Connect with us

Mandya

ಹೊಸಕೆರೆ ಗ್ರಾಪಂ ಪಿಡಿಒ ಮಂಜಮ್ಮ ಲೋಕಾಯುಕ್ತ ಬಲೆಗೆ

Published

on

ಮಧ್ಯವರ್ತಿ ಅಭಿಷೇಕ್‌ಗೌಡ ಭಾಗಿ: ನ್ಯಾಯಾಲಯಕ್ಕೆ ಹಾಜರು ಪಡಿಸಿದ ಅಧಿಕಾರಿಗಳು

ಮಂಡ್ಯ: ನಿವೇಶನಗಳ ಖಾತೆ ಮಾಡಿಕೊಡಲು ಲಂಚ ಕೇಳಿದ ಮದ್ದೂರು ತಾಲ್ಲೂಕು ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಹಾಗೂ ಮಧ್ಯವರ್ತಿ ಅಭಿಷೇಕ್‌ಗೌಡ ಎಂಬುವವರು ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೃಷ್ಣೇಗೌಡ ಎಂಬುವರು ಹೊಸಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನಗಳನ್ನು ಮಾಡಿದ್ದಾರೆ. ಇದನ್ನು ಖಾತೆ ಮಾಡಿಕೊಡುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರತಿ ನಿವೇಶನಕ್ಕೆ ₹2 ಸಾವಿರ ದಂತೆ ₹1.20 ಲಕ್ಷ ರೂ ಲಂಚ ಕೊಡಬೇಕೆಂದು ಪಿಡಿಒ ಡಿಮಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ.

ಇದರಿಂದ ರೋಸಿಹೋದ ಕೃಷ್ಣೇಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ, ಅಂತೆಯೇ ಶನಿವಾರ ಮಧ್ಯವರ್ತಿ ಅಭಿಷೇಕ್‌ಗೌಡ ಮೂಲಕ ಹಣ ಸ್ವೀಕರಿಸುವ ವೇಳೆ ಹಣದ ಸಮೇತ ಸ್ಥಳದಲ್ಲಿಯೇ ಬಲೆಗೆ ಬಿದ್ದಿದ್ದಾರೆ.
ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್‌ ಕುಮಾರ್, ಇನ್‌ಸ್ಪೆಕ್ಟರ್‌ ಪ್ರಕಾಶ್, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಶಂಕರ್, ಮಾನಸಾ ದಾಳಿ ನಡೆಸಿದ್ದಾರೆ.

ಪಿಡಿಒ ಮಂಜಮ್ಮ ಮತ್ತು ಮಧ್ಯವರ್ತಿ ಅಭಿಷೇಕ್‌ಗೌಡ ಈ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ

Published

on

ಮಂಡ್ಯ: ಪೂರ್ವಿಕರ ಕಾಲದಿಂದಲೂ ಗ್ರಾಮದ ಸ್ಮಶಾನ, ಧನ ಕರುಗಳು ಕುಡಿಯಲು ಕೆರೆಕಟ್ಟೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗೆ ಅಡ್ಡಲಾಗಿ ರೈತನೋರ್ವ ತಂತಿ ಬೇಲಿ ಹಾಕಿಕೊಂಡಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಮದ್ಯೆದಲ್ಲಿಯ ಮೃತನ ಶವ ಸುಟ್ಟ ಘಟನೆಗೆ ಸಂವಂಧಿಸಿದಂತೆ ಜನಮಿತ್ರ ಪತ್ರಿಕೆ ಹಾಗೂ ಡಿಜಿಟಲ್ ವರದಿಗೆ ಫಲಶೃತಿ ದೊರೆತಿದೆ.

ಜನಮಿತ್ರ ವರದಿಯಿಂದ ಎಚ್ಚತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ, ರಸ್ತೆಯ ಇಕ್ಕೆಲಗಳ ಇಬ್ಬರೂ ರೈತರಿಂದ ಹತ್ತು, ಹತ್ತು ಅಡಿ ಜಾಗವನ್ನು ಸ್ಮಶಾಬದ ರಸ್ತೆಗೆ ಬಿಡಿಸಿ ಸಫಲತೆ ಕಂಡಿದೆ‌.

ಜನಮಿತ್ರ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ್ದ ಅಧಿಕಾರಿಗಳ ತಂಡ, ಸ್ಮಶಾನ ಹಾಗೂ ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ತೆರಳುವ ರಸ್ತೆಯ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ‌.

ರಸ್ತೆಯ ಎರಡೂ ಬದಿಯಲ್ಲಿನ ರೈತರಾದ ಅಂಧಾನಿಗೌಡ ಹಾಗೂ ಯಶೋಧಮ್ಮ ರವರಿಂದ ತಲಾ ಹತ್ತು ಹತ್ತು ಅಡಿ ಜಾಗವನ್ನು ಸ್ಮಶಾನದ ರಸ್ತೆಗೆ ಬಿಟ್ಟುಕೊಡುವಂತೆ ಮನವಲೈಸಿದ್ದಾರೆ.

ತಾಲ್ಲೂಕು ಆಡಳಿತದ ಮದ್ಯಸ್ಥಿಕೆಯಿಂದಾಗಿ ಇದೀಗ ಹೆಬ್ಬಾಡಿಹುಂಡಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಜನಮಿತ್ರ ಪತ್ರಿಕೆ ಹಾಗೂ ಜನಮಿತ್ರ ಡಿಜಿಜಿಟಲ್ ನ್ಯೂಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Mandya

ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಚೆಲುವರಾಯಸ್ವಾಮಿ

Published

on

ನಾಗಮಂಗಲ : ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂಬಾಗದಲ್ಲಿ ಅಂಗವಿಕಲರಿಗೆ 2024 -25 ನೇ ಸಾಲಿನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ತ್ರಿಚಕ್ರ ವಾಹನ ಸಮಾರಂಭದಲ್ಲಿ ಭಾಗವಹಿಸಿ ಸುಮಾರು 25 ಫಲಾನುಭವಿಗಳಿಗೆ ವಾಹನ ವಿತರಣೆ ಮಾಡುತ್ತ ಮಾತನಾಡಿದರು.

ಅಂಗವಿಕಲರು ದಿನನಿತ್ಯದ ತಮ್ಮ ವ್ಯವಹಾರಿಕ ಕಾರ್ಯನಿಮಿತ್ತ ಕೆಲಸಗಳಿಗೆ ತ್ರಿಚಕ್ರ ವಾಹನ ಬಳಸುವ ಮುಖಾಂತರ ಸರ್ಕಾರದ ಇಂತಹ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಇತರೆ ಚಟುವಟಿಕೆಗಳಲ್ಲಿ ಈ ವಾಹನಗಳನ್ನು ಬಳಸದಂತೆ ತಮ್ಮ ಸ್ವಂತ ವಾಹನಗಳಾಗಿ ಬಳಸಿಕೊಳ್ಳುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆದು ಅನುಕೂಲ ಮಾಡಿಕೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕೃಷಿ ವಿವಿ ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್. ಎಚ್ ಟಿ ಕೃಷ್ಣೆ ಗೌಡ. ಪುರಸಭಾ ಅಧ್ಯಕ್ಷರು ಗಣ್ಯರು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

Continue Reading

Mandya

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ

Published

on

ಮಂಡ್ಯ : ಈ ಚಿತ್ರದಲ್ಲಿರುವ ವ್ಯಕ್ತಿ ಇಂದು (ಮಾ.14) ರಂದು ಮಂಡ್ಯ ರೈಲು ನಿಲ್ದಾಣದಲ್ಲಿ ರೈಲುಗಾಡಿಯಿಂದ ಬಿದ್ದು ಗಾಯಗೊಂಡಿರುತ್ತಾರೆ.

ಸದರಿಯವರ ಹೆಸರು ಮತ್ತು ವಿಳಾಸ ಪತ್ತೆಯಾಗಿರುವುದಿಲ್ಲ ಯಾವುದಾದರೂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ, ಅಥವ ಇವರ ಬಗ್ಗೆ ಮಾಹಿತಿ ಗೊತ್ತಿದ್ದಲ್ಲಿ ಮಾಹಿತಿ ನೀಡಲು
ರೈಲ್ವೆ ಹೊರ ಉಪ ಠಾಣೆ ಮಂಡ್ಯ ಕೋರಿದೆ.

Continue Reading

Trending

error: Content is protected !!