Connect with us

Special

ಪಿಎಂ ಕಿಸಾನ್ 20ನೇ ಕಂತಿನ 2,000ರೂ. ಹಣ ಜಮಾ : ನಿಮ್ಮ ಖಾತೆಗೆ ಹಣ ಬರಬೇಕಾದರೆ ಈ 5 ಕೆಲಸ ಮಾಡಿ

Published

on

PM Kisan 20th Installment Credit – ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಪ್ರತಿ ಕಂತಿಗೆ 2,000 ರೂಪಾಯಿಯಂತೆ ಇಲ್ಲಿಯವರೆಗೆ ಒಟ್ಟು 19 ಕಂತು ಹಣ ಬಿಡುಗಡೆ ಮಾಡಿದ್ದಾರೆ.

19ನೇ ಕಂತಿನ ಹಣವನ್ನು ಕಳೆದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ರೈತರು 20ನೇ ಕಂತಿನ ಹಣಕ್ಕೆ ಕಾಯುತ್ತಿದ್ದು, ಯಾವಾಗ ಜಮಾವಾಗಲಿದೆ? ಜಮಾವಾಗಬೇಕೆಂದರೆ ಏನು ಮಾಡಬೇಕು? ಜಮವಾದ ಸ್ಟೇಟಸ್ ಅನ್ನು ಹೇಗೆ ಪರಿಶೀಲಿಸುವುದು ಎಂಬ ಮಾಹಿತಿ ಇಲ್ಲಿದೆ.

20ನೇ ಕಂತಿನ ಹಣ ಯಾವಾಗ ಜಮಾವಾಗಲಿದೆ?

ಆಗಸ್ಟ್ 2ನೇ 2025ರಂದು ರೈತರ ಖಾತೆಗೆ 2000ರೂ. ಹಣ ಜಮವಾಗಲಿದೆ.

ಜಮವಾಗಲು ಈ ಕೆಳಗಿನ ಕೆಲಸಗಳನ್ನು ಕಡ್ಡಾಯವಾಗಿ ಮಾಡಿ :
• ಇ – ಕೆವೈಸಿ ಆಗಿದೆಯಾ ಇಲ್ಲವೋ ಎಂಬುದನ್ನು ಪರಿಶೀಲಿಸಿ. ಆಗಿರದೆ ಇದ್ದರೆ ಕೂಡಲೇ ಹತ್ತಿರದ ಗ್ರಾಮ ಒನ್ ಸೆಂಟರ್ ಗೆ ಭೇಟಿ ನೀಡಿ ಇ – ಕೆವೈಸಿ ಕಡ್ಡಾಯವಾಗಿ ಮಾಡಿಸಿ.
• ನೋಂದಾಯಿತ ಮೊಬೈಲ್ ನಂಬರನ್ನು ನವೀಕರಿಸಿ – ಟಿಎಂ ಕಿಸಾನ್ ಯೋಜನೆಗೆ ನೀವು ನೊಂದಾಯಿಸಿದ ಮೊಬೈಲ್ ನಂಬರ್ ಹಳೆಯದಾಗಿದ್ದರೆ ಅಥವಾ ಅದು ಅಸ್ತಿತ್ವದಲ್ಲಿರದೆ ಇದ್ದರೆ, ಅದನ್ನು ನವಿಕರಿಸಿ.

• ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿ : ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಇರದೇ ಇದ್ದರೆ ಅದನ್ನು ಕೂಡ ನವೀಕರಿಸಿ.

ನಿಮ್ಮ ಖಾತೆಗೆ ಹಣ ಜಮಾವಾಗಿರುವುದರ ಬಗ್ಗೆ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ “Beneficiary Status” ಮೇಲೆ ಒತ್ತಿ ಲಾಗಿನ್ ಆಗಿರಿ. ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿದರೆ ನಿಮ್ಮ ಖಾತೆಗೆ ಜಮವಾಗಿರುವದರ ಬಗ್ಗೆ ತಿಳಿದುಕೊಳ್ಳಿ.

Continue Reading

Special

LPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!

Published

on

ದೇಶದಾದ್ಯಂತ LPG ಗ್ಯಾಸ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಹೊಸ ನಿಯಮಗಳ ಪ್ರಕಾರ eKYC, OTP ಆಧಾರಿತ ಡೆಲಿವರಿ ಹಾಗೂ ಸಿಲಿಂಡರ್ ಬುಕ್ಕಿಂಗ್‌ಗೆ ಸಂಬಂಧಿಸಿದ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಕೆಲವರ ಗ್ಯಾಸ್ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಹೊಸ ನಿಯಮಗಳಲ್ಲಿ ಏನು ಬದಲಾವಣೆ?
ಈಗಿನಿಂದ LPG ಸಿಲಿಂಡರ್ ಡೆಲಿವರಿ ಪಡೆಯಲು OTP ಅಥವಾ Delivery Authentication Code (DAC) ಕಡ್ಡಾಯವಾಗಿದೆ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ ನಂತರ ಮೊಬೈಲ್‌ಗೆ OTP ಬರುತ್ತದೆ. ಡೆಲಿವರಿ ಸಮಯದಲ್ಲಿ ಆ OTP ನೀಡಿದ ನಂತರವೇ ಸಿಲಿಂಡರ್ ಹಸ್ತಾಂತರ ಮಾಡಲಾಗುತ್ತದೆ.

eKYC ಕಡ್ಡಾಯ:
ತೈಲ ಕಂಪನಿಗಳು LPG ಬಳಕೆದಾರರಿಗೆ eKYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿವೆ. Aadhaar ಲಿಂಕ್ ಮಾಡದ ಅಥವಾ eKYC ಪೂರ್ಣಗೊಳಿಸದ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಸಿಲಿಂಡರ್ ವಿತರಣೆ ತಡೆಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಬುಕ್ಕಿಂಗ್‌ಗೆ ಹೊಸ ನಿಯಮ:
ಹೊಸ ಮಾರ್ಗಸೂಚಿಯ ಪ್ರಕಾರ ಒಂದು ಸಿಲಿಂಡರ್ ಡೆಲಿವರಿ ಆದ ಬಳಿಕ ಮತ್ತೊಂದು ಬುಕ್ಕಿಂಗ್ ಮಾಡಲು ಕನಿಷ್ಠ 21 ರಿಂದ 25 ದಿನಗಳ ಅಂತರ ಇರಬೇಕು. ಕೆಲವು ಪ್ರದೇಶಗಳಲ್ಲಿ ಗ್ರಾಮೀಣ ಬಳಕೆದಾರರಿಗೆ 45 ದಿನಗಳವರೆಗೂ ಮಿತಿ ಇರಬಹುದು ಎಂದು ವರದಿಯಾಗಿದೆ.

ಡುಯಲ್ ಕನೆಕ್ಷನ್ ಮೇಲೆ ಕಣ್ಣು:
PNG ಮತ್ತು LPG ಎರಡನ್ನೂ ಒಂದೇ ಸಮಯದಲ್ಲಿ ಬಳಸುವ ಗ್ರಾಹಕರ ಮಾಹಿತಿಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಅನಗತ್ಯ ಅಥವಾ ಡುಪ್ಲಿಕೇಟ್ ಸಂಪರ್ಕಗಳನ್ನು ರದ್ದು ಮಾಡುವ ಸಾಧ್ಯತೆಯೂ ಇದೆ.

ಗ್ರಾಹಕರು ಏನು ಮಾಡಬೇಕು?:
•ತಕ್ಷಣ eKYC ಪೂರ್ಣಗೊಳಿಸಬೇಕು
•ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿರಬೇಕು
•ಅಧಿಕೃತ App ಅಥವಾ ವೆಬ್‌ಸೈಟ್ ಮೂಲಕವೇ ಬುಕ್ಕಿಂಗ್ ಮಾಡಬೇಕು
•OTP ಯಾರೊಂದಿಗೂ ಹಂಚಿಕೊಳ್ಳಬಾರದು

LPG ಹೊಸ ನಿಯಮಗಳು ಪಾರದರ್ಶಕತೆ ಹೆಚ್ಚಿಸಿ ಕಾಳಬಜಾರ್ ತಡೆಯುವ ಉದ್ದೇಶದಿಂದ ಜಾರಿಗೊಂಡಿವೆ. ಆದ್ದರಿಂದ ಗ್ರಾಹಕರು ಸಮಯಕ್ಕೆ ಸರಿಯಾಗಿ eKYC ಪೂರ್ಣಗೊಳಿಸಿ ಹೊಸ ನಿಯಮಗಳನ್ನು ಪಾಲಿಸುವುದು ಉತ್ತಮ.

Continue Reading

Special

ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!

Published

on

ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗಾಗಿ ಉಚಿತ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ತರಬೇತಿಯನ್ನು ಸಿಬಿಆರ್‌ಎಸ್‌ಇಟಿಐ (CBRSETI) ವತಿಯಿಂದ ನಡೆಸಲಾಗುತ್ತಿದ್ದು, ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.

31 ದಿನಗಳ ಉಚಿತ ತರಬೇತಿ:
ಈ ತರಬೇತಿ ಶಿಬಿರವು 31 ದಿನಗಳ ಕಾಲ ನಡೆಯಲಿದ್ದು, ಜೂನ್ 03 ರಿಂದ ತರಬೇತಿ ಶುರುವಾಗಲಿದೆ. ತರಬೇತಿಯಲ್ಲಿ ಫೋಟೋ ತೆಗೆಯುವ ತಂತ್ರಗಳು, ವಿಡಿಯೋ ಚಿತ್ರೀಕರಣ, ಕ್ಯಾಮೆರಾ ಬಳಕೆ, ಲೈಟಿಂಗ್‌, ಎಡಿಟಿಂಗ್‌, ಮದುವೆ ಮತ್ತು ಕಾರ್ಯಕ್ರಮಗಳ ಚಿತ್ರೀಕರಣ ಸೇರಿದಂತೆ ಹಲವು ಪ್ರಾಯೋಗಿಕ ವಿಷಯಗಳನ್ನು ಕಲಿಸಲಾಗುತ್ತದೆ.

ಇಂದಿನ ಡಿಜಿಟಲ್‌ ಯುಗದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

ಉಚಿತ ಊಟ ಮತ್ತು ವಸತಿ ಸೌಲಭ್ಯ:
ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಬಿಪಿಎಲ್‌ ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಸರ್ಕಾರ ಮಾನ್ಯತೆ ಹೊಂದಿದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.

ಅರ್ಹತೆ ಮತ್ತು ವಯೋಮಿತಿ:
18 ರಿಂದ 45 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಸ್ವಯಂ ಉದ್ಯೋಗದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಈ ತರಬೇತಿ ಹೆಚ್ಚು ಉಪಯುಕ್ತವಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ತಮ್ಮ ಆಧಾರ್‌ ಕಾರ್ಡ್‌, ವಿದ್ಯಾರ್ಹತೆ ದಾಖಲೆಗಳು ಮತ್ತು ವಿಳಾಸ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಗೆ ಪ್ರವೇಶ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಿಬಿಆರ್‌ಎಸ್‌ಇಟಿಐ ಸಂಸ್ಥೆಯನ್ನು ಸಂಪರ್ಕಿಸಬಹುದು. ಅಧಿಕೃತ ವೆಬ್‌ಸೈಟ್‌ ಮೂಲಕವೂ ಮಾಹಿತಿಯನ್ನು ಪಡೆಯಬಹುದು.

ಈ ರೀತಿಯ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳು ಯುವಕರಿಗೆ ಉದ್ಯೋಗ ಮತ್ತು ಸ್ವಂತ ವ್ಯವಹಾರ ಆರಂಭಿಸಲು ಸಹಕಾರಿಯಾಗಿವೆ.

Continue Reading

Special

ಗೃಹಲಕ್ಷ್ಮಿ ಯೋಜನೆಯಲ್ಲಿ 1.04 ಲಕ್ಷ ಅನರ್ಹ ಫಲಾನುಭವಿಗಳ ಪತ್ತೆ: ಸರ್ಕಾರದಿಂದ ಪರಿಶೀಲನೆ!

Published

on

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಅನರ್ಹರಿಗೆ ಹಣ ಪಾವತಿಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸುಮಾರು 1.04 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ಯೋಜನೆಯ ದುರುಪಯೋಗದಿಂದ ಸುಮಾರು ₹100 ಕೋಟಿ ಸಾರ್ವಜನಿಕ ಹಣ ಅನರ್ಹ ಖಾತೆಗಳಿಗೆ ಜಮೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕೆ ಪರಿಶೀಲನೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಆದೇಶಿಸಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿ, ಅರ್ಹತೆ ಕಳೆದುಕೊಂಡವರ ಹೆಸರಿನಲ್ಲಿ ಅಥವಾ ತಪ್ಪು ದಾಖಲೆಗಳ ಆಧಾರದ ಮೇಲೆ ಕೆಲವರು ಯೋಜನೆಯ ಪ್ರಯೋಜನ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ.

ಈಗಾಗಲೇ ನಡೆದ ಕ್ರಮಗಳು:
ಹಿಂದೆಯೂ ಸರ್ಕಾರ ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಿತ್ತು. ಕೆಲವು ಸಂದರ್ಭಗಳಲ್ಲಿ ಮೃತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿರುವುದು ಕಂಡುಬಂದಿದ್ದು, ಆ ಹಣವನ್ನು ವಾಪಸ್ ಪಡೆಯುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳು ಮಾಸಿಕ ಪರಿಶೀಲನೆ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲ:
ಸರ್ಕಾರ ಸ್ಪಷ್ಟಪಡಿಸಿರುವಂತೆ, ಈ ಕ್ರಮದ ಉದ್ದೇಶ ಯೋಜನೆಯ ಸೌಲಭ್ಯವನ್ನು ಕೇವಲ ಅರ್ಹ ಮಹಿಳೆಯರಿಗೆ ತಲುಪಿಸುವುದಾಗಿದೆ. ನಿಜವಾದ ಫಲಾನುಭವಿಗಳ ಪಾವತಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅರ್ಹತೆ ಹೊಂದಿರುವ ಮಹಿಳೆಯರು ತಮ್ಮ ದಾಖಲೆಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಯೋಜನೆಯ ಪಾರದರ್ಶಕತೆಗೆ ಒತ್ತು:
ಸರ್ಕಾರ ವಿವಿಧ ಇಲಾಖೆಗಳ ಮಾಹಿತಿಯನ್ನು ಒಟ್ಟುಗೂಡಿಸಿ ಏಕೀಕೃತ ಡೇಟಾಬೇಸ್ ನಿರ್ಮಿಸಲು ಯೋಜಿಸಿದೆ. ಇದರ ಮೂಲಕ ಫಲಾನುಭವಿಗಳ ಮಾಹಿತಿ ಪರಿಶೀಲನೆ ಸುಲಭವಾಗಲಿದ್ದು, ಭವಿಷ್ಯದಲ್ಲಿ ಅನರ್ಹರಿಗೆ ಸೌಲಭ್ಯ ಸಿಗುವುದನ್ನು ತಡೆಯಲು ನೆರವಾಗಲಿದೆ.

ಒಟ್ಟಾರೆ, ಗೃಹಲಕ್ಷ್ಮಿ ಯೋಜನೆಯ ಪಾರದರ್ಶಕತೆ ಮತ್ತು ಸಾರ್ವಜನಿಕ ಹಣದ ಸಮರ್ಪಕ ಬಳಕೆಯನ್ನು ಖಚಿತಪಡಿಸಲು ಸರ್ಕಾರ ಈ ಮಹತ್ವದ ಪರಿಶೀಲನಾ ಅಭಿಯಾನವನ್ನು ಆರಂಭಿಸಿದೆ.

Continue Reading

Trending

error: Content is protected !!