Connect with us

Hassan

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆ ನಡೆಸಲಿ

Published

on

ಕೆ.ಆರ್.ಎಸ್. ಪ್ರತಿಭಟಿಸಿ ಹಾಸನ ಚಲೋ

ಹಾಸನ : ಜಿಲ್ಲೆಯ ಸಂಸತ್ ಸದಸ್ಯರಾದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನವನ್ನು ಹರಾಜು ಹಾಕಿದ್ದು, ಈ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿ ಕೆ.ಆರ್.ಎಸ್. ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಅಬಲೆಯರನ್ನು ಗೌರವಿಸೋಣ – ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ ಎನ್ನುವ ಘೋಷಣೆಯೊಂದಿಗೆ ಹಾಸನ ಚಲೋ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೆ.ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡ ಮಾತನಾಡಿ, ಈ ಪ್ರಕರಣವು ರಾಜ್ಯದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ದಾಖಲಾಗಲಿದೆ. ನೂರಾರು ಮಹಿಳೆಯರನ್ನು ದಬ್ಬಾಳಿಕೆ ಮತ್ತು ಅಧಿಕಾರ ದುರ್ಬಳಕೆಯ ಮೂಲಕ ಲೈಂಗಿಕ ದೌರ್ಜನ್ಯ ನಡೆದಿರುವ ಇಂತಹ ಪ್ರಕರಣದಲ್ಲಿ ನ್ಯಾಯಯುತ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ಅದು ಶೀಘ್ರದಲ್ಲಿ ನಡೆಯಬೇಕು. ಅಂತಹ ವ್ಯವಸ್ಥೆ ಮಾಡದಿದ್ದರೆ, ಅದು ವ್ಯವಸ್ಥೆಯ ವಿಫಲತೆ ಎಂದು ಕೂಡ ಇತಿಹಾಸದಲ್ಲಿ ದಾಖಲಾಗಲಿದೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾದವರು ಸೂಕ್ತ ವ್ಯವಸ್ಥೆಯು ಇಲ್ಲದಿರುವಂತಹ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ಮಹಿಳೆಯರಿಗೆ, ಅದರಲ್ಲೂ ಸರ್ಕಾರಿ ಅಧಿಕಾರಿಗಳೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಮತ್ತು ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದಿರುವ ಮತ್ತು ಇದು ನಿರಂತರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಡೆದಿದ್ದರೂ ಬೆಳಕಿಗೆ ಬಾರದೆ, ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದರೂ ಯಾವುದೇ ಕ್ರಮವಾಗದೆ ಇರುವುದು ಮಹಿಳೆಯರನ್ನು ರಕ್ಷಿಸುವ ಸೂಕ್ತ ವ್ಯವಸ್ಥೆಯು ರಾಜ್ಯದಲ್ಲಿ

ಇಲ್ಲದಿರುವುದು ಎದ್ದು ಕಾಣುತ್ತದೆ ಎಂದರು. ಇಂತಹ ಪರಿಸ್ಥಿತಿಯಲ್ಲಿ ಈ ಅವ್ಯವಸ್ಥೆಯನ್ನು ಸರಿಪಡಿಸುವುದು ಹಾಗೂ ನ್ಯಾಯಯುತ ತನಿಖೆಯನ್ನು ನಡೆಸವುದು ಹಾಗೂ ಅದಕ್ಕೆ ಪೂರಕ ವಾತಾರಣವನ್ನು ನಿರ್ಮಿಸುವುದು ತಮ್ಮ ಜವಾಬ್ದಾರಿಯಾಗಿರುತ್ತದೆ. ಹಾಗೆಯೇ, ಇಲ್ಲಿ ಕೇವಲ ಅತ್ಯಾಚಾರ ಮತ್ತು ದೌರ್ಜನ್ಯ ಮಾತ್ರವಲ್ಲದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಗೌರವ ಕಾಪಾಡುವುದು ಮತ್ತು ಅದೇ ಸಂದರ್ಭದಲ್ಲಿ ಅವರು ಪೊಲೀಸರಿಗೆ ದೂರು ಮತ್ತು ಹೇಳಿಕೆಗಳನ್ನು ನೀಡಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಹಾಗೆಯೇ, ಈ ಪ್ರಕರಣದಲ್ಲಿ ಅತ್ಯಾಚಾರಿಗಳು ಒಂದು ಪಕ್ಷದವರಾದರೆ ಅದನ್ನು ಬಹಿರಂಗ ಮಾಡಿದವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಎಂದು ಬೆರಳು ಮಾಡಲಾಗುತ್ತಿದೆ. ಬಹಿರಂಗ ಮಾಡಿರುವವರು ಸರ್ಕಾರದಲ್ಲಿ ಉನ್ನತ ಅಧಿಕಾರ ಸ್ಥಾನದಲ್ಲಿರುವವರು ಎಂದು ಬೆರಳು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೇರವಾಗಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಪೊಲೀಸ್ ತನಿಖೆಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಹಾಗೆಯೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಬಲವಾಗಿ ನಂಬಿಕೆಯಿರುವ ಕೆ ಆರ್ ಎಸ್ ಪಕ್ಷವು ಸಿಬಿಐಗೆ ವಹಿಸಬೇಕು ಎನ್ನುವ ವಿಚಾರವನ್ನು ಬಲವಾಗಿ ವಿರೋಧಿಸುತ್ತದೆ ಮತ್ತು ಅದೂ ಕೂಡ ಒಕ್ಕೂಟ ಸರ್ಕಾರದ ಅಣತಿಯಂತೆ ನಡೆದುಕೊಳ್ಳುವುದು ತಿಳಿದಿರುವ ವಿಚಾರವೇ. ಆದ್ದರಿಂದ ಪ್ರಸ್ತುತ ಎಸ್ ಐ ಟಿ ಮೂಲಕ ನಡೆಯುತ್ತಿರುವ ತನಿಖೆಯನ್ನು ನ್ಯಾಯಾಂಗದ ಅಡಿಯಲ್ಲಿ ನಡೆಸಲು ಆದೇಶಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಒಟ್ಟಾರೆ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದರಿಂದ ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೀರ್ಘಾವಧಿ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳ ಮೇಲೆ ಒತ್ತಡ ಹೇರಿ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಈ ಪರಿಸ್ಥಿತಿ ಆಗಬಾರದು ಎಂದರೆ ತನಿಖೆ ಶೀಘ್ರವಾಗಿ ನಡೆಯಬೇಕು ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯು ಕೂಡ ಅಷ್ಟೇ ತ್ವರಿತವಾಗಿ ಮುಗಿದು ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇದು ಆಗಬೇಕಾದರೆ ಈ ಪ್ರಕರಣಕ್ಕಾಗಿ ದೈನಂದಿನ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಕೆ ಆರ್ ಎಸ್ ಪಕ್ಷ ಆಗ್ರಹಿಸುತ್ತದೆ ಎಂದರು. ಸರ್ಕಾರಿ ಅಧಿಕಾರಿಗಳ ಬೇಜವಬ್ದಾರಿತನದಿಂದ ಇಂತಹ ಕೃತ್ಯಗಳು ಅವ್ಯಾಹತವಾಗಿ ನಡೆಯಲು ಸಾಧ್ಯವಾಗಿರುವುದು. ಇವರು ಆಯಕಟ್ಟಿನ ಸ್ಥಾನದಲ್ಲಿರುವ ಸಂದರ್ಭದಲ್ಲಿ ಸಂತ್ರಸ್ತರು ಧೈರ್ಯವಾಗಿ ಮುಂದೆ ಬಂದು ದೂರು ನೀಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಾಸನ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಮತ್ತು ತನಿಖೆಯ ಸಂದರ್ಭದಲ್ಲಿ ಅಪರಾಧದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತಿಸಲ್ಪಡುವ ಸರ್ಕಾರಿ ನೌಕರರನ್ನು ಹಾಸನ ಜಿಲ್ಲೆಯಿಂದ ತಕ್ಷಣವೇ ವರ್ಗಾವಣೆ ಮಾಡಬೇಕು ಹಾಗೂ ಈ ಪ್ರಕರಣದ ಗಂಭೀರತೆಯನ್ನು ಮನಗಂಡು, ತಾವು ಈ ಮೇಲಿನ ನಮ್ಮ ಒತ್ತಾಯಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ಉಮೇಶ್ ಬೆಳಗುಂಬ, ಬೂವನಹಳ್ಳಿ ವಿ. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಟ್ಟನಹಳ್ಳಿ ಮಧು, ನಾಸೀರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನವನ್ನು ಸ್ವಚ್ಛ ಮತ್ತು ಸುಂದರ ನಗರವಾಗಿಸಲು ಶ್ರಮ : ಶಾಸಕ ಸ್ವರೂಪ್ ಪ್ರಕಾಶ್

Published

on

ಹಾಸನ: ಹಾಸನ ನಗರಸಭೆ ಇದೀಗ ಮಹಾನಗರ ಪಾಲಿಕೆಯಾಗಿ ಉನ್ನತೀಕರಣ ಗೊಂಡಿದ್ದು, ಹೆಚ್ಚಿನ ಅನುದಾನ ತಂದು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಪಿ. ಸ್ವರೂಪ್ ಭರವಸೆ ನೀಡಿದರು.

ನಗರದ 80 ಅಡಿ ರಸ್ತೆ ಬಳಿ ಇರುವ ವಿಶ್ವನಾಥ ನಗರದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಹಾಸನದ ಅಭಿವೃದ್ಧಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಚಿವರಾಗಿದ್ದಾಗ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ಅಲ್ಲದೆ ಇದೀಗ ಮಹಾನಗರ ಪಾಲಿಕೆ ಆಗಿರುವ ಹಿನ್ನೆಯಲ್ಲಿ ರಾಜ್ಯ ಸರಕಾರದಿಂದ ಮೂರು ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಹಕಾರದಲ್ಲಿ ಕೇಂದ್ರದಿಂದಲೂ ಸುಮಾರು ೩೦ ಕೋಟಿ ಅನುದಾನ ಸಿಗುವ ಭರವಸೆ ಇದೆ ಎಂದರು. ಈಗಾಗಲೇ ಮಹಾನಗರ ಪಾಲಿಕೆಗೆ ಸೇರಿರುವ ಹೆಚ್ಚುವರಿ ೩೫ ಹಳ್ಳಿಗಳಿಲ್ಲಿ ಅನೇಕ ಸಮಸ್ಯೆಗಳಿದ್ದು ತನ್ನ ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಸುಮಾರು ೧೦೦-೧೫೦ ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಗೆ ಒಳಗೊಂಡ ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರಗೌಡ ಮಾತನಾಡಿ, ಹಾಸನ ನಗರ ವಾಸಿಗಳ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಶಾಸಕರ ಸಹಕಾರದಿಂದ ಹಾಸನಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡಲಾಗುವುದು ಎಂದರು.

ವಾರ್ಡ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ವಾರ್ಡ್ ನಂ.೩೦ಕ್ಕೆ ಸುಮಾರು ೧೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಹೆಚ್.ಡಿ. ರೇವಣ್ಣ ಅವರು ಉಸ್ತುವಾರಿ ಸಚಿವರಾಗಿದ್ದಾಗ ೮೦ ಅಡಿ ರಸ್ತೆ ನಿರ್ಮಿಸಿ ಈ ಭಾಗದ ಜನರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ಸ್ವರೂಪ್ ಪ್ರಕಾಶ್ ಅವರು ಶಾಸಕರಾದ ಬಳಿಕ ನಮ್ಮ ಬಡಾವಣೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ ಎಂದರು. ಈ ಭಾಗಕ್ಕೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಒಳ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅಬಿವೃದ್ಧಿ ಪಥದತ್ತ ಸಾಗುತ್ತಿರುವ ಬಡಾವಣೆಗೆ ಹೆಚ್ಚಿನ ಅನುದಾನ ನೀಡಿ ಇನ್ನಷ್ಟು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಹಾಸನ ಮಹಾನಗರ ಪಾಲಿಕೆಯ ಮೇಯರ್ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.

ಭೂಮಿ ಪೂಜೆಯಲ್ಲಿ ಹಾಸನ ಮಹಾನಗರ ಪಾಲಿಕೆಯ ಉಪ ಮೇಯರ್ ಹೇಮಲತಾ, ಎಇಇ ಚೆನ್ನೇಗೌಡ, ಎ.ಇ ಆನಂದ್, ನಗರಸಭೆ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.

 

Continue Reading

Hassan

ನನ್ನ ಪತ್ನಿ ಕೈಗೆ ವಿಷಪೂರಿತ ಪೌಡರ್ ಹಾಕಿ ಸಾಯಿಸುವ ಯತ್ನ ತನಿಖೆ ನಡೆಸಿ ನ್ಯಾಯಕೊಡಿಸಿ: ಪತಿ ಎ.ಎಸ್. ಮಹೇಂದರ್ ಒತ್ತಾಯ

Published

on

ಹಾಸನ: ಕಳೆದ ತಿಂಗಳು ನನ್ನ ಪತ್ನಿ ಜಯಕಿರಣ್ ಕೈಗೆ ವಿಷಪೂರಿತ ಕೆಮಿಕಲ್ ಪೌಡರ್ ಹಾಕಿ ಸಾಯಿಸುವ ಯತ್ನ ಮಾಡಲಾಗಿದ್ದು, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ನ್ಯಾಯಕೊಡಿಸಬೇಕೆಂದು ಈಕೆಯ ಪತಿ ಎ.ಎಸ್. ಮಹೇಂದರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಜಯಕಿರಣ್ ಇಬ್ಬರೂ ಕೂಡ ವಿಶೇಷ ಚೇತನರಾಗಿದ್ದು, ನನಗೆ ಪೂರ್ತಿ ಕಣ್ಣು ಕಾಣಿಸುವುದಿಲ್ಲ. ನನ್ನ ಪತ್ನಿಗೆ ಆಗಿರುವ ಅನ್ಯಾಯದ ವಿರುದ್ಧ 2019ನೇ ಇಸವಿಯಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ದೀಲಿಪ್ ಎಂಬುವರು ನನ್ನ ಪತ್ನಿಯ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸಲು ಎರಡು ಸುಳ್ಳು ಕೇಸು ಹಾಕಿಸಲಾಗಿದ್ದು, ಈಗಾಗಲೇ ನ್ಯಾಯಾಲಯದಲ್ಲಿ ಸ್ಟಾಪ್ ಗೊಂಡಿದೆ.

ಸುಮಾರು 11 ಪ್ರಕರಣಗಳಿಗೆ ಕೋರ್ಟ್ ಮೆಟ್ಟಿಲನನ್ನು ಹತ್ತಿಸಿದ್ದಾರೆ ಎಂದು ದೂರಿದರು. ಇದಕ್ಕೆಲ್ಲಾ ಕಳೆದ 26 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳೆ ಒಟ್ಟಾಗಿ ಸೇರಿಕೊಂಡು ಕಛೇರಿ ಒಳಗೊಂಡಂತೆ ಇಲಾಖೆಯ ಪ್ರತಿ ಯೋಜನೆಗಳ ಸಿಬ್ಬಂಧಿಗಳ ಆರ್ಥಿಕತೆ ಇತರೆ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಎಂದು ದೂರಿದರು. ಅಧಿಕಾರಿಗಳ ವಿರುದ್ಧ ಸೂಕ್ತ ದಾಖಲೆ ಸಲ್ಲಿಸಿ ನ್ಯಾಯದ ಪರ ಹೋರಾಟ ಮಾಡುತ್ತಿರುವುದರಿಂದ ನನ್ನ ಮೇಲೆ ಹಾಗೂ ನನ್ನ ಪತ್ನಿ ಮೇಲೆ ಹಲವಾರು ಸಂಚುಗಳನ್ನು ರೂಪಿಸಿದ್ದಾರೆ.

ಗಲಾಟೆ ಮಾಡಿಸಿ ಎರಡು ಸುಳ್ಳು ಕೇಸು ಹಾಕಿಸಿದ್ದಾರೆ ಎಂದರು. ಕಳೆದ ತಿಂಗಳು 31 ರ ಬೆಳಿಗ್ಗೆ ನಾನು ಮತ್ತು ನನ್ನ ಪತ್ನಿ ಜೊತೆ ಮೆಟ್ಟಿಲು ಹತ್ತುವಾಗ ಕೈಗೆ ಏನು ಬಿಸಿಯಾಗಿ ಸಲ್ಪ ಸಮಯದಲ್ಲಿಯೇ ಪತ್ನಿಯ ಕೈ ಉರಿಯಲು ಆರಂಭಿಸಿದೆ. ಚರ್ಮ ಕಿತ್ತುಕೊಂಡು ಹೋಯಿತು. ಉರಿ ಹೆಚ್ಚಾದಗ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಯಿತು. ಇದಾದ ನಂತರ ಆಯುರ್ವೇದ್ ವೈದ್ಯರ ಬಳಿ ಹೋದಾಗ ಆಯಿಟ್ ಮೆಂಟ್ ಹಾಗೂ ಮಾತ್ರೆ ನೀಡಿ ಕಳುಹಿಸಿದರು. ಈ ಘಟನೆ ಬಗ್ಗೆ ದೂರು ನೀಡಲಾಗಿದ್ದು, ಈ ರೀತಿ ನಮ್ಮ ಮೇಲೆ ಅಟೇಕ್ ಮಾಡುವ ಬದಲು ಕೋರ್ಟಿನಲ್ಲಿ ಹೋರಾಟ ನಡೆಸಿ. ವರತು ಈರೀತಿ ಹೋರಾಟ ಮಾಡಬೇಡಿ. ಕೂಡಲೇ ಎಫ್.ಐ.ಆರ್. ಮಾಡಿ ತನಿಖೆ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಲೈವ್ ಮಾಡಲಾಗಿದ್ದು, ಯಡಿಯೂರು ರಸ್ತೆಯಲ್ಲಿ ಹೋದ ವೇಳೆ ಅಂಗನವಾಡಿ ವಿತರಣೆಯ ಫುಡ್ ಪ್ಯಾಕೆಟ್ ಗಳೆಲ್ಲಾವನ್ನು ರಸ್ತೆ ಮೇಲೆ ಬಿಸಾಡಿದ್ದರು. ಈ ವಿಚಾರವಾಗಿ ದೂರನ್ನು ನೀಡಲಾಗಿತ್ತು. ಅಧಿಕಾರಿಗಳು ತನಿಖೆ ಮಾಡಿದ್ದು, ಕಂಪನಿಯಿಂದ ಈತರ ಫುಡ್ ಬಂದಿದೆ. ಫುಡ್ ನಮ್ಮದೆಯಲ್ಲ ಎಂದು ಹೇಳಿದ್ದಾರೆ. ಎ.ಎಸ್. ಮಹೇಂದರ್ ಪತ್ನಿ ಮೇಲೆ ಕೆಮಿಕಲ್ ಅಟೆಕ್ ಮಾಡಲಾಗಿದೆ ಎಂದು ನಮ್ಮ ಬಳಿ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರನ್ನೆ ತೆಗೆದುಕೊಳ್ಳುತ್ತಿಲ್ಲ. ಇವರಿಬ್ಬರಿಗೂ ಕಣ್ಣು ಕಾಣಿಸುವುದಿಲ್ಲ. ಈ ವೇಳೆ ಮೂರು ಬಾರಿ ಸಾಯಿಸಲು ಮುಂದಾಗಿದ್ದಾರೆ. ಕೇಸು ದಾಖಲಿಸುವಲ್ಲಿ ಪೊಲೀಸರು ಹಿಂದೆಟು ಹಾಕಿ ರಾತ್ರಿ ದಾಖಲಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಬೂವನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಧು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಎನ್.ಟಿ.ಸಿ ಕಾರ್ಮಿಕರ ಹೋರಾಟ ಸ್ಥಳಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ : ಕಾರ್ಮಿಕರ ಪರ ನಿಂತ ಶಾಸಕರು

Published

on

ಹಾಸನ: ಬಾಕಿ ಉಳಿಸಿಕೊಂಡಿರುವ ವೇತನ ನೀಡುವಂತೆ ನಗರದ ಕೈಗಾರಿಕಾ ಪ್ರದೇಶದಲ್ಲಿನ ನ್ಯೂ ಮಿನರ್ವ ಮಿಲ್ ಎದುರು ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಇಂದು ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.

ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ವೇತನ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಹೋರಾಟ ನಡೆಯುತ್ತಿದ್ದು ಇಂದು ಸ್ಥಳಕ್ಕೆ ಬಂದ ವ್ಯವಸ್ಥಾಪಕರನ್ನು ಕಾರ್ಮಿಕರು ತೀರ್ವ ತರಾಟೆಗೆ ತೆಗೆದುಕೊಂಡರು.

ಪ್ರಮುಖವಾಗಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅತೀ ಶೀಘ್ರವಾಗಿ ನೀಡಬೇಕು, ಜೊತೆಗೆ ನಿಂತು ಹೋಗಿರುವ ಕಂಪೆನಿಯಲ್ಲಿನ ಸಾಮಗ್ರಿಗಳನ್ನು ರಕ್ಷಿಸುವ ಸಲುವಾಗಿ ಕಾರ್ಮಿಕರನ್ನು ಕವಾಲುಗಾರರನ್ನಾಗಿ ನೇಮಕ ಮಾಡಿಕೊಂಡಿದ್ದು ಅವರಿಗೂ ವೇತನ ನೀಡುತ್ತಾರೆ ಎಂಬ ನಂಬಿಕೆ ಇಲ್ಲ ಹಾಗಾಗಿ ಎಲ್ಲಾರಿಗೂ ವೇತನ ನೀಡಲು ಗಡುವು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಮಿಕರ ನೀತಿ ನಿಯಮಗಳನ್ನು ಆಡಳಿತಮಂಡಳಿ ಗಾಳಿಗೆ ತೂರಿದೆ, ವ್ಯವಸ್ಥಾಪಕರು ಕಾರ್ಮಿಕರನ್ನು ಒಳಗೆ ಬಿಡದೆ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡುತ್ತಿದ್ದಾರೆ ಅಲ್ಲದೆ ವೇತನದ ಬಗ್ಗೆ ವ್ಯವಸ್ಥಾಪಕರಲ್ಲಿ ಕೇಳಿದರೆ ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ ಆದುದರಿಂದ ವೇತನ ನೀಡುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಕೆಲಸ ಮಾಡಬೇಕು. ಈಗಾಗಲೇ ಕೈಗಾರಿಕಾ ಪ್ರದೇಶಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಳೆದುಕೊಂಡಿರುವ ರೈತ ಕುಟುಂಬಗಳು ಇಂದು ಬೀದಿ ಪಾಲಾಗಿವೆ, ಅವರಿಗೆ ಉದ್ಯೋಗ ನೀಡಿ ಅವರಿಗೆ ಸಹಕಾರ ನೀಡಬೇಕಿರುವುದು ಕಾರ್ಖಾನೆಗಳ ಜವಾಬ್ದಾರಿ ಆದುದರಿಂದ ಸಂಸ್ಥೆ ಕೂಡಲೇ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದರು.

ತಾನು ಕೂಡ ಶಾಸಕನಾಗಿ ಸಂಭಂದಿಸಿದ ಇಲಾಖಾ ಸಚಿವರ ಬಳಿ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಶೀಘ್ರವಾಗಿ ಬಗೆಹರಿಸುವ ಕೆಲಸ ಮಾಡಲಾಗುವುದು, ಸರ್ಕಾರದ ಅಂಗ ಸಂಸ್ಥೆಯಾಗಿರುವ ಎನ್.ಟಿ.ಸಿ ಕಾರ್ಖಾನೆಯಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು

Continue Reading

Trending

error: Content is protected !!