ಪ್ರಯಾಣಿಕರೊಬ್ಬರ ಬೆಲೆ ಬಾಳುವ ವಸ್ತು ಹಾಗೂ ನಗದು ಇದ್ದ ಬ್ಯಾಗ್ ಅನ್ನು ಚಾಲಕ ಕಮ್ ನಿರ್ವಾಹಕ ಸಂತೋಷ್ ಮರಳಿ ಪ್ರಯಾಣಿಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಮಾನವೀಯತೆ ಪ್ರದರ್ಶಿಸಿದ್ದಾರೆ.

ಪಿರಿಯಾಪಟ್ಟಣ ಸಾರಿಗೆ ಘಟಕದಲ್ಲಿ ಚಾಲಕ ಕಮ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ (ಬಿಲ್ಲೆ ಸಂಖ್ಯೆ 3133) ಮಾರ್ಗ ಸಂಖ್ಯೆ 67 ರಲ್ಲಿ ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಮೈಸೂರಿನ ದಟ್ಟಗಳ್ಳಿ  ನಿವಾಸಿ ವಿನುತ ಎಂಬ ಪ್ರಯಾಣಿಕರು ಸಂಜೆ 6 ಗಂಟೆ ಸಮಯದಲ್ಲಿ ಮೈಸೂರಿನಿಂದ

ಪಿರಿಯಾಪಟ್ಟಣಕ್ಕೆ ಟಿಕೆಟ್ ಪಡೆದು ಪ್ರಯಾಣಿಸಿದ್ದು ಪಿರಿಯಾಪಟ್ಟಣದಲ್ಲಿ ಇಳಿಯುವ ಸಂದರ್ಭ ತಮ್ಮ ಬ್ಯಾಗ್ ಮರೆತು ಮಡಿಕೇರಿಗೆ ಪ್ರಯಾಣಿಸಿದ್ದಾರೆ ಈ ವೇಳೆ ರಾತ್ರಿ ಬಸ್ ಪಿರಿಯಾಪಟ್ಟಣದಲ್ಲಿ ತಂಗಿದ್ದಾಗ ಬಸ್ ನಲ್ಲಿ ಬ್ಯಾಗ್ ಗಮನಿಸಿದ ಸಂತೋಷ್ ತಮ್ಮ ಸಹೋದ್ಯೋಗಿ ಚಾಲಕ ನಿರ್ವಾಹಕರೊಂದಿಗೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಸಿಕ್ಕ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಯನ್ನು ಗೊತ್ತು ಮಾಡಿ ಬ್ಯಾಗ್ ನಲ್ಲಿದ್ದ 5 ಸಾವಿರ ಹಣ ಹಾಗೂ ಬ್ಯಾಂಕ್ ದಾಖಲಾತಿ ಎಟಿಎಂ ಆಧಾರ್ ವೋಟರ್ ಐಡಿ ಸೇರಿದಂತೆ ಬ್ಯಾಗ್ ನಲ್ಲಿದ್ದ ಇತರೆ ವಸ್ತುಗಳ ಬಗ್ಗೆ ಅವರು ನಿಖರವಾಗಿ ತಿಳಿಸಿದ ಬಳಿಕ ಅವರನ್ನು ಮುಂಜಾನೆ ಪಿರಿಯಾಪಟ್ಟಣ ಬಸ್ ನಿಲ್ದಾಣಕ್ಕೆ ಕರೆಸಿ ಬ್ಯಾಗ್ ಹಿಂದಿರುಗಿಸುವ ಮೂಲಕ ಪ್ರಾಮಾಣಿಕ ಮೆರೆದಿದ್ದಾರೆ.


ಸಂತೋಷ್ ಅವರ ಕಾರ್ಯಕ್ಕೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್ ಸೇರಿದಂತೆ ಸಾರಿಗೆ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಸಹೋದ್ಯೋಗಿಗಳು ಮತ್ತು ಬ್ಯಾಗ್ ಕಳೆದುಕೊಂಡಿದ್ದ ವಿನುತ ಅವರು ಶ್ಲಾಘನೆ ವ್ಯಕ್ತಪಡಿಸಿ ಅಭಿನಂದಿಸಿದರು.

Continue Reading

Mysore

ನಂಜನಗೂಡು ತಾಲ್ಲೂಕಿನ ತಗಡೂರಿನಲ್ಲಿ ವಾಂತಿ-ಭೇದಿ ಪ್ರಕರಣ — ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಭೇಟಿ

Published

on

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಗ್ರಾಮಸ್ಥರಿಗೆ ವಾಂತಿಭೇದಿ ಕಾಣಿಸಿಕೊಂಡು ಸುಮಾರು 120ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಕಾಲರಾ ರೋಗವು ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಗಡೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.


ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀತಿ ಸಮಿತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಬಂದಿದ್ದೇನೆ. ಮಳೆಗಾಲ ಇನ್ನು ಕಡಿಮೆಯಾಗಿಲ್ಲ ಕೂಡಲೇ ಅಧಿಕಾರಿಗಳು ಗ್ರಾಮದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೇಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಗ್ರಾಮಸ್ಥರಿಗೆ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಬೇಕು. ಸ್ಥಗಿತಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕು. ಈಗಾಗಲೇ ಮೂರು ಟ್ಯಾಂಕರ್ ಗಳಿಂದ ಶುದ್ಧ ಕುಡಿಯುವ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಪಂ ಸಿಇಒ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ಯುವ ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಭು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!