Hassan
ಜನರ ಮೇಲಿ ಕಾಳಜಿಯಿಂದ ಶಾಸಕರು ಅರಣ್ಯ ಅಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ

ಹಾಸನ: ಜನಸಾಮಾನ್ಯರ ಮೇಲಿನ ಕಾಳಜಿಯಿಂದಾಗಿ ಕಾಡಾನೆ ಸಮಸ್ಯೆ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕರು ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಇದನ್ನು ಬೇರ ಸ್ವರೂಪಕ್ಜೆ ಕೊಂಡೂಯ್ಯುವುದು ಬೇಡ ಎಂದು ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್ ಮತ್ತು ಸುರೇಂದ್ರ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮಲೆನಾಡಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಳೆದ ೧೦-೧೫ ವರ್ಷಗಳಿಂದ ಕಾಡಾನೆ ಮತ್ತು ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿ ನಡೆಯುತ್ತಿದ್ದು, ಮಾನವ-ಆನೆ ಸಂಘರ್ಷಕ್ಕೆ ಹಲವು ವರ್ಷಗಳಿಂದ ನೂರಾರು ಬಲಿಯಾಗಿವೆ. ಕಾಫಿ ತೋಟಗಳನ್ನೇ ಆವಾಸ ಸ್ಥಾನವಾಗಿ ಮಾಡಿಕೊಂಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಬೆಳೆಹಾನಿ, ಜೀವಹಾನಿ ಮಾಡುತ್ತಿವೆ ಎಂದರು.
ಆನೆಗಳ ಸಂತತಿಯು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮಲೆನಾಡಿನಲ್ಲಿ ಆತಂಕದ ಛಾಯೆ ಮನೆಮಾಡಿದೆ. ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಾಫಿ ಬೆಳೆಗಾರ ಸಂಘಟನೆಗಳು ನಿರಂತರವಾಗಿ ಹೋರಾಟ ನೆಡೆಸುತ್ತಿವೆ. ಆದರೂ ಸಹ ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಫೆಬ್ರವರಿ ೧೩ ರಂದು ಬೇಲೂರು ತಾಲ್ಲೂಕು ಆರೇಹಳ್ಳಿ ಹೋಬಳಿ, ಬೆಳ್ಳಾವರ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ತೆತ್ತಿದ್ದಾರೆ. ಈ ವಿಚಾರವಾಗಿ ಶಾಸಕರು ಈ ಭಾಗದ ಜನಸಾಮಾನ್ಯರ ಮೇಲೆ ಹೊಂದಿರುವ ಕಾಳಜಿ ಹಾಗೂ ಕಾಡಾನೆ ಸಮಸ್ಯೆಯ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಏರುಧ್ವನಿಯಲ್ಲಿ ಮಾತನಾಡಿರುವುದು ಅತಿಶಯೋಕ್ತಿಯಲ್ಲ. ಒಬ್ಬ ಜನಪ್ರತಿನಿಧಿಗೆ ತನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಾಗರೀಕ ಸಮುದಾಯದಿಂದ ಹೆಚ್ಚಿನ ಒತ್ತಡ ಇರುವುದರಿಂದ ಹಾಗೂ ಜನತೆಯಿಂದ ಆಯ್ಕೆಯಾದ ಪ್ರತಿನಿಧಿ, ಜನರ ಪರವಾಗಿ ಧ್ವನಿಯೆತ್ತಬೇಕಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಮನವಿ ಸಲ್ಲಿಸಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳು ಒಟೊಟ್ಟಾಗಿ ಸಮಾನ ಮನಸ್ಥಿತಿಯಿಂದ ಸಾಗಿದಾಗ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅಭಿವೃದ್ಧಿ ಪತದತ್ತ ಸಾಗಲು ಸಾಧ್ಯ. ಹಾಗಾಗಿ ಕಾಡಾನೆ ಸಮಸ್ಯೆಯ ವಿಚಾರವಾಗಿ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಗೆ ಗಂಭೀರ ಸ್ವರೂಪ ನೀಡದೆ ಜನಸಾಮಾನ್ಯರಿಗೆ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಡುವ ನಿಟ್ಟಿನಲ್ಲಿ ಹೆಚ್ಚು ಆಧ್ಯತೆ ನೀಡಿ ಮುಂದುವರೆಯಬೇಕಾಗಿದೆ. ಕೆಲವೊಮ್ಮೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಾಗ ಜನಪ್ರತಿನಿಧಗಳು, ಮಾಧ್ಯಮಗಳು ಕಠಿಣ ನಿಲುವು ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಈ ಘಟನೆಯ ಬಗ್ಗೆ ಬೇರೆ ಬೇರೆ ಸ್ವರೂಪಕ್ಕೆ ಕೊಂಡೊಯ್ಯುವ ಅವಶ್ಯಕತೆಯಿಲ್ಲವೆಂಬುದು ಸಂಘಟನೆಯ ನಿಲುವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜು, ಸಂಜಯ್, ಸುರೇಂದ್ರ, ಮಂಜುನಾಥ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
Hassan
ಎದುರು ಮನೆಯ ಚಂದ್ರಕಲಾ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಗಂಗಮ್ಮ ಮನವಿ

ಹಾಸನ: ಆಲೂರು ತಾಲೂಕಿನಲ್ಲಿರುವ ಆಶಾ ಬಡಾವಣೆಯ ಎದುರು ಮನೆಯಾಕೆ ಚಂದ್ರಕಲಾ ಎಂಬುವರಿಂದ ಪ್ರತಿನಿತ್ಯ ಕಿರುಕುಳ ಕೊಡಲಾಗುತ್ತಿದೆ ಎಂದು ನಿವಾಸಿ ಗಂಗಮ್ಮ ಗಂಭೀರವಾಗಿ ಆರೋಪಿಸಿದರು. ಇದೆ ವೇಳೆ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಮಾತನಾಡಿ ಆಕೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಮ್ಮ ಅಳಲು ತೋಡಿಕೊಂಡ ಅವರು, ನಾನು ಆಶಾ ಬಡಾವಣೆಯ ನಿವಾಸಿಯಾಗಿದ್ದು, ನಮ್ಮ ಮನೆಯ ಎದುರೇ ಕಳೆದ ಒಂದು ವರ್ಷಗಳ ಹಿಂದೆ ಬಾಡಿಗೆಗೆ ಬಂದಿದ್ದು, ದಲಿತ ವರ್ಗದವರಿಗೆ ಸೇರಿದವರಾಗಿದ್ದಾರೆ. ಇತರೆ ಜನಾಂಗದಿಂದ ಹಣ ವಸೂಲಿ ಮಾಡುವುದು, ಕೊಡದೆ ಇದ್ದರೇ ಅವರ ಮೇಲೆ ದೂರು ನೀಡುವುದಾಗಿದೆ. ಜೊತೆಗೆ ಜಗಳ ಮಾಡಿ ದಬ್ಬಾಳಿಕೆ ಮಾಡಿದ್ದಾರೆಂದು ಜಾತಿ ಧ್ವೇಷವನಿಟ್ಟುಕೊಂಡು ಅಲ್ಲಿಯ ಬಡಾವಣೆಯವರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ದೂರಿದರು.
ಚಂದ್ರಕಲಾ ಎಂಬುವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಆದರೂ ನಾವು ಯಾವುದೇ ಜಾತಿಭೇದ ಮಾಡುವುದಿಲ್ಲ. ಚಂದ್ರಕಲಾ ಅವರ ಮನೆ ನಮ್ಮ ಮನೆಯ ಎದುರೆ ಇದ್ದು ನಾವು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ವಿನಾಕಾರಣ ನಮ್ಮ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿ ಪ್ರತಿದಿನ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಂದ್ರಕಲಾ ಅವರು ಪ್ರತಿದಿನ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ನೀಡುತ್ತಿದ್ದು ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಬಾಯಿಗೆ ಬಂದಂತೆ ಬೈಯುವುದು ಮನೆಯ ಮೇಲೆ ಮಣ್ಣು ಎಸೆಯುವುದು ಸಾಮಾನ್ಯವಾಗಿದೆ ಎಂದರು.
ನಾವು ಯಾವುದೇ ತಂಟೆತಕರಾರು ಮಾಡದಿದ್ದರೂ ಇಲ್ಲಸಲ್ಲದ ನೆಪವೊಡ್ಡಿ ಜಗಳಕ್ಕೆ ಬರುತ್ತಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಗಂಗಮ್ಮ ಇದೆ ವೇಳೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಸಿದ್ದಪ್ಪ, ಮೋಹನ್, ಚಂದ್ರು, ಚಂದ್ರಶೇಖರ್, ಧರ್ಮ ಇತರರು ಉಪಸ್ಥಿತರಿದ್ದರು.
Hassan
ದಲಿತ ಅಧಿಕಾರಿ ವಿರುದ್ಧ ದೌರ್ಜನ್ಯ ನಿಲ್ಲಿಸದಿದ್ದರೆ ವ್ಯವಸ್ಥೆ ವಿರುದ್ಧ ಹೋರಾಟ: ಎಂ.ಆರ್.ವೆಂಕಟೇಶ್

ಹಾಸನ: ಶೋಷಿತ ಸಮಾಜದ ಸರ್ಕಾರಿ ಅಧಿಕಾರಿ ರಾಮಚಂದ್ರ ಅವರ ಮೇಲೆ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ನೀಡುತ್ತಿರುವ ಸೂಕ್ಷ್ಮವಾದ ವಿಚಾರವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಹಿಂಸೆ ಕೊಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬೇಲೂರು ಶಾಸಕರ ಹಿಂಬಾಲಕರಾದ ವಿನಯ್ ಎಂಬುವರಿಂದ ಹಿಂಸೆ ಮಾಡಲಾಗುತ್ತಿದೆ ಎಂಬುದು ಆಡಿಯೋದಲ್ಲಿ ಹೇಳಿದೆ. ರಾಮಚಂದ್ರ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ಲ್ಲೆಯಲ್ಲಿ ದಲಿತ ಅಧಿಕಾರಿಗಳಿಗೆ ಕಿರುಕುಳ ಕೊಡುವುದು ಹೊಸದೇನಲ್ಲ. ಬೇಲೂರಿನ ಶಾಸಕರು ಹಾಗೂ ಕೆಲ ಹಿರಿಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದು, ರಾಮಚಂದ್ರ ಅವರೆ ವರ್ಗಾವಣೆ ಮಾಡಿಕೊಂಡು ಹೋಗಲಿ ಎನ್ನುವ ಉದ್ದೇಶದಿಂದ ಇದರಲ್ಲಿ ದೊಡ್ಡ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಈ ಜಿಲ್ಲೆಯಲ್ಲಿ ದಲಿತ ಯಾವ ಅಧಿಕಾರಿಗಳಿಗೂ ರಕ್ಷಣೆ ಇಲ್ಲ. ಶಾಸಕರು ಮತ್ತು ಮಂತ್ರಿಗಳು ಯಾರು ಬೇಕಾದರೂ ಆಗಬಹುದು. ಆದರೇ ಕಷ್ಟುಪಟ್ಟು ಓದಿದವರು ಮಾತ್ರ ಅಧಿಕಾರಿಗಳು ಆಗಲು ಸಾಧ್ಯ. ಅಧಿಕಾರಿಗಳಿಗೆ ನಾವುಗಳು ಗೌರವ ಕೊಡಬೇಕು. ಯಾವ ಅಧಿಕಾರಿಗಳು ಭ್ರಷ್ಠಾಚಾರ ಮಾಡುತ್ತಾರೆ ಅವರನ್ನ ಶಿಕ್ಷಸಲಿ. ನ್ಮಮ ಸಮುದಾಯದ ಅಧಿಕಾರಿಗಳ ಪರ ನಾವು ನಿಲ್ಲಲೇಬೇಕು. ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು ಎಂದರು.
ಪೊಲೀಸ್ ಇಲಾಖೆ ವ್ಯವಸ್ಥಿತವಾದಂತಹ ಕೆಲಸ ಮಾಡುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಸಿಸಿ ಕ್ಯಾಮಾರ, ಸಾಕ್ಷಿ ಆಧರಿಸಿ ಆರೋಪಿಗಳನ್ನು ಬಂಧಿಸಬೇಕು. ಉದ್ದೇಶ ಪೂರ್ವಕವಾಗಿ ದಲಿತ ಅಧಿಕಾರಿಗಳಿಗೆ ತೊಂದರೆ ಕೊಟ್ಟಂತಹ ವೇಳೆ ಜಿಲ್ಲಾಡಳಿತ ಆಗಲಿ ಸರಕಾರಿ ಆಗಲಿ ತನಿಖೆ ಮಾಡಿ ಕ್ರಮ ಜರುಗಿಸಲು ಮುಂದಾಗಬೇಕು. ಇದರಲ್ಲಿ ಯಾವ ದುರುದ್ದೇಶವಿಲ್ಲ. ದಲಿತ ಅಧಿಕಾರಿ ಎಂದು ಈ ರೀತಿ ಮಾಡಬಾರದು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಜೊತೆ ಚರ್ಚೆ ಮಾಡಿ ಶಾಸಕರ ಮತ್ತು ಈ ವ್ಯವಸ್ಥೆ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ ಯಾವುದೇ ಸಮುದಾಯದ ಸರ್ಕಾರಿ ಅಧಿಕಾರಿಗಳಿಗೆ ಭದ್ರತೆ ಇಲ್ಲದಾಗಿದೆ. ಬೇಲೂರಿನ ಶಾಸಕ ಸುರೇಶ್ ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದರು.
Hassan
ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು: ಫಾದರ್ ಆಲ್ಡಿನ್ ಡಿಸೋಜಾ

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು : ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ದೊಡ್ಡದು. ಎಲ್ಲಾ ಸ್ತರಗಳಲ್ಲೂ ಕೆಲಸ ಮಾಡುತ್ತಿರುವ ಹೆಣ್ಣು ಅಬಲೆಯಾಗಿ ಉಳಿದಿಲ್ಲ ಎಂದು ಸಿಎಂಎಸ್ಎಸ್ಎಸ್ ನ ನಿಯೋಜಿತ ನಿರ್ದೇಶಕ ಫಾದರ್ ಆಲ್ಡಿನ್ ಡಿಸೋಜಾ ಹೇಳಿದರು.
ತಾಲೂಕಿನ ಮಗ್ಗೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಸಮುದಾಯ ಭವನದಲ್ಲಿ ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆ, ಅಮರ ಜ್ಯೋತಿ ಮಹಾಸಂಘ ಮತ್ತು ಸ್ನೇಹಾಜ್ಯೋತಿ ಮಹಾಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿ, ಪತ್ನಿ, ಸಹೋದರಿ ಸೇರಿದಂತೆ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಮಹಿಳೆಗೆ ನಮ್ಮ ವಿಶೇಷ ಸ್ಥಾನವಿದೆ. ಆಕೆಯ ತ್ಯಾಗ ಮತ್ತು ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾದುದು ಎಂದು ಹೇಳಿದರು.
ಫಾದರ್ ರಾಜೇಂದ್ರ ಮಾತನಾಡಿ, ಹೆಣ್ಣು ಸಮಾಜದ ಕಣ್ಣಾಗುವ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಎಲ್ಲಾ ರಂಗಗಳಲ್ಲೂ ಮಹಿಳೆಯರಿಂದು ಭಾಗವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ಸಿಎಂಎಸ್ಎಸ್ಎಸ್ ನ ಪಿ.ಆರ್. ಒ ನಿರೀಕ್ಷ ಮಾತನಾಡಿ, ಮಹಿಳೆಯರು ಸಾಮಾಜಿಕ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಶಕ್ತರಾಗಬೇಕೆಂಬ ಉದ್ದೇಶದಿಂದ ಸಿ.ಎಂ.ಎಸ್.ಎಸ್.ಎಸ್ ಸಂಸ್ಥೆಯು ಹಮ್ಮಿಕೊಂಡಿರುವ ಕಾರ‍್ಯಕ್ರಮಗಳಾದ ಮಹಿಳಾ ಸಬಲೀಕರಣ, ವಿಕಲ ಚೇತರನ್ನು ಮುಖ್ಯವಾಹಿನಿಗೆ ತರುವುದು, ಆರೋಗ್ಯ ಮತ್ತು ಶಿಕ್ಷಣ, ಕೌಶಲ್ಯ ಅಭಿವೃದ್ದಿ ಮತ್ತು ಪರಿಸರ ಸಂರಕ್ಷಣೆಗಳಿಗೆ ಸಂಬಂಧಿಸದಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರತಿಯೊಬ್ಬ ಮಹಿಳೆಯು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಲಕ್ಷ್ಮಿ, ಆಶ್ವಿನಿ, ರೂಪ, ಪಾಲಾಕ್ಷ, ನಸ್ತೀನ್ ಅಕ್ತರ್, ಸಿಸ್ಟರ್. ಮೇರಿ ಜೆರಾಲ್ಡಿನ್, ಪರಮೇಶ್, ಜೀವನ್ ಜೋಯಲ್, ಜಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.
-
Mandya8 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu13 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Kodagu8 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Mandya10 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu11 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ