Connect with us

Chamarajanagar

ಉತ್ತಂಗೇರಿ ಹುಂಡಿಯಲ್ಲಿ ಪಡಿತರ ವಿತರಣೆ

Published

on

ದಿನಾಂಕ 27.02.2024ರಂದು ನಡೆದ ಕೆ ಡಿ ಪಿ ಸಭೆಯಲ್ಲಿ ಮಾಡಳ್ಳಿ ಗ್ರಾಮಕ್ಕೆ ಸೇರಿದ ಉತ್ತಂಗೇರಿ ಹುಂಡಿಯಲ್ಲಿ ಪಡಿತರ ವಿತರಣೆ ಮಾಡಿಕೊಡುವಂತೆ ಸಾಮೂಹಿಕ ನಾಯಕತ್ವ ರೈತರ ಸಂಘ ತಾಲೂಕು ಉಪಾಧ್ಯಕ್ಷರಾದ ಉತ್ತಂಗೇರ ಹುಂಡಿ ಮಹೇಶ್ ನೇತೃತ್ವದಲ್ಲಿ. ಗುಂಡ್ಲುಪೇಟೆ ಆಹಾರ ನಾಗರೀಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆಗೆ ..ಮನವಿ ಮಾಡಿಕೊಂಡಿದ್ದರು ಅದರಂತೆ ಇಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವಿವರಗಳು ಇಲಾಖೆಯು ಉತಂಗೇರಹುಂಡಿ ಗ್ರಾಮಕ್ಕೆ ಆಗಮಿಸಿ ಮಡಳ್ಳಿ ಗ್ರಾಮದಲ್ಲಿರುವ . ಶ್ರೀ ಸೌಮ್ಯ ನ್ಯಾಯಬೆಲೆ ಅಂಗಡಿಯ. ಮಾಲೀಕರ ಒಪ್ಪಿಗೆ ಮೇರೆಗೆ ಒಂದೇ ಲೈಸನ್ಸ್ ಅಡಿಯಲ್ಲಿ ಮಡಳ್ಳಿ ಗ್ರಾಮ ಹಾಗೂ ಉತ್ತಂಗೇರ ಹುಂಡಿ ಗ್ರಾಮಗಳಲ್ಲಿ . ಪಡಿತರ ಪದಾರ್ಥಗಳನ್ನು ವಿತರಿಸಲು ಅನುವು ಮಾಡಿಕೊಟ್ಟರು.

ಈ ದಿನ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಸಮ್ಮುಖದಲ್ಲಿ ಪಡಿತರ ಪದಾರ್ಥಗಳನ್ನು ಉತಂಗೇರ ಹುಂಡಿ ನ್ಯಾಯಬೆಲೆ ಅಂಗಡಿ ಉಪ ಕೇಂದ್ರದಲ್ಲಿ ವಿತರಿಸಲಾಯಿತು..
ಗ್ರಾಮಸ್ಥರ ಮನವಿ ಸ್ಪಂದಿಸಿದ ಆಹಾರ ನಾಗರೀಕ ಸರಬರಾಜು & ಗ್ರಾಹಕರ ವಿವರಗಳ ಇಲಾಖೆ ಅವರಿಗೆ ಉತ್ತಂಗೇರಹುಂಡಿ ಗ್ರಾಮಸ್ಥರು ಧನ್ಯವಾದಗಳು ತಿಳಿಸಿದರು
ಗುಂಡ್ಲುಪೇಟೆ ತಾಲೂಕಿನಲ್ಲಿ ಇಂತಹ ಸಮಸ್ಯೆಗಳು ಹಲವಾರು ಗ್ರಾಮಗಳಲ್ಲಿದ್ದು ಅವುಗಳನ್ನು ಸಹ ಬಗೆ ಬಗೆಹರಿಸಬೇಕೆಂದು ಸಾಮೂಹಿಕ ನಾಯಕತ್ವದ ರೈತರ ಸಂಘ ಹಾಗೂ ಹಸಿರು ಸೇನೆಯಗಳು. ಸಂಘಟನೆಗಳು ಮನವಿ ಮಾಡಿದರು
ಈ..ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ವೀರನಪುರ ನಾಗಪ್ಪ ತಾಲೂಕು ಉಪಾಧ್ಯಕ್ಷ ಉತ್ತಂಗೇರ ಹುಂಡಿ ಮಹೇಶ್ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಯ್ಯನಪುರ ಪುಟ್ಟೇಗೌಡ ಹೊಸಪುರ ಮರಿಸ್ವಾಮಿ ಜಿಲ್ಲಾ ಉಪಾಧ್ಯಕ್ಷರಾದ.ಹಸಗೂಲಿ ಮಹೇಶ್..ತಾಲೂಕು ಮಂಡಳಿ ಅಧ್ಯಕ್ಷರಾದ ಮಾಡಳ್ಳಿ ಪಾಪಣ್ಣ ಕೋಟೆಕೆರೆ ಮಹದೇವ್ ಜಿಲ್ಲಾ ಸಂಚಾಲಕರದ ಶ್ರೀನಿವಾಸ್ ಬೆಟ್ಟದ ಮಾದಳ್ಳಿ. ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಪ್ರಸಾದ. ಕಮರಹಳ್ಳಿ ಲೋಕೇಶ್ ಕಾರ್ಯದರ್ಶಿ ಕೊಡಳ್ಳಿ ಸ್ವಾಮಿ ವಸಂತಗೌಡ ಕೂತನೂರು ರಾಜೇಶ್ ಬರಗಿ ಸಿದ್ದರಾಜು ಶಿವಪುರ ಗುರುಸ್ವಾಮಿ ಕೊಡಳ್ಳಿ ಸೋಮಶೇಖರ್ ಯಜಮಾನ ಶಿವಣ್ಣೇಗೌಡ ಬೆಳ್ಳಶೆಟ್ಟಿ ಬೆಟ್ಟದಮಾದಳ್ಳಿ ಸಿದ್ದರಾಜು ಮಂಚಹಳ್ಳಿ ನಂಜುಂಡ ಉತ್ತಂಗೇರ.ಹುಂಡಿ ಗ್ರಾಮಸ್ಥರು ಹಾಜರಿದ್ದರು.

Continue Reading

Chamarajanagar

ಯಳಂದೂರು ತಾಪಂ ವತಿಯಿಂದ 15ನೇ ರಾಷ್ಟ್ರೀಯ ಮತದಾನ ದಿನಾಚರಣೆ

Published

on

ಯಳಂದೂರು ಜನವರಿ 25

ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 15ನೇ ರಾಷ್ಟ್ರೀಯ

ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಆರ್ಕಶ್ ಎಂ ರವರು 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿ ಈಗಿನ ಯುವಕರಿಗೆ ಮತದಾನದ ಅರಿವು ಅಗತ್ಯ 18 ವಯಸ್ಸು ಮೀರಿದವರು ಮಾತ ದಾರರಗೆ ನೋಂದಣಿ ಮಾಡುವುದು ಅಗತ್ಯ, ಎಂದು
ತಿಳಿಸಿದರು,

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ಚುನಾವಣೆ ಸಂದರ್ಭದಲ್ಲಿ ನಿಮ್ಮ ಮತ ವನು ಮಾರಿಕೊಳ್ಳಬೇಡಿ , ಯುವಕರು ಹೆಚ್ಚಿನ ಪ್ರಮಾಣದಲ್ಲಿ ಒಂದಾಯಿಸಬೇಕು, ರಾಷ್ಟ್ರೀಯ ಮತದಾನ ದ ಬಗ್ಗೆ ತಿಳಿಸಿದರು,

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳದ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಸಾಹಯಕ ನಿರ್ದೇಶಕ ರಾದ ಗುರು ಮಲ್ಲು, ಭೂ ದಾಖಲೆಗಳ ನಿರ್ದೇಶಕ ರಾದ ಉಮೇಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಹನೂರು, ಸಾಹಯಕ ಪ್ರಾದ್ಯಾಪಕರದ ಶ್ವೇತ ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತೇಷ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗೇಂದ್ರ, ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Continue Reading

Chamarajanagar

ಗಿರಿಜನರು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು: ಟಿ ಹಿರಲಾಲ್

Published

on

ಚಾಮರಾಜನಗರ: ಗಿರಿಜನರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಲಾಲ್ ಕರೆ ನೀಡಿದರು.

ಕೆರೆದಿಂಬ ಪೋಡಿನಲ್ಲಿ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ವಿಭಾಗದ ವತಿಯಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಬೆಂಕಿ ಅರಿವು ಮತ್ತು ಹಸಿರು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಬರುವ ಪೋಡುಗಳ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ 13 ಗಿರಿಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಡೆದ ಅಂಕಗಳ ಆಧಾರದ ಮೇಲೆ 10 ಸಾವಿರ ರೂ, 7,000 ಮತ್ತು 5000 ಚೆಕ್ಕನ್ನು ವಿತರಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಶ್ರೀಪತಿ ಬಿ,ಎಸ್.ಮಾತನಾಡಿ, ಅರಣ್ಯ ಮತ್ತು ಗಿರಿಜನರ ನಡುವೆ ಅವಿನಾಭಾವ ಸಂಬಂಧವಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಹಕರಿಸುವಂತೆ ತಿಳಿಸಿದರು.

ಗಿರಿಜನರು ಪೂಜ್ಯನಿಯ ಭಾವನೆಯಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಗೌರವಿಸುತ್ತಿದ್ದು, ಅರಣ್ಯ ಇಲಾಖೆಯ ಉತ್ತಮ ಸಹಕಾರದಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಸಂರಕ್ಷಿಸಬೇಕೆಂದು ಹೇಳಿದರು.

ಮಾದೇಗೌಡ ಮಾತನಾಡಿ, ಗಿರಿಜರು ಶಿಕ್ಷಣವನ್ನು ಶ್ರದ್ಧೆಯಿಂದ ಕಲಿತು ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಗಿರಿಜನರ ಮುಗ್ಧತೆಯನ್ನು ಬಳಸಿಕೊಂಡು ಹಣ ಹಾಗೂ ಇತರ ಆಮಿಷಗಳನ್ನು ಒಡ್ಡಿ ಯಾವುದೇ ಅರಣ್ಯ ಅಪರಾಧಗಳಲ್ಲಿ ಪಾಲ್ಗೊಳ್ಳುವಂತೆ ಯಾರಾದರೂ ಪ್ರೇರೇಪಿಸಿದಲ್ಲಿ ಇಲಾಖೆಯವರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು

ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ವಾಸು.ಬಿ.ಎಸ್ ನಾಗೇಂದ್ರ ನಾಯಕ್, ಪ್ರಮೋದ್, ಗಿರಿಜನ ಮುಖಂಡರಾದ ಬೊಮ್ಮಯ್ಯ, ಕೇತೇಗೌಡ, ಉಪವಲಯ ಅರಣ್ಯ ಅಧಿಕಾರಿ ಭಾನುಪ್ರಕಾಶ್, ಮೂರ್ತಿ, ಅನಂತರಾಮು, ಗಣೇಶ್ ಪ್ರಸಾದ್, ಮುಖ್ಯಪೇದೆ ನಂಜುಂಡ, ರಾಚಪ್ಪ ಕೆರೆದಿಂಬ ಮತ್ತು ಗೊಂಬಗಲ್ಲು ಮುಖಂಡರು ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Continue Reading

Chamarajanagar

ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆ

Published

on

ಯಳಂದೂರು: ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ಅಂದಾಜು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಶುಕ್ರವಾರ (ಜ.24) ಶಾಸಕ ಎ.ಆರ್‌ ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು

ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌ವಿ. ಚಂದ್ರು‚ ನಿರ್ಮಿತಿ ಕೇಂದ್ರ ಇಂಜಿನಿಯರ್ ನಂದಿಶ್, ಗ್ರಾ.ಪಂ ಅಧ್ಯಕ್ಷ ನಂಜುಂಡಸ್ವಾಮಿ ಉಪಾಧ್ಯಕ್ಷೆ ಮಹದೇವಮ್ಮ ತಾ.ಪಂ ಇಒ ಉಮೇಶ್ ಅಗರ ಲಿಂಗರಾಜ್ ಹಾಗೂ ಪಿಡಿಒ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Trending

error: Content is protected !!