Connect with us

Uncategorized

ಮತದಾನ ಜಾಗೃತಿ ಕಾರ್ಯಕ್ರಮ

Published

on

ಯಳಂದೂರು ಸಮೀಪದ ಕುದೇರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ಗ್ರಾಮಪಂಚಾಯತಿ ಅವರ ಸಹಯೋಗದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು,

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಮತದಾನ ಕುರಿತು ಜಾಗೃತಿ ಗೊಳಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಥಿಯೋಡರ್ ಲೂಥರ್ ಹಾಗೂ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಮಹೇಂದ್ರ ಅವರುಗಳು ಮತದಾನದ ಮಹತ್ವವನ್ನು ಕುರಿತು ಮಾತನಾಡಿದರು,

ದಿನಾಂಕ 26.04.2024 ರಂದು ನಡೆಯಲಿರುವ ಲೋಕ ಸಭಾ ಚುನಾವಣೆಯಲ್ಲಿ ಅರ್ಹ ಮತದಾರೆಲ್ಲರೂ ಮತದಾನ ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರಾದ ವಾಣಿ.ವಿ,ಶಶಿಕಲಾ,ಕವಿತಾ,ಮಧುಸೂದನ್, ಶ್ರೀನಿವಾಸ್,ಬಸವಣ್ಣ,ಮಲ್ಲಿಕಾರ್ಜುನ,ಭಾಗ್ಯಮ್ಮಹಾಗೂ ಗ್ರಾಮ ಪಂಚಾಯತಿ ಪಿಡಿಓ ಅವರಾದ ಗೋವಿಂದಯ್ಯ ಅವರುಗಳು ಭಾಗವಹಿಸಿದರು.
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿವಾಹಿತ ಹಿಂದೂ ಮಹಿಳೆಯ ಜೊತೆ : ಸಿಕ್ಕಿ ಬಿದ್ದ ಕಾಂಗ್ರೆಸ್‌ ಮುಖಂಡ

Published

on

ಚಿಕ್ಕಮಗಳೂರು : ವಿವಾಹಿತ ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್‌ ಮುಖಂಡ ಸಿಕ್ಕಿ ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ ವೇಳೆ ಮಹಿಳೆಯಲ್ಲಿ ಕಾಂಗ್ರೆಸ್ ಮುಖಂಡ ರಾಹಿಲ್ ಶರೀಫ್ ಹಿಂದೂ ಮಹಿಳೆ ಇರುವುದನ್ನು ಕಂಡು ಯುವಕರು ಕೋಪಗೊಂಡಿದ್ದಾರೆ.

ಘಟನೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್‌ ಮುಖಂಡ ಮನೆಯಲ್ಲಿ ಇದ್ದ ವೇಳೆಯಲ್ಲಿ ಮನೆ ಮೇಲೆ ದಾಳಿ ನಡೆಸಿದ ಅಕ್ಕಪಕ್ಕದ ಹುಡುಗರು ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ ಅಂತ ಹೇಳಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯು ಚಿಕ್ಕಮಗಳೂರಿನ ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ನಡೆದಿದೆ.

ಇನ್ನೂ ಘಟನೆ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ನೊಂದ ಮಹಿಳೆ ರಾಹಿಲ್ ನನ್ನ ಸ್ನೇಹಿತ, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು. ಈ ವೇಳೆ ಅಕ್ಕ ಪಕ್ಕದ ಮನೆಯವರು ನನ್ನ ಮನೆಗೆ ಬಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಅಂತ ಆರೋಪಿಸಿದ್ದಾರೆ. ಸದ್ಯ ಘಟನೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಪೊಲೀಸ್‌ನವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Uncategorized

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್‌ – 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆ ಮಂಗಳೂರು

Published

on

ಮಂಗಳೂರು: ಕಬ್ಬಿಣದ ರಾಡ್‌ ಎದೆಯೊಳಗೆ ಹೊಕ್ಕು ತೀರ ಗಂಭೀರ ಸ್ಥಿತಿಯಲ್ಲಿದ್ದ ಕಾಸರಗೋಡಿನ 11 ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ವೈದ್ಯರ ತಂಡ ಯಶಸ್ವಿಯಾಗಿದೆ.

ಜ.18 ರಂದು ಬಾಲಕಿ ಶ್ರೀನಾ ಆಟವಾಡುವಾಗ ಕಬ್ಬಿಣದ ರಾಡ್‌ ಮೇಲೆ ಬಾಲಕಿ ಆಕಸ್ಮಿಕವಾಗಿ ಬಿದ್ದಿದ್ದು ರಾಡ್‌ ಬಾಲಕಿಯ ಎದೆಯ ಬಲಭಾಗದಲ್ಲಿ ಮುಂದೆಯಿಂದ ಹೊಕ್ಕಿ ಹಿಂಬದಿಯಿಂದ ಹೊರಬಂದಿದ್ದು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಪೋಷಕರು ಬಾಲಕಿಯನ್ನು ಕರೆದೊಯ್ದಿದ್ದು ವೈದ್ಯರು ಸೂಕ್ತವಾದ ಪ್ರಾಥಮಿಕ ಚಿಕಿತ್ಸೆ ನೀಡಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೆಎಂಸಿ ಆಸ್ಪತ್ರೆ ತುರ್ತು ಚಿಕಿತ್ಸಾ ತಜ್ಞೆ ಡಾ. ಅರ್ಪಿತಾ ಮತ್ತವರ ತಂಡ ತಕ್ಷಣ ಬಾಲಕಿಯ ಸ್ಥಿತಿಯನ್ನು ಸ್ಥಿರಗೊಳಿಸಿ ಶಸ್ತ್ರಚಿಕಿತ್ಸೆ ಕೊಠಡಿಗೆ ಕಳುಹಿಸಿರುತ್ತಾರೆ.


ಹೇಗಿತ್ತು ಚಿಕಿತ್ಸೆ?

ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದ್ದು ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ ಸದಾಶಿವ್‌ ರಾವ್‌, ಅರವಳಿಕೆ ತಜ್ಞ ಡಾ. ಸುನೀಲ್‌ ಮತ್ತು ಡಾ. ಫ್ರೀಡಾ ಕುಟಿನ್ಹಾ ಅವರ ಜೊತೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‍‌ ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಡಾ. ಸ್ವಾತಿ ರಾವ್‌ ಕನ್ಸಲ್ಟೆಂಟ್‌ -ಪಿಡಿಯಾಟ್ರಿಕ್‌ ಇನ್‌ಟೆನ್ಸಿವಿಸ್ಟ್‌ ಅವರ ಆರೈಕೆಯಲ್ಲಿ ಬಾಲಕಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು , ಬೇಗ ಚೇತರಿಕೆ ಕಂಡುಕೊಂಡಿದ್ದಾಳೆ.

ಚಿಕಿತ್ಸೆ ಕುರಿತು ಮಾತನಾಡಿದ ಡಾ ಸದಾಶಿವ್‌ ರಾವ್‌ “ ಮಕ್ಕಳಲ್ಲಿ ಎದೆಯೊಳಗೆ ಇಂತಹ ವಸ್ತುಗಳು ಹೊಕ್ಕುವಂತಹ ಘಟನೆಗಳು ಅಪರೂಪ ಆದರೆ ಇವು ಜೀವಕ್ಕೆ ಅಪಾಯಕಾರಿ. ಚಾಕು, ರಾಡ್‌ನಂತಹ ವಸ್ತುಗಳು ಎದೆಯೊಳಗೆ ಹೊಕ್ಕಿದಂತಹ ಸಂದರ್ಭದಲ್ಲಿ ಒಳಹೊಕ್ಕಿದ ವಸ್ತುಗಳನ್ನು ತಜ್ಞರ ಮತ್ತು ಸಂಪೂರ್ಣ ಸೌಕರ್ಯ ಹೊಂದಿರುವ ಆರೋಗ್ಯ ಕೇಂದ್ರದಲ್ಲಿ ಮಾತ್ರ ಹೊರತೆಗೆಯಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ. ಈ ಪ್ರಕರಣ ಕೂಡ ಸಂಕೀರ್ಣವಾಗಿದ್ದು ರಾಡ್‌ನ್ನು ಎದೆಯೊಳಗಿಂದ ತೆಗೆಯುವ ಮುನ್ನ ಹೆಚ್ಚುವರಿ ರಾಡ್‌ನ್ನು ತುಂಡರಿಸುವುದು ಅಗತ್ಯವಾಗಿತ್ತು” ಎಂದರು.

ಒಂದು ವಾರದೊಳಗೆ, ಬಾಲಕಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.
ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ” ಈ ಪ್ರಕರಣವು ಮಂಗಳೂರು ಕೆಎಂಸಿ ಆಸ್ಪತ್ರೆಯ ಮಕ್ಕಳ ಆರೈಕೆ ತುರ್ತು ಘಟಕದ ಅಚಲ ಬದ್ದತೆಯನ್ನು ಎತ್ತಿತೋರಿಸುತ್ತದೆ. ಜೀವ ಉಳಿಸುವ ಆಧುನಿಕ ಸೌಲಭ್ಯಗಳು ಮಕ್ಕಳ ಆರೈಕೆ ನೀಡಲು ಪರಿಣಿತಿ ಹೊಂದಿದ ತಂಡ, ಸುಸಜ್ಜಿತ ಮಕ್ಕಳ ತೀವ್ರ ಆರೈಕೆ ಘಟಕ, ಇವೆಲ್ಲವನ್ನು ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೆಎಂಸಿ” ಎಂದು ಹೇಳಿದರು.

ಬಾಲಕಿಯ ಜೀವ ಉಳಿಸುವುದರಲ್ಲಿ ಸಮುದಾಯದ ಜವಾಬ್ದಾರಿ ಎಷ್ಟು ಮುಖ್ಯವಾಗಿರುತ್ತದೆ, ಸ್ಥಳೀಯ ಆರೈಕೆ ಕೇಂದ್ರ ಬಾಲಕಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ನೀಡಿ ಆರೋಗ್ಯ ಸ್ಥಿರಪಡಿಸಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದೆ ಸ್ಥಳೀಯ ಆರೋಗ್ಯ ಘಟಕದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು”.

Continue Reading

Uncategorized

ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್‌ ಶೆಟ್ಟಿ ಅವರ ನಿವಾಸದ ಮೇಲೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಆಟ್ಯಾಕ್‌

Published

on

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್‌ ಶೆಟ್ಟಿ ಅವರ ಜುಹು ಮನೆಯ ಹೊರಗೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಶನಿವಾರ (ಜ.31) ತಡರಾತ್ರಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.

ಈ ಕುರಿತು ಭದ್ರತಾ ಮತ್ತು ವಿಧಿವಿಜ್ಞಾನ ತಂಡ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ. ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಈ ಸ್ಥಳವನ್ನು ತಕ್ಷಣವೇ ಸುತ್ತುವರಿದು ಮುನ್ನಚ್ಚರಿಕೆ ಕ್ರಮವಾಗಿ ಸ್ಥಳ ಹಾಗೂ ಸುತ್ತಮುತ್ತ ಭಾರೀ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಹಾಗಾಗಿ ಪೊಲೀಸ್‌ ಗಸ್ತು ತೀವ್ರಗೊಳಿಸಲಾಗಿದೆ.

ಇನ್ನೂ ಮುಂಬೈ ಪೊಲೀಸ್‌ ಆಯುಕ್ತ ದೇವನ್‌ ಭಾರ್ತಿ ಘಟನೆಯನ್ನು ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಅಲ್ಲದೇ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಕಟ್ಟಡದ ಮೇಲೆ ಗುಂಡು ಹಾರಿಸಿದ್ದಾರೆ. ಹೀಗಾಗಿ ವಲಯ ಪೊಲೀಸರು ಮತ್ತು ಅಪರಾಧ ವಿಭಾಗ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

Trending

error: Content is protected !!