Hassan
ಪರ್ಯಾಯ ಭೂಮಿ, ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ
![](https://janamitra.co/wp-content/uploads/2024/02/WhatsApp-Image-2024-02-27-at-4.45.11-PM.jpeg)
ಹಾಸನ: ದುದ್ದ, ಶಾಂತಿಗ್ರಾಮ, ಗಂಡಸಿ ಹೋಬಳಿಗಳಲ್ಲಿ ಹಾಸನ ಹಿರಿಯೂರು ಕಾರಿಡರ್ ಯೋಜನೆ ಅಡಿ ಭೂಮಿ ಕಳೆದುಕೊಳ್ಳುತ್ತಿರುವ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯಿಂದ ಪರ್ಯಾಯ ಭೂಮಿ ಮತ್ತು ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾಮದ ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಭೂಮಿ ನಮ್ಮ ಹಕ್ಕು. ಭೂಮಿಗೆ ಭೂಮಿ ಕೊಡಲೇಬೇಕು, ಒಂದೇ ಭಾರತ, ಒಂದೇ ಯೋಜನೆ, ಒಂದೇ ಪರಿಹಾರ ಬೇಕು. ಎಕನಾಮಿಕ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ಆರಂಬಿಸಲಾಗಿದೆ. ಈ ಯೋಜನೆಯು ಹಾಸನ, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ತಾಲ್ಲೂಕಿನ ನೂರಾರು ಹಳ್ಳಿಗಳ ಮೇಲೆ ಹಾದು ಹೋಗುತ್ತಿದೆ. ಈ ಯೋಜನೆಯು ಹಳೆಯ ರಸ್ತೆಯ ಅಗಲೀಕರಣಕ್ಕಿಂತ ಹೊಸದಾಗಿ ನಿರ್ಮಿಸುತ್ತಿರುವ ಕಾರಣ ಸಾವಿರಾರು ಎಕರೆ ಈ ಯೋಜನೆಗೆ ಭೂಸ್ವಾಧೀನವಾಗುತ್ತಿದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿಯವರ ಸಹಭಾಗಿತ್ವದ ಅಡಿಯಲ್ಲಿ ನಡೆಯುತ್ತಿದೆ. ಇಂತಹ ಯೋಜನೆಗಳಿಗೆ ೨೦೧೩ರ ಭೂಸ್ವಾಧೀನ ಕಾಯ್ದೆ ಪ್ರಕಾರ ಶೇಕಡ ೭೦ ರಷ್ಟು ಸಂತ್ರಸ್ಥರ ರೈತರು ಮತ್ತು ನಾಗರೀಕರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಯೋಜನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗದೇ ತಮ್ಮ ಜೀವನೋಪಾಯವೇ ಸಂಕಷ್ಟದಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗೆ ಭೂಮಿ, ಮನೆ- ಮಠ ಕಳೆದುಕೊಳ್ಳುವ ರೈತರು, ನಾಗರೀಕರು ತಮ್ಮ ಭವಿಷ್ಯದ ಬಗ್ಗೆ ಆತಂಕಗಳಾಗಿದ್ದಾರೆ. ಎಷ್ಟೋ ಭೂಮಿ, ಮನೆ, ನಿವೇಶನಗಳು ಈ ಹೆದ್ದಾರಿಯ ನಿರ್ಮಾಣಕ್ಕೆ ಬಿಟ್ಟುಕೊಡಬೇಕಾಗಿದೆ. ಅದಕ್ಕೆ ಸರ್ಕಾರ ನೀಡುವ ಪರಿಹಾರವೇನು ಎಂಬ ಬಗ್ಗೆ ಬಹುತೇಕ ನಾಗರೀಕರಿಗೆ, ರೈತರಿಗೆ ಖಚಿತ ಮಾಹಿತಿ ದೊರೆಯುತಿಲ್ಲ, ಸಮರ್ಪಕವಾದ ಉತ್ತರ ಸಿಗುತ್ತಿಲ್ಲ, ಈ ಗೊಂದಲಗಳ ನಡುವೆ ಬಹುತೇಕ ಸರ್ವೇ ಕಾರ್ಯ ಪೂರ್ಣಗೊಳಿಸಿ ಜಮೀನಿನಲ್ಲಿ ರಸ್ತೆ ಜಾಗ ಸಹ ಗುರುತಿಸಲಾಗಿದೆ. ಇದರ ಮಧ್ಯೆ ರೈತರು ಮುಂಗಾರಿನಲ್ಲಿ ತಮ್ಮ ಜಮೀನಿನಲ್ಲಿ ಬೆಳೆಯಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. ಯಾವುದೇ ಸ್ಪಷ್ಟನೆ ಇಲ್ಲದಿರುವುದರಿಂದ ಅನೇಕರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದೆ ಖಾಲಿ ಬಿಡುವಂತಾಗಿದೆ. ಸಧ್ಯ ಇರುವ ವಾಣಿಜ್ಯ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ರೈತರು ಕಳೆದ ಒಂದು ವರ್ಷದಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಜನಸ್ನೇಹಿಲ್ಲದ ಇಂತಹ ಯೋಜನೆಗಳಿಗಾಗಿ ರೈತರು ತಮ್ಮ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಕೊಡುವ ಪರಿಹಾರದಿಂದ ಭೂಮಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರಿಹಾರದ ಜೊತೆಗೆ ಪರ್ಯಾಯ ಭೂಮಿಯನ್ನು ಕೊಡಬೇಕು ಮತ್ತು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದುಜೊತೆಗೆ ಇದುವರೆಗೂ ಸಾಕಷ್ಟು ಮನವಿ ಸಲ್ಲಿಸಿದ್ದರು ಯಾವುದೇ ಉತ್ತರಗಳು ಬಂದಿರುವುದಿಲ್ಲ ಆದ್ದರಿಂದ ದಯಮಾಡಿ ನಮ್ಮ ಬೇಡಿಕೆಗಳನ್ನು ಹಿಡೇರಿಸಬೇಕಾಗಿ ಕೋರುತ್ತೇವೆ ಎಂದು ಮನವಿ ಮಾಡಿದರು.
ಬೇಡಿಕೆಗಳು: ಯೋಜನೆ ಜಾರಿ ಸಂಬಂಧ ಸಾರ್ವಜನಿಕ ಕುಂದು ಕೊತರೆ ಸಮಸ್ಯೆಯನ್ನು ಆಲಿಸಿ, ಪರಿಹರಿಸಲು ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೂಡಲೇ ನೇಮಿಸಬೇಕು. ಸರ್ವೇ ಕಾರ್ಯಕ್ಕೆ ಮುನ್ನ ಪ್ರತಿ ಗ್ರಾಮದಲ್ಲೂ ರೈತರು ನಾಗರೀಕರ ಸಭೆ ಕರೆದು ಅವರ ಗೊಂದಲಗಳನ್ನು ಪರಿಹಾರ ಮಾಡಬೇಕು. ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡುವ ಪರಿಹಾರದ ಬಗ್ಗೆ ಈ ಕೂಡಲೇ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಭೂಮಿ ಕಳೆದುಕೊಳ್ಳುವ ರೈತರಿಗೆ ಪರ್ಯಾಯ ಭೂಮಿಯನ್ನು ಕೊಡಬೇಕು ಮತ್ತು ಮನೆ ಕಳೆದುಕೊಳ್ಳುವ ಕುಟುಂಬಗಳಿಗೆ ಕಾನೂನು ಪ್ರಕಾರ ಮನೆ ಕಟ್ಟಿಸಿಕೊಡಬೇಕು ಎಂದರು. ಮಾರುಕಟ್ಟೆ ಮೌಲ್ಯ ನಿರ್ಧಾರಿಸುವಾಗ ಅನುಸರಿಸಿದ ಹಿಂದಿನ ಮೂರು ವರ್ಷಗಳ ಎಸ್.ಆರ್ ವ್ಯಾಲು ಪರಿಗಣಿಸಿದ್ದು, ಆ ಸಮಯದಲ್ಲಿ ದೇಶ ವ್ಯಾಪಿ ಕೋರೊನ ಮಹಾಮಾರಿ ಹಟ್ಟಹಾಸ ಮೆರೆದಿದ್ದು ಈ ಸಮಯದಲ್ಲಿ ಯಾವುದೇ ರಿಜಿಸ್ಟ್ರೇಷನ್ ನಡೆದಿರುವುದಿಲ್ಲ ಆಗಾಗಿ ನಮ್ಮಗಳಿಗೆ ಪ್ರಸ್ತುತ ಮಾರುಕಟ್ಟೆ ದರ ನಿಗಧಿ ಮಾಡಬೇಕು. ಯೋಜನಾ ನಿರಾಶ್ರೀತರ ಪ್ರಮಾಣ ಪತ್ರವನ್ನು ಭೂ ಸಂತ್ರಸ್ಥರಿಗೆ ಮೊದಲೇ ಕೊಡಬೇಕು. ಸಂತ್ರಸ್ಥರ ರೈತರು ಮತ್ತು ನಾಗರೀಕರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಲು ಸುಂಕರಹಿತ ಪಾಸುಗಳನ್ನು ಭೂಸ್ವಾಧೀನ ಆಗುವುದಕ್ಕಿಂತ ಮುಂಚೆ ವಿತರಿಸಬೇಕು. ಜಮೀನಿನ ಸ್ವಾಧೀನದ ಮಧ್ಯ ಭಾಗದಲ್ಲಿ ರಸ್ತೆ ಬಂದಲ್ಲಿ ಇಕ್ಕೆಲಗಳಲ್ಲಿ ಉಳಿಯುವ ಜಮೀನನ್ನು ಸರ್ಕಾರವೇ ಸ್ವಾಧೀನ ಮಾಡಿಕೊಂಡು ನಿಗಧಿಪಡಿಸಿರುವ ಬೆಲೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಇ.ಸಿ ಮತ್ತು ಮ್ಯುಟೇಶನ್, ಪಹಣಿ ಇತರೇ ದಾಖಲೆಗಳನ್ನು ತಾವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಿ ಅಕ್ಕ-ಪಕ್ಕದ ಜಮೀನಿಗೆ ಹಾದುಹೋಗುವ ಪ್ರತ್ಯೇಕ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡಿಕೊಡುವುದು. ೧೧. ಸಂತ್ರಸ್ಥ ರೈತರ ಕುಟುಂಬಕ್ಕೆ ಒಂದು ನೌಕರಿ ಕೊಡಬೇಕು ಹಾಗೂ ಹೆದ್ದಾರಿ ಹಾದು ಹೋಗುವ ಹೋಬಳಿ ಕೇಂದ್ರಕ್ಕೆ ಒಂದು ಇಂಟರ್‌ನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಹೈಟೆಕ್ ಆಸ್ಪತ್ರೆಯನ್ನು ತೆರೆಯಬೇಕೆಂದು ತಮ್ಮ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟರು.
ಪ್ರತಿಭಟನೆಯಲ್ಲಿ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯ ಗ್ರಾಮಸ್ಥರಾದ ಮಹೆಂದ್ರ, ಚಂದ್ರೇಗೌಡ, ರಮೇಶ್, ಶಶಿಧರ್, ಲೋಕೇಶ್, ಜಯಣ್ಣ, ರಾಧಮ್ಮ, ರಂಗಯ್ಯ ಇತರರು ಉಪಸ್ಥಿತರಿದ್ದರು
Hassan
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ – ಎಂ.ಎಚ್. ಕುಮಾರ ಶೆಟ್ಟಿ
![](https://janamitra.co/wp-content/uploads/2025/01/WhatsApp-Image-2025-01-22-at-6.01.21-PM.jpeg)
ಹಾಸನ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನನ್ನನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಹಾಗೂ ರಾಜ್ಯ ಸಮಿತಿ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸುವುದಾಗಿ ಆಯ್ಕೆಗೊಂಡ ಎಂ.ಎಚ್. ಕುಮಾರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನುಮೋದನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ ಎಂದರು.
ನಾನು ಮಲ್ಲಿಗೆವಾಳ್ ಗ್ರಾಮದಲ್ಲಿ ಜನಿಸಿದ್ದು, ನಾನು ಎರಡು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಮತ್ತೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಮೂರನೇ ಬಾರಿಗೆ ಆಯ್ಕೆಗೊಂಡು ಹಾಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಗ್ರಾಮೀಣ ಭಾಗದಿಂದ ಬಂದಿದ್ದು, ಕಾಂಗ್ರೆಸ್ ಪಕ್ಷವು ಡಿ.ಕೆ. ಶಿವಕುಮಾರ ರವರು ನನ್ನನ್ನು ಗುರುತಿಸಿ, ಅನುಮೋಧಿಸಿ ರಾಜ್ಯ ಕಾರ‍್ಯದರ್ಶಿಯಾಗಿ ನಮ್ಮ ರಾಜ್ಯಾಧ್ಯಕ್ಷರಾದ
ಮಧು ಬಂಗಾರಪ್ಪ ಅವರಿಂದ ಆದೇಶ ಪತ್ರವನ್ನು ನೀಡಿದ್ದಾರೆ. ನಮ್ಮ ಪಕ್ಷವು ಕಾರ್ಯಕರ್ತರನ್ನು ಗುರುತಿಸಿ ಈ ಹುದ್ದೆ ಕೊಟ್ಟಿದ್ದಾರೆ ಎಂದರೇ ನಮಗೆ ಹೆಮ್ಮೆ ಆಗುತ್ತದೆ. ಈ ಹುದ್ದೆ ಕೊಡಿಸಿದ ಪಕ್ಷದ ಎಲ್ಲಾ ನಾಯಕರಿಗೆ ಕೃತಜ್ಞತೆ ಹೇಳಿದರು. ಕೊಟ್ಟಿರುವ ಹುದ್ದೆಯನ್ನು ನಿಬಾಯಿಸಿಕೊಂಡು ಹೋಗುವುದಾಗಿ ಇದೆ ವೇಳೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ನೇಕಾರರ ಸಂಘದ ಅಧ್ಯಕ್ಷ ಎ.ವಿ. ಶಂಕರ ಶೆಟ್ಟಿ, ಶೇಷಪ್ಪ ಚಾರ್ ಇತರರು ಉಪಸ್ಥಿತರಿದ್ದರು.
Hassan
ಅಯ್ಯಪ್ಪ ಮಾಲೆದಾರ ಕನ್ನಡಿಗರ ಮೇಲೆ ಕೇರಳದಲ್ಲಿ ಹಲ್ಲೆ, ಕನ್ನಡ ಧ್ಚಜಕ್ಕೆ ಅಪಮಾನ, ಮುಂದೆ ಈ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಿ: ವಿಜಯಕುಮಾರ್ ಮನವಿ
![](https://janamitra.co/wp-content/uploads/2025/01/WhatsApp-Image-2025-01-22-at-5.55.24-PM.jpeg)
ಹಾಸನ: ಕೇರಳದಲ್ಲಿ ಕನ್ನಡಿಗರ ಅಯ್ಯಪ್ಪ ಮಾಲೆದಾರೆಗಳ ಮೇಲೆ ನಡೆದ ಹಲ್ಲೆ ಮಾಡಿದಲ್ಲದೇ ಕನ್ನಡಿಗರ ಸ್ವಾಭಿಮಾನಕ್ಕೆ ಹಾಗೂ ಕರ್ನಾಟಕದ ಧ್ವಜಕ್ಕೆ ಮಾಡಿದ ಅಪಮಾನವಾಗಿದ್ದು, ಮುಂದೆ ಅಯ್ಯಪ್ಪ ಮಾಲೆದಾರಿಗಳಿಗೆ ಯಾವ ರೀತಿ ತೊಂದರೆ ಆಗದಂತೆ ಕರ್ನಾಟಕ ಸರಕಾರ ಕ್ರಮತೆಗೆದುಕೊಳ್ಳುವಂತೆ ಅರಕಲಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಅಧ್ಯಕ್ಷ ವಿಜಯಕುಮಾರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಮೊದಲಿಗೆ ಒರ್ವ ಪತ್ರಕರ್ತರಿಗೆ ಹಾಗೂ ಹಾಸನದ ಜಿಲ್ಲಾವರಿಷ್ಠಾಧಿಕಾರಿ ಹೊಳೆನರಸೀಪುರದ ಡಿವೈ.ಎಸ್.ಪಿ. ಮೇಡಂ ಅರಕಲಗೂಡು ಸರ್ಕಲ್ ಇನ್ಸ್ ಪೆಕ್ಟರ್ ಸಿಬ್ಬಂದಿಗಳಿಗೆ ಧನ್ಯವಾದಗಳು. ಮತ್ತು ಕ್ಯಾಲಿಕಟ್ ಹತ್ತಿರ ಕರ್ನಾಟಕದ ಅಯಪ್ಪ ಮಾಲೆದಾರೆಗಳ ಮೇಲೆ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲ್ಲೂಕಿನ ಪಾಣಂಬರ್ ಗ್ರಾಮದಲ್ಲಿ ಇರುವ ಮಾರಿಯಾಮ್ಮ ಹಲ್ಲಾ ಅಂಗಡಿಯ ಕೆಲಸದವರಿಂದ ಅಯ್ಯಪ್ಪ ಮಾಲೆದಾರೆಗಳ ಮೇಲೆ ಹಲೆ ಮಾಡಿದ್ದಾರೆ. ನೆಡೆದ ಘಟನೆ ವಿವರ ನಾವು ಸುಮಾರು ೨೪೦ ಕೆಜಿ ಯವರೆಗೆ ಹಲ್ವಾವನ್ನು ತೆಗೆದುಕೊಂಡು ಹಣ ಪಾವತಿ ಮಾಡಿರುತ್ತೇವೆ.ಇದರ ಮಧ್ಯೆ ಹಲ್ಲಾ ತೂಕ ಹಾಕುವಾಗ ಗ್ರಾಂಗಳ ವ್ಯತ್ಯಾಸ ಮಾಡಿರುತ್ತಾರೆ. ಅದನ್ನು ಸ್ವಾಮಿಗಳು ಪ್ರಶ್ನಿಸಿದಾಗ ಅದಕ್ಕೆ ಹಲ್ವ, ಕಟ್ಟು ಮಾಡುವ ಸೇಲ್ಸ್ ಮ್ಯಾನ್ ಕೆಟ್ಟದಾಗಿ ಮಾತನಾಡಿದ್ದಾನೆ ಅಲ್ಲೆ ಇದ್ದ ಅಂಗಡಿ ಸಿಬ್ಬಂದಿ ಅ ಸಿಬ್ಬಂದಿಗೆ ಬೈದು ಹಲ್ಕಾ ಕೊಡುವಂತೆ ತಿಳಿಸಿರುತ್ತಾನೆ ಎಂದು ದೂರಿದರು. ನಂತರ ಹಲ್ವಾ ಎಲ್ಲಾರು ತೆಗೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಸ್ವಾಮಿಗಳಾದ ಜೀವನ್, ಹರೀಶ್ ದಿಲೀಪ್ ಅವರು ಕರ್ಜೂರ್ ದ ವಿಚಾರದಲ್ಲಿ ಬೆಲೆಯ ವಿಚಾರವಾಗಿ ಮಾತನಾಡುವಾಗ ಅಲ್ಲೆ ಇದ್ದ ಐದು ಜನ
ಸಿಬ್ಬಂದಿಯು ನಮ್ಮ ಸ್ವಾಮಿಗಳ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾ ಕೆಟ್ಟದಾಗಿ ಮಾತಾನಾಡುತ್ತ ಇರುತ್ತಾರೆ. ನಂತರ ವಿಜಯ್ ಮತ್ತು ಗುರುಸ್ವಾಮಿಗಳು ಹೋಗಿ ಸಿಬ್ಬಂದಿಯವರಿಗೆ ಕೇಳಿದಾಗ ನಮ್ಮ ಮೇಲು ಸಹಾ ಸಿಟ್ಟಾಗಿ ಮಾತಾನಾಡುತ್ತ ಕೌಂಟರ್ ನಲ್ಲಿ ಇದ್ದ ಸಿಬ್ಬಂದಿಗಳಲ್ಲಿ ಕೇರಳ ರಾಜ್ಯದ ಸಿಬ್ಬಂದಿಯು ಗುಂಡ್ಲುಪೇಟೆಯ ಸಿಬ್ಬಂದಿ ಜೊತೆ ಈ ಕರ್ನಾಟಕದ ಸೂಳೆ ನನ್ನ ಮಕ್ಕಳದು ದುರಂಕಾರ ಜಾಸ್ತಿ ಎಂದು ಮಾಲಯಾಳಂ ನಲ್ಲಿ ಅವ್ಯಾಚಪದಗಳಿಂದ ನಮ್ಮನ್ನು ನಿಂದಿಸಿದ್ದು, ಅರಕಲಗೂಡು ತಾಲ್ಲೂಕಿನ ಕಳ್ಳಿಮುದ್ದನಹಳ್ಳಿ ಗ್ರಾಮದ ಮನು ಎಂಬುವರಿಗೆ ಗಾಯವಾಗಿದ್ದು, ಮಲಪ್ಪುರಮ್ ಸರ್ಕಾರಿ ಅಸ್ಪತ್ರೆಗೆ ಸೇರಿಸಿದ್ದಾರೆ. ಕನ್ನಡಿಗರು ಎಂದು ಅವ್ಯಾಚ ಪದಗಳನ್ನು ಬಳಸಿ ನಿಂದಿಸಿ ಹಲ್ಲೆ ಮಾಡಿದು ಹಾಸನದ ಎಸ್ ಪಿ ಯವರ ಮಾಲೆದಾರೆಗಳಿಗೆ ಫೋನ್ ಮೂಲಕ ಸಹಕಾರ
ಮಾಡಿ ಅಸ್ಪತ್ರೆಗೆ ಸೇರಿಸಲು ಸಹಾಯ ಮಾಡಿರುತ್ತಾರೆ. ಅಲ್ಲೆ ಪಕ್ಕದಲ್ಲಿ ಇದ್ದ ನಮ್ಮ ಕನಾರ್ಟಕದ ಸ್ವಾಮಿಯೊಬ್ಬರು ಮಾಲಯಾಳಂನಲ್ಲಿ ಕರ್ನಾಟಕದ ಸೂಳೆ ಮಕ್ಕಳು ಎಂದು ಬೈಯುವ ವಿಚಾರ ತಿಳಿಸಿದ್ದರು. ನಾವು ಅದನ್ನ ಪ್ರಶ್ನೆ ಮಾಡಿ ಕೇಳಿದಾಗ ಅಲ್ಲಿ ಇದ್ದ. ಅಂಗಡಿ ಮಾಲಿಕ ಮತ್ತು ವಿಜಯ್ ಮಾತಾನಾಡುತ್ತ ಇದ್ಧಿ ಆ ಸಮಯದಲ್ಲಿ ನಮ್ಮ ಸ್ವಾಮಿಗಳು ಬಸ್ಸು ಹತ್ತಲು ಹೋಗತ್ತಿದ್ದಾಗ ಪಕ್ಕದ ಹಲ್ವ, ಅಂಗಡಿಯಿಂದ ಬಂದ ಮಲಯಾಳಿ ಮತ್ತು ಅಂಗಡಿಯಲ್ಲಿಂದ ಹುಡುಗರು ನಮ್ಮ ಸ್ವಾಮಿಗಳ ಮೇಲೆ ಹಲ್ಲೆ ಮಾಡಿ ಅಯ್ಯಪ್ಪ ಸ್ವಾಮಿಗಳ ಮಾಲೆ ಹರಿದು ಹಾಗೂ ಹಲ್ವಾ ಅಂಗಡಿ ಇತರ ಸಿಬ್ಬಂದಿ ಅಲ್ಲೆ ಇದ್ದ ವಾಹನದ ಧ್ವಜದ ಕೋಲುನ್ನು ಮುರಿಯಲು ಯತ್ನಸಿದ ಸಮಯದಲ್ಲಿ ಪುನಃ ಗಲಾಟೆ ಹಾಗುತ್ತೆ, ನಂತರ ನಮ್ಮ ಇಬ್ಬರು ಸ್ವಾಮಿಗಳಿಗೆ ಗಂಭೀರವಾದ ಪೆಟ್ಟು ಬಿದ್ದಿದೆ ಎಂದರು.
ನಂತರ ಕೇರಳದ ಪೋಲಿಸ್ ಅವರ ಸಹಾಯ ಕೇಳಿದರು ಯಾರು ಬರದ ಕಾರಣ, ವಿಜಯ್ “ನಮ್ಮ ಹಾಸನದ ಎಸ್ ಪಿ ಮೇಡಂ ಅವರಿಗೆ ವಿಚಾರ ತಿಳಿಸಿದವು ಇವರ ಸಹಕಾರ ದಿಂದ ನಂತರ ಬಂದ ಕೇರಳದ ಪೋಲಿಸ್ ಅವರ ಮೂಲಕ ಖಾಸಗಿ ಅಸ್ಪತ್ರೆ ವಾಹನ ತರಸಿಕೊಂಡು ಡಿ ಎಮ್ ಎಸ್ ಅಸ್ಪತ್ರೆಗೆ ಪ್ರಥಮ ಚಿಕಿತ್ಸಾ ಕೊಡಿಸಿ, ಅವರು ಅಲ್ಲಿನಾ ಜಿಲ್ಲಾ ಅಸ್ಪತ್ರೆಗೆ ಹೋಗ ಬೇಕು ಎಂದು ತಿಳಿಸಿದರು. ನಂತರ ನಾವು ಹಲ್ವಾ ಅಂಗಡಿ ಹತ್ತಿರ ಬಂದು ಅಲ್ಲೇ ಇದ್ದ ಮಾಲಿಕರ ಹತ್ತಿರ ಹಲ್ವಾದ ಬಿಲ್ ಕೇಳಿದರೆ ಕೊಡುವುದಕ್ಕೆ ನಕಾರ ಮಾಡಿದರು. ಯಾವಾಗ ನಾವು ಬಿಲ್ ಬೇಕು ಎಂದು ಪಟ್ಟು ಹಿಡಿದ ಕಾರಣ ಬಿಲ್ ಕೊಟ್ಟರು. ಜಗಳ ಮಾಡಿದ ಹುಡುಗರು ಎಲ್ಲಿ ಅಂದರೆ ಅವರು ಕದ್ದು ಹೋಗಿದ್ದಾರೆ ಎಂದು ಸುಳ್ಳು ಹೇಳಿ ನಮ್ಮ ಜೊತೆಯಲ್ಲಿ ಪುನಃ ಜಗಳ ಮಾಡಿದರು. ನಂತರ ಅಲ್ಲಿನ ಸರ್ಕಲ್
ಇನ್ಸ್‌ಪೆಕ್ಟರ್ ಬಂದು ನಮ್ಮನ್ನು ಠಾಣೆಗೆ ಕರೆದುಕೊಂಡು ಹೋಗಿದ ನಂತರ ಹಲ್ಲಾ ಅಂಗಡಿ ಮಾಲೀಕರು ಬರುತ್ತಾರೆ. ಪೋಲಿಸರ ಜೊತೆಯಲ್ಲಿ ಗಲಾಟೆ ಮಾಡಿದ ಹುಡುಗರು ಬೇಕೆ ಬೇಕು ಎಂದಾಗ ಹಲ್ಲಾ ಅಂಗಡಿ ಮಾಲಿಕ ತನ್ನ ಕಾರಿನಲ್ಲಿ ಕರೆದುಕೊಂಡು ಬಂದನು. ನಂತರ ಪೋಲಿಸರ ಸಮುಖದಲ್ಲಿ ತೀರ್ಮಾನ ಮಾಡುತ್ತಾರೆ. ಅಸ್ಪತ್ರೆಯ ಖರ್ಚು ವೆಚ್ಚವನ್ನು ನೀಡಿದರು. ನಾವು ಅಲ್ಲಿಂದ ಬಂದ ಮೇಲೆ ನಮ್ಮ ಕರ್ನಾಟಕದ ಕೆಲವು ಡ್ರೈವರ್ ಗಳು ಅಂಗಡಿ ಮಾಲಿಕರ ಪರವಾಗಿ ನಿಂತು ಒಂದು ವಿಡಿಯೋ ಮಾಡಿಸಿರುವ ಸಂಗತಿ ನೋಡಿದ್ರಿ ಅದರಲ್ಲಿ ನಮ್ಮ ಅಂಗಡಿಯ ಸಿಬ್ಬಂದಿಗಳಿಗೆ ಕನ್ನಡ ಗೊತ್ತಿಲ್ಲಾ ಎಂದು ಸ್ವಾಮಿಗಳು ಕನ್ನಡದಲ್ಲಿ ಬೈದರು ಎಂದು ಸುಳ್ಳು ಮಾಹಿತಿಯನ್ನು ಮಾಲಿಕ ಅನೂಪ್ ಹೇಳಿರುತ್ತಾನೆ. ಇದು ಅಪ್ಪಟವಾದ ಸುಳ್ಳು ಯಾಕೆಂದರೆ ನಾವು ಸುಮಾರು ಎಂಟು
ವರ್ಷಗಳಿಂದ ಅಲ್ಲೆ ಹಲ್ಲಾ ತಂದಿರುತ್ತೇವೆ. ನಮಗೆ ಸಹಾ ಗೊತ್ತಿದೆ ಕನ್ನಡ ಬರುತ್ತ ಇಲ್ಲಾವ ಎಂದು ಅಂಗಡಿ ಮಾಲಿಕನ ವ್ಯಾಪಾರಕ್ಕೆ ಮುಂದೆ ತೊಂದರೆ ಹಾಗಬಾರದು ಎಂದು ಕೇವಲ ನೆಪ ಮಾತ್ರಕ್ಕೆ ಕ್ಷಮೆ ಕೇಳಿರುತ್ತಾನೆ ಎಂದು ದೂರಿದರು. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಹಾಗೂ ಕರ್ನಾಟಕದ ಧ್ವಜಕ್ಕೆ ಮಾಡಿದ ಅಪಮಾನವಾಗಿದ್ದು ಮುಂದೆ ಅಯ್ಯಪ್ಪ ಮಾಲಾದಾರೆಗಳಿಗೆ ಯಾವುದೇ ರೀತಿ ತೊಡ ಹಾಗದೆ ರೀತಿ ಕೇರಳ ಸರ್ಕಾರ ಮತ್ತು ನಮ್ಮ ಕರ್ನಾಟಕ ಸರ್ಕಾರ ಕ್ರಮತೆಗೆದುಕೊಳ್ಳಬೇಕು ಎಂಬುವುದು ನಮ್ಮ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ, ಹೊರಗುತ್ತಿಗೆದಾರರ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯ್ ಡಿ.ಎಂ. ಗೌಡ, ಹರೀಶ್, ಕರವೇ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಧರ್ಮರಾಜು, ಮನು ಇತರರು ಉಪಸ್ಥಿತರಿದ್ದರು.
Hassan
ಜಿಲ್ಲೆಯ ವಕ್ಸ್ ಬೋರ್ಡ್ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ: ಬಿ.ಹೆಚ್. ಸುಲೈಮಾನ್ ಆಗ್ರಹ
![](https://janamitra.co/wp-content/uploads/2025/01/WhatsApp-Image-2025-01-22-at-16.58.58_25c2a861.jpg)
ಹಾಸನ: ಬೋರ್ಡ್ ಅಧಿಕಾರಿಯಾದ ಜರೀನಾ ಬೇಗಂರವರ ಬಗ್ಗೆ ಅನುಮಾನ ಇರುವುದರಿಂದ ಜಿಲ್ಲೆಯ ವಕ್ಸ್ ಬೋರ್ಡ್‌ನಲ್ಲಿ ಇಲ್ಲಿವರೆಗೂ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಬಿ.ಹೆಚ್. ಸುಲೈಮಾನ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ಜಿಲ್ಲೆಯ ವಕ್ಸ್ ಬೋರ್ಡ್‌ನಲ್ಲಿ ೨೧ ಜನರ ಸಲಹೆ ಸಮಿತಿ ಇದ್ದರೂ ಸಹ ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎನ್ನುವಂತೆ ವಕ್ಸ್ ಬೋರ್ಡಿನ ಅಧ್ಯಕ್ಷರೂ ಮತ್ತು ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿಯಾದ ಶ್ರೀಮತಿ ಜರೀನಾ ಬೇಗಂರವರು ಸೇರಿಕೊಂಡು ಜಿಲ್ಲಾ ವ ಬೋರ್ಡಿನಲ್ಲಿ ನಡೆಯುತ್ತಿರುವಂತಹ ಯಾವುದೇ ವಿಚಾರಗಳನ್ನು ಸಲಹ ಸಮಿತಿಗಳಿಗೆ ತಿಳಿಸದೇ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಸಲಹಾ ಸಮಿತಿಯ ನಿರ್ದೇಶಕರುಗಳಿಗೆ ಉಪಾಧ್ಯಕ್ಷರುಗಳಿಗೆ ಬಹಳಷ್ಟು ಅವಮಾನವನ್ನು ಮಾಡಿರುತ್ತಾರೆ ಎಂದು ದೂರಿದರು.
ಸಲಹಾ ಸಮಿತಿಯ ೨೧ ಜನರ ಆಯ್ಕೆಯಾಗಿ ೨೬ ತಿಂಗಳು ಕಳೆದರೂ ಇದುವರೆಗೆ ೦೪ ಸಭೆಗಳನ್ನು ಮಾಡಿರುತ್ತಾರೆ. ಹಾಗೂ ಯಾವುದೇ ಸಭಾ ವಿಷಯಗಳನ್ನು ಸಭೆಯಲ್ಲಿ ಚರ್ಚಿಸದೆ ತಮಗೆ ಇಷ್ಟ ಬಂದಂತೆ ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ. ತಿಂಗಳಿಗೆ ಒಮ್ಮೆ ಸಲಹಾ ಸಮಿತಿಯ ಸಭೆಯನ್ನು ಕರೆಯುವ ಪದ್ಧತಿ ಇದ್ದು, ಅದನ್ನು ಉಲ್ಲಂಘಿಸಿದ್ದಾರೆ. ದಿನಾಂಕ: ೨೫/೧೦/೨೦೨೪ರಂದು ರಾಜ್ಯದಿಂದ ೦೮ ಡೆತ್ ಫ್ರೀಜರ್‌ಗಳನ್ನು ತಾಲ್ಲೂಕುವಾರು ವಿತರಿಸಲು ರಾಜ್ಯ ವಕ್ಸ್ ಬೋರ್ಡ್‌ನಿಂದ ಹಾಸನ ಜಿಲ್ಲಾ ವಕ್ಸ್ ಬೋರ್ಡ್‌ಗೆ ಬಂದಿರುತ್ತದೆ ಎಂದರು.
ಆದರೆ ಈ ಡೆತ್ ಫ್ರೀಜರ್‌ಗಳು ಹಾಸನ ಜಿಲ್ಲೆಗೆ ಬಂದಿರುವುದಾಗಲೀ ಅಥವಾ ಇವುಗಳನ್ನು ಯಾವ ತಾಲ್ಲೂಕುಗಳಿಗೆ ಹಂಚಬೇಕೆಂದು ಸಲಹಾ ಸಮಿತಿಗೆ ತಿಳಿಸದೆ ತಮಗೆ ಮನಬಂದಂತೆ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿಯಾದ ಶ್ರೀಮತಿ ಜರೀನಾ ಬೇಗಂರವರು ತಾಲ್ಲೂಕಿನ ಹಳ್ಳಿಗಳಿಗೆ ಡೆತ್ ಫ್ರೀಜರ್‌ಗಳನ್ನು ಹಂಚಿಕೆ ಮಾಡಿರುತ್ತಾರೆ. ಇದರಲ್ಲಿ ಬಹಳಷ್ಟು ಭ್ರಷ್ಟಾಚಾರಗಳು ನಡೆದಿರುವ ಬಗ್ಗೆ ಅನುಮಾನ ಇದ್ದು ತಾಲ್ಲೂಕಿನ ಹೆಡ್ ಮಸೀದಿಗಳಿಗೆ ಹಂಚಬೇಕಾದ ಡೆತ್ ಫ್ರೀಜರ್‌ಗಳನ್ನು ಸಲಹ ಸಮಿತಿಗೆ ಗೊತ್ತಿಲ್ಲದೆ ಹಂಚಿರುವುದು ಭ್ರಷ್ಟಚಾರಕ್ಕೆ ಅನುವು ಮಾಡಿಕೊಟ್ಟಂತೆ ಆಗಿದೆ. ೨೬ ತಿಂಗಳು ಕಳೆದರೂ ಜಿಲ್ಲಾ ವಕ್ ಬೋರ್ಡ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿರುವುದಿಲ್ಲ.
ತಾಲ್ಲೂಕುವಾರು ಮಸೀದಿಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು ಆಯ್ಕೆ ಆಗಿರುವುದಿಲ್ಲ. ಸುಮಾರು ೧ಳಿ ವರ್ಷದಿಂದ ಅರ್ಜಿಯನ್ನು ಸಲ್ಲಿಸಿದ ಮಸೀದಿ ಅಧ್ಯಕ್ಷರುಗಳಿಗೆ ಅರ್ಜಿಯನ್ನು ವಿಲೇವಾರಿ ಮಾಡಿರುವುದಿಲ್ಲ ಹಾಗೂ ವಕ್ ಬೋರ್ಡಿನಿಂದ ಮಸೀದಿಗಳಿಗೆ ಯಾವುದೇ ಮಾಹಿತಿಯನ್ನು ಕೊಟ್ಟಿರುವುದಿಲ್ಲ. ಅಧಿಕಾರಿಯವರು ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದಾರೆ. ಜಿಲ್ಲಾ ವಕ್ಸ್ ಬೋರ್ಡ್ ಅಧಿಕಾರಿ ಶ್ರೀಮತಿ ಜರೀನಾ ಬೇಗಂರವರು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದು, ಜಿಲ್ಲಾ ವಕ್ಸ್ ಬೋರ್ಡ್‌ನಲ್ಲಿ ಸುಮಾರು ೩೦ ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರು ೨೦೧೨ ರಿಂದ ೨೦೨೪ರವರೆಗೆ ಪಡಿತರ ಪದಾರ್ಥಗಳನ್ನು ಪಡೆದು ರೂ. ೧,೩೫,೬೩೮ ರೂ.ಗಳ ದಂಡವನ್ನು ಸರ್ಕಾರಕ್ಕೆ ಪಾವತಿಸಿರುತ್ತಾರೆ. ಅಲ್ಲದೆ ಇವರು ೩೦ ವರ್ಷಗಳಿಂದ ಜಿಲ್ಲಾ ವಕ್ಸ್ ಬೋರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ ಏನೆಲ್ಲಾ ಭ್ರಷ್ಟಾಚಾರ ಮಾಡಿರುವ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ಕೋರಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭೇರ್ ಅಹಮದ್, ಅನ್ಸರ್ ಪಾಷಾ, ಸಬ್ಬಿ, ಅಬ್ದೂಲ್ ರಫೀಕ್ ಇತರರು ಪಾಲ್ಗೊಂಡಿದ್ದರು.
-
Hassan20 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
Chamarajanagar18 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
State13 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
National - International12 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
Hassan15 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
Chamarajanagar9 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Hassan16 hours ago
ಮೊಟ್ಟ ಮೊದಲ ಬೃಹತ್ ಎಜುಕೇಷನ್ ಎಕ್ಸ್ ಪೋ 2025 ರ ಪ್ರಚಾರ ವಾಹನಕ್ಕೆ ಚಾಲನೆ
-
National - International11 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ