Connect with us

Mandya

ಸೌಜನ್ಯ ಆತ್ಮಕ್ಜೆ ಶಾಂತಿಕೋರಿ ಏ.04 ರಂದು ಉಪವಾಸ ಸತ್ಯಾಗ್ರಹ : ಪಚ್ಚೆ ನಂಜುಂಡಸ್ವಾಮಿ

Published

on

ಮಂಡ್ಯ: ಸೌಜನ್ಯ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ, ಸೌಜನ್ಯ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿ ವತಿಯಿಂದ ಏಪ್ರಿಲ್ ೦೪ರಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಅಪರಾಧಿಯನ್ನು ದೋಷ ಮುಕ್ತಗೊಳಿಸಿದ್ದು, ನಿಜವಾದ ಅಪರಾಧಿ ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಲಾಗುವುದು ಎಂದರು.

ಕೃತ್ಯ ನಡೆದ ಸಮಯ ಸಾಕ್ಯಾಧಾರ ಕಲೆ ಹಾಕದೇ ಕರ್ತವ್ಯ ಲೋಪ ಎಸಗಿದ ಪೊಲೀಸ್, ಸಿಐಟಿ, ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು, ಬ್ರೈನ್ ಮ್ಯಾಪಿಂಗ್ ಮಾಡಿ ಸತ್ಯಾಸತ್ಯತೆ ಹೊರತಂದು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ರಾಜ್ಯಾಧ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಸದರಿ ಹೋರಾಟದಲ್ಲಿ ಗಿರೀಶ್ ಮಟ್ಟಣ್ಣನವರ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರನ್ನಾಗಿ ಮದ್ದೂರು ರಾಮಕೃಷ್ಣಯ್ಯ, ರಾಜ್ಯ ಕಾಯಾಧ್ಯಕ್ಷರಾಗಿ ವಿದ್ಯಾಸಾಗರ್ ರಾಮೇಗೌಡ, ರಾಜ್ಯ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರಾಗಿ ಇಂಡುವಾಳು ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷರುಗಳಾಗಿ ಶಂಬೂನಹಳ್ಳಿ ಸುರೇಶ್, ಮನು ಸೋಮಯ್ಯ, ಅಣ್ಣೂರು ಮಹೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಂಜೇಶ್‌ಗೌಡ, ಕೀಳಘಟ್ಟ ನಂಜುಂಡಯ್ಯ, ಸೋ.ಸಿ.ಪ್ರಕಾಶ್, ಉಮೇಶ್ ಮದ್ದೂರು, ಶಿವಳ್ಳಿ ಚಂದ್ರಶೇಖರ್, ರಾಮಲಿಂಗೇಗೌಡ, ಸಂತೋಷ್ ಮಂಡ್ಯಗೌಡ ಅವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಶೀಘ್ರವಾಗಿ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು

ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಳ್ಳಿ ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಸಂತೋಷ್ ಮಂಡ್ಯಗೌಡ, ಪಣಕನಹಳ್ಳೀ ನಾಗಣ್ಣ, ಚಿಕ್ಕಮರಿಗೌಡ, ಮರಿಚನ್ನೇಗೌಡ ಇದ್ದರು.

Continue Reading

Mandya

ಬದಲಾಗುತ್ತಿರುವ ಹೊಸ ಆವಿಷ್ಕಾರಗಳಿಗೆ ತಕ್ಕಂತೆ ಸಂಘದ ಸಿಬ್ಬಂದಿಗಳು ಹೊಂದಿಕೊಳ್ಳುವ ಅನಿವಾರ್ಯತೆಯಿದೆ : ಧನಂಜಯ್

Published

on

ಮಂಡ್ಯ : ಬದಲಾಗುತ್ತಿರುವ ಹೊಸ ಆವಿಷ್ಕಾರಗಳಿಗೆ ತಕ್ಕಂತೆ ಸಂಘದ ಸಿಬ್ಬಂದಿಗಳು ಹೊಂದಿಕೊಳ್ಳುವ ಅನಿವಾರ್ಯತೆ ಇರುವುದಾಗಿ ಶಾಖಾ ಸಮಿತಿ ಸದಸ್ಯ ಜಿ. ಧನಂಜಯ ದರಸಗುಪ್ಪೆ ಕಿವಿ ಮಾತು ಹೇಳಿದರು.

ನಗರದ ಅಶೋಕನಗರ ಒಂದನೇ ಕ್ರಾಸ್ ನಲ್ಲಿರುವ ‘ ದಿ ಪಾವಗಡ ಸೌಹಾರ್ಧ ಮಲ್ಟಿಪರ್ಪಸ್ ಕೋ -ಆಪರೇಟಿವ್ ಸೊಸೈಟಿ ಲಿ,’ ಮಂಡ್ಯ ಶಾಖೆಯಲ್ಲಿ, ಮಂಡ್ಯ -ರಾಮನಗರ, ಮೈಸೂರು -ತುಮಕೂರು ಶಾಖೆಯ ಸಿಬ್ಬಂದಿಗಳಿಗೆ ಆಯೋಜಿಸಿದ್ದ, “ತರಬೇತಿ ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡುತ್ತಾ, 22 ವರುಷಗಳ ಹಿಂದೆ ಪ್ರಾರಂಭಗೊಂಡ ಸಂಸ್ಥೆ ತಹಲ್ ವರೆವಿಗೂ, ಪ್ರತಿವರ್ಷವೂ ಲಾಭದಲ್ಲಿಯೇ ನಡೆಯುತಲಿದ್ದು, ದಿ ಪಾವಗಡ ಸಂಸ್ಥೆ, ರಾಜ್ಯದಲ್ಲಿಯೇ ಪ್ರತಿಷ್ಠಿತ-ಆರ್ಥಿಕ ಸದೃಢ ಹಾಗೂ ಸೇವಾ ಮನೋಭಾವದ ಸೌಹಾರ್ಧ ಸಂಸ್ಥೆಯಾಗಿ ಮುನ್ನಡೆಯುತ್ತಿದೆ ಎಂದರು‌

ಬದ್ಧತೆ – ವಿಧೇಯತೆ – ಪ್ರಾಮಾಣಿಕತೆ – ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಪಂಚ ದ್ಯೇಯಗಳೊಂದಿಗೆ ಪ್ರಾರಂಭವಾದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ. ಹೆಚ್. ಕೃಷ್ಣರೆಡ್ಡಿ ಮಾತನಾಡಿ, ಆಡಳಿತ ಮಂಡಳಿ ನಿರ್ದೇಶಕರ-ಷೇರುದಾರರ-ಸಿಬ್ಬಂದಿಗಳ-ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿರುವುದಕ್ಕೆ ಅಭಿನಂದನಾರ್ಹರು ಎಂದರು. ಆಡಳಿತ ಮಂಡಳಿ ನಿರ್ದೇಶನಗಳಿಗನುಗುಣವಾಗಿ, ಹೊಸ ಹೊಸ ಆವಿಷ್ಕಾರ ಹಾಗೂ ನಾವಿನ್ಯತೆಗಳಿಗೆ ತಕ್ಕಂತೆ ಹೊಂದಿಕೊಂಡು, ಸಿಬ್ಬಂದಿಗಳು ಶ್ರದ್ದೆ ಹಾಗೂ ಪ್ರಾಮಾಣಿಕವಾಗಿ ಕ್ರಿಯಾಶೀಲವಾಗಿ ಸೇವೆ ಸಲ್ಲಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ಶಾಖಾ ಸಮಿತಿಯ ಅಧ್ಯಕ್ಷ ನರಸಿಂಹ ಮೂರ್ತಿ ಶೆಟ್ಟಿ ವಹಿಸಿದ್ದರು. ಸದಸ್ಯರಾದ ನಾರಾಯಣ ರೆಡ್ಡಿ, ಗೋವರ್ಧನ್ ರೆಡ್ಡಿ, ಮಂಡ್ಯ ಶಾಖಾ ವ್ಯವಸ್ಥಾಪಕ ಜಯಶಂಕರ ಶೆಟ್ಟಿ, ಉಪಸ್ಥಿತರಿದ್ದರು.

ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಹಾಗೂ ಅಭಿವೃದ್ಧಿ ತಂಡದ ಮುಖ್ಯಸ್ಥ ನರಸರೆಡ್ಡಿ, ರಾಮನಗರ ಶಾಖೆ ವ್ಯವಸ್ಥಾಪಕ ರುದ್ರೇಶ್, ತರಬೇತುದಾರ ಅನಿಲ್ ರವರುಗಳು ವಿವಿಧ ಶಾಖೆಯ ಸಿಬ್ಬಂದಿಗಳಿಗೆ ತರಬೇತಿ ನೀಡಿದರು.

Continue Reading

Mandya

ಕನ್ನಡ ಸಾಹಿತ್ಯ ಪರಿಷತ್ ಬೈಲಾ ತಿದ್ದುಪಡಿಗೆ ಖಂಡನೆ : ಮಹೇಶ್‌ ಜೋಶಿ ನಿರ್ಧಾರಕ್ಕೆ ಕಿಡಿ

Published

on

ಮಂಡ್ಯ: ಕಸಾಪ ಬೈಲಾ ತಿದ್ದುಪಡಿ ಮಾಡಲು ಹೊರಟಿರುವ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ ಅವರ ನಿರ್ಧಾರದ ವಿರುದ್ಧ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಮಂಡಳಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಲು ನಿರ್ಣಯ ಕೈಗೊಂಡಿವೆ.

ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಹೇಶ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಸಮ್ಮೇಳನ ಮುಗಿದ ಮಾರನೇ ದಿನ ಪರಿಷತ್‌ನ ಬೈಲಾ ನಿಯಮ ಉಲ್ಲಂಘಿಸಿ ಕಾರ್ಯಕಾರಿ ಮಂಡಳಿ ರದ್ದುಪಡಿಸಿ ಹೊಸ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಗಿತ್ತು. ಇದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದವರಿಗೆ ಸದಸ್ಯತ್ವ ರದ್ದುಪಡಿಸುವ ನೋಟಿಸ್ ನೀಡಲಾಗಿದ್ದು, ಅದಕ್ಕೆ ತಕ್ಕ ಉತ್ತರ ನೀಡುವ ಬಗ್ಗೆ ನಿರ್ಧರಿಸಲಾಯಿತು.

ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಬೈಲಾದ 21/1ರಲ್ಲಿರುವಂತೆ ನಿಯಮವನ್ನು ಬಳ್ಳಾರಿ ಯಲ್ಲಿ ನಡೆಯಲಿರುವ ಸರ್ವ ಸದಸ್ಯರ ಸಭೆಗೆ ಹಾಜರು ಪಡಿಸಲು ಮುಂದಾಗಿರುವುದು ಸರಿಯಲ್ಲ. ನ್ಯಾಯಾಲಯ ದಲ್ಲಿದ್ದಾಗ ಯಾವುದೇ ಬೈಲಾದ ನಿಯಮ ರದ್ದುಪಡಿಸಲು ಬರುವುದಿಲ್ಲ.

ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಇರುವ ವಿಶೇಷ ಅಧಿಕಾರದ ನಿಯಮವನ್ನು ಕಸಾಪ ಬೈಲಾದಲ್ಲಿ ಸೇರಿಸುವ ಮೂಲಕ ರಾಜ್ಯಾಧ್ಯಕ್ಷರು ಸಹ ಅವರ ಸರಿಸಮಾನ ಎಂದು ಪರಮೋಚ್ಛ ಅಧಿಕಾರ ಪಡೆಯಲು ಮುಂದಾಗಿದ್ದಾರೆ. ಅದರ ಮೂಲಕ ಯಾರನ್ನಾದರೂ ಸದಸ್ಯತ್ವದಿಂದ ತೆಗೆದು ಹಾಕಬಹುದು ಅಥವಾ ಸೇರಿಸಬಹುದು.

ಆದರೆ, ಸಂವಿಧಾನ ಪರಿಚ್ಛೇದ 164(1) ಅಡಿಯಲ್ಲಿ ಯಾವುದೇ ಸಂಘ-ಸಂಸ್ಥೆಗಳಿಗೆ ಈ ಅಧಿಕಾರ ಪಡೆಯುವ ಅಧಿಕಾರವಿಲ್ಲ. ಇದರ ಬಗ್ಗೆ ತಜ್ಞರ ಜೊತೆ ಚರ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಮಹೇಶ್‌ ಜೋಶಿ ಅವರ ನಿರ್ಣಯ, ನಿರ್ಧಾರದ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು. ಜೊತೆಗೆ ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳೊಡಗೂಡಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ ಗೌಡ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಟಿ.ವೀರಪ್ಪ, ಮೀರಾ ಶಿವಲಿಂಗಯ್ಯ, ಎಂ.ವಿ.ಧರಣೇಂದ್ರಯ್ಯ, ರೈತ ನಾಯಕಿ ಸುನಂದಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Continue Reading

Mandya

ದೇವಾಲಯಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳು : ಎನ್.ಚಲುವರಾಯಸ್ವಾಮಿ

Published

on

ಕೆ.ಆರ್.ಪೇಟೆ : ದೇವಾಲಯಗಳು ನಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರಗಳಾಗಿದ್ದು, ದೈವದ ಮಾರ್ಗದಲ್ಲಿ ಸಾಗಿದರೆ ಯಶಸ್ಸು ನಿಶ್ಚಿತ ಎಂದು ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಅವರು ಕೆ.ಆರ್.ಪೇಟೆ ಗ್ರಾಮ ದೇವತೆ ಶ್ರೀ ದೊಡ್ಡಕೇರಮ್ಮ ನೂತನ ದೇವಾಲಯದ ಉದ್ಘಾಟನೆ ಹಾಗೂ ಶ್ರೀರಥದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶಿಥಿಲವಾಗಿದ್ದ ಗ್ರಾಮದೇವತೆಯ ದೇವಾಲಯವನ್ನು ವಾಸ್ತುಬದ್ಧವಾಗಿ ನೂತನವಾಗಿ ನಿರ್ಮಿಸಿ ನಾಗರೀಕ ಸಮಾಜ ಮೆಚ್ಚುವಂತಹ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ದೇವರ ಸ್ಮರಣೆ ಹಾಗೂ ಪೂಜೆಯಿಂದ ಕಾಲ ಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆಯಾಗಿ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲಸಲಿ. ಅನ್ನಧಾತರಾದ ರೈತರ ಬಾಳು ಬಂಗಾರವಾಗಲಿ ಎಂದು ಅವರು ಶುಭ ಹಾರೈಸಿದರು.

ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರು ನೀಡಿದ ಹೃದಯಸ್ಪರ್ಶಿ ಅಭಿನಂದನೆಯನ್ನು ಸ್ವೀಕರಿಸಿದರು.

ಸಮಾಜ ಸೇವಕರಾದ ಸ್ಟಾರ್ ಚಂದ್ರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ. ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ನಾಗೇಂದ್ರಕುಮಾರ್, ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ, ಸ್ಥಾಯಿಸಮಿತಿ ಅಧ್ಯಕ್ಷ ರವೀಂದ್ರಬಾಬು, ಕಸಬಾ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್, ಚಿನಕುರಳಿ ರಮೇಶ್, ಉಧ್ಯಮಿ ಬಿ. ರಾಜಶೇಖರ್, ವಕೀಲ ಬಿ. ನಾಗೇಶ್, ಪುರಸಭೆ ಸದಸ್ಯರಾದ ಕೆ.ಎಸ್. ಪ್ರಮೋದ್, ಬಸ್ ಸಂತೋಷ್, ನಟರಾಜ್, ಮಹಾದೇವಿ, ಸುಗುಣ, ಕೆ.ಸಿ.ಮಂಜುನಾಥ್, ಗ್ರಾಮದ ಯಜಮಾನರಾದ ಹೆಗ್ಗಡಿ ಕೃಷ್ಣೆಗೌಡ, ಪಟೇಲ್ ಚಂದ್ರಣ್ಣ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೆಗೌಡ, ಕೆ.ಸಿ. ವಾಸು, ಉಧ್ಯಮಿ ಹೆಚ್.ಎಂ.ಸಿ ಚಂದ್ರಶೇಖರ್ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಅಶೋಕ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ, ಗ್ರಾಮದ ಮುಖಂಡರಾದ ಪಟೇಲ್ ಚಂದ್ರಣ್ಣ, ಹೆಗ್ಗಡಿ ಕೃಷ್ಣೆಗೌಡ ಅವರನ್ನು ಸಚಿವ ಚಲುವರಾಯಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.

Continue Reading

Trending

error: Content is protected !!