Connect with us

Mandya

ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು

Published

on

ಮದ್ದೂರು:  ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವುದನ್ನು ಖಂಡಿಸಿ ಸೋಮವಾರ ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವೆ ರಸ್ತೆ ತಡೆ ನಡೆಸುತ್ತಿದ್ದ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾ.ಪಂ. ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆ ಗ್ರಾಮದ ಗ್ರಾ.ಪಂ.ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದರು.


ಧರಣಿ ಪ್ರತಿಭಟನೆಯು 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಸ್ಥರು ಮೈಸೂರು ಬೆಂಗಳೂರು ಸವರ್ಿಸ್ ಹೆದ್ದಾರಿಯಲ್ಲಿ ಸಂಚಾರ ತಡೆ ಮಾಡಿ ಪ್ರತಿಭಟನೆಯನ್ನು ನಡೆಸುತ್ತಿದರು.

ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ಗ್ರಾಮಸ್ಥರು ಆಗಮಿಸಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಅದಕ್ಕೂ ಮೊದಲು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿರವರು ರಸ್ತೆ ತಡೆಯನ್ನು ಕೈಬಿಡಲು ಪ್ರತಿಭಟನಾ ಕಾರರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪ್ರಯೋಜವಾಗಲಿಲ್ಲ. ನಂತರ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ರೈತ ಪರ ಹೋರಾಟಗಾತಿ ಸುನಂದಾ ಜಯರಾಮು, ಲಿಂಗಪ್ಪಾಜಿ, ಶಂಕರ್, ಜಿ.ಪಿ.ಯೋಗೇಶ್, ವೀರಪ್ಪ, ಚಂದ್ರಶೇಖರ, ಗೌರಮ್ಮ, ಜಯಮ್ಮ ಸೇರಿದಂತೆ ಸುಮಾರು 80 ಕ್ಕೂ ಹೆಚ್ಚು ಪ್ರತಿಟನಾಕಾರರನ್ನು ವಶಕ್ಕೆ ಪಡೆದು 3 ವಾಹನಗಳಲ್ಲಿ ಮಂಡ್ಯದ ಪೊಲೀಸ್ ಠಾಣೆಗೆ ಕರೆದೋಯ್ದರು.

ಪ್ರತಿಭಟನೆಯಲ್ಲಿ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರೈತ ಪರ ಹೋರಾಟಗಾತಿ ಸುನಂದಾ ಜಯರಾಮ್ ಮಾತನಾಡಿ, ನಗರಸಭೆಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ನಿರಂತರವಾಗಿ 50 ದಿನಗಳ ಹೋರಾಟವನ್ನು ನಡೆಸುತ್ತಿದ್ದರೂ, ಸಕರ್ಾರದ ಯಾವುದೇ ಪ್ರತಿನಿಧಿಗಳು ಅಧಿಕಾರಿಗಳು ರೈತರ, ಗ್ರಾಮಸ್ಥರು ಆಶೋತ್ತರಗಳಿಗೆ ಸ್ಪಂದಿಸದೆ ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಿದರು.

ಇದರ ವಿರುದ್ಧವಾಗಿ ಗೆಜ್ಜಲಗೆರೆ ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆ ತಡೆಯಲು ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡಲು ಹೊರಟಾಗ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅವಕಾಶ ಮಾಡಿಕೊಡದೆ ರೈತರ ಹೋರಾಟವನ್ನು ದಿಕ್ಕು ತಪ್ಪಿಸುವ ಸಲುವಾಗಿ ರೈತರನ್ನು, ಮಹಿಳೆಯರು ಮತ್ತು ಗ್ರಾಮಸ್ಥರನ್ನು ಭಯಭೀತರನ್ನಾಗಿ ಮಾಡುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಮಾರು 80 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಬಂಧಿಸಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಲಗೆರೆ ಗ್ರಾಪಂಯನ್ನು ಮದ್ದೂರು ನಗರಸಭೆಯಿಂದ ಕೈ ಬಿಡುವತನಕ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ನಿರಂತರವಾಗಿ ಮುಂದುವರೆಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ಭಾಗವಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಚಂದ್ರಶೇಖರ್, ಲಿಂಗಪ್ಪಾಜಿ, ಮುದ್ದೇಗೌಡ್ರು, ಕೆ.ಬೊರೇಗೌಡ, ವಿರೇಶ್, ಗುರುಮೂತರ್ಿ, ಮಂಜಣ್ಣ, ಜಗದೀಶ್, ರಾಮಲಿಂಗಯ್ಯ, ಯೋಗೇಶ್ ಸೇರಿದಂತೆ ಇತರರು ಇದ್ದರು.

Continue Reading

Mandya

ಕೆಲವು ತತ್ವಗಳನ್ನು ಆಧರಿಸಿ ಕೇಂದ್ರದ ಬಜೆಟ್ ಮಂಡಿಸಲಾಗಿದೆ : ಡಾ.ಸಿ.ಎನ್.ಅಶ್ವತ್‌ನಾರಾಯಣ್

Published

on

ಮಂಡ್ಯ: ಕೆಲವು ತತ್ವಗಳನ್ನು ಆಧರಿಸಿ ಕೇಂದ್ರದ ಬಜೆಟ್ ಮಂಡಿಸಲಾಗಿದೆ. ಅಸ್ಪಷ್ಟತೆಗಿಂತ ಕ್ರಿಯೆ. ಆಡಂಭರಕ್ಕಿಂತ ಸುಧಾರಣೆಗೆ, ಜನಪ್ರಿಯತೆಗಿಂತ ಜನ ಹಿತಕ್ಕೆ ಒತ್ತು ನೀಡಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್‌ನಾರಾಯಣ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ತವ್ಯ ಭವನದಲ್ಲಿ ಮಂಡನೆಯಾದ ಮೊದಲ ಬಜೆಟ್ ಇದಾಗಿದೆ. ಆತ್ಮ ನಿರ್ಭರ ಭಾರತ್, ಸ್ವಾವಲಂಭಿ ವಿಕಸಿತ ಭಾರತವನ್ನು ಗುರಿಯಾಗಿಸಿಕೊಂಡು, ಉದ್ಯೋಗ ಸೃಷ್ಠಿ, ಕೃಷಿ ಉತ್ಪಾದನೆ, ನಾಗರೀಕರು ಕೊಳ್ಳುವ ಉದ್ದೇಶದಿಂದ ಬಜೆಟ್ ತಯಾರಿಸಲಾಗಿದೆ. ಆರ್ಥಿಕ ಕ್ಷೇತ್ರಕ್ಕೆ ವೇಗನೀಡುವುದು, ನಾಗರೀಕ ಆಶಯಗಳನ್ನು ಈಡೇರಿಸುವುದು, ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸುವ ೩ ಭಾಗವಾಗಿ ವಿಂಗಡಿಸಲಾಗಿದೆ ಎಂದರು.


ಪ್ರತಿನಿತ್ಯ ಹೆಚ್ಚಿನ ಸುಧಾರಣೆ ತರಲು 350 ಅಂಶಗಳ ಆಧಾರದಲ್ಲಿ ಬಜೆಟ್ ಮಂಡಿಸಲಾಗಿದೆ. ನಿಯಂತ್ರಕ ಸುಧಾರಣೆಗಳ ಸಮಿತಿ, ಜನ್‌ವಿಶ್ವಾಸ್ ಕಾಯ್ದೆ, ಬ್ಯಾಂಕಿಂಗ್ ಸುಧಾರಣೆ, ಆರ್ಥಿಕ ಬೆಳವಣಿಗೆ ಮತ್ತು ಹಣಕಾಸು ಶಿಸ್ತು, ಮಧ್ಯಮವರ್ಗದ ಸಬಲೀಕರಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಠಿ, ಗುಣಮಟ್ಟದ ಶಿಕ್ಷಣದ ಮೂಲಕ ಯುವಶಕ್ತಿ ಸಬಲೀಕರಣ, ಸಣ್ಣ ಉದ್ಯಮಗಳ ಸಾಮರ್ಥ್ಯದ ಅನಾವರಣ, ಬೃಹತ್ ಪ್ರಮಾಣದ ಉತ್ಪಾದನಾ ವಿಸ್ತರಣೆ, ಮೂಲ ಸೌಕರ್ಯ ಆಧಾರಿತ ಬೆಳವಣಿಗೆ ಸೇರಿದಂತೆ ಹಲವು ಅಭಿವೃದ್ಧಿ ಸಹಿತ ಸುಧಾರಣೆಗಳ ಅಂಶ ಬಜೆಟ್‌ನಲ್ಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ದೇಶದ ಶೇ.80 ರಿಂದ 90 ಷ್ಟು ವಿದ್ಯುತ್ ಉಪಕರಣಗಳ ವಿನ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಉತ್ಪಾದನೆ, ಅತ್ಯುತ್ತಮ ಭದ್ರತೆ ಆಧಾರಿತ ಉಪಕರಣ ಉತ್ಪಾದನೆ ಕರ್ನಾಟಕದಲ್ಲೇ ಆಗುತ್ತಿದೆ. ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೈಗಾರಿಗಳು ಬೆಂಗಳೂರು ಸುತ್ತಮುತ್ತಲಲ್ಲಿ ಜಮೀನಿಗೆ ಮುಂದಾಗುತ್ತಿದ್ದಾರೆ. ಮಂಡ್ಯದ ನಾಗಮಂಗಲ, ಕೆ.ಆರ್.ಪೇಟೆಯಲ್ಲಿ, ರಾಮನಗರ ಜಿಲ್ಲೆಗಳಲ್ಲಿ ಕೈಗಾರಿಕೆ ವಿಸ್ತರಣೆ ಪ್ರಯತ್ನಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕೆಗೆ ಆದ್ಯತೆ ರಾಜ್ಯವಾಗಿದೆ ಎಂದು ನುಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಮಾತನಾಡಿದ್ದಾರೆ. ಆದರೆ ರಾಜ್ಯ ಸರಕಾರ ಸ್ಪಂಧಿಸಿದರೆ ಕೈಗಾರಿಕೆ ತರಲು ಸಾಧ್ಯವಾಗುತ್ತದೆ. ಕೈಗಾರಿಕೆ ಸ್ಥಾಪಿಸುವ ವ್ಯಕ್ತಿತ್ವ, ಶಕ್ತಿ ಕುಮಾರಸ್ವಾಮಿ ಅವರಲ್ಲಿದೆ ಎಂದು ಉತ್ತರ ನೀಡಿದರು.

ತೆರಿಗೆ ಹಂಚಿಕೆಯನ್ನು ಸಂವಿಧಾನಿಕ ಸಂಸ್ಥೆಯಾದ ಹಣಕಾಸು ಆಯೋಗ ಮಾಡಲಿದೆ. ಈ ಸಂಸ್ಥೆ ಪಾರದರ್ಶಕ ಸಂಸ್ಥೆಯಾಗಿದ್ದು, ಸರಕಾರದ ಹಸ್ತಕ್ಷೇಪವಿಲ್ಲ, ಎಲ್ಲ ರಾಜ್ಯ ಸರಕಾರವನ್ನು ವಿಶ್ವಾಸಕ್ಕೆ ಪಡೆದು ತೆರಿಗೆ ಹಂಚಲಾಗುತ್ತದೆ. 16ನೇ ಆಯೋಗದ ಹಂಚಿಕೆಯಂತೆ ಶೇ.0.50ರಷ್ಟು ಹಂಚಿಕೆಯಲ್ಲಿ ಹೆಚ್ಚಳವಾಗಿರುವುದು ಸಂತಸದ ವಿಷಯ ಎಂದು ಹೇಳಿದರು.

ಮೈಸೂರು ವಿವಿಯ ಮೇಲೆ ಆಧಾರವಾಗಿದ್ದಾಗ ಮೈಸೂರು ಜಿಲ್ಲೆಯಲ್ಲಿ ಶೇ.50ರಷ್ಟು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಶೇ.10ರಷ್ಟು ಪದವೀಧರರ ಸೃಷ್ಠಿಯಾಗತ್ತುತ್ತು. ಎಲ್ಲ ಜಿಲ್ಲೆಗಳು ಮುಕ್ತವಾಗಿ ಶೈಕ್ಷಣಿ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತಿರಲಿಲ್ಲ. ಆಯಾ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಗಳ ಸೃಷ್ಠಿಯಿಂದ ಶೈಕ್ಷಣಿಕ ಗುಣಮಟ್ಟ, ಸಮಸ್ಯೆಗಳ ಇತ್ಯರ್ಥ ಶೇಕಡಾವಾರು ಹೆಚ್ಚಾಗಿದೆ ಎಂದರು.

ಬಿಜೆಪಿ, ಜೆಡಿಎಸ್ ಪಕ್ಷಗಳ ಮೈತ್ರಿಯು ದೇವೇಗೌಡರು ಹಾಗೂ ನರೇಂದ್ರ ಮೋದಿ ಅವರ ಮಟ್ಟದಲ್ಲಿ ಆಗಿದೆ. ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಪಯಾರ್ಯವಾದ ವ್ಯವಸ್ಥೆ ಸೃಷ್ಠಿಸುವಲ್ಲಿ ಮೈತ್ರಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದು, ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ರಾಷ್ಟ್ರ ಮಟ್ಟದಲ್ಲಿ ಸಕ್ರಿಯಾಗಿರುವ ಮೈತ್ರಿಯು ರಾಜ್ಯ, ಜಿಲ್ಲಾ ಮಟ್ಟದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.

ಮೆಟ್ರೋ ದರ ಏರಿಕೆ ಮಾಡಲು ಬೆಂಗಳೂರು ದೇಶದ ನಂಬರ್ 1 ನಗರವಲ್ಲ. ಆಯಾ ನಗರದ ರಾಜ್ಯದ ಸದಸ್ಯರುಳ್ಳ ಸದಸ್ಯರಿಂದಲೇ ಮೆಟ್ರೊ ದರ ನಿಗದಿಯಾಗಲಿದೆ. ನಗರದಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಆದ್ದರಿಂದ ಮೆಟ್ರೊ, ಸಾರಿಗೆ, ರೈಲ್ವೆಗೆ ಸರಕಾರ ಆದ್ಯತೆ ನೀಡುತ್ತಿಲ್ಲ. ಜನರಿಗೆ ಕೈಗೆಟುವ ದರ ನಿಗದಿ ಮಾಡುವ ನಿಟ್ಟಿನಲ್ಲಿ ಈಗಿರುವ ದರಕ್ಕೆ ಸಬ್ಸಿಡಿ ಘೋಷಿಸಿ ಶೇ.೫೦ರಷ್ಟು ಇಳಿಸಬೇಕು. ನಿರ್ವಹಣೆ ಕಷ್ಟವಾದಲ್ಲಿ ಬೆಂಗಳೂರು ನಗರವನ್ನು ಕೇಂದ್ರಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಸಚ್ಚಿದಾನಂದ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಎಸ್.ಪಿ.ಸ್ವಾಮಿ ಇತರರಿದ್ದರು.

Continue Reading

Mandya

ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ : ಮನೋಜ್ ಕುಮಾರ್ ಮೀನಾ

Published

on

ಮಂಡ್ಯ: ಸದರಿ ವರ್ಷ ಜಿಲ್ಲೆಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಬೆಳೆ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಹಶೀಲ್ದಾರ್ ಗಳು ವಿಶೇಷ ಮುತುವರ್ಜಿ ಕೆರೆಗಳನ್ನು ತೆರವುಗೊಳಿಸಿ ನಂತರ ಸದರಿ ಕೆರೆಯ ಜಾಗದಲ್ಲಿ ಒತ್ತುವರಿಯಾಗದಂತೆ ತಂತಿ ಬೇಲಿ ಮತ್ತು ಸೂಚನಾ ಫಲಕ ಅಳವಡಿಸಿ. ಜಿಲ್ಲೆಯಲ್ಲಿ ಇದುವರೆಗೆ 232 ಗ್ರಾಮ ಪಂಚಾಯಿತಿಗಳಲ್ಲಿ ಪೌತಿ ಖಾತಾ ಆಂದೋಲನ ನಡೆಸಿ 67659 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ 21 ಕಂತುಗಳಲ್ಲಿ ರೂ 892.08 ಕೋಟಿ ಹಣವನ್ನು ನೀಡಲಾಗಿದೆ. ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಕೈಜೋಡಿಸಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೃಷಿಯಿಂದ ಉದ್ಯಮ ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತಾಗಿ ತರಬೇತಿ ನೀಡಿ ಅರ್ಹ ಸೌಲಭ್ಯ ಕಲ್ಪಿಸಿ ಜಿಲ್ಲೆಯ ಯುವಕರನ್ನು ನಿರುದ್ಯೋಗದಿಂದ ಮುಕ್ತಗೊಳಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜನರಿಗೆ ಜಲ ಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸಿ. ಪ್ರತಿ ವಾರ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಎಂದು ಸೂಚಿಸಿದರು.

ನಲ್ ಜಲ್ ಯೋಜನೆಯಡಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಸದರಿ ಹೆಣ್ಣು ಮಕ್ಕಳಿಗೆ ಕೇವಲ ತರಬೇತಿ ನೀಡಿದರೆ ಸಾಲದು ತರಬೇತಿಗೆ ತಕ್ಕ ಹಾಗೆ ಕೆಲಸಗಳನ್ನು ನೀಡಿ ಆಗ ಮಾತ್ರ ತರಬೇತಿ ನೀಡಿದ್ದಕ್ಕೆ ಅರ್ಥ ದೊರೆಯುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಾಥಮಿಕದಲ್ಲಿಯೇ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುಲಯವಂತೆ ಅರಿವು ಮೂಡಿಸಿ. ಸರ್ಕಾರಿ ಕಚೇರಿಗಳಲ್ಲಿಯೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಬೇಕು ಇಲ್ಲಿಂದಲೇ ಜಾಗೃತಿ ಶುರುವಾದರೆ ಸಾರ್ವಜನಿಕರಿಗೆ ಅರಿವು ಮೂಡಿಸಿದಂತಾಗುತ್ತದೆ. ಮಂಡ್ಯ ಸುಂದರವಾದ ನಗರ ಮಂಡ್ಯದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಜಿಲ್ಲೆಯಲ್ಲಿ ಕಸಗಳನ್ನು ಸಂಗ್ರಹಿಸಿ ಬೆಂಕಿ ಹಾಕದಿರುವಂತೆ ನೋಡಿಕೊಳ್ಳಬೇಕು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಡೆಸಿ ಎಂದು ಹೇಳಿದರು.

ಜಿಲ್ಲೆಯ ಅಂಗನವಾಡಿಗಳಲ್ಲಿ 61 ಸಾವಿರಕ್ಕೂ ಹೆಚ್ಚು ಮಕ್ಕಳು ಇದ್ದು ಸದರಿ ಮಕ್ಕಳಿಗೆ ಪೌಷ್ಟಿಕ ಕೊರತೆ ಉಂಟಾಗದಂತೆ ಕ್ರಮ ವಹಿಸಿ. ಗುಣಮಟ್ಟದ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಿ. ಸದರಿ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ವಿಶೇಷವಾಗಿ ಭಾಷಾ ವಿಷಯ ಹಾಗೂ ಗಣಿತ ವಿಷಯಗಳಲ್ಲಿ ಮೇಲೆ ಹೆಚ್ಚಿನ ಒತ್ತು ನೀಡಿ. ಶಾಲಾ ಶಿಕ್ಷಕರು ಮಕ್ಕಳಿಗೆ ಸೂಕ್ತವಾಗಿ ಪಾಠ ಪ್ರವಚನಗಳನ್ನು ನಡೆಸುತ್ತಿದ್ದಾರ ಎಂದು ಪರಿಶೀಲನೆ ನಡೆಸಿ ಎಂದು ಹೇಳಿದರು.

ಮಕ್ಕಳು ದೇಶದ ಭವಿಷ್ಯ ಅವರ ಶಿಕ್ಷಣಕ್ಕೆ ಕೊರತೆ ಉಂಟಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಹಾಗೂ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಎದುರಿಸಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಮಕ್ಕಳ ಫಲಿತಾಂಶವನ್ನು ಹೆಚ್ಚಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ಆಸ್ತಿ ತೆರಿಗೆಯ ವಸೂಲಾತಿಯಲ್ಲಿ ಈಗಾಗಲೇ ಶೇ 89 ರಷ್ಟು ತೆರಿಗೆಯನ್ನು ಸಂಗ್ರಹಿಸಲಾಗಿದೆ. ಉಳಿದ ತೆರಿಗೆಯನ್ನು ಮಾರ್ಚ್ ಮಾಹೆಯ ಅಂತ್ಯದೊಳಗೆ ಸಂಗ್ರಹಿಸಲಾಗುತ್ತದೆ. ಹಸಿ ಕಸ ಮತ್ತು ಒಣ ಕಸ ಗಳನ್ನು ಪ್ರಾಥಮಿಕ ಹಂತದಲ್ಲಿಯೇ ಬೇರ್ಪಡಿಸುವಂತೆ ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಶೇ 84 ರಷ್ಟು ಜಿಲ್ಲೆಯ ಜನರ ಆಧಾರ್ ಸೀಡಿಂಗ್ ಈಗಾಗಲೇ ಮಾಡಲಾಗಿದೆ. ಉಪ ವಿಭಾಗಾಧಿಕಾರಿಗಳು ಜವಾಬ್ದಾರಿ ವಹಿಸಿ ಒಂದು ವರ್ಷಕ್ಕಿಂತ ಹಳೆಯ ಕಂದಾಯ ಪ್ರಕರಣಗಳನ್ನು ವಿಲೇವಾರಿ ಮಾಡಿ. ನಮ್ಮಲ್ಲಿ ಬೇಸಿಗೆ ಕಾಲಕ್ಕೆ ಸಾಕಷ್ಟು ನೀರು ಲಭ್ಯವಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಎಂ ಎಲ್ ಎ ಮತ್ತು ಎಂ ಎಲ್ ಸಿ ಕಾಮಗಾರಿಗಳಲ್ಲಿ ಬಾಕಿ ಇರುವ ಶೀಘ್ರವಾಗಿ ಪೂರ್ಣಗೊಳಿಸಿ. ಸದರಿ ವರ್ಷ ಪಿ. ಎಂ.ಎಫ್ .ಎಂ ಇ ಯೋಜನೆಯಡಿ ಜಿಲ್ಲೆಯ 328 ಅರ್ಹ ರೈತ ಫಲಾನುಭವಿಗಳಿಗೆ 83.42 ಕೋಟಿ ಸಾಲ ಹಾಗೂ 27.72 ಕೋಟಿ ಸಹಾಯಧನವನ್ನು ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಶೇ 79 ರಷ್ಟು ಕಾಮಗಾರಿ ಮುಗಿದಿದ್ದು ಅನುದಾನದ ಕೊರತೆಯಿಂದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯಾವಾಗಿರುವುದಿಲ್ಲ ಎಂದು ಹೇಳಿದರು.

ಎನ್ ಆರ್ ಎಲ್ ಎಂ ಯೋಜನೆಯಡಿ ಜಿಲ್ಲೆಯ ಸ್ವ ಸಹಾಯ ಗುಂಪಿನ ಅರ್ಹ ಮಹಿಳಾ ಫಲಾನುಭವಿಗಳು ತಮ್ಮ “ಅಕ್ಕನ ಮೀನು ಊಟ” ಉದ್ಯಮದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಮತ್ತು ಮೀನುಗಳಿಗೆ ನೀಡಬೇಕಾದ ಆಹಾರ ಕ್ರಮಗಳ ಕುರಿತು ತಿಳಿಸಿ ಮೀನುಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ನೂತನವಾಗಿ ಅಕ್ಕನ ಬುತ್ತಿ ಎಂಬ ಹೊಸ ಯೋಜನೆಯನ್ನು ಎನ್ ಆರ್ ಎಲ್ ಎಂ ಯೋಜನೆಯಡಿ ರೂಪಿಸಲಾಗಿದ್ದು ಉತ್ತಮ ಗುಣಮಟ್ಟದ ಆಹಾರವನ್ನು ಕ್ಯಾಟರಿಂಗ್ ಮೂಲಕ ಸರ್ಕಾರಿ ಕಚೇರಿಗಳು ಮತ್ತು ಇನ್ನಿತರ ಸಂಸ್ಥೆಗಳಿಗೆ ಶುಚಿತ್ವದ ಆಹಾರವನ್ನು ನೀಡಲಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸುವ ಮದ್ದೂರು ವಡೆ, ಮೇಲುಕೋಟೆ ಪುಳಿಯೋಗರೆ ಮತ್ತು ಮಂಡ್ಯ ಬೆಲ್ಲಕ್ಕೆ ಜಿ.ಐ ಟ್ಯಾಗ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ ಮತ್ತು ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ

Published

on

ಮಂಡ್ಯ: ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ತೆರವುಗೊಳಿಸಿದ ಕೆರೆಗಳು ಮತ್ತೆ ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡಬೇಕು. ಕೆರೆ ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಳಾದ ಡಾ.ಕುಮಾರ ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಇದುವರೆಗೆ ಸುಮಾರು 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನು 203 ಕೆರೆಗಳ ತೆರವು ಬಾಕಿ ಉಳಿದಿದೆ. ಬಾಕಿ ಇರುವ ಕೆರೆ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.

ಪ್ರತಿ ತಿಂಗಳು ಕೆರೆ ಒತ್ತುವರಿ ಸಂಬಂಧ ಸಭೆ ನಡೆಸಲಾಗುತ್ತಿದ್ದು ಮಾರ್ಚ್ 30 ರೊಳಗೆ ಬಾಕಿ ಇರುವ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೖಗೊಳ್ಳಲಾಗುವುದು. ತೆರವುಗೊಳಿಸಿದ ಕೆರೆಗಳ ಸುತ್ತ ಟ್ರಂಚ್‌ಗಳನ್ನು (ಕಂದಕ) ನಿರ್ಮಿಸಿ, ನಾಮಫಲಕಗಳನ್ನು ಅಳವಡಿಸುವ ಮೂಲಕ ಮರು-ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು. ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಂಡ್ಯ ಉಪ ವಿಭಾಗಧಿಕಾರಿ ಶಿವಮೂರ್ತಿ, ಪಾಂಡವಪುರ ಉಪ ವಿಭಾಗಧಿಕಾರಿ ಶ್ರೀನಿವಾಸ್ ಡಿಡಿಎಲ್ ಆರ್ ವಿರುಪಾಕ್ಷ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

error: Content is protected !!