Kodagu
ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಪಲ್ಟಿ: ತಪ್ಪಿದ ಅನಾಹುತ
ನಾಪೋಕ್ಲು : ಚಾಲಕನ ನಿಯಂತ್ರಣ ಕಳೆದುಕೊಂಡ ಮಾರುತಿ ಕಾರೊಂದು ರಸ್ತೆ ಬದಿಯ ತೋಟದ ಚೆರಂಡಿಗೆ ಉರುಳಿಬಿದ್ದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ಗುರುವಾರ ಸಂಜೆ ನಡೆದಿದೆ.
ಕುಶಾಲನಗರದಿಂದ ಬೆಟ್ಟಗೇರಿ, ಕೊಟ್ಟಮುಡಿ ಮಾರ್ಗವಾಗಿ ಬಲ್ಲಮಾವಟಿ ಗ್ರಾಮದ ನಿವಾಸಿ ನಿತಿನ್ ಎಂಬುವವರು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಹಂದಿಯನ್ನು ಸಾಗಿಸುತ್ತಿದ್ದ ಸಂದರ್ಭ ಕೊಟ್ಟಮುಡಿ ಜಂಕ್ಷನ್ ಬಳಿಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ಬದಿಯ ಜೆ ವಿ ಎಸ್ಟೇಟ್ ನ ತೋಟದ ಚೆರಂಡಿಗೆ ಉರುಳಿ ಬಿದ್ದಿದೆ.ಅಪಘಾತದಿಂದ ಕಾರಿನ ಮೆಲ್ಬಾಗ ಹಾಗೂ ಒಂದು ಬದಿಗೆ ಹಾನಿಯಾಗಿದ್ದು ಕಾರಿನ ಚಾಲಕ ನಿತಿನ್ ಹಾಗೂ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದಿಂದ ಕಾರಿನಲ್ಲಿದ್ದ ಹಂದಿಗೂ ಯಾವುದೇ ಹಾನಿಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ತೋಟದ ಚೆರಂಡಿಗೆ ಉರುಳಿ ಬಿದ್ದ ಕಾರನ್ನು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಿ ತೆರವು ಗೊಳಿಸಲಾಯಿತು.
ವರದಿ:ಝಕರಿಯ ನಾಪೋಕ್ಲು
Kodagu
ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಸಿ.ಐ.ಪಿ.ಯು.ವಿದ್ಯಾರ್ಥಿನಿ ಎ.ಎಸ್.ಪೊನ್ನಮ್ಮ ಆಯ್ಕೆ
ಪೊನ್ನಂಪೇಟೆ : ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡೆಯಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು.ಕಾಲೇಜಿನ ದ್ವಿತೀಯ ಪಿ.ಯು.ವಿಜ್ಞಾನವಿಭಾಗದ ವಿದ್ಯಾರ್ಥಿನಿ ಕುಮಾರಿ ಎ.ಎಸ್.ಪೊನ್ನಮ್ಮ 69 ರಿಂದ 75 ಕೆ.ಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿನಿಯನ್ನು ಸಿ.ಐ.ಪಿ.ಯು.ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ ಮತ್ತು ಸಿ.ಐ.ಪಿ.ಯು.ಕಾಲೇಜಿನ ಸರ್ವಸದಸ್ಯರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.
Kodagu
ಪ್ರಧಾನಿ ಕುರಿತು ಅವಹೇಳನ – ನಾಲ್ವರ ಬಂಧನ
ಮಡಿಕೇರಿ : ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಪದ ಪ್ರಯೋಗಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿಯ ನಿವಾಸಿ, ಎಂ.ಈ. ಫಹದ್ (31), ತ್ಯಾಗರಾಜ ಕಾಲೋನಿಯ ಎಂ.ಹೆಚ್. ಬಾಸಿಲ್ (29) ಹಾಗೂ ಎಂ.ಎಂ. ಸಮೀರ್ (31) ಹಾಗೂ ಅಜಾದ್ ನಗರದ ಮೊಹಮ್ಮದ್ ರಿಯಾಜ್ (26) ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ವ್ಯಾಪಾರ ವೃತ್ತಿಯಲ್ಲಿ ತೊಡಗಿಕೊಂಡಿದ್ದವರು. ಬಂಧಿತರಿಂದ ನಾಲ್ಕು ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಸ್ಪೈಸಸ್ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಯುವಕರು, ಪ್ರಧಾನಿ ಮೋದಿ ಕುರಿತಾಗಿ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಆದ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ ನಗರ ಠಾಣೆಯಲ್ಲಿ ದೂರು ನೀಡಿತ್ತು.
ಸದರಿ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಡಿಕೇರಿ ಉಪವಿಭಾಗ ಡಿಎಸ್ಪಿ ಸೂರಜ್.ಪಿ.ಎ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯ ನಿರ್ವಹಿಸಿತ್ತು.
Kodagu
ಡಿ.15 ರಂದು ಮೂರ್ನಾಡು ಗ್ರಾಮದಲ್ಲಿ ಅರೆಭಾಷೆ ದಿನಾಚರಣೆ
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಸಹಯೋಗದೊಂದಿಗೆ ಅರೆಭಾಷೆ ದಿನಾಚರಣೆಯು ಡಿಸೆಂಬರ್ 15 ರಂದು ಬೆಳಗ್ಗೆ 10 ಗಂಟೆಗೆ ಮೂರ್ನಾಡು ಗೌಡ ಸಮಾಜ ನಡೆಯಲಿದೆ.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕರ್ನಾಟಕ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಟಿ.ಹರೀಶ್, ಮೂರ್ನಾಡು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ಚೆಟ್ಟಿಮಾಡ ಟಿ.ಕಾರ್ಯಪ್ಪ (ವಸಂತ), ಮಡಿಕೇರಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಸೂರ್ತಲೆ ಆರ್.ಸೋಮಣ್ಣ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಪೋಲೀಸ್ ಅಧಿಕ್ಷಕರಾದ ಚೊಕ್ಕಾಡಿ ಎನ್.ಅಪ್ಪಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.
-
Kodagu9 hours agoಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ಎಸ್ಟಿ ಮೋರ್ಚಾ ಅಸಮಾಧಾನ
-
Chamarajanagar24 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
State24 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Kodagu23 hours agoಪ್ರಧಾನಿ ಬಗ್ಗೆ ಅವಹೇಳನ – ಮಡಿಕೇರಿಯ ಮೂವರ ಬಂಧನ
-
Special22 hours ago14.21 ಲಕ್ಷ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ: ರಾಜ್ಯ ಸರ್ಕಾರದ ಮಹತ್ವದ ಘೋಷಣೆ
-
Kodagu22 hours agoಕೊಡಗಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
-
Chamarajanagar2 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
-
Chamarajanagar2 hours agoಸುಗಮ ಸಂಗೀತ ಸ್ಪರ್ಧೆಯಲ್ಲಿ ಚರಣ್ ಗೆ ಪ್ರಥಮ ಬಹುಮಾನ
