Kodagu
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಕವಿಗೋಷ್ಟಿ
ಕುಶಾಲನಗರ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಕವಿಗೋಷ್ಟಿ ನಡೆಯಿತು.
ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಕವಿಗಳು ತಮ್ಮ ಕವನವನ್ನು ಪ್ರಸ್ತುತ ಪಡಿಸಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಒಳಚರಂಡಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆಯಲ್ಲಿ ನೀಡಿದರು. ಸಾಹಿತ್ಯದ ನುಡಿಗಳನ್ನು ಹಿರಿಯ ಸಾಹಿತಿ ಭಾರಧ್ವಜ್ ಆನಂದ ತೀರ್ಥ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ರಘುಕೋಟಿ ವಹಿಸಿದರು. ವೇದಿಕೆಯಲ್ಲಿ ರಾಣಿ ರವೀಂದ್ರ, ಮಾಲದೇವಿ ಮೂರ್ತಿ, ಉಪನ್ಯಾಸಕ ಮಹೇಂದ್ರ ಉಪಸ್ಥಿತರಿದ್ದರು.
Kodagu
ಕೊಡಗು ಆನೆ ಕಾವಾಡಿಗ ಹುದ್ದೆಗಳ ನೇರ ನೇಮಕಾತಿ
ಮಡಿಕೇರಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕೊಡಗು ವೃತ್ತಕ್ಕೆ ಸಂಬಂಧಿಸಿದಂತೆ (10 ಹುದ್ದೆಗಳು+1 ಬ್ಯಾಕ್‍ಲಾಗ್ ಹುದ್ದೆ) ಒಟ್ಟು 11 ಆನೆ ಕಾವಾಡಿಗ ಹುದ್ದೆಗಳಿಗೆ ಆಗಸ್ಟ್, 05 ರಿಂದ ಸೆಪ್ಟೆಂಬರ್, 03 ರವರೆಗೆ ಒಳಗೆ ಅರ್ಜಿ ಆಹ್ವಾನಿಸಲಾಗಿದೆ.

ಪೂರ್ಣ ಮಾಹಿತಿಯು ಇಲಾಖಾ ವೆಬ್‍ಸೈಟ್ http://aranya.gov.in ನಲ್ಲಿ ಲಭ್ಯವಿರುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ
Kodagu
ಬಂದ್ ನಿರ್ಧಾರ : ಜು. 29 ರಂದು ರೈತ ಸಂಘದ ಪ್ರಮುಖರ ಸಭೆ
ಪೊನ್ನಂಪೇಟೆ : ಬಿಡದಿ ರೈತಪರ ಹೋರಾಟಕ್ಕೆ ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಕ್ರಮ ಖಂಡಿಸಿ ಕೊಡಗು ಬಂದ್ ಕರೆ ನೀಡುವ ಪೂರ್ವಭಾವಿ ಸಭೆಯನ್ನು ಜುಲೈ 29 ರಂದು ಗೋಣಿಕೊಪ್ಪ ಮತ್ತು ಸೋಮವಾರಪೇಟೆಯಲ್ಲಿ ಸಭೆ ನಡೆಸಿ ಪ್ರಕಟಿಸಲಾಗುವುದು ಎಂದು ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಕಾನೂನು ಸಲಹೆಗಾರ ಹೇಮಚಂದ್ರ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಈ ಬಗ್ಗೆ ತಿಳಿಸಿದ ಅವರು, ಸಂಘ- ಸಂಸ್ಥೆ ಪ್ರಮುಖರು, ಪಕ್ಷಗಳ ಮುಖಂಡರು ಸೇರಿದಂತೆ ಪ್ರಮುಖರನ್ನು ಸಭೆಗೆ ಆಹ್ವಾನಿಸಿ ಬಂದ್ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬಂದ್ ನಡೆಸಲು ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಲಹೆ, ಮಾರ್ಗದರ್ಶನ ಪಡೆದು ಮುಂದುವರಿಯಲಾಗುವುದು. ಬುಧವಾರ ಬೆಳಗ್ಗೆ 10.30 ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣ ಮತ್ತು ಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು. ಈ ಬಗ್ಗೆ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಸ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

ಹೋರಾಟದಿಂದ ರೈತರನ್ನು ವಶಕ್ಕೆ ಪಡೆದು, ಸುತ್ತಾಡಿಸಿ, ಬಂಧನದಲ್ಲಿಟ್ಟಿರುವುದು ಪೊಲೀಸ್ ಇಲಾಕೆ ನಡೆ ಸರಿಯಾಗಿಲ್ಲ. ಮಹಿಳೆಯರು ಸೇರಿದಂತೆ ರೈತರು ಕೂಡ ಇದರಿಂದ ತೊಂದರೆ ಅನುಭವಿಸಲಾಗಿದೆ. ಇದರಿಂದಾಗಿ ಕ್ರಮವನ್ನು ಖಂಡಿಸಿ ಮುಂದುವರಿಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ, ಬೆಂಬಲವನ್ನು ಪಡೆದು ಮುಂದುವರಿಯಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ. ಎಂ. ದಿನೇಶ್ ಮಾತನಾಡಿ, ರೈತರನ್ನು ನಡೆಸಿಕೊಂಡ ರೀತಿಯನ್ನು ರೈತ ಸಂಘ ಖಂಡಿಸುತ್ತದೆ. ರೈತರನ್ನು ಕಡೆಗಣಿಸಿ ಸರ್ಕಾರ ಉಳಿದಿರುವ ಇತಿಹಾಸವಿಲ್ಲ. ಇದರಿಂದಾಗಿ ಕ್ರಮವನ್ನು ಖಂಡಿಸಲು ಸೂಕ್ತ ನಿದೇರ್ಶನ ಪಡೆದುಕೊಂಡು ಮುಂದುವರಿಯಲು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಪುಚ್ಚಿಮಾಡ ರಾಯ್ ಮಾದಪ್ಪ ಮಾತನಾಡಿ, ನಾವು ಯಾವ ಪಕ್ಷದ ಬೆಂಬಲ ಪಡೆದು ಹೋರಾಟ ನಡೆಸುತ್ತಿಲ್ಲ. ಇಲ್ಲಿವರೆಗೂ ಸಂಘ ರೈತ ಪರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಯಾವ ಪಕ್ಷದ ಬೆಂಬಲವನ್ನು ಕೇಳಿಲ್ಲ ಎಂದು ತಿಳಿಸಿದರು. ಈಗಿನ ಶಾಸಕ ಎ. ಎಸ್. ಪೊನ್ನಣ್ಣ ಅವರಿಗೆ ಮೊದಲ ಬಾರಿಗೆ ಮಡಿಕೇರಿ ರೈತ ಭವನದಲ್ಲಿ ನಡೆದ ಹೋರಾಟದಲ್ಲಿ ಮೊದಲ ಬಾರಿಗೆ ವೇದಿಕೆ ನೀಡುವ ಮೂಲಕ ಅವಕಾಶ ಮಾಡಿಕೊಟ್ಟಿದೆ. ನಮ್ಮ ಸಂಘದ ಅಧ್ಯಕ್ಷರ ಹಿಂದೆ ನಿಂತು ಅವರು ಹೋರಾಟದಲ್ಲಿ ಭಾಗಿಯಾಗಿರುವುದನ್ನು ಕೂಡ ನಡೆದಿತ್ತು. ಪಕ್ಷದ ಪರವಾಗಿ ನಾವು ತೊಡಗಿಕೊಂಡಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಜಿಲ್ಲಾ ಉಪಾಧ್ಯಕ್ಷ ಹೂವಯ್ಯ, ಸೋಮವಾರಪೇಟೆ ತಾಲುಕು ಸಂಚಾಲಕ ಎಚ್. ಇ. ರಮೇಶ್, ಪ್ರಮುಖರಾದ ಪೂಣಚ್ಚ, ಶಶಿ ಪೂಣಚ್ಚ, ಕಾಮೇಯಂಡ ಚಂಗಪ್ಪ ಇತರರಿದ್ದರು.
Kodagu
ಕುಶಾಲನಗರದಲ್ಲಿ 27 ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ
ವರದಿ.ಟಿ.ಆರ್.ಪ್ರಭುದೇವ್
ಕುಶಾಲನಗರ: ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಕುಶಾಲನಗರ ಪುರಸಭೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನದಿ ತಟದಲ್ಲಿ 27 ಗಿಡಗಳನ್ನು ನಡುವೆ ಮೂಲಕ 27ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯೋಧರಿಗೆ ನಮನ ಸಲ್ಲಿಸಲಾಯಿತು.ಕುಶಾಲನಗರ -ಕೊಪ್ಪ ಗಡಿಭಾಗದ ಸೇತುವೆ ಕೆಳಭಾಗದ ನದಿ ತಟದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಹವಾಲ್ದಾರ್ ಆಮೆ ಜನಾರ್ಧನ್ (ನಿ) ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕಾರ್ಗಿಲ್ ಯುದ್ಧ ಸಂದರ್ಭದ ಮಾಹಿತಿ ಮೆಲುಕು ಹಾಕಿದರು. ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಸ್ಮರಣೆ ಮಾಡಬೇಕು. ದೇಶಪ್ರೇಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಹಾದಿ ತಪ್ಪದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಕಾರ್ಗಿಲ್ ವಿಜಯೋತ್ಸವ ಹಾಗೂ ಬಲಿದಾನಗೈದ ಯೋಧರ ಹೆಸರಿನಲ್ಲಿ ಪರಿಸರ ಪೂರಕ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಉದ್ಯಮಿ ಅಮ್ಜದ್, ಕಾವೇರಿ ಸ್ವಚ್ಛತಾ ಅಭಿಯಾನದ ಪ್ರಮುಖರಾದ ವನಿತಾ ಚಂದ್ರಮೋಹನ್ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ಸಂದರ್ಭ ಹುತಾತ್ಮರಾದ ಯೋಧರ ಸ್ಮರಣೆ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಪುರಸಭೆ ನೌಕರ ಬಣ್ಣಾರಿ, ಮತ್ತು ಪೌರಕಾರ್ಮಿಕರು ಪಾಲ್ಗೊಂಡಿದ್ದರು.
-
Chamarajanagar9 hours agoಅಕ್ರಮ ಪಡಿತರ ಅಕ್ಕಿ ಸಾಗಣೆ: ಆರೋಪಿ ಬಂಧನ
-
Chamarajanagar10 hours agoಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ನಿವೃತ್ತ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ
-
Manglore3 hours agoಖೋಟಾನೋಟು ಜಾಲ ಪ್ರಕರಣ: ಐನ್ನೂರರ ನೋಟುಗಳು ಮಾರುಕಟ್ಟೆಗೆ ತಲುಪುವ ಮೊದಲೇ ಬಯಲಾಯ್ತು ಹೈಟೆಕ್ ಸಂಚು!
-
Special2 hours agoNEET ಪ್ರತಿಭಟನೆ ವೇಳೆ ಜಂತರ್ ಮಂತರ್ ನಲ್ಲಿ ಅರಳಿದ ಪ್ರೀತಿ : ದೆಹಲಿ ವಿದ್ಯಾರ್ಥಿನಿಯನ್ನ ವಿವಾಹವಾದ ಬಿಹಾರ ಯುವಕ!!
-
Special3 hours agoಜಿರಳೆ ಪಕ್ಷಕ್ಕೆ 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು : ಕಪಿಲ್ ಸಿಬಲ್ ಘೋಷಣೆ!!
-
Special34 minutes agoಮತ್ತೊಬ್ಬಳು ನೀಟ್ ವಿದ್ಯಾರ್ಥಿನಿ ಆತ್ಮಹ*ತ್ಯೆ!!
-
Hassan8 hours agoಮನೆಯಲ್ಲೇ ಕೈಚಳಕ: ಪ್ರಿಯಕರನಿಗೆ ಚಿನ್ನ-ನಗದು ಕೊಟ್ಟ ಸೊಸೆ ಬಂಧನ
-
State14 hours agoಮಾರ್ಫ್ ಫೋಟೋಗಳ ಬೆದರಿಕೆ: ₹48 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ, ಸೈಬರ್ ವಂಚಕರ ಹೊಸ ತಂತ್ರಕ್ಕೆ ಎಚ್ಚರ!!
