Connect with us

Chikmagalur

ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪರಾಕ್ರಮ್ ದಿವಸ್ ಆಚರಣೆ

Published

on

ಚಿಕ್ಕಮಗಳೂರು: ನಗರದ ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಗುರುವಾರ ಪರಾಕ್ರಮ್ ದಿವಸ್ ಆಚರಣೆ ನಡೆಸಲಾಯಿತು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ಅಂಗವಾಗಿ ಪರಾಕ್ರಮ ಕಾರ್ಯಕ್ರಮವನ್ನು ಶಾಲೆಯಲ್ಲಿ ಅಂತಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ವಿಶೇಷವಾಗಿ ಆಚರಣೆ ಮಾಡಲಾಯಿತು

ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಪಿ.ಮಾಲತಿ ಉದ್ಘಾಟಿಸಿದರು. ೯ ಮತ್ತು ೧೦ನೇ ತರಗತಿಯ ೧೧೦ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಗರದ ಸಾಯಿ ಏಂಜಲ್ಸ್, ಪ್ರಧಾನಮಂತ್ರಿ ಶ್ರೀ ಜವಾಹರ ನವೋದಯ ವಿದ್ಯಾಲಯ, ಇನ್ಫ್ಯಾಂಟ್ ಜೀಸಸ್ ಸ್ಕೂಲ್, ಸೇಂಟ್ ಮೇರಿಸ್ ಶಾಲೆ, ಮಹರ್ಷಿ ವಿದ್ಯಾ ಮಂದಿರ, ಮುರಾರ್ಜಿ ದೇಸಾಯಿ ಶಾಲೆಯ ಸಿ.ಬಿ.ಎಸ್.ಎ.ಇ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಶಾಲೆಯ ಅರುಣ್ ಕುಮಾರ್ ರಾವತ್, ಸೂರಜ್ ಕುರಿಯಾಲ್, ಓಂ ನಾರಾಯಾಣ, ಎಸ್.ಟಿ.ಪ್ರಕಾಶ್ ಮತ್ತು ಬಿ.ಕೆ.ಚೈತ್ರ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು

Continue Reading

Chikmagalur

ಭಾರೀ ಬಿರುಗಾಳಿಗೆ ಧರೆಗುರುಳಿದ ಬೃಹತ್ ಮರ, ಕಿ.ಮೀ ಟ್ರಾಫಿಕ್ ಜಾಮ್

Published

on

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡಲ್ಲಿ ಬಿರುಗಾಳಿ ಮಳೆ ಅಬ್ಬರ‌ ಮುಂದುವರಿದಿದ್ದು. ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಬಳಿ ನಡೆದಿದೆ. ಚಿಕ್ಕಮಗಳೂರಿನಿಂದ ಶೃಂಗೇರಿ, ಎನ್.ಆರ್ ಪುರ, ಕೊಪ್ಪ, ಬಾಳೆಹೊನ್ನೂರು ಸಂಪರ್ಕ‌ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ‌ ಹಸರವಳ್ಳಿ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು. ವಾಹನಗಳು ನಿಂತಲ್ಲೇ ನಿಂತಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾಸರರು ಪರದಾಟ ಪಡುವಂತಾಗಿತ್ತು‌. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chikmagalur

ಧಾರಾಕಾರ ಮಳೆ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

Published

on

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು. ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಗುದ್ದಿ ಕಾಲುವೆಗೆ ನುಗ್ಗಿತುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿ ನಡೆದಿದೆ. ಸಖರಾಯಪಟ್ಟಣ – ಬಾಣಾವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು. ಕಾರು ಗುದ್ದಿದ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಪುಡಿ ಪುಡಿಯಾಗಿದ್ದು. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‌

 

Continue Reading

Chikmagalur

ಮರ ಬಿದ್ದು ಬೈಕ್ ಸವಾರ ದು*ರ್ಮರಣ

Published

on

ಚಿಕ್ಕಮಗಳೂರು : ಬೈಕ್‌ ಸವಾರನ ಮೇಲೆ ಮರದ ಕೊಂಬೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಎಲೆಕಲ್ ಎಲೆಕಲ್ಲು ಬಳಿ ನಡೆದಿದೆ. ಖಾoಡ್ಯಾ ಹೋಬಳಿಯ ಕಡಬಗೆರೆ ನಿವಾಸಿಯಾದ ಅನಿಲ್ ರುಜಾರಿಯೋ (55) ಮರದ ಕೊಂಬೆ ಬಿದ್ದು ಮೃತಪಟ್ಟ ಬೈಕ್‌ ಸವಾರ. ಬೈಕ್ ನಲ್ಲಿ ತೆರಳುತ್ತಿದ್ದಾಗ ಏಕಾಏಕಿಮರದ ಕೊಂಬೆ ಅನಿಲ್ ರುಜಾರಿಯೋ ಮೇಲೆ ಬಿದ್ದಿದೆ. ಆಂಬುಲೆನ್ಸ್ ಬರೋದು ತಡವಾಗುತ್ತೆಂದು ಅಗ್ನಿಶಾಮಕ ವಾಹನದಲ್ಲಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯಲ್ಲಿ ತೀವ್ರ ಗಾಯಗೊಂಡಿದ್ದ ಅನಿಲ್ ಸಾವನ್ನಪ್ಪಿದ್ದಾರೆ. ಇನ್ನು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಇದು 4ನೇ ಬಲಿಯಾಗಿದೆ.

 

Continue Reading

Trending

error: Content is protected !!