Connect with us

Hassan

ಪ್ಲಾಸ್ಟಿಕ್ ಬಳಕೆಯಿಂದ ಸಕಲ ಜೀವ ರಾಶಿಗೆ ಅಪಾಯ ತಪ್ಪಿದಲ್ಲ

Published

on

ಪ್ಲಾಸ್ಟಿಕ್ ಬಳಕೆಯಿಂದ ಸಕಲ ಜೀವ ರಾಶಿಗೆ ಅಪಾಯ ತಪ್ಪಿದಲ್ಲ

ಕಡಿಮೆ ಮಾಡುವಂತೆ ಡಿ.ಜಿ. ಕೃಷ್ಣೇಗೌಡ ಸಲಹೆ

ಹಾಸನ : ಪ್ಲಾಸ್ಟಿಕ್ ಬಳಕೆಯಿಂದ ಸಕಲ ಜೀವ ರಾಶಿಗೆ ಅಪಾಯ ತಪ್ಪಿದಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದನ್ನ ಏಕೆ ಉಪಯೋಗಿಸುತ್ತೇದ್ದೇವೆ ಎಂದು ಪ್ರಶ್ನೆ ಮಾಡಿದ ಅವರು ಇದನ್ನ ಕಾಲಕ್ರಮೇಣ ಕಡಿಮೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವಂತೆ ಸರಕಾರಿ ಕಲಾ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಿ.ಜಿ. ಕೃಷ್ಣೇಗೌಡ ಸಲಹೆ ನೀಡಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ವಿಜ್ಞಾನ ಕಾಲೇಜು ಸ್ವಾಯತ್ತ ಸಭಾಂಗಣದಲ್ಲಿ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಹಾಗೂ ಸರಕಾರಿ ಗೃಹ ವಿಜ್ಞಾನ ಕಾಲೇಜು ಗೃಹವಿಜ್ಞಾನ ವಿಭಾಗ ಇವುಗಳ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡದಲ್ಲಿ ವಿಜ್ಞಾನ ಸಂವಹನ ಮಾಲಿಕೆಯಡಿ ಜೀವ ಸಂಕುಲ ಮತ್ತು ಪ್ಲಾಸ್ಟಿಕ್ ಸಂಕಟ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಭೂಮಿ ಮೇಲೆ ಅತೀ ಹೆಚ್ಚು ಮಾಲಿನ್ಯ ಉಂಟು ಮಾಡಿರುವುದು ಈ ಪ್ಲಾಸ್ಟಿಕ್. ೧೯೭೩ರ ವರೆಗೆ ಈ ಪ್ಲಾಸ್ಟಿಕ್ ನಿಂದ ಸಮಸ್ಯೆ ಆಗಿರಲಿಲ್ಲ. ನಂತರದಲ್ಲಿ ಸಮಸ್ಯೆ ಆಗಲು ಪ್ರಾರಂಭಿಸಿತು. ಕೆಲ ಹೊರ ದೇಶಗಳಲ್ಲಿ ಅನೇಕ ಸಮಸ್ಯೆಗಳು ಹೆಚ್ಚು ಕಂಡು ಬಂದಿತು. ಪ್ಲಾಸ್ಟಿಕ್ ನಿಂದ ಸಕಲ ಜೀವ ರಾಶಿಗೆ ಅಪಾಯ ತಪ್ಪಿದಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದನ್ನ ಏಕೆ ಉಪಯೋಗಿಸುತ್ತೇದ್ದೇವೆ ಎಂದು ಪ್ರಶ್ನೆ ಮಾಡಿದರು. ಪ್ಲಾಸ್ಟಿಕ್ ಎಂಬುದು ಜೀವ ಸಂಕೂಲಕ್ಕೆ ಮಾರಕ. ನಾಳೆ ಎಲ್ಲಾವು ಕೂಡ ರೋಗಗಸ್ತವಾಗಿ ಸತ್ತು ಹೋಗುತ್ತದೆ ಒಂದು ದಿನ, ಭೂಮಿಯೂ ಕೂಡ ಮುಳುಗುತ್ತದೆ. ಪ್ರಸ್ತುತ ಪ್ಲಾಸ್ಟಿಕ್ ಎಂದರೇ ಇದೊಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಎಲ್ಲಾ ರೀತಿಯಲ್ಲೂ ಪ್ಲಾಸ್ಟಿಕ್ ಇರಲೇಬೇಕು. ಪ್ಲಾಸ್ಟಿಕ್ ಎಂಬುದನ್ನು ಮನುಷ್ಯ ಮಾಡಿರುವ ದೈತ್ಯ ರಾಕ್ಷಸ. ಇದರಿಂದ ದೇವರು ಸೃಷ್ಠಿ ಮಾಡಿದ ವಸ್ತುಗಳೆಲ್ಲಾ ಅಂತ್ಯವಾಗಿದೆ. ಆದರೇ ತಾನೆ ಸೃಷ್ಠಿ ಮಾಡಿದ ಪ್ಲಾಸ್ಟಿಕ್ ಗೆ ಅಂತ್ಯವೆ ಇಲ್ಲದಂತಾಗಿದೆ ಎಂದು ಬೇಸರವ್ಯಕ್ತಪಡಿಸಿದರು. ಎಲ್ಲಾ ಕಡೆಯಿಂದ ಕೊನೆ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರುತ್ತದೆ ಎಂದು ಕಿವಿಮಾತು ಹೇಳಿದರು. ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವ್ಯವಸ್ಥೆ, ಜಲ ಹಾಗೂ ಜಲಚರಜೀವಿಗಳು, ವನ್ಯಜೀವಿಗಳು, ಮಾನವನ ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅಲ್ಲದೆ ಇದು ಇಂದು ಜಾಗತಿಕ ಸಮಸ್ಯೆಯಾಗಿದೆ ಎಂದರು.

ಜಗತ್ತಿನಾದ್ಯಂತ ಹಲವು ರಾಷ್ಟ್ರಗಳು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಜಾಗೃತಿ, ಹೋರಾಟ, ಅಭಿಯಾನಗಳನ್ನು ನಡೆಸುತ್ತಿವೆ. ಏಕ ಬಳಕೆಯ ಪ್ಲಾಸ್ಟಿಕ್ ನಿಷೇದಕ್ಕೂ ಒತ್ತು ನೀಡಿವೆ. ಆದರೂ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಕಡಿಮೆಯಾಗಿಲ್ಲ. ಇಂದು ಪ್ಲಾಸ್ಟಿಕ್ ನಮ್ಮ ಜೀವನಸಂಗಾತಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ತಿನ್ನುವ ಪ್ಲೇಟ್‌ನಿಂದ ಕುಡಿಯುವ ನೀರಿನವರೆಗೆ ಎಲ್ಲವೂ ಪ್ಲಾಸ್ಟಿಕ್ ಆಗಿದ್ದು, ಇವುಗಳಿಂದ ದೂರ ಉಳಿಯವುದು ಕಷ್ಟಸಾಧ್ಯವಾಗಿದೆ. ಆದರೂ ನಮ್ಮ ಜಗತ್ತಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ ಪರಿಸರ ಉಳಿಸಲು ನಾವು ನೀಡಬಹುದಾದ ಕೊಡುಗೆ ಏನು? ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ನಾವು ಅನುಸರಿಸುಬಹುದಾದ ಮಾರ್ಗಗಳೇನು ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು, ಕಾಫಿ ಕಪ್, ಸ್ಟ್ರಾ ಮುಂತಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಿ. ಅದರ ಬದಲು ಮಣ್ಣು, ಗಾಜು, ಸ್ಟೀಲ್, ಬಟ್ಟೆ ಕವರ್ ಬಳಸಿ. ಶಾಂಪಿಂಗ್ ಹೋಗುವಾಗ ಮರೆಯದೇ ಬಟ್ಟೆಯ ಬ್ಯಾಗ್ ತೆಗೆದುಕೊಂಡು ಹೋಗಲು ಮರೆಯಬಾರದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಮತ್ತು ಇತರ ತ್ಯಾಜ್ಯಗಳಿಂದ ಪ್ರತ್ಯೇಕಿಸುವ ಮೂಲಕ ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ. ನಿಮ್ಮ ಮನೆ ಹಾಗೂ ಕಚೇರಿ, ಕಾರ್ಯಕ್ರಮಗಳಲ್ಲಿ ಮರುಬಳಕೆಯ ವಸ್ತುಗಳಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆಯ ನಂತರ ಪ್ಲಾಸ್ಟಿಕ್ ಅನಿವಾರ್ಯ ಪರ್ಯಾಯ ಕುರಿತು ಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಂಪನ್ಮೂಲವ್ಯಕ್ತಿ ಹೆಚ್.ಎಸ್. ಚಂದ್ರಶೇಖರ್ ಅವರು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕರಾದ ಕೆ.ವಿ. ನಿರಂಜನ್ ನಡೆಸಿದರು. ಮದ್ಯಾಹ್ನದ ಗೋಷ್ಠಿಯಲ್ಲಿ ಪ್ಲಾಸ್ಟಿಕ್ ನಿಂದಾಗುವ ದುಷ್ಪಾರಿಣಾಮಗಳು ವಿಚಾರವಾಗಿ ಐ.ಡಿ.ಎಸ್.ಜಿ. ಸರಕಾರಿ ಕಾಲೇಜು ಚಿಕ್ಕಮಗಳೂರು ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹೆಚ್.ಕೆ. ಮಕರಿ ಅವರು ಸಂಪನ್ಮುಲವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕರಾದ ಟಿ. ದುಮ್ಮೇಗೌಡ ನಿರ್ವಹಿಸಿದರು. ಮೂರನೇ ಮತ್ತು ನಾಲ್ಕನೇ ಗೋಷ್ಠಿಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಸಲಾಯಿತು. ಸಂಜೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಸರಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಎಸ್.ಹೆಚ್. ಗಂಗೇಗೌಡ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಹೆಚ್. ಪ್ರತಾಪ್ ಕುಮಾರ್ ಶೆಟ್ಟಿ, ಸರಕಾರಿ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಎನ್.ಕೆ. ಲೀಲಾವತಿ,ಕನ್ನಡ ವಿಭಾಗದ ಮುಖ್ಯಸ್ಥರಾದ ಎಸ್. ಸುಂದರೇಶ್, ಕಾಲೇಜಿನ ಸಂಚಾಲಕರಾದ ಪಿ.ಎನ್. ವಿನಯ್ ಕುಮಾರ್, ಕನ್ನಡ ಸಹಾಯಕ ಪ್ರಾಧ್ಯಾಪಕ ಎನ್.ಸಿ. ರವಿ, ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಮಧುಶ್ರೀ, ಕೆ.ಬಿ. ಪೂರ್ಣಿಮಾ, ಹೆಚ್.ಎಸ್. ಚಂದ್ರೇಖರ್ ಇತರರು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ

Published

on

ಹಾಸನ: ನಗರದ ಪ್ರತಿಷ್ಠಿತ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿರುವ ಡಾ.ಎಸ್.ಎ.ನಿತಿನ್ ಅವರು ಈ ಬಾರಿಯ ಜಿಲ್ಲಾಡಳಿತದ ಗಣರಾಜ್ಯೋತ್ಸವದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾಡಳಿತ ಅಭಿನಂದಿಸುತ್ತಿದ್ದು, ಈ ಸಲ ವೈದ್ಯಕೀಯ ಕ್ಷೇತ್ರದಿಂದ ಡಾ.ನಿತಿನ್ ಅವರನ್ನು ಆಯ್ಮೆ ಮಾಡಲಾಗಿದೆ. 2001 ರಿಂದ ಆಯುರ್ವೇದ ವೈದ್ಯರಾಗಿ ಜಿಲ್ಲೆಯಲ್ಲಿ ವೃತ್ತಿ ಆರಂಭಿಸಿದ ಇವರು, 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹಾಸನದ ಪ್ರತಿಷ್ಠಿತ ರಾಜೀವ್ ಶಿಕ್ಷಣ ವಿದ್ಯಾಸಂಸ್ಥೆಯಲ್ಲಿ ವೈದ್ಯರಾಗಿ, ಶೈಕ್ಷಣಿಕ ಸಲಹೆಗಾರರಾಗಿ, ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ರಿಂದ ರಾಜೀವ್ ಆಯುರ್ವೇದ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2024 ರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಸದಸ್ಯರಾಗಿದ್ದಾರೆ.
2017 ರಲ್ಲಿ ರಾಷ್ಟ್ರೀಯ ಜೈನ್ ಯುವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜರಾಗಿದ್ದಾರೆ,
ವೈದ್ಯ ಸೇವೆ ಜೊತೆಗೆ ಜನಪರ ಕೆಲಸ ಕಾರ್ಯವನ್ನೂ ಮಾಡುತ್ತಿದ್ದಾರೆ. ವಿಶೇಷವಾಗಿ ರೋಗಿಗಳ ಔಷಧ ಚೀಟಿಯನ್ನೂ ಕನ್ನಡದಲ್ಲೇ ಬರೆಯುತ್ತಿರುವುದು ಇವರ ಕನ್ನಡ ಪ್ರೀತಿಗೆ ಹಿಡಿದ ಕನ್ನಡಿ.
ಜಿಲ್ಲೆ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ, ವಿವಿಧ ರೋಗ-ರುಜಿನಗಳ ಬಗ್ಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಲೇಖನ ಬರೆದು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ರೀತಿಯ 250ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ. ಅಲ್ಲದೆ ಈಗಿನ ಸಂದರ್ಭಕ್ಕೆ ಆಯುರ್ವೇದ ಮಹತ್ವದ ಬಗ್ಗೆಯೂ ಹತ್ತಾರು ಲೇಖನ ಬರೆದು ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಅರಿವು, ಜಾಗೃತಿ ಕೆಲಸವನ್ನೂ ಮಾಡುತ್ತಿರುವ ಅಪರೂಪದ ವೈದ್ಯರು. ಜೊತೆಗೆ 200ಕ್ಕೂ ಹೆಚ್ಚು ಹನಿಗವನ, 100ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, 100ಕ್ಕೂ ಹೆಚ್ಚು ಆರೋಗ್ಯ ಮಾಹಿತಿ ಕುರಿತು ಉಪನ್ಯಾಸ, 70ಕ್ಕೂ ಹೆಚ್ಚು ಆರೋಗ್ಯ ಶಿಬಿರ ಮಾಡಿದ್ದಾರೆ. ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿರುವುದಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರವಣಬೆಳಗೊಳದ ಎಸ್.ಎನ್.ಅಶೋಕ್ ಕುಮಾರ್-ಜಿ.ಪಿ.ಶ್ಯಾಮಲಾದೇವಿ ಅವರ ಸುಪುತ್ರರಾದ ನಿತಿನ್ ಅವರು, ಪ್ರಾಥಮಿಕ ಶಿಕ್ಷಣವನ್ನೇ ಶ್ರವಣಬೆಳಗೊಳದಲ್ಲೇ ಮುಗಿಸಿ ಪ್ರೌಢಶಿಕ್ಷಣವನ್ನು ಮಾವಿನಕೆರೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಡೆದರು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್, ಎಂಡಿ ಪಡೆದರು. ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿವಿಯಲ್ಲಿ ಪಿಹೆಚ್ಡಿ ಪಡೆದರು.

Continue Reading

Hassan

ಅರೇಳ್ಳಿ: ಜ.26 ರಂದು 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ

Published

on

ಹಾಸನ: ಸಂವಿಧಾನ ದಿನಾಚರಣೆ ಅಂಗವಾಗಿ ಜನವರಿ 26ರ ರಂದು ಬೇಲೂರು ತಾಲೂಕಿನ ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುವುದು ಎಂದು ದಲಿತ ಮುಖಂಡರಾದ ಅರೆಹಳ್ಳಿ ನಿಂಗರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಭೀಮ ಕೋರೆಂಗಾವ್ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ ಕೇವಲ ೫೦೦ ಜನ ಮಹರ್ ಸೈನಿಕರು ೨೮,೦೦೦ ಪೇಶ್ವೆ ಸೈನಿಕರನ್ನು ಬಗ್ಗುಬಡಿದ ವಿಜಯದ ದಿನವೇ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷವೂ ಹರೇಹಳ್ಳಿಯಲ್ಲಿ ಆಚರಿಸಲಾಗುತ್ತಿದ್ದು ಅದೇ ರೀತಿ ಈ ವರ್ಷವೂ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು. ಜನವರಿ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಂಬೇಡ್ಕರ್ ಭಾವಚಿತ್ರ ಹಾಗೂ ವಿಜಯ ಸ್ತಂಭದ ಮೆರವಣಿಗೆ ನಡೆಯಲಿದೆ ಎಂದರು.

ಅದೇ ದಿನ ಸಂಜೆ ೬ ಸುಮಾರಿಗೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್, ಅಂಬೇಡ್ಕರ್ ಅನುಯಾಯಿ ಹಾಗೂ ನಟ ಚೇತನ್ ಅಹಿಂಸಾ, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಕಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು, ಅರೆಹಳ್ಳಿ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿರೂಪಾಕ್ಷ, ಲಿಂಗರಾಜು, ವಿಜಯೋತ್ಸವ ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಮೇಶ್, ಸಿದರಾಜು, ದಿನೇಶ್, ಸೋಮಶೇಖರ್ ಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ

Published

on

ಹಾಸನ: ನಗರದ ಡೈರಿ ವೃತ್ತ, ಅರಸೀಕೆರೆ ರಸ್ತೆ ಬಳಿ ಕೈಗಾರಿಕ ಪ್ರದೇಶದಲ್ಲಿ ಸಣ್ಣ ಕೈಗಾರಿಕ ಇಂಡಸ್ಟ್ರೀಯಸ್ ಅಸೋಸಿಯೇಷನ್ ಭವನದ ೨ನೇ ಅಂತಸ್ಥಿನ ಭವನದ ಶಂಕುಸ್ಥಾಪನೆ ಸಮಾರಂಭಕ್ಕೆ ಶುಕ್ರವಾರದಂದು ಗುದ್ದಲಿ ಪೂಜೆ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡರು ಚಾಲನೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಮಾತನಾಡಿ, ಎರಡನೇ ಅಂತಸ್ಥಿತನ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿದೆ. ಈ ಕಟ್ಟಡ ಸಂಘಕ್ಕೆ ಉಪಯೋಗವಾಗಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.

ಎಫ್.ಕೆ.ಸಿ.ಸಿ.ಐ. ಐಟಿ-ಬಿಟಿ ಸಮಿತಿ ಅಧ್ಯಕ್ಷ ಹೆಚ್.ಎ. ಕಿರಣ್ ಮಾತನಾಡಿ, ಸಂಘದ ಎರಡನೇ ಹಂತದ ಶಿಲನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಕಳೆದ ಎರಡು ದಶಕಗಳಿಂದ ನಮ್ಮ ಸಂಘದ ಕಾರ್ಯಕ್ರಮಗಳು ಹಾಗೂ ಕಾರ್ಯವ್ಯಾಪ್ತಿ ಜಿಲ್ಲಾಧ್ಯಂತ ಹರಡಿದೆ. ಎರಡು ಸಾವಿರ ಜನ ಇದ್ದಂತಹ ಉದ್ಯಮಿಗಳು ಜಿಲ್ಲಾಧ್ಯಂತ ಈಗ ೨೦ ಸಾವಿರಕ್ಕೂ ಹೆಚ್ಚುಜನ ಉದ್ಯಮಿಗಳು ಇದ್ದಾರೆ. ಈ ಭಾಗವು ಕೂಡ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಇ-ಖಾತೆ ವಿಚಾರವಾಗಿಯೂ ಕೂಡ ನಗರಸಭೆ ಅಧ್ಯಕ್ಷರು ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.

ನಿರ್ಮಾಣವಾಗುತ್ತಿರುವ ಎರಡನೇ ಅಂತಸ್ಥಿನ ಕಟ್ಟಡವು ಕೈಗಾರಿಕ ಉದ್ಯಮಿಗಳ ಕಾರ್ಯಕ್ರಮಕ್ಕೆ ಮತ್ತು ಇಂಡಸ್ಟ್ರಿಯಲ್ ಕಾರ್ಯಕ್ರಮ ನಡೆಸುವುದಕ್ಕೆ ಒಂದು ಹಾಲ್ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಅಂತಸ್ಥನ್ನು ಸ್ಕಿಲ್ ಡೆವಲಪ್ ಮೆಂಟ್ ಗೆ ಈಗಾಗಲೇ ಉದ್ಘಾಟನೆಗೊಂಡಿದೆ. ಉದ್ಯಮಿಗಳ ಹಲವಾರು ಜನರಿಗೆ ಕಾರ್ಯಕ್ರಮವನ್ನು ಸದ್ಯದಲ್ಲೆ ಮಾಡಲಾಗುವುದು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಹೆಚ್.ಎ.ಡಿ.ಎಸ್.ಎಸ್.ಐ.ಎ. ಅಧ್ಯಕ್ಷ ಆರ್. ಶಿವರಾಮ್, ಉಪಾಧ್ಯಕ್ಷ ಪ್ರಕಾಶ್ ಎಸ್. ಯಾಜಿ, ಪ್ರಧಾನ ಕಾರ್ಯದರ್ಶಿ ಎನ್. ಸುದರ್ಶನ್, ಲಘು ಒದ್ಯೋಗ ಭಾರತೀ ಪ್ರಸನ್ನ ಕುಮಾರ್ ಮತ್ತು ಶಿವಾನಂದ್ ಇತರರು ಉಪಸ್ಥಿತರಿದ್ದರು.

Continue Reading

Trending

error: Content is protected !!