Connect with us

Mysore

ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಹೇಳಿದ್ದೇನು?

Published

on

ಮೈಸೂರು: ಈ ಜಾಗಕ್ಕೆ ಸ್ಟೇ ಆರ್ಡರ್ ಇದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಗಳು ನನ್ನ ಬಳಿ ಇದೆ. ಸಂಪುಟ ಸಭೆಯ ತೀರ್ಮಾನ ನೋಡಿದ್ದೇನೆ. ಸ್ಟೇ ಆರ್ಡರ್ ಸಹ ಇದೆ. ಸ್ಟೇಟಸ್ ಕೋ ಸಹ ಕೊಟ್ಟಿದ್ದಾರೆ ಎಂದು ಬೆಂಗಳೂರು ಅರಮನೆ ಮೈದಾನ ಜಾಗವನ್ನು ಸುಗ್ರೀವಾಜ್ಙೆ ಹೊರಡಿಸುವ ವಿಚಾರವಾಗಿ ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ಇಷ್ಟು ವರ್ಷ ನಡೆದ ಚಟುವಟಿಕೆಯ ಬಗ್ಗೆ ಕರ್ನಾಟಕ ಸರ್ಕಾರದ ಗೊತ್ತಿಲ್ಲದೆ ನಡೆದಿಲ್ಲ. ಯಾವುದೇ ಫಂಕ್ಷನ್ ನಡೆದರು ಸರ್ಕಾರಕ್ಕೆ ಗೊತ್ತಿದೆ. 2014 ಜಡ್ಜಮೆಂಟ್ ನಲ್ಲಿ ಶ್ರೀಕಂಠದತ್ರ ನರಸಿಂಹರಾಜ ಒಡೆಯರ್, ಐದು ಜನ ಅಕ್ಕ ತಂಗಿಯವರ ಓನರ್ ಎಂದು ಹೇಳಿದೆ. ರಸ್ತೆ ವಿಸ್ತರ್ಣೆಗೆ ನಮ್ಮ ಜಾಗ ಬಳಿಸಿಕೊಂಡಿದ್ದಾರೆ. ಬಿಬಿಎಂಪಿ ಕಮಿಷನರ್ ಅವರೇ ಆಫರ್ ಕೊಟ್ಟರು. ಟಿಡಿಆರ್ ಅವರೇ ಕೊಟ್ಟರು‌. 14ನೇ ಇಸವಿಯಲ್ಲಿ ಟಿಡಿಆರ್ ನಿರ್ಧಾರ ಆಗಿತ್ತು. 14 ವರ್ಷದಿಂದ ಟಿಡಿಆರ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಇನ್ನು ಅರಮನೆ ಟಾರ್ಗೆಟ್ ವಿಚಾರವಾಗಿ ಮಾತನಾಡಿ, ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಕಾರಣ ಮಾತ್ರ ಗೊತ್ತಿಲ್ಲ. ಕಾನೂನು ಹೋರಾಟ ಮಾಡುತ್ತೇನೆ. 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಇದನ್ನ ನಿಲ್ಲಿಸಲು ಸಾಧ್ಯವಿಲ್ಲ. ಒಂದು ಕಲ್ಲು ಎಸೆದರೆ ನಾವು ಸಹ ಅದಕ್ಕೆ ಹೋರಾಟ ಮಾಡುತ್ತೇನೆ. ಕಾನೂನು ಸಚಿವರಿಗೆ ಮಾಹಿತಿ ಕೊರತೆ ಇಲ್ಲ ಅಂಥ ನಾನು ಹೇಳಲ್ಲ. ಮೆಟ್ರೋಗೆ ಜಾಗ ಬಳಸಿಕೊಂಡರೆ ಒಂದುವರೆ ಎಷ್ಟು ಪರಿಹಾರ ಕೊಡುತ್ತಾರೆ‌. ನಮ್ಮ ಜಾಗಕ್ಕೆ ಪರಿಹಾರ ಕೊಡುವಾಗ ಮಾತ್ರ ಅಭಿವೃದ್ಧಿ ವಿಚಾರ ನೆನಪಿಗೆ ಬರುತ್ತದೆ ಎಂದು ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ನಿಮಗೆ ಗೊತ್ತಿದೆ. ಸಿದ್ದರಾಮಯ್ಯ ಹೆಸರಳದೇ ಮಾರ್ಮಿಕವಾಗಿ ಪ್ರಮೋದಾ ದೇವಿ ಉತ್ತರ ನೀಡಿದ್ದಾರೆ.

Continue Reading

Mysore

ರಾಧೆ ಕೃಷ್ಣರ ಉಡುಪಿನಲ್ಲಿ ಜನ್ಮಾಷ್ಟಮಿ ಆಚರಣೆ

Published

on

ವರದಿ: ಎಸ್. ಬಿ.ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಕನಹಳ್ಳಿ ಗ್ರಾಮದ ಆರ್ .ಆದ್ಯ ಗೌಡ ಯುಕೆಜಿ ವಿದ್ಯಾರ್ಥಿನಿಯು ರಾಧೆಯ ರೂಪದ ವೇಷದಲ್ಲಿ ಉಡುಪು ಧರಿಸಿ ಗೋಪಾಲನ ಜನ್ಮ ಸ್ಮರಣೆ ಮಾಡಿದರು.

ಮಿರ್ಲೆ ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿಯೂ ಮುದ್ದು ಕೃಷ್ಣನ ಉಡುಪು ಧರಿಸಿದರೆ, ಹೊಸೂರು ಗ್ರಾಮದ ರಾಧೆಯ ಉಡುಪು ಹೀಗೆ ಹಲವರು ತಮ್ಮ ತಮ್ಮ ಪುಟ್ಟು ಮಕ್ಕಳಿಗೆ ಕೃಷ್ಣ, ರಾಧೆಯರ ಉಡುಪುಗಳನ್ನು ಧರಿಸಿ, ಗೋಪಾಲನ ಜನ್ಮ ದಿನವನ್ನು ಆಚರಣೆ ಮಾಡುವುದರ ಮೂಲಕ  ಸಂಭ್ರಮಿಸಿದರು.

Continue Reading

Mysore

ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

Published

on

ಮೈಸೂರು: ನಗರದಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಕೇಂದ್ರವನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಉದ್ಘಾಟಿಸಿದರು.

ಬೆಂಗಳೂರಿನ ಎಪಿಕ್‌ ಎಂಟರ್‌ ಪ್ರೈಸನ್‌ ವತಿಯಿಂದ ಝಿಯಾನ್‌ ಎಲೆಕ್ಟ್ರಿಕ್‌ ಸಂಸ್ಥೆ ಸಹಯೋಗದಲ್ಲಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಆದಿತ್ಯ ಟೆಕ್‌ ಪಾರ್ಕ್‌ ಆವರಣದಲ್ಲಿ ಅತ್ಯಧಿಕ ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಆರಂಭಿಸಲಾಗಿದೆ.

ನೂತನವಾಗಿ ಆರಂಭಿಸಿರುವ ಖಾಸಗಿ ಇವಿ ಚಾರ್ಜಿಂಗ್ ಸ್ಪೇಷನ್‌ ಮೈಸೂರು ಜಿಲ್ಲೆಯ ಮೊದಲ ಇ-ಬಸ್ ಚಾರ್ಜಿಂಗ್ ಕೇಂದ್ರವಾಗಿದ್ದು, 180 ಕಿಲೋ ವ್ಯಾಟ್‌ ಸಾಮರ್ಥ್ಯದ ಎರಡು ಚಾರ್ಜಿಂಗ್‌ ಹಬ್‌ಗಳನ್ನು ಈ ಚಾರ್ಜಿಂಗ್‌ ಸ್ಟೇಷನ್‌ ಒಳಗೊಂಡಿದೆ.

ಇವಿ ಹಬ್ ಆಗಿ ಮೈಸೂರು : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇವಿ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ 5,880 ಪಬ್ಲಿಕ್ ಚಾರ್ಜಿಂಗ್ ಸ್ಪೇಷನ್‌ಗಳಿವೆ. ಈ ನಿಟ್ಟಿನಲ್ಲಿ ಮೈಸೂರು ಇವಿ ಹಬ್‌ ಆಗಿಯೂ ಬೆಳೆಯುತ್ತಿದ್ದು, ಮೈಸೂರಿನಲ್ಲಿ ಪ್ರಸ್ತುತ 57 ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ಸ್‌ ಹಾಗೂ 20 ಖಾಸಗಿ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಟಿಯರ್-2 ಇವಿ ಹಬ್ ಆಗಿ ವೇಗವಾಗಿ ಬೆಳೆಯುತ್ತಿದೆ.

ಈ ಸಂದರ್ಭದಲ್ಲಿ ಸೆಸ್ಕ್‌ನ ತಾಂತ್ರಿಕ ವಿಭಾಗದ ನಿರ್ದೇಶಕ ಡಿ.ಜೆ. ದಿವಾಕರ್‌, ಸೆಸ್ಕ್‌ನ ಐಟಿ ಮತ್ತು ಎಂಐಎಸ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ ಸೆಸ್ಕ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಝಿಯಾನ್‌ ಚಾರ್ಜಿಂಗ್‌ ಸ್ಟೇಷನ್‌ನ ಮುಖ್ಯಸ್ಥ ಅಖಿಲ್‌ ಕೃಷ್ಣನ್, ಬೆಂಗಳೂರಿನ ಎಪಿಕ್‌ ಎಂಟರ್‌ಪ್ರೈಸಸ್‌ನ ಚಿರಾಗ್‌ ಹಾಗೂ ವಿಶಾಲ್‌, ಇತರರಿದ್ದರು.

ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗಲಿದೆ. ಇದಕ್ಕಾಗಿ ಹೆಚ್ಚಿನ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೆಸ್ಕ್‌ನಲ್ಲಿ ಇವಿ ಸೆಲ್‌ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಇವಿ ವಾಹನಗಳ ಬಳಕೆಯ ಮೂಲಕ ಎಲ್ಲರೂ ಹಸಿರು ಸಂಚಾರ ಕ್ರಾಂತಿಗೆ ಕೈಜೋಡಿಸಬೇಕಿದ್ದು, ಇದರಿಂದ ಗ್ರೀನ್‌ ಎನರ್ಜಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

Continue Reading

Mysore

ಈಡೇರಿದ ತಲಕಾಡು ಪ.ಪಂ. ಕನಸು: ಗ್ರಾಮಸ್ಥರಲ್ಲಿ ಹರ್ಷ

Published

on

ತಿ.ನರಸೀಪುರ:ತಲಕಾಡು ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ತಲಕಾಡು ಜನತೆಯ ಎರಡು ದಶಕಗಳ ಪಟ್ಟಣ ಪಂಚಾಯಿತಿ ಕನಸು ಕೊನೆಗೂ ನನಸಾಗಿ ಸಾಕಾರ ಗೊಂಡಿದೆ.

ಇತ್ತೀಚಿಗಷ್ಟೇ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ತಲಕಾಡು ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು,ಇದರೊಂದಿಗೆ ತಲಕಾಡು ಗ್ರಾಮವನ್ನು ಪಟ್ಟಣ ಪಂಚಾಯಿತಿ ಮಾಡಲು ಸ್ಥಳೀಯರು, ಕಾಂಗ್ರೆಸ್ ಕಾರ್ಯಕರ್ತರು, ಜನಪ್ರತಿನಿಧಿಗಳು ನಡೆಸಿದ ಭಗೀರಥ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ. ಹಾಲಿ ತಲಕಾಡು ಗ್ರಾಮ ಪಂಚಾಯಿತಿಯ ಜತೆಗೆ ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಟಿ.ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ವಿಲೀನ ಗೊಳಿಸಿ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮಾಡಲು ಸರ್ಕಾರದ ಅನುಮೋದನೆ ನೀಡುವ ಮೂಲಕ ಮಹತ್ವ ನಿರ್ಧಾರ ದೊರೆಕಿದೆ.

ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮಾಡಲು ಸ್ಥಳೀಯರು, ಹಲವು ಜನಪ್ರತಿನಿಧಿಗಳು ಮತ್ತು ಆಡಳಿತಾತ್ಮಕ ಹಲವು ಕಸರತ್ತುಗಳು ನಿರಂತರವಾಗಿ ನಡೆದಿದ್ದರೂ ಜನಸಂಖ್ಯೆಯ ಕೊರತೆ ಹಿನ್ನೆಲೆಯಲ್ಲಿ ಅಧಿಕೃತ ಅನುಮೋದನೆ ಸಿಕ್ಕಿರಲಿಲ್ಲ. ಪ್ರಸ್ತುತ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಪರಿವರ್ತನೆ ಮಾಡುವ ಸದುದ್ದೇಶದಿಂದಲೇ ಪಕ್ಕದ ಟಿ.ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ವಿಲೀನಗೊಳಿಸಿ ಜನಸಂಖ್ಯೆ ಮಾನದಂಡವನ್ನು ನೆರವೇರಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸ್ಥಳೀಯ ಆಡಳಿತದ ಪ್ರಸ್ತಾವನೆಯನ್ನು ಅಂಗೀಕರಿಸಿ ಅನುಮೋದಿಸಿದೆ.ಅಲ್ಲದೆ ಕ್ಷೇತ್ರದ ಹಾಲಿ ಶಾಸಕರು ಮತ್ತು ಸಂಸದರ ಪ್ರಯತ್ನದ ಫಲವಾಗಿ ತಲಕಾಡು ಪಟ್ಟಣ ಪಂಚಾಯಿತಿ ಕನಸು ಕೈಗೂಡಿವ ಮೂಲಕ ಕೊನೆಗೂ ಸುಖಾoತ್ಯ ಗೊಂಡಿದೆ.

ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆ ಜನರಲ್ಲಿ ಸಂತಸ ವ್ಯಕ್ತವಾಗಿದೆ.

ಬಿ. ಶೆಟ್ಟಹಳ್ಳಿ ಗ್ರಾಮಪಂಚಾಯಿತಿಯ ಉವಪಾಧ್ಯಕ್ಷ ದಕ್ಷಿಣಮೂರ್ತಿ ಮಾತನಾಡಿ, ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳನ್ನು ಸೇರಿಸಿ ತಲಕಾಡು ಗ್ರಾಮಪಂಚಾಯಿತಿಯನ್ನು ಪಟ್ಟಣದ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಿದ ಸರ್ಕಾರದ ಈ ನಿರ್ಧಾರಕ್ಕೆ ಸ್ವಾಗತ. ಬೆಟ್ಟಹಳ್ಳಿ ಗ್ರಾಮದಲ್ಲಿ ಸಾಕಷ್ಟು ಮೂಲಸೌಕರ್ಯಗಳ ಕೊರತೆಯಿದ್ದು, ತಲಕಾಡು ಪಟ್ಟಣ ಪಂಚಾಯಿತಿ ಯಾಗಿರುವುದರಿಂದ ಈ ಭಾಗದ ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.

ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ ಮಲ್ಲಣ್ಣಿ ಮಾತನಾಡಿ, ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣದ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಆಸಕ್ತಿ ವಹಿಸಿದ ಸಚಿವರಾದ ಡಾ. ಹೆಚ್. ಸಿ.ಮಹದೇವಪ್ಪ ಮತ್ತು ಸಂಸದ ಸುನೀಲ್ ಬೋಸ್ ಅವರಿಗೆ ಧನ್ಯವಾದಗಳು. ತಲಕಾಡು, ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳಲ್ಲಿ ಒಳ ಚರಂಡಿ ವ್ಯವಸ್ಥೆ, ರಸ್ತೆ ಸೌಲಭ್ಯ ಕಲ್ಪಿಸಲು ಸಾಕಷ್ಟು ಅನುದಾನದ ಅವಶ್ಯಕತೆಯಿದೆ. ಹಾಗಾಗಿ ತಲಕಾಡು ಗ್ರಾಮವನ್ನು ಒಂದು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಚಿವರು ಮತ್ತು ಸಂಸದರು ಹೆಚ್ಚು ಅನುದಾನಗಳನ್ನು ಬಿಡುಗಡೆಗೊಳಿಸಿ ತಲಕಾಡು, ಬೆಟ್ಟಹಳ್ಳಿ ಮತ್ತು ಕೂರುಬಾಳನಹುಂಡಿ ಗ್ರಾಮಗಳ ಜನರ ಕನಸು ನನಸಾಗಿದೆ ಎಂದು ತಿಳಿಸಿದರು.

 

Continue Reading

Trending

error: Content is protected !!