Hassan
ಪೆನ್ ಡ್ರೈವ್ ಪ್ರಕರಣ ಸಮಗ್ರ ತನಿಖೆ ಆಗಲಿ ಅನುಪಮ ಆಗ್ರಹ
ಹಾಸನ: ಈಗಾಗಲೇ ಎಲ್ಲಾ ಕಡೆ ಮಾತಾಗಿರುವ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಗ್ರ ತನಿಖೆ ಆಗಬೇಕಾಗಿದೆ. ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವರ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಾಯಿ ಅನುಪಮ ಅಸಮಧಾನವ್ಯಕ್ತಪಡಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಶ್ರೇಯಸ್ ಪಟೇಲ್ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಈ ವಿಚಾರ ಎತ್ತಿರುವುದೆ ಜಿ. ದೇವರಾಜೇಗೌಡರು ಆಗಿರುವುದರಿಂದ ಪೆನ್ ಡ್ರೈವ್ ಇದೆ ಎಂದು ಹೇಳಿಕೆ ನೀಡುವ ಜಿ. ದೇವರಾಜೇಗೌಡರು ಏಕೆ ಮಾಡಿರಬಾರದು ಎಂದು ಗಂಭೀರವಾಗಿ ಆರೋಪಿಸಿ ಟಾಂಗ್ ನೀಡಿದರು.
ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಎಲ್ಲಾ ಕಡೆ ಶ್ರೇಯಸ್ ಪಟೇಲ್‌ಗೆ ಉತ್ತಮವಾದ ವಾತಾವರಣ ಇದೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಪುಟ್ಟಸ್ವಾಮಿಗೌಡರ ಮೊಮ್ಮಗ ಎಂಬುದು ಸೇರಿ ಗೆಲುವಿಗೆ ಪೂರಕ ಆಗಲಿದೆ ಎಂದರು. ನಮ್ಮ ಮಾವ ೧೯೯೯ ರಲ್ಲಿ ಎಂಪಿ ಆಗಿದ್ದಾಗ ಆಸ್ಪತ್ರೆ, ನೀರಾವರಿ ಯೋಜನೆ ಮಾಡಿದ್ದಾರೆ. ನಾನು ಎರಡು ಎಲೆಕ್ಷನ್‌ನಲ್ಲಿ ಅವರ ಮುಂದೆ ಮಂಡಿಯೂರಿದ್ದೇನೆ. ನನ್ನ ಮಗ ೩ನೇ ಚುನಾವಣೆ ಎದುರಿಸುತ್ತಿದ್ದು, ಜಿಲ್ಲೆಯ ಜನ ನಮಗೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಲು ಎಷ್ಟೆ ಹಣ ಹಂಚಿಕೆ ಮಾಡಿದರೂ ಈ ಬಾರಿ ಶ್ರೇಯಸ್ ಪಟೆಲ್ ಗೆಲ್ಲುವುದು ನಿಶ್ಚಿತ. ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ಈಗ ಈ ಕುಟುಂಬಕ್ಕೆ ಶಕ್ತಿ ಇಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೇಯಸ್ ಪಟೇಲ್ ಬೆನ್ನ ಹಿಂದೆ ನಿಂತಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷ ಒಟ್ಟಾಗಿ ಕಸಲೆ ಮಾಡಿದ್ದು ಶ್ರೀರಕ್ಷೆ ಆಗಲಿದೆ. ಜಿಲ್ಲೆಯ ಜನತೆ ನಮ್ಮ ಮಗನಿಗೆ ಮತ ಹಾಕುವಂತೆ ಇದೆ ವೇಳೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ ಮಾತನಾಡಿ, ಈ ಲೋಕಸಭಾ ಚುನಾವಣೆಯಲ್ಲಿ ವಾತವರಣ ಕಾಂಗ್ರೆಸ್ ಪರವಾಗಿದ್ದು, ಸ್ವಯಂ ಪ್ರೇರಿತವಾಗಿ ಶ್ರೇಯಸ್ ಪಟೇಲ್ ಗೆ ಮತ ಹಾಕಬೇಕು ಎನ್ನುವ ವಾತವರಣ ಬಂದಿದೆ. ಕಾಂಗ್ರೆಸ್ ಕಾರ್ಯಕ್ರಮದ ಕಾರ್ಯಕ್ರಮಗಳು ಶ್ರೀರಕ್ಷೆ ಆಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ಹೆಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಮುರುಳಿಮೋಹನ್, ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.
Hassan
ಒಡಲು ತುಂಬಿದ ಹಂದಿನಕೆರೆ-ಹರಳಹಳ್ಳಿ ಕೆರೆಗೆ ಶಾಸಕ ಹೆಚ್.ಪಿ. ಸ್ವರೂಪ್ ಬಾಗಿನ ಅರ್ಪಣೆ
ಹಾಸನ: ಸುರಿಯುತ್ತಿರುವ ನಿರಂತರ ಮಳೆಯಿಂದ ಒಡಲು ತುಂಬಿ ಹರಿಯುತ್ತಿರುವ ಹಾಸನ ತಾಲೂಕಿನ ಮಣಚನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂದಿನಕೆರೆ – ಹರಳಳ್ಳಿ ಕೆರೆಗೆ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಣೆಗೂ ಮುನ್ನ ಗ್ರಾಮದ ಕೆರೆ ದಡದಲ್ಲಿ ಇರುವ ಈಶ್ವರ ದೇವಾಲಯದಲ್ಲಿ ಶಾಸಕ ಸ್ವರೂಪ ಪ್ರಕಾಶ್ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಸುತ್ತ ಮುತ್ತಲ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವರೂಪ್ ಅವರಿಗೆ ಸಾತ್ ನೀಡಿದರು. ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ
ಮೂಡಿಸಿದೆ, ಅದೇ ರೀತಿ ಮಲೆನಾಡು ಭಾಗದಲ್ಲಿ ಸಾಕಷ್ಟು ಹಾನಿಯೂ ಆಗಿದ್ದು ಅದೃಷ್ಟವಶಾತ್ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗಿದೆ ಎಂದರು. ಭಾರಿ ಮಳೆಯಿಂದ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು ಇಂದು ಹಂದಿನಕೆರೆ – ಹರಳಹಳ್ಳಿ ಗೆ ಸೇರಿದ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕೂಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆಯಾಗಿ ರೈತರು ಸಮೃದ್ಧಿಯಾಗಿ ಜೀವನ ಸಾಗಿಸುವಂತಾಗಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಹರಳಹಳ್ಳಿ ಗ್ರಾಂ.ಪ ಪಿಡಿಓ ರಂಗಸ್ವಾಮಿ, ವಿ.ಎ ಶ್ರೀನಿವಾಸ್, ಇಂಜಿನಿಯರ್ ರುಕ್ಮಾಂಗದ ,ನಾಗರಾಜ್ ಹಾಗೂ ಗ್ರಾಮದ ಮುಖಂಡರಾದ ರಂಗರಾಜು, ಮಂಜುನಾಥ್, ವಿಠಲ್,ಹರೀಶ್, ರಮೇಶ್ ಭೂದೇಶ್ ಇತರರು ಉಪಸ್ಥಿತರಿದ್ದರು.
Hassan
ನೋಟಿಸ್ ವಾಪಸ್ ಪಡೆಯದಿದ್ರೆ ಆ.೫ ರಂದು ಕಾಂಗ್ರೆಸ್ ಪ್ರತಿಭಟನೆ ಇ.ಹೆಚ್. ಲಕ್ಷ್ಮಣ್
ಹಾಸನ: ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಸರಿಯಿಲ್ಲ. ಕೂಡಲೇ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ಆಗಸ್ಟ್ ೫ ರಂದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಹೆಚ್. ಲಕ್ಷ್ಮಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೂಡ ಪ್ರಕರಣ ತನಿಖಾ ಹಂತದಲ್ಲಿ ತನಿಖಾಧಿಕಾರಿಗಳ ನೇಮ ಮಾಡಲಾಗಿದ್ದು, ವರದಿ ಬರುವ ಮೊದಲೇ ಖಾಸಗೀ ವ್ಯಕ್ತಿಗಳ ದೂರು ಆಧರಿಸಿ ನೀಡಿರುವ ನೋಟಿಸ್ ಯಾವುದೋ ಒತ್ತಡಕ್ಕೆ ಮಣಿದು ನೀಡಿರುವ ನೋಟಿಸ್ ಆಗಿದೆ. ಮುಖ್ಯಮಂತ್ರಿಗಳಿಗೆ ನೀಡಿರುವ ನೋಟಿಸ್ ಕೂಡಲೇ ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಆಗಸ್ಟ್ ೫ರ ಸೋಮವಾರದಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಡಿಸಿ ಕಛೇರಿಯವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ. ಮೂಡ ಹಗರಣವನ್ನು ಬಿಜೆಪಿ ಮತ್ತು ಜೆಡಿಎಸ್‌ನವರು ವಿನಾಕಾರಣ ಸಿದ್ದರಾಮಯ್ಯ
ಅವರ ಮೇಲೆ ಸುಳ್ಳು ಆಪಾದನೆ ಮಾಡುತ್ತಿದ್ದಾರೆ, ಒಬ್ಬ ಹಿಂದುಳಿದ ನಾಯಕನಿಗೆ ತೇಜೋವಧೆ ಮಾಡಲಾಗಿದೆ. ಅವರು ಅಧಿಕಾರದಲ್ಲಿದ್ದಾಗ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಆದರೂ, ಕೂಡ ಸುಳ್ಳು ಹೇಳಿಕೊಂಡು ಜನರನ್ನ ದಾರಿ ತಪ್ಪಿಸಲು ಪಾದಯಾತ್ರೆ ಮಾಡುತ್ತಿದ್ದಾರೆ. ಎಲ್ಲಾ ಸುಳ್ಳು ಆಪಾದನೆಗಳಿಗೆ ಈಗಾಗಲೇ ಈ ಎರಡು ಪಕ್ಷದವರಿಗೆ ಜನರೇ ಉತ್ತರ ನೀಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇದು ಒಂದು ದಿನದ ಪ್ರತಿಭಟನೆಯಲ್ಲ. ಕಾದು ನೋಡಿ ಮುಂದೆ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಹೇಶ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಣ್ಣ, ದೇವಪ್ಪ ಮಲ್ಲಿಗೆವಾಳ್, ತಾರಚಂದನ್ ಇತರರು ಉಪಸ್ಥಿತರಿದ್ದರು.
Hassan
ಡೆಂಗ್ಯೂ ಪ್ರಕರಣ ಕರ್ತವ್ಯ ನಿರ್ವಹಿಸಲು ಸಮಯ 10 ಗಂಟೆಗೆ ನಿಗಧಿಪಡಿಸಿ – ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಮನವಿ
ಹಾಸನ: ಯಾವುದೇ ಸಂಕಷ್ಟ ಬಂದಾಗ ಮುಂದೆ ನಿಂತು ಸರ್ವೆ ಮಾಡಿ ಆರೋಗ್ಯ ಸೇವೆ ಸಲ್ಲಿಸುವುದರಲ್ಲಿ ಯಾವಾಗಲು ಮಾಡುತ್ತ ಬಂದಿದ್ದು, ಈ ಡೆಂಗ್ಯೂ ಪ್ರಕರಣ ಹೆಚ್ಚಾದ ಹಿನ್ನಲೆ ಕಳೆದ ಒಂದು ತಿಂಗಳಿನಿಂದ ಬೆಳಿಗ್ಗೆ ೭ ಗಂಟೆಯಿಂದಲೆ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ೧೦ ಗಂಟೆಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಲಹೆಗಾರ ಜಿ. ಹನುಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಗಳ ವಿಷಯದಲ್ಲಿ ಸದಾ ಸಿದ್ಧರಿದ್ದು, ಪರಿಸ್ಥಿತಿಗನುಗುಣವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಈ ಹಿಂದೆ ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೋವಿಡ್ ವಾರಿಯರ್ಸ್‌ಗಳಾಗಿ ದುಡಿದಿದ್ದೇವೆ. ಇಲಾಖೆ ಮತ್ತು ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ ಎಂಬುದು ತಮ್ಮ ಗಮನದಲ್ಲಿದೆ ಎಂದರು. ನಮ್ಮ ಹಾಸನ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಕಾರಣ ಪ್ರತಿ ದಿನ ಬೆಳಿಗ್ಗೆ ೭ ರಿಂದಲೇ ಡೆಂಗೀ ಸರ್ವೇ ಮಾಡಬೇಕೆಂದು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಮನೆಯಲ್ಲಿ ಹಲವು ರೀತಿಯ ಜವಾಬ್ದಾರಿಗಳಿರುವ ಕಾರಣ ಮುಂಜಾನೆ ಎಲ್ಲಾ ಬಿಟ್ಟು ಸರ್ವೇ ಮಾಡಲು ಹೋಗುತ್ತಿರುವುದರಿಂದ ನಿತ್ಯ ಮನೆಯಲ್ಲಿ
ಘರ್ಷಣೆ ನಡೆಯುತ್ತಿದೆ. ಈಗಾಗಲೇ ಒಂದು ತಿಂಗಳ ಕಾಲ ಸರ್ವೇ ಮಾಡಿದ್ದೇವೆ. ಇನ್ನು ಮುಂದೆ ನಾವು ಬೆಳಿಗ್ಗೆ ೧೦ ಗಂಟೆಯ ಮೇಲೆ ಸರ್ವೇ ಮಾಡುತ್ತೇವೆ. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಹಾಗೆಯೇ ಇದು ಹೆಚ್ಚುವರಿ ಕೆಲಸವಾದ್ದರಿಂದ ಆರೋಗ್ಯ ಇಲಾಖೆಯ ಜಾರಿಯಲ್ಲಿರುವ ಆದೇಶಾನುಸಾರ ಇದಕ್ಕೆ ನೀಡಬೇಕಾದ ದಿನ ಭತ್ಯೆಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಸ್ಕಿಮ್ ಗಳ ಸರ್ವೇ ಹಣ ಇನ್ನೂ ಕೂಡ ಪಾವತಿಯಾಗಿಲ್ಲ. ಅದನ್ನು ಸಹ ಬಿಡುಗಡೆ ಮಾಡಬೇಕು. ದಯವಿಟ್ಟು ಈ ಬೇಡಿಕೆಗಳನ್ನು ತಾವು ಪರಿಗಣಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಮಮತಾ, ಜಿಲ್ಲಾ ಕಾರ್ಯದರ್ಶಿ ಪುಷ್ಪಲತಾ, ಅರಕಲಗೂಡು ತಾಲೂಕು ಮುಖಂಡರಾದ ತಾರಾ, ಅರಸೀಕೆರೆ ತಾಲೂಕು ಮುಂಖಂಡರಾದ ಕೆ.ಸಿ.ರಮಾ, ಆಲೂರಿನ ಶಿವಮ್ಮ, ಬೇಲೂರಿನ ತಾಯಿರ ಭಾನು, ಸಕಲೇಶಪುರದ ಗೌರಮ್ಮ, ಹಾಸನ ತಾಲೂಕಿನ ನಯನಾ, ಹೊಳೆನರಸಿಪುರದ ಪುಷ್ಪ ಇತರರು ಭಾಗವಹಿಸಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.