Connect with us

Kodagu

ಪಿಕ್ ಪಾಕೆಟ್ ಪ್ರಕರಣ – 13 ಆರೋಪಿಗಳ ಬಂಧನ

Published

on

ಮಡಿಕೇರಿ : ಮಾ. 27 ರಂದು ಬಿಜೆಪಿ ಪಕ್ಷದ ವತಿಯಿಂದ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಡೆದ ಸಮಾವೇಶದ ಸಂದರ್ಭ ಪಿಕ್‌ಪಾಕೆಟ್ ನಡೆಸಿದ 13 ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
13 ಆರೋಪಿಗಳಿಂದ 12 ಮೊಬೈಲ್, 2 ಕಾರು ಹಾಗೂ 69,960 ರೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ 10 ಮಂದಿ ಶಿವಮೊಗ್ಗ ಜಿಲ್ಲೆಯ ಭದ್ರವತಿಯವರಾಗಿದ್ದರೆ, ಇಬ್ಬರು ಬೆಂಗಳೂರು ಮೂಲದವರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರವತಿಯ ಜಯಣ್ಣ (38), ಪುಟ್ಟರಾಜು (39), ನಾಗರಾಜ ಸಿ (43), ವೆಂಕಟೇಶ್ ಆರ್ (44), ರಾಮು (43), ಉಮೇಶ ಕೆ, (36), ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್ (48), ಗಿರೀಶ ಡಿ (31), ಬಾಲು (35) ಬೆಂಗಳೂರಿನ ಹಬ್ಬಗೋಡಿ ಹರೀಶ (35) ನೆಲಮಂಗಲದ ರಂಗಣ್ಣ (50) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ, ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಮಡಿಕೇರಿ ನಗರಸಭೆಗೆ ಮೃತ ಇಂಜಿನಿಯರ್‌ ಟ್ರಾನ್ರ್ಫರ್‌ !

Published

on

ಮಡಿಕೇರಿ : ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಓರ್ವರನ್ನು ಜುಲೈ 9ರಂದು ಕೊಡಗಿನ ಮಡಿಕೇರಿಯ ನಗರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನವರಿ 12ರಂದು ಮೃತಪಟ್ಟಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ಇಲ್ಲದೆಯೇ ಎಡವಟ್ಟು ಮಾಡಿಕೊಂಡಿದ್ದು, ವರ್ಗಾವಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್, ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಮಾಹಿತಿಯನ್ನು ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡಿರಲಿಲ್ಲವೇ ? ಎನ್ನುವ ಅನುಮಾನ ಹುಟ್ಟಿಕೊಂಡಿದ್ದು, ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಳೆದ ಜುಲೈ ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಎಂದು ಜಿಲ್ಲಾಡಳಿತವೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.

Continue Reading

Kodagu

ಜು.17ರಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ

Published

on

ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.17 ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.


ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ತಾವು ಸೇರಿದಂತೆ ಸದಸ್ಯರುಗಳಾದ ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್ ಹಾಗೂ ಮೀನಾಜ್ ಪ್ರವೀಣ್ ಅಧಿಕಾರ ಸ್ವೀಕರಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Continue Reading

Kodagu

ಮಿನಿ ಒಲಿಂಪಿಕ್ಸ್ ಅಂಡರ್ 14 ಫುಟ್ಬಾಲ್ : ಕೊಡಗು ತಂಡಕ್ಕೆ ಭಾನುವಾರ ಆಯ್ಕೆ ಪ್ರಕ್ರಿಯೆ.

Published

on

ಮಡಿಕೇರಿ: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ನಡೆಯಲಿರುವ “ಮಿನಿ ಒಲಿಂಪಿಕ್ಸ್” ಫುಟ್ಬಾಲ್ ಅಂಡರ್-14 ಬಾಲಕ ಮತ್ತು ಬಾಲಕಿಯರ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಜುಲೈ 14ರ ಭಾನುವಾರದಂದು ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2010ರ ನಂತರ ಜನಿಸಿರುವ ಯುವ ಫುಟ್ಬಾಲ್ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತರಬೇಕು. ಭಾನುವಾರ ಬೆಳಗ್ಗೆ 09 ಗಂಟೆಗೆ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆಯು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ

ಕ್ರಿಸ್ಟೋಫರ್ ಅವರ ನೇತೃತ್ವದಲ್ಲಿ ನಡೆಯಲಿದೆ.ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ನಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ (ಈಶ್ವರ್ ತಿಳಿಸಿದ್ದಾರೆ).

Continue Reading

Trending

error: Content is protected !!