Mysore
ಮಗ ಕಾಣೆ, ತಂದೆಯಿಂದ ಠಾಣೆಯಲ್ಲಿ ದೂರು ದಾಖಲು
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಮಗ ಕಾಣೆಯಾಗಿರುವ ಬಗ್ಗೆ, ತಂದೆಯಿಂದ ದೂರು ದಾಖಲು ಮಾಡಿದ್ದಾರೆ.
ಸಾಲಿಗ್ರಾಮ ತಾಲೂಕು ಅಬ್ಬೂರು ಗ್ರಾಮದ ಲೋಕೇಶ್ ಎ. ಸಿ (40 ವರ್ಷ ) ಇವರು ತನ್ನ ಹೆಂಡತಿ ಮರಣ ಹೊಂದಿದ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದನು,ಬೇಸತ್ತು ದಿನಾಂಕ 21-07-2024 ರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಮನೆಯಲ್ಲಿ ನಾವುಗಳು ಯಾರೂ ಇಲ್ಲದ ವೇಳೆಯಲ್ಲಿ ಮನೆಯಿಂದ ಹೊರ ಹೋಗಿ, ಹಿಂತಿರುಗಿ ಮನೆಗೆ ಬಂದಿರುವುದಿಲ್ಲ, ಇವರ ಮೊಬೈಲ್ ಫೋನ್ ಸ್ವಿಚ್ ಆಫ್
ಆಗಿರುತ್ತದೆ.ನಾವುಗಳು ನೆಂಟರಿಷ್ಟರು, ಬಂದು ಬಳಗ, ಸ್ನೇಹಿತರು ಎಲ್ಲಾ ಕಡೆ ಹುಡುಕಾಡಿ, ವಿಚಾರಿಸಿದರು ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಎಂದು ಇವರ ತಂದೆ ಚಂದ್ರಪ್ಪ ಎ ಡಿ ರವರು ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದು, ಇದರ ಅನ್ವಯ ದೂರು ದಾಖಲಿಸಿ ಮುಂದಿನ ಕ್ರಮ ಕೈ ಗೊಂಡಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ :ಹೆಸರು : ಲೋಕೇಶ್ ಎ ಸಿ, ವಯಸ್ಸು : 40 ವರ್ಷ, ಕೋಲು ಮುಖ, ಎಣ್ಣೆ ಗೆoಪು ಮೈ ಬಣ್ಣ, ಸಾದಾರಣ ಮೈ ಕಟ್ಟು, ಎತ್ತರ: 170 ಸೆ. ಮೀ., ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ನಿಕ್ಕರ್ ಮತ್ತು ನೀಲಿ ಬಣ್ಣದ ಜರ್ಕಿಯನ್ನು ಧರಿಸಿರುತ್ತಾರೆ.
ಇವರ ಸುಳಿವು ಸಿಕ್ಕರೆ ಸಾಲಿಗ್ರಾಮ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08223- 283341 ಗೆ ಕರೆ ಮಾಡಲು ತಿಳಿಸಿದ್ದಾರೆ.
Mysore
ಹುಲಿ ಸಂರಕ್ಷಣಾ ದಿನ ಕಾರ್ಯಕ್ರಮ ಆಚರಣೆ
ಪಿರಿಯಾಪಟ್ಟಣ: ರಾಷ್ಟ್ರೀಯ ಪ್ರಾಣಿ ಹುಲಿ ಅನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರೋಟರಿ ಕ್ಲಬ್ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಜೆ.ಎಸ್ ನಾಗರಾಜ್ ತಿಳಿಸಿದರು.
ಹುಲಿ ಸಂರಕ್ಷಣಾ ದಿನ ಕಾರ್ಯಕ್ರಮ ಆಚರಣೆ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸದಸ್ಯರೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಹುಲಿಗಳ ಬಗ್ಗೆ ಅರಣ್ಯ ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದು ಅವರು ಮಾತನಾಡಿದರು, ಮನುಷ್ಯನ ಮಿತಿಮೀರಿದ ಆಸೆಯಿಂದಾಗಿ ವನ್ಯಪ್ರಾಣಿಗಳ ಸಂತತಿ ಕಡಿಮೆಯಾಗುತ್ತಿರುವುದು ವಿಷಾಧಕರ, ಕಾಡು ಇದ್ದರೆ ನಾಡು ಎಂಬ ಗಾದೆ ಮಾತಂತೆ ಗಿಡ
ಮರಗಳನ್ನು ಬೆಳೆಸಿ ನಾವು ಪ್ರಕೃತಿಯನ್ನು ಉಳಿಸುವುದರಿಂದ ಕಾಡಿನಲ್ಲಿ ವನ್ಯಪ್ರಾಣಿಗಳು ಉತ್ತಮ ಜೀವನ ನಡೆಸಬಹುದು, ಕಾಡು ಪ್ರಾಣಿಗಳ ಬೇಟೆ ಅಪರಾಧವಾಗಿದ್ದು ನಾವೆಲ್ಲರೂ ಕಾಡು ಹಾಗೂ ವನ್ಯ ಪ್ರಾಣಿಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಕಾರ್ಯ ಮಾಡಬೇಕಿದೆ, ಈಚಿನ ಸರ್ವೆ ಪ್ರಕಾರ ಹುಲಿಗಳ ಸಂತತಿ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದ್ದು ಹುಲಿ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.
ಈ ಸಂದರ್ಭ ರೋಟರಿ ಐಕಾನ್ಸ್ ಕಾರ್ಯದರ್ಶಿ
ಬಿ.ಎಸ್ ಪ್ರಸನ್ನ ಕುಮಾರ್, ಖಜಾಂಚಿ ಬಿ.ಆರ್ ಗಣೇಶ್, ಪದಾಧಿಕಾರಿಗಳಾದ ಬಿ.ಎಸ್ ಸತೀಶ್ ಆರಾಧ್ಯ, ಧನಂಜಯ್, ಪತ್ರಕರ್ತ ಇಂತಿಯಾಜ್ ಅಹಮದ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
ವರದಿ: ಸತೀಶ್ ಆರಾಧ್ಯ
Mysore
ಕಾಂಗ್ರೆಸ್ ಸರ್ಕಾರ ಅಹಿಂದ ವರ್ಗಕ್ಕೆ ದ್ರೋಹ ಮಾಡಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಮೈಸೂರು: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಬಂದಿದೆ. ಆದರೆ ಇಂದು ಅಹಿಂದ ವರ್ಗಕ್ಕೆ ದ್ರೋಹ ಮಾಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರ ಮಿತಿ ಮೀರಿ ಹೋಗಿದ್ದು, ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು, ತಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಚಾಮುಂಡಿಬೆಟ್ಟಕ್ಕೆ ಶನಿವಾರ ಬೆಳಿಗ್ಗೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ, ವಾಲ್ಮೀಕಿ ಹಗರಣ, ಹಾಗೂ ಎಸಿ/ಎಸ್ಟಿ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಹಾಗೂ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ. ಇಂದು ಆರಂಭವಾಗಲಿರುವ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಪಾದಯಾತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ ಎಂದರು.
ಹಲವು ವಿಚಾರಗಳನ್ನು ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಜೆಡಿಎಸ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ರೀತಿ ಮಾತನಾಡುವುದು ಆಗುತ್ತದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ, ಪಾದಯಾತ್ರೆ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ನವರದು ಪಶ್ಚಾತ್ತಾಪದ ಯಾತ್ರೆಯಾಗಿದ್ದು, ಅವರು ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಿಲ್ಲ ಎಂದು ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಮ್ಮ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು
ಇದೇ ವೇಳೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಇದ್ದರು
Mysore
ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ, ಗೈರು ಹಾಜರು,ರಾಷ್ಟ್ರೀಯ ಹಬ್ಬ ಪೂರ್ವ ಭಾವಿ ಸಭೆ ಮುಂದೂಡಿಕೆ
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ ದಿಂದಾಗಿ ರಾಷ್ಟ್ರೀಯ ಹಬ್ಬದ ಪೂರ್ವ ಭಾವಿ ಸಭೆಗೆ ಗೈರು ಹಾಜರು, ಸಭೆ ಮುಂದೂಡಿದ ಘಟನೆ ಜರುಗಿತು.
ಸಾಲಿಗ್ರಾಮ ಪಟ್ಟಣದಲ್ಲಿ ತಾಲೂಕು ದಂಡಾ ಧಿಕಾರಿಗಳ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬವಾದ ಆಗಸ್ಟ್ 15 ರ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮ ವನ್ನು ಯಾವ ಸ್ಥಳ, ಯಾವ ರೀತಿಯಲ್ಲಿ ಹಮ್ಮಿಕೊಳ್ಳಲು ಅದರ ರೂಪು ರೇಖೆ ಯಾವ ರೀತಿ ರೂಪಿಸಬೇಕು, ಎಂಬುದರ ಬಗ್ಗೆ ನಡೆಸಲು ಅಧಿಕಾರಿಗಳ ಸಭೆಯನ್ನು ಕರೆದರು, ಆದರೆ ಅಧಿಕಾರಿಗಳು ಬಾರದೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಕೆಲವು ಸಹಾಯಕರು ಬೆರಳೆಣಿಕೆಯಷ್ಟು ಮಾತ್ರ ಬಂದರೆ, ಮತ್ತೆ ಕೆಲವು ಇಲಾಖೆಗಳು ಗೈರು ಹಾಜರಾಗಿ ಪೂರ್ವ ಭಾವಿ ಸಭೆಯನ್ನು ತಹಸೀಲ್ದಾರ್ ನರಗುಂದ ರವರು ಮುಂದೂಡಿದರು.
ನಂತರ ಮಾತನಾಡಿ ಇದು ರಾಷ್ಟ್ರೀಯ ಹಬ್ಬದ ಆಚರಣೆ ಆಗಿದ್ದು, ಇದನ್ನು ಕ್ರಮ ಬದ್ದವಾಗಿ ಮಾಡಬೇಕು. ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಇವರು ಒಪ್ಪುವುದಿಲ್ಲ , ಏಕೆಂದರೆ ಈ ಸಭೆಗೆ ಬಂದಿರುವ ಕೆಲವು ಸಹಾಯಕರು ಅವರ ಮೇಲಧಿಕಾರಿಗಳಿಗೆ ತಿಳಿಸಿ ನಂತರ ಹೇಳುತ್ತೇವೆ ಎನ್ನುತ್ತಾರೆ.ಆದ್ದರಿಂದ ಅನಿವಾರ್ಯ ಮುಂದೂ ಡಿದ್ದೇವೆ, ಗೈರು ಹಾಜರಾಗಿರುವ ಇಲಾಖೆಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದರು.
ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು ಮಾತನಾಡಿ ನೆಪ ಮಾತ್ರಕ್ಕೆ ತಾಲೂಕು ಎಂದು ಘೋಷಣೆ ಮಾಡಿದ್ದಾರೆ, ನೂತನ ತಾಲೂಕಿಗೆ 19 ಗ್ರಾಮ ಪಂಚಾಯತಿ ಗಳು ಬರುತ್ತೆ, 28 ಇಲಾಖೆ ಇದೆ. ಆದರೆ ಕೆಲವೇ ಕೆಲವು ಇಲಾಖೆ ಬಂದಿದೆ, ಅದು ಸಹಾಯಕರು ಮಾತ್ರ, ಇವರನ್ನು ಕೇಳಿದರೆ ನಮ್ಮ ತೀರ್ಮಾನ ಇಲ್ಲಾ ಎನ್ನುತ್ತಾರೆ. ಪದವಿ, ಪದವಿ ಪೂರ್ವ ಕಾಲೇಜು, ತೋಟಗಾರಿಕೆ ಇಲಾಖೆ, ಅರಣ್ಯ, ಆರೋಗ್ಯ ಯಾವ ಇಲಾಖೆ ಯವರು ಬಂದಿಲ್ಲ, ಇದು ರಾಷ್ಟ್ರೀಯ ಹಬ್ಬಕ್ಕೆ ಅವಮಾನ ಮಾಡಿದಂತೆ ಆಗುತ್ತಿದೆ, ಬೇಸರದ ಸಂಗತಿಯಾಗಿದೆ, ಮುಂದೆ ಈ ರೀತಿ ಆಗದಂತೆ ಕ್ರಮ ಕೈ ಗೊಳ್ಳಿ ಎಂದು ಮನವಿ ಮಾಡಿದರು. ಎಲ್ಲಾ ಸಭೆಗಳು, ಸಾರ್ವಜನಿಕರ ಕುಂದುಕೊರತೆಗಳು ಎಲ್ಲವೂ ಕೆ ಆರ್ ನಗರದಲ್ಲಿ ನಡೆಯುತ್ತದೆ. ಇಲ್ಲಿಂದ ಜನತೆ ದಿನ ನಿತ್ಯದ ಕೆಲಸ ಬಿಟ್ಟು ಅಲೆಯಬೇಕು, ಎಲ್ಲವೂ ಸೇರಿದಂತೆ ಇಲ್ಲಿಯೇ ನಡೆಯಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ನರಗುಂದ, ಗ್ರೇಡ್ 2 ತಹಸೀಲ್ದಾರ್ ಸಣ್ಣ ರಾಮಪ್ಪ, ಕಾರ್ಮಿಕ ಇಲಾಖೆ ಧನುಷಾ, ಕೃಷಿ ಇಲಾಖೆ ಅನುಷಾ, ಗ್ರಾಮ ಪಂಚಾಯತಿ ಕಾರ್ಯದರ್ಶಿ,
ಹಾರಂಗಿ ಇಲಾಖೆ ಸಹಾಯಕ ಇಂಜಿನಿಯರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಧಾ ರೇವಣ್ಣ,, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಚಂದ್ರು,ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಅಂಕನಲ್ಲಿ ತಿಮ್ಮಪ್ಪ,ಉಪನ್ಯಾಸಕ ನಾಗರಾಜು ಇದ್ದಾರೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.