Uncategorized
ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶನ
ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಟೀಮ್ ಮತ್ತು ರೋಟರಿ ಕ್ಲಬ್ ಆಫ್ ಯಳಂದೂರು ಗ್ರೀನ್ ವೇ ಸಹಯೋಗದಲ್ಲಿ ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರೀನ್ ವೇ ನ ಅಧ್ಯಕ್ಷರು ಡಾ | ಸಾಗರ್ ವಿ ಜಿ, ಕಾರ್ಯದರ್ಶಿ ಬಂಗಾರು, ನಿಯೋಜಿತ ಕಾರ್ಯದರ್ಶಿ ನಿರಂಜನಾಸ್ವಾಮಿ ರೋಟರಿ ಆನ್ ವೀಲ್ಸ್ ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ಆಫ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಆಫ್ ಪುತ್ತೂರು ಯುವ ನ ಸದಸ್ಯರು, ಪಬ್ಲಿಕ್ ಇಮೇಜ್ ಛೇರ್ಮನ್ ಕೆ. ವಿಶ್ವಾಸ್ ಶೆಣೈ, ಮತ್ತು ಸಾರ್ವಜನಿಕರು ಹಾಜರಿದ್ದರ,
Chamarajanagar
ಮಕ್ಕಳ ಆಧಾರ್ ಬಯೋಮೆಟ್ರಿಕ್ ನೋಂದಣಿಗೆ ಶಿಬಿರ ಆಯೋಜಿಸಿ: ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
ಚಾಮರಾಜನಗರ : ಜಿಲ್ಲೆಯಲ್ಲಿರುವ 5 ವರ್ಷದ ಹಾಗೂ 15 ವರ್ಷದ ನಂತರದ ಮಕ್ಕಳು ಕಡ್ಡಾಯವಾಗಿ ಆಧಾರ್ ಕಾರ್ಡ್‍ಗೆ ಬಯೋಮೆಟ್ರಿಕ್ ನೋಂದಣಿ ಮಾಡಿಸಬೇಕಿದ್ದು, ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಆಂದೋಲನ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಪ್ರವೇಶ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಯೋಜನೆ, ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಇನ್ನೂ ಹಲವು ಉದ್ದೇಶಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ.
5 ಹಾಗೂ 15ನೇ ವರ್ಷದ ಮಕ್ಕಳ ಆಧಾರ್ ಗೆ ಬಯೋಮೆಟ್ರಿಕ್ ಅಪ್ ಡೇಟ್ ಕಡ್ಡಾಯವಾಗಿದೆ. ಹೀಗಾಗಿ ಶಾಲೆಗಳಲ್ಲಿಯೇ ಈ ಸೌಲಭ್ಯಕ್ಕಾಗಿ ಶಿಬಿರಗಳನ್ನು ಏರ್ಪಾಡು ಮಾಡುವಂತೆ ತಿಳಿಸಿದರು.

ಮಕ್ಕಳ ಆಧಾರ್ ಅಪ್ ಡೇಟ್ ಪ್ರಕ್ರಿಯೆಯನ್ನು ವಿಶೇಷ ಮಾದರಿಯಲ್ಲಿ ಕೈಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಶಾಲೆಗಳಲ್ಲಿ ಆಧಾರ್ ಅಪ್ ಡೇಟ್ ಶಿಬಿರಗಳಿಗೆ ದಿನಾಂಕಗಳನ್ನು ನಿಗದಿ ಮಾಡಿ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕು ಎಂದರು.
ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡದೆ ಇರುವವರ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿಗಳು ಈ ಕುರಿತು ತ್ವರಿತ ಗತಿಯಲ್ಲಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಎಂ ಆಧಾರ್ ಆಪ್ ನಲ್ಲಿ ಮೊಬೈಲ್ ಮೂಲಕ ಆಧಾರ್ ತಿದ್ದುಪಡಿಗೆ ಅವಕಾಶವಿದ್ದು, ವಿಳಾಸ ತಿದ್ದುಪಡಿಯನ್ನು ಸ್ವತಹ ಮಾಡಿಕೊಳ್ಳಬಹುದು. 10 ವರ್ಷಗಳ ಹಳೆಯ ಆಧಾರ್ ಕಾರ್ಡ್‍ಗಳನ್ನು ಸ್ವತಃ ಲಿಂಕ್ ಮೂಲಕ ನವೀಕರಿಸಿಕೊಳ್ಳಬಹುದು ಎಂದರು.
ಐಪಿಪಿಬಿ ಯ (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಹತ್ತಿರದ ಅಂಚೆ ಕಚೇರಿಗಳಲ್ಲಿ ಬಾಲ ಆಧಾರ್, 5 ವರ್ಷದ ಮಕ್ಕಳ ನೊಂದಣಿ ಮತ್ತು ಮೊಬೈಲ್ ತಿದ್ದುಪಡಿಗೆ ಅವಕಾಶವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸಹ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಪುಟ್ಟಗೌರಮ್ಮ, ಜಿಲ್ಲಾ ಆಧಾರ್ ಸಮಾಲೋಚಕ ರಂಗಸ್ವಾಮಿ, ಇ-ಆಡಳಿತ ಜಿಲ್ಲಾ ಸಮಾಲೋಚಕ ಮಧುಕೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.
Uncategorized
ಆರ್‌ಬಿಐನಿಂದ ಸರ್ಕಾರಕ್ಕೆ ದಾಖಲೆಯ ಡಿವಿಡೆಂಡ್
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2026-27ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ದಾಖಲೆ ಮಟ್ಟದ 2.87 ಲಕ್ಷ ಕೋಟಿ ರೂ ಲಾಭಾಂಶವನ್ನು ನೀಡಲು ಅನುಮೋದನೆ ನೀಡಿದೆ.
ಜಾಗತಿಕ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಲು ಈ ಬೃಹತ್ ಮೊತ್ತ ನೆರವಾಗಲಿದೆ. ಮುಂಬೈನಲ್ಲಿ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐ ಕೇಂದ್ರೀಯ ನಿರ್ದೇಶಕರ ಮಂಡಳಿಯ 623ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರ್‌ಬಿಐ ಇತಿಹಾಸದಲ್ಲೇ ಇದು ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಅತಿ ದೊಡ್ಡ ಲಾಭಾಂಶವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಆರ್‌ಬಿಐ 2.69 ಲಕ್ಷ ಕೋಟಿ ರೂ ವರ್ಗಾಯಿಸಿತ್ತು. ಈ ಬಾರಿ ಆ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
2025-26ರ ಆರ್ಥಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್‌ನ ಒಟ್ಟು ಆದಾಯ ಶೇ. 26.42 ರಷ್ಟು ಹೆಚ್ಚಾಗಿದೆ. ರಿಸ್ಕ್ ಪ್ರೊವಿಷನ್‌ಗಿಂತ (ಆಪತ್ಕಾಲೀನ ನಿಧಿ) ಮುಂಚಿನ ನಿವ್ವಳ ಆದಾಯವು 3,95,972 ಕೋಟಿ ರೂಗೆ ತಲುಪಿದೆ (ಕಳೆದ ವರ್ಷ ಇದು 3,13,455 ಕೋಟಿ ಆಗಿತ್ತು). ಚಿನ್ನದ ಬೆಲೆಯಲ್ಲಿ ಆದ ಭಾರಿ ಏರಿಕೆ ಮತ್ತು ವಿದೇಶಿ ವಿನಿಮಯ ವ್ಯವಹಾರಗಳಿಂದ ಆರ್‌ಬಿಐಗೆ ಈ ಭಾರಿ ಲಾಭ ಬಂದಿದೆ.

206ರ ಮಾರ್ಚ್ 31 ಕ್ಕೆ ಕೊನೆಗೊಂಡಂತೆ ಆರ್‌ಬಿಐನ ಬ್ಯಾಲೆನ್ಸ್ ಶೀಟ್ ಗಾತ್ರವು ಶೇಕಡಾ 20.61 ರಷ್ಟು ವೃದ್ಧಿಯಾಗಿದ್ದು, ಬರೋಬ್ಬರಿ 91.97 ಲಕ್ಷ ಕೋಟಿ ರೂಗೆ ತಲುಪಿದೆ. ಕೇವಲ ಸರ್ಕಾರಕ್ಕೆ ಲಾಭಾಂಶ ನೀಡುವುದು ಮಾತ್ರವಲ್ಲದೆ, ಆರ್‌ಬಿಐ ತನ್ನ ಸುರಕ್ಷತೆಗಾಗಿ ಇಟ್ಟುಕೊಳ್ಳುವ ಆಪತ್ಕಾಲೀನ ನಿಧಿಗೆ ಈ ಬಾರಿ ಭಾರಿ ಮೊತ್ತವನ್ನು ವರ್ಗಾಯಿಸಿದೆ. ಕಳೆದ ವರ್ಷ 44,861 ಕೋಟಿ ರೂ ಮೀಸಲಿಟ್ಟಿದ್ದ ಆರ್‌ಬಿಐ, ಈ ಬಾರಿ ಸಿಆರ್‌ಬಿ ನಿಧಿಗೆ 1,09,379.64 ಕೋಟಿ ರೂ ಜಮಾ ಮಾಡಿದೆ. ಇದರೊಂದಿಗೆ ಈ ತುರ್ತು ನಿಧಿಯ ಪ್ರಮಾಣವನ್ನು ಬ್ಯಾಲೆನ್ಸ್ ಶೀಟ್‌ನ ಶೇ. 6.5ರ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ.
ಬಜೆಟ್ ಅಂದಾಜಿಗಿಂತ ಸ್ವಲ್ಪ ಕಡಿಮೆ: ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಆರ್‌ಬಿಐ ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಒಟ್ಟು 3.16 ಲಕ್ಷ ಕೋಟಿ ರೂ ಲಾಭಾಂಶ ಬರಬಹುದು ಎಂದು ಅಂದಾಜಿಸಿತ್ತು. ಆರ್‌ಬಿಐ ನೀಡಿದ 2.87 ಲಕ್ಷ ಕೋಟಿ ರೂ ಅದರ ನಿರೀಕ್ಷೆಗಿಂತ ಕೊಂಚ ಕಡಿಮೆಯಾಗಿದ್ದರೂ, ಮಾರುಕಟ್ಟೆಯ ತಜ್ಞರ ಅಂದಾಜಿನ (2.7 ಲಕ್ಷ ಕೋಟಿಯಿಂದ 3 ಲಕ್ಷ ಕೋಟಿ) ವ್ಯಾಪ್ತಿಯಲ್ಲೇ ಇದೆ.
ಸರ್ಕಾರಕ್ಕೆ ಹೇಗೆ ನೆರವಾಗಲಿದೆ?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದು, ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಆರ್‌ಬಿಐನಿಂದ ಬಂದಿರುವ ಈ ಬೃಹತ್ ಹಣವು ಸರ್ಕಾರದ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡಲು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸಲು ದಿಕ್ಸೂಚಿಯಾಗಲಿದೆ.
Uncategorized
52 ಪ್ರಕರಣ ಹಿಂಪಡೆಗೆ ರಾಜ್ಯ ಸಂಪುಟ ಒಪ್ಪಿಗೆ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಕಾನೂನಾತ್ಮಕವಾಗಿ 52 ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕನ್ನಡ ಸಂಘಟನೆಗಳು ಹಾಗೂ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವಂತೆ ಹಲವು ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿಷಯವನ್ನು ಕ್ಯಾಬಿನೆಟ್ ಸಬ್ ಕಮಿಟಿಗೆ ಒಪ್ಪಿಸಿತ್ತು. ಕಾನೂನು ಅಂಶಗಳನ್ನು ಪರಿಶೀಲಿಸಿದ ಬಳಿಕ 52 ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಇದೇ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೆಎಸ್‌ಟಿ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸುತ್ತಿದೆ. ನಾವು ಮಾತ್ರ ತೆರಿಗೆ ಕಡಿಮೆ ಮಾಡಬೇಕೆಂದು ಹೇಳುವುದು ಸರಿಯಲ್ಲ” ಎಂದು ಹೇಳಿದರು.
ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಸಂಪೂರ್ಣವಾಗಿ ಬಂದಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರಕ್ಕೆ ಜನಪರ ಚಿಂತನೆ ಹಾಗೂ ಜವಾಬ್ದಾರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೇ, ಡಾ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ತೈಲ ಬೆಲೆ ಎಷ್ಟಿತ್ತು ಮತ್ತು ಈಗ ಎಷ್ಟಿದೆ ಎಂಬುದನ್ನು ಜನರು ಗಮನಿಸಬೇಕು ಎಂದು ಹೇಳಿದರು.
-
Mandya19 hours agoತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮುಂದುವರೆಸಿ : ಎಸ್.ರಮೇಶ್
-
National15 hours agoಹೈಕೋರ್ಟ್ ತೀರ್ಪುಗಳಿಗೆ 3 ತಿಂಗಳ ಗಡುವು: ಸುಪ್ರೀಂನಿಂದ ಐತಿಹಾಸಿಕ ಆದೇಶ
-
Kodagu16 hours agoರಸ್ತೆ ದಾಟಿದ ಬೃಹತ್ ಗಾತ್ರದ ಹೆಬ್ಬಾವು
-
Mandya17 hours agoಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
-
Kodagu19 hours agoಆದಿವಾಸಿ ಸಮುದಾಯದ ವಿದ್ಯಾವಂತರಿಗೆ ನೇಮಕಾತಿ ಜಾರಿಗೆ ಆಗ್ರಹಿಸಿ ಮನವಿ
-
State19 hours agoಡಿ.ಕೆ. ಶಿವಕುಮಾರ್ ಪ್ರಮಾಣವಚನ ಸಿದ್ಧತೆ: ರಾಮನಗರದಿಂದ 40–50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ
-
Hassan18 hours agoಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ ಶ್ರೇಯಸ್ ಪಟೇಲ್
-
Politics23 hours agoಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ, ಸಂಪುಟ ಸೇರಲಿದ್ದಾರೆ 12-13 ಹಿರಿಯ ನಾಯಕರು!
