Connect with us

Mysore

ನಂಜನಗೂಡು ತಾಲೂಕು ಪತ್ರಕರ್ತ ಭವನದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Published

on

ನಂಜನಗೂಡು: 75ನೇ ಗಣರಾಜ್ಯೋತ್ಸವ ಆಚರಣೆ ನಂಜನಗೂಡು ತಾಲೂಕು ಪತ್ರಕರ್ತ ಭವನದಲ್ಲಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸಹಕಾಯ೯ದರ್ಶಿ ಹಾಗೂ ಸದಸ್ಯರು ಸೇರಿ ಧ್ವಜಾರೋಹಣ ನೆರವೇರಿಸಲಾಯಿತು.

ಬಳಿಕ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ್ ಮಾತನಾಡಿ ಹಲವಾರು ತ್ಯಾಗ ಬಲಿದಾನ ಫಲವಾಗಿ ಸ್ವತಂತ್ರ ಸಿಕ್ಕಿದೆ. ಅದಕ್ಕೆ ಭಾರತದಲ್ಲಿ ಸೂಕ್ತವಾದ ಸಂವಿಧಾನ ಡಾ.ಬಿ.ಆರ್. ಅಂಬೇಡ್ಕರ್ ರವರು ರಚನೆ ಮಾಡಿದ್ದಾರೆ. ದೇಶದಲ್ಲಿ ಶಾಂತಿ ಸೌಹಾರ್ತೆ ಮುನ್ನಡೆಯಲಿ ಎಂದರು.

ಈ ಸಮಾರಂಭದಲ್ಲಿ ತಾಲೂಕು ಪತ್ರಕರ್ತ ಅಧ್ಯಕ್ಷ ಎಸ್. ಗಂಗಾಧರ್, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಸಹ ಕಾರ್ಯದರ್ಶಿ ಮಹದೇವಸ್ವಾಮಿ ಪಟೇಲ್, ಸದಸ್ಯರಾದ ಬಸವರಾಜು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ತಿ.ನರಸೀಪುರ: ಜೆಡಿಎಸ್‌ ಯುವ ಮುಖಂಡ ದೀಪು ದರ್ಶನ್‌ ಸಿದ್ದೇಗೌಡ ಹೃದಯಾಘಾತದಿಂದ ನಿಧನ

Published

on

ತಿ.ನರಸೀಪುರ : ತಾಲೂಕಿನ ಬನ್ನೂರು ಹೋಬಳಿಯ ಚಾಮನಹಳ್ಳಿ ಗ್ರಾಮದ ದೀಪು ದರ್ಶನ್ ಸಿದ್ದೇಗೌಡ(39) ಅವರು ಇಂದು(ಆ.12) ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದು, ಮೃತರು ಮಡದಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮೃತರಿಗೆ ಮಾಜಿ ಶಾಸಕರಾದ ಎಂ.ಅಶ್ವಿನ್ ಕುಮಾರ್ , ಬಂಧು ಬಳಗ ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ  ಸಂತಾಪ ಸೂಚಿಸಿದ್ದಾರೆ.

Continue Reading

Mysore

ವಲಯ ಮಟ್ಟದಲ್ಲಿ ಸಾರಾ ವಿದ್ಯಾ ಮಂದಿರಕ್ಕೆ ಸಮಗ್ರ ಪ್ರಶಸ್ತಿ

Published

on

ವರದಿ: ಎಸ್.ಬಿ.ಹರೀಶ್ ಸಾಲಿಗ್ರಾಮ

ಸಾಲಿಗ್ರಾಮ: ಶ್ರೀ ಭೈರವೇಶ್ವರ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪಟ್ಟಣದ ಸಾ.ರಾ.ವಿದ್ಯಾ ಮಂದಿರಕ್ಕೆ ಸಮಗ್ರ ಪ್ರಶಸ್ತಿ ಲಭಿಸಿದೆ.

ಪಟ್ಟಣದ ಸಾ.ರಾ.ವಿದ್ಯಾ ಮಂದಿರದ ಆವರಣದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರುಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಎಂ.ತರುಣ ವೈಯುಕ್ತಿಕ ಚಾಂಪಿಯನ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇವರು 100ಮೀ ಮತ್ತು 600 ಮೀ ಓಟದಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಥ್ರೋ ಬಾಲ್‌ ಸ್ಪರ್ಧೆಯಲ್ಲಿ ಬಾಲಕರು ಮತ್ತು ಬಾಲಕಿಯರ ಎರಡು ವಿಭಾಗದಲ್ಲೂ ದ್ವಿತೀಯ ಸ್ಥಾನ, ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಿಲೆಯಲ್ಲಿ ಬಾಲಕರು ಮತ್ತು ಬಾಲಕಿಯರ ಎರಡು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.

100ಮೀ ಓಟದಲ್ಲಿ ಸಂಯುಕ್ತ ಪ್ರಥಮ ಸ್ಥಾನ, 200 ಮೀ ಓಟದಲ್ಲಿ ರಕ್ಷಿತ್ ಪ್ರಥಮ ಹಾಗೂ ಭುವನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎತ್ತರ ಜಿಗಿತದಲ್ಲಿ ಎಂ.ವರುಣ ಪ್ರಥಮ ಸ್ಥಾನ, ತಟ್ಟೆ ಎಸೆತದಲ್ಲಿ ಪಾವನಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇದೇ ವೇಳೆ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಜಾವಲಿನ್, ಉದ್ದ ಜಿಗಿತ, ತ್ರಿವಿಧ ಜಿಗಿತ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದ ವೈಷ್ಣವಿ, ಥ್ರೋಬಾಲ್ ಮತ್ತು ವಾಲಿಬಾಲ್ ಸ್ಪರ್ಧಾಳುಗಳನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಾ.ರಾ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಆರ್.ರವೀಶ್, ಮುಖ್ಯ ಶಿಕ್ಷಕಿ ಚಂದ್ರಕಲಾ ಹಾಗೂ ಶಿಕ್ಷಕ ವೃಂದದವರಾದ ಲತಾ ಕುಮಾರಿ, ಎಂ.ಎಸ್.ರಾಜು, ಎಸ್.ಕೆ.ಸುನಿಲ್ ಕುಮಾರ್, ವೀಣಾ, ಪ್ರತಾಪ್, ಸೋಮಶೇಖರ್, ನಿಸರ್ಗ, ಕೀರ್ತನ, ಸ್ವಾತಿ, ಶಾಂತ, ಸೇರಿದಂತೆ ಹಲವರು ಇದ್ದರು.

Continue Reading

Mysore

ತಿ.ನರಸೀಪುರ: ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರ ವೇತನ ಬಿಡುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Published

on

ತಿ.ನರಸೀಪುರ: ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರನ ವೇತನವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಪ್ರತಿಭಟನೆ ನಡೆಸಲಾಗಿದೆ.

ಪಟ್ಟಣದ ತೋಟಗಾರಿಕೆ ಎದುರು ನಡೆದ ಪ್ರತಿಭಟನಾ ಧರಣಿಯಲ್ಲಿ ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕಳೆದ 14 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಡಿ.ಬಿ.ಪ್ರೇಮ್ ಕುಮಾರ್ ಅವರಿಗೆ ಜನವರಿ 2024ರಿಂದ ನವೆಂಬರ್ 2024ವರೆಗೆ ವೇತನ ಬಾಕಿ ಇರುವುದರಿಂದ ಶೀಘ್ರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ದಸಂಸ ಮುಖಂಡರು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಆಲಗೂಡು ಡಾ.ಎಸ್. ಚಂದ್ರಶೇಖರ್, ತೋಟಗಾರಿಕೆ ಇಲಾಖೆಯಲ್ಲಿ ಟಪಾಲು ವಿಭಾಗದಲ್ಲಿ ಕಳೆದ 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮ್ ಕುಮಾರ್ ಎಂಬುವರಿಗೆ ಬರಬೇಕಿರುವ 1,48, 500ರೂಗಳ ವೇತನವನ್ನು ನೀಡದೆ ಆಧಿಕಾರಿಗಳು ವಿಳಂಬ ಮಾಡುತ್ತಿದ್ದು, ಇಲಾಖಾ ಅಧಿಕಾರಿಗಳು ಸಂತ್ರಸ್ತ ವ್ಯಕ್ತಿಗೆ ಶೀಘ್ರವೇ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಂತ್ರಸ್ತ ವ್ಯಕ್ತಿಯು ಕಳೆದ 8 ತಿಂಗಳುಗಳಿಂದ ತೋಟಗಾರಿಕೆಯ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳಿಗೆ ತಮ್ಮ ಬಾಕಿ ವೇತನ ನೀಡುವಂತೆ ಮನವಿ ಮಾಡಿದರು ಸಹ ಇದುವರೆವಿಗೂ ಅಧಿಕಾರಿಗಳು ಬಾಕಿ ವೇತನವನ್ನು ಬಿಡುಗಡೆಗೊಳಿಸಿರುವುದಿಲ್ಲ.ವೇತನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಫಾರಸ್ಸು ಪತ್ರ ತಂದರೂ ಬಾಕಿ ವೇತನವನ್ನು ನೀಡದೆ ಇಲ್ಲಸಲ್ಲದ ಕಾರಣ ನೀಡಿ ಜಾಣ ಕುರುಡು ನೀತಿ ಅನುಸರಿಸುತ್ತಾರೆ. ಹಾಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂತ್ರಸ್ತ ವ್ಯಕ್ತಿಗೆ ಬಾಕಿ ವೇತನವನ್ನು ಶೀಘ್ರವೇ ನೀಡಲು ಕ್ರಮವಹಿಸುವಂತೆ ಮನವಿ ಮಾಡಿದರು.

ಧರಣಿಯಲ್ಲಿ ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು, ನೆರಗ್ಯಾತನಹಳ್ಳಿ ಮನೋಜ್ ಕುಮಾರ್, ಜಿಲ್ಲಾ ಮುಖಂಡ ಕನ್ನಾಯಕನಹಳ್ಳಿ ಮರಿಸ್ವಾಮಿ, ಕೊಳತ್ತೂರು ಪ್ರಭಾಕರ್, ನಿಲಸೋಗೆ ಕುಮಾರ್, ಸೋಸಲೆ ಶಿವಕುಮಾರ್, ಕುಪ್ಯ ಗವಿಸಿದ್ದಯ್ಯ, ಗಿರೀಶ್, ಪ್ರಸನ್ನ, ಪರಶುರಾಮ್, ಚಂದ್ರಪ್ಪ, ಮಲ್ಲೇಶ್, ರವಿಕಾಂತ್, ಜಯಕುಮಾರ್, ಮಹದೇವ, ಶಿವಕುಮಾರ್, ಸ್ವಾಮಿ ಮತ್ತು ಸಂತ್ರಸ್ತ ಪ್ರೇಮ್ ಕುಮಾರ್ ಹಾಜರಿದ್ದರು.

Continue Reading

Trending

error: Content is protected !!