Connect with us

Mandya

ಪರೀಕ್ಷೆಯಲ್ಲಿ ಅನುತ್ತೀರ್ಣ ಹಿನ್ನೆಲೆ ವಿದ್ಯಾರ್ಥಿ ನೇಣಿಗೆ ಶರಷು

Published

on

ಮದ್ದೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಹಿನ್ನಲೆ ಮನನೊಂದು ವಿದ್ಯಾರ್ಥಿಯೋರ್ವ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ನಿಖಿಲ್(16) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಮದ್ದೂರು ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದ ನಿಖಿಲ್, ಫಲಿತಾಂಶ ನೋಡಿದ ಕೆಲವೇ ನಿಮಿಷದಲ್ಲಿ ತಮ್ಮ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ‌ ಶರಣಾಗಿದ್ದಾನೆ.

ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಅದ್ದೂರಿಯಾಗಿ ಜರುಗಿದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 405ನೇ ಪಟ್ಟಾಭಿಷೇಕ ಮಹೋತ್ಸವ

Published

on

ಮದ್ದೂರು: ನಗರ ಕೋಟೆಬೀದಿಯಲ್ಲಿರುವ ಶ್ರೀ ಗುರುರಾಘವೇಂದ್ರರ ಮಂದಿರದಲ್ಲಿ ಗುರುವಾರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಹೋತ್ಸವ ಅಂಗವಾಗಿ ಮಠದಲ್ಲಿ ಬೆಳಿಗ್ಗೆ 7.30 ರಿಂದ 2 ಗಂಟೆಯವರೆಗೆ ಶ್ರೀ ಸನ್ನಿದಿಗೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.


ನಗರ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಭಕ್ತಾಧಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಸೇವಾ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಪ್ರಸಾದ್, ಕಾರ್ಯಧ್ಯಕ್ಷ ವಿ.ಆರ್.ಗುಂಡುರಾವ್, ಕಾರ್ಯದರ್ಶಿ ಬಿ.ಜಿ.ವೆಂಕಟೇಶ್ ಬುಧ್ಯ, ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಯು.ಮೋಹನ್, ವ್ಯವಸ್ಥಾಪಕ ಕಾರ್ಯದರ್ಶಿ ಜಿ.ಎನ್.ಭಾರ್ಗವ, ಖಜಾಂಚಿ ಎಸ್.ವೆಂಕಟೇಶಮೂರ್ತಿ, ಉಪಾಧ್ಯಕ್ಷರಾದ ಎಂ.ಜಿ.ವೆಂಕಟೇಶ್, ಸತೀಶಭಟ್ಟ, ಸಹಾಯಕ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಲಲತಾ ಸತ್ಯನಾರಾಯಣ ಬಿಳಿಯ ಸೇರಿದಂತೆ ಇತರರು ಇದ್ದರು.

Continue Reading

Mandya

ವಿಜ್ಞಾನ ತಂತ್ರಜ್ಞಾನ ಧರ್ಮ ಆಧ್ಯಾತ್ಮ ಇವುಗಳ ಅವಿನಾಭಾವ ಸಂಬಂಧ: ಚುಂಚಶ್ರೀ ಅಭಿಮತ

Published

on

ನಾಗಮಂಗಲ: ಅಂತರಂಗ ಅರಿವು ಮತ್ತು ಬಾಹ್ಯದ ಬೆಳಕು ಒಂದಾದ ಘಳಿಗೆಯು ವಿದ್ಯಾರ್ಥಿಗಳ ಬದುಕನ್ನು ಹಸನ ಮಾಡುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಶ್ರೀ ಕ್ಷೇತ್ರದ ಬಿಜಿಎಸ್ ಸಭಾ ಭವನದಲ್ಲಿ ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ವಿಜ್ಞಾತಂ ಉತ್ಸವ-2026’ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಝೆನ್ ಝೀ, ಝೆನ್ ಅಲ್ಫಾ ಝೆನ್ ಬೀಟಾ ಹಾಗೂ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳೇ ಇಲ್ಲದ ದಿನಗಳಲ್ಲಿ ಶ್ರೀ ಬಾಲಗಂಗಾಧರನಾಥ ಗುರುಗಳು ಜಾನಪದ ಉತ್ಸವವನ್ನು ಆಯೋಜಿಸಿದ್ದರು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಜ್ಞಾನದ ಜೊತೆಗೆ ವಿಜ್ಞಾನ ತಂತ್ರಜ್ಞಾನಗಳು ಜಗತ್ತನ್ನಾಳುತ್ತಿವೆ. ಮಹಾ ಗುರುಗಳ ಆಶಯದಂತೆ ಈಗ ವಿಜ್ಞಾತಂ ಉತ್ಸವವಾಗಿ ರೂಪುಗೊಂಡಿದೆ. ಬೇರನ್ನು ಮರೆತ ಕಾಂಡಕ್ಕೆ ಅಸ್ತಿತ್ವವಿಲ್ಲ, ಕಾಂಡವಿರದ ಕೊಂಬೆಗೆ ಉಳಿವಿಲ್ಲ, ಇವೆರಡೂ ಇರದ ಮರಕ್ಕೆ ಎಲೆ ಹೂವು ಹಣ್ಣು ಸಾಧ್ಯವಿಲ್ಲ. ಹಾಗೆಯೇ ವಿಜ್ಞಾನ ತಂತ್ರಜ್ಞಾನ ಧರ್ಮ ಆಧ್ಯಾತ್ಮ ಇವುಗಳಿಗೆ ಅವಿನಾಭಾವ ಸಂಬಂಧವಿದೆ ಎಂಬುದನ್ನು ಶ್ರೇಷ್ಠ ವಿಜ್ಞಾನಿ ಐನ್ಸ್‌ಸ್ಟೈನ್‌ ನಿರೂಪಿಸಿದಂತೆ ವಿಶ್ಲೇಷಿಸಿ ವಿವರಿಸಿದರು.

ಈ ಜ್ಞಾನ ವಿಜ್ಞಾನ ತಂತ್ರಜ್ಞಾನ ಉತ್ಸವದಲ್ಲಿ ಪಾಲ್ಗೊಂಡಿರುವ 200ಕ್ಕೂ ಹೆಚ್ಚು ವಸ್ತು ಪ್ರದರ್ಶನದಲ್ಲಿ 20 ಆದರೂ ಸ್ಟಾರ್ಟ್ ಅಪ್ ಆಗಿ ಬೆಳವಣಿಗೆ ಹೊಂದಿದರೆ ಮುಂದೆ ನೂತನ ಆವಿಷ್ಕಾರಕ್ಕೆ ಮೊದಲಾಗುತ್ತದೆ ಎಂದರು.

ಕೃತಕ ಬುದ್ಧಿವಂತಿಕೆಯ ರೋಬೋಟ್ಗಳು ಹೀಗೆ ಸಾಗಿದರೆ ಮುಂದೆ ಮಾನವ ಶಕ್ತಿಗೆ ಹೊಡೆತ ಬೀಳುತ್ತದೆ ಆದ್ದರಿಂದ ಮೂಲ ವಿಜ್ಞಾನಕ್ಕೆ ಪ್ರಾಧಾನ್ಯತೆ ನೀಡಿ ಮಾನವ ಶಕ್ತಿಯನ್ನು ಹೆಚ್ಚಿಸಬೇಕಿದೆ. ಈ ಮಾರ್ಗದಲ್ಲಿ ಪ್ರಬುದ್ಧತೆಯನ್ನು ಪಡೆದು ಪ್ರತಿಯೊಬ್ಬರಲ್ಲೂ ಇರುವ ಬುದ್ಧನನ್ನು ಎಚ್ಚರಗೊಳಿಸೋಣ ಎಂದರು.

ಬಿಡದಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿಶ್ಚಲಾನಂದನಾಥ ಮಹಾ ಸ್ವಾಮೀಜಿ ಮಾತನಾಡಿ, ಧಾರ್ಮಿಕ ನಾಯಕತ್ವದೊಂದಿಗೆ ವಿಶಿಷ್ಟ ಸಂಕಲ್ಪಶಕ್ತಿಯಾಗಿ ನಾಡಿಗೆ ಹೊಸ ಆಲೋಚನೆಗಳನ್ನು ಬಿತ್ತಿ ಲಕ್ಷಾಂತರ ಜನರ ಮನಸ್ಸಿನಲ್ಲಿ ಆಧ್ಯಾತ್ಮ ಶಕ್ತಿಯೊಂದಿಗೆ ಜ್ಞಾನ ದಾಸೋಹವನ್ನು ನೀಡುತ್ತಿರುವ ಮಹಾ ಕ್ಷೇತ್ರ ಶ್ರೀ ಆದಿಚುಂಚನಗಿರಿ. ರೈತ ಬಂಧುಗಳ ಮಹಾನ್ ಬೆಂಬಲ ಶಕ್ತಿಯಾಗಿ ನಿಂತವರು ಮಹಾ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ. ದೀರ್ಘ ಹಸಿವಿನ ಕಾಲದಲ್ಲಿ ಅನ್ನ ಹಾಕಿ ಸಲಹುತ್ತ ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟಲ್ ಗಳನ್ನು ಸ್ಥಾಪಿಸಿ ಸುವರ್ಣ ಮಾರ್ಗವನ್ನು ತೋರಿದ ಜ್ಞಾನಿ ಇವರು. ಭಕ್ತಿ ಮಾರ್ಗದಲ್ಲಿ ವಿಜ್ಞಾನದ ಹಾದಿಯನ್ನು ತೋರಿದ ಯತಿವರ್ಯರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರಾಜಮಾನರಾಗಿದ್ದಾರೆ.

ಸ್ವಾಮಿ ವಿವೇಕಾನಂದರ ಪ್ರಯತ್ನವೇ ಪರಮೇಶ ಎನ್ನುವ ತತ್ವಾನುಸಾರ ಪ್ರಾರ್ಥನೆ ಮತ್ತು ಪ್ರಯತ್ನದ ಮೂಲಕ ಜನಸಾಮಾನ್ಯರಿಗೆ ಎಲ್ಲ ಅಗತ್ಯಗಳನ್ನು ನೀಡಿದವರು. ಮೂಲ ವಿಜ್ಞಾನವನ್ನು ಮರೆತವರು ವಿಜ್ಞಾನಿಗಳಾಗಿ ಸಂಶೋಧನೆ ಮಾಡಲು ಸಾಧ್ಯವಿಲ್ಲ ಎಂದು ಪರಿಭಾವಿಸಿ ಮೂಲ ವಿಜ್ಞಾನಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಇಂದು ಇಂತಹ ಮಹಾನ್ ವಿಜ್ಞಾನೋತ್ಸವಕ್ಕೆ ಸಂಕಲ್ಪ ಶಕ್ತಿ ನಮ್ಮ ಶ್ರೀಗುರುಗಳು. ಧರ್ಮ ಮತ್ತು ವಿಜ್ಞಾನ ಎಂದಿಗೂ ಕಟ್ಟುವ ಕೆಲಸವಾಗಬೇಕು, ಯುವಕರು ಜಗತ್ತನ್ನು ಉತ್ತಮತೆಗೆ ಕೊಂಡೊಯ್ಯಲು ಬೇಕಾದ ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಯತ್ನಿಸಿ ಸಫಲರಾಗಿ ಎಂದು ಆಶೀರ್ವದಿಸಿದರು.

ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಭಾರತ ಅನೇಕ ದಾರ್ಶನಿಕರು ಸತ್ಪುರುಷರು ಹಾಗೂ ಮಹಾತ್ಮರನ್ನು ಕಂಡಿದೆ. ಶತಮಾನಕ್ಕೊಬ್ಬ ಶತಪುರುಷ ಎಂಬ ಅಭಿದಾನದಿಂದ ಖ್ಯಾತರಾದವರು ನಮ್ಮ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರು. 20ನೇ ಶತಮಾನದ ಶತಪುರುಷರಾಗಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ದಾರ್ಶನಿಕರು.ವಿಶ್ವದ ಭೂಪಟದಲ್ಲಿ ಆದಿಚುಂಚನಗಿರಿ ಮಠದ ಪ್ರಖ್ಯಾತಿಯನ್ನು ಕಾಣುವಂತೆ ಮಾಡಿದ ಸಂತ ಶ್ರೇಷ್ಠರಿವರು. ನಾಡಿನ ಮಠಗಳಲ್ಲಿ ಅಗ್ರಸ್ಥಾನವನ್ನು ಪಡೆದ ಪೀಠ ಶ್ರೀ ಆದಿಚುಂಚನಗಿರಿ ಮಠ. ಸಂತರಿಗೆ ನದಿಗಳಿಗೆ ವನರಾಶಿಗೆ ವೈಯಕ್ತಿಕ ಹಿತಕಿಂತ ಲೋಕ ಹಿತವೇ ಮುಖ್ಯ ಅನ್ವರ್ಥವೆಂದು ನುಡಿದರು.

ವಿಜ್ಞಾನ ಮತ್ತು ಧರ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇದನ್ನು ಮನಗಂಡ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಸಾಧ್ಯತೆಗಳನ್ನು ಅನಾವರಣಗೊಳಿಸಿದ್ದಾರೆ. ಆಧ್ಯಾತ್ಮ ಮತ್ತು ಧರ್ಮದ ಮೇರು ಪೀಠದ ಪರಂಪರೆಗೆ ಕಳಶಪ್ರಾಯರಾಗಿ ಕಂಗೊಳಿಸುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಆದಿಚುಂಚನಗಿರಿಯು ಸನಾತನ ಧರ್ಮ ಪೀಠ, ಆಸ್ತಿಕರ ಪವಿತ್ರ ನೆಲ, ಜ್ಞಾನಕಾಶಿ, ಶಿಕ್ಷಣಧಾಮ, ಸಾಂತ್ವನ ಕೇಂದ್ರ, ನಿತ್ಯ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಾ ನಾಡಿನ ಜನತೆಗೆ ಹಿತವನ್ನು ಬಯಸುತ್ತಿರುವ ಶಕ್ತಿ ಕೇಂದ್ರವಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿಯವರ ಕರಕಮಲ ಸಂಜಾತರು ಆಧ್ಯಾತ್ಮಿಕ ಸೇವಾ ದೀಕ್ಷೆಯನ್ನು ಪಡೆದು 13 ವರ್ಷಗಳ ಸಾರ್ಥಕ ಹಾದಿಯಲ್ಲಿ ಸಾಗುತ್ತಿದ್ದು, ಶ್ರೀ ಗುರುಗಳು ಸಮಾಜದ ಆಸ್ತಿಯಾಗಿದ್ದಾರೆ. ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಜೊತೆಗೆ ವಿವಿಧ ಕ್ಷೇತ್ರಗಳ ಕಾಳಜಿಯೊಂದಿಗೆ ಮುನ್ನಡೆಯುತ್ತಿದ್ದಾರೆ. 180 ಕ್ಕೂ ಹೆಚ್ಚು ವಿಜ್ಞಾನ ವಸ್ತು ಪ್ರದರ್ಶನಗಳ ಆಯೋಜಿಸಲು ಅಪಾರಜ್ಞಾನ ಹಾಗೂ ಪರಿಣತಿಯೇ ಬಹುದೊಡ್ಡ ಸಂಪತ್ತು, ಈ ಮಠದ ಸಂಪರ್ಕದಲ್ಲಿರುವ ನಾವೆಲ್ಲ ಧನ್ಯರು. ಸನಾತನ ಸಂಸ್ಕೃತಿಯನ್ನು ಮುಂದುವರಿದ ಭಾಗವಾಗಿ ಮಾನವ ಜೀವನಕ್ಕೆವಿಜ್ಞಾನವೂ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ ಪಡೆಯುತ್ತಿರುವ ನಾವು ಪ್ರಶ್ನೆ ಮೂಲಕ ಒಪ್ಪಿಕೊಳ್ಳುವುದೇ ವಿಜ್ಞಾನ. ಇಂದು ಶಿಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲೂ ಪಡೆಯಬಹುದು, ಆದರೆ ಮೂಲ ವಿಜ್ಞಾನವನ್ನು ಪ್ರಯೋಗಾತ್ಮಕವಾಗಿ ಪ್ರಶ್ನೆಯ ಮೂಲಕವೇ ಒಪ್ಪಿಕೊಳ್ಳಬೇಕಿದೆ. ಆದ್ದರಿಂದ ವಿಜ್ಞಾನದ ಮೂಲಕ ನಿತ್ಯ ಹೊಸ ದಾರಿಯನ್ನು ಹುಡುಕುತ್ತ ಸಂಸ್ಥಾನದ ಸಂಪರ್ಕದಲ್ಲಿ ಮುಂದುವರೆದರೆ ವಿಶಿಷ್ಟವಾದುದನ್ನು ಸಾಧಿಸಬಹುದು. ಶುಭವಾಗಲಿ ಎಂದರು.

ಆದಿಚುಂಚನಗಿರಿ ಉನ್ನತ ಶಿಕ್ಷಣ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎನ್ ಎಸ್ ರಾಮೇಗೌಡ ಪ್ರಾಸ್ತಾವಿಕ ನುಡಿಯನ್ನಾಡಿದರು. ವಿಜ್ಞಾತಂ ವಸ್ತು ಪ್ರದರ್ಶನ ಉದ್ಘಾಟಿಸಿದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಕೆ ಮುನಿಯಪ್ಪ, ನಾಗಮಂಗಲ ಮಾಜಿ ಶಾಸಕ ಕೆ ಸುರೇಶ್ ಗೌಡ, ರಕ್ಷಣೆ ಮತ್ತು ಏರೋ ಸ್ಪೇಸ್ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾತನಾಡಿದರು.

ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುದರ್ಶನ್, ಡಾ. ಜಯರಾಮ್, ಡಾ. ಟಿ ಎನ್ ಬಾಲಕೃಷ್ಣೇಗೌಡ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ಎನ್ ಶ್ರೀಧರ, ವೈದ್ಯಕೀಯ ವಿಭಾಗದ ಡೀನ್ ಡಾ. ಎಂ ಜಿ ಶಿವರಾಂ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ ಎ ಟಿ ಶಿವರಾಮು, ಪ್ರಾಂಶುಪಾಲರು, ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

Mandya

ಬಹುಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ‌ ರಮೇಶ್ ಬಂಡಿಸಿದ್ದೇಗೌಡ

Published

on

ಶ್ರೀರಂಗಪಟ್ಟಣ : ಶಾಸಕ‌ ರಮೇಶ್ ಬಂಡಿಸಿದ್ದೇಗೌಡ ರವರಿಂದ ತಾಲ್ಲೂಕಿನ ಮೊಗರಳ್ಳಿ, ಪಂಪ್ ಹೌಸ್, ಹೊಸ ಆನಂದೂರು ಹಾಗೂ ಬೆಳಗೋಳ ಗ್ರಾಮಗಳಲ್ಲಿ ಬಹುಕೋಟಿ ವೆಚ್ಚದ ವಿವಿಧ ಕಾಗಮಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಇಂದು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತೀ ಗ್ರಾಮಗಳ ಅಭಿವೃದ್ದಿಗೂ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಹಂತ ಹಂತವಾಗಿ ಎಲ್ಲಾ ಗ್ರಾಮಗಳ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಮುಂದಾಗುವುದಾಗಿ ತಿಳಿಸಿದರು.

ಇದೇ ವೇಳೆ ಮೊಗರಳ್ಳಿ ಗ್ರಾಮದಲ್ಲಿ 34 ಕೋಟಿ ರೂ.ಗಳ ವೆಚ್ಚದ ಕಾವೇರಿ ಬಲದಂಡೆ ಯೋಜನೆಯಡಿಯಲ್ಲಿ ಬರುವ 28 ಗ್ರಾಮಗಳ ಕುಡಿಯುವ ನೀರು ಸರಬರಾಜು ಕಾಮಗಾರಿ, ಪಂಪ್ ಹೌಸ್ ವೃತ್ತದಲ್ಲಿ 1.4 ಕೋಟಿ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ ಕಾಮಗಾರಿ, ಹೊಸ ಆನಂದೂರು ಗ್ರಾಮದಲ್ಲಿ 34 ಕೋಟಿ ವೆಚ್ಚದಲ್ಲಿ ಕಾವೇರಿ ಬಲದಂಡೆ ಯೋಜನೆಯಡಿ ಬರುವ 28 ಗ್ರಾಮಗಳ ಕುಡಿಯುವ ನೀರು ಸರಬರಾಜು ಕಾಮಗಾರಿ, ಬೆಳಗೋಳ ಗ್ರಾಮದಲ್ಲಿ 2.5 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ, 1.4 ಕೋಟಿ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣ, 34 ಕೋಟಿ ವೆಚ್ಚದಲ್ಲಿ ಕಾವೇರಿ ಬಲದಂಡೆ ಯೋಜನೆಯಡಿ ಬರುವ 28 ಗ್ರಾಮಗಳ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

Continue Reading

Trending

error: Content is protected !!