Connect with us

Hassan

ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು

Published

on

ಹಾಸನ: ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವೃದ್ಧೆ ಓರ್ವಳು ಡಿಸಿ ಕಛೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣಿರು ಹಿಟ್ಟಿದ ಪ್ರಸಂಗ ನಡೆಯಿತು.

ನಂತರ ಮಾನವಿಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.

ಅರಸೀಕೆರೆ ತಾಲೂಕಿನ ಕಣಕಟ್ಟೆಹಳ್ಳಿ ಗ್ರಾಮದ ನಂಜುಂಡಮ್ಮ ಎಂಬುವರೇ ನನಗೆ ರಕ್ಷಣೆ ನೀಡಿ ನನ್ನ ಆಸ್ತಿ ನಮಗೆ ಕೊಡಿಸುವಂತೆ ಮನವಿ ಮಾಡಿದ ವೃದ್ಧೆಯಾಗಿದ್ದಾರೆ. ನಡೆಯಲು ಸಾಧ್ಯವಾಗದೇ ತೆವಲುತ್ತಲೆ ಡಿಸಿ ಕಛೇರಿಗೆ ಬಂದಿದ್ದು, ಈ ವೇಳೆ ತಹಸೀಲ್ದಾರ್ ವಿಚಾರಿಸಿದಾಗ ಆಕೆ ಹೇಳಿದ್ದು ಕೇಳಿ ಅಧಿಕಾರಿಗಳು ಬೇಸರಗೊಂಡರು.

ತಹಸೀಲ್ದಾರ್ ಎದುರು ಮಾತನಾಡಿದ ವೃದ್ಧೆ, ನಮ್ಮ ಗ್ರಾಮದ ರಾಜ, ಪಾಲಾಕ್ಷಮ್ಮ, ದಿವ್ಯ, ಯೋಗೇಶ್, ಜ್ಯೋತಿ, ನಂಜುಂಡೇಗೌಡ, ಬಸವರಾಜಪ್ಪ, ಬಸವರಾಜ ಹೆಂಡತಿ ತಾಯಮ್ಮ, ಬಸವರಾಜ, ತಾಯಮ್ಮನ ಮಕ್ಕಳುಗಳು ಇಬ್ಬರು ಗಂಡು ಮಕ್ಕಳು, ಯೋಗೇಶ್‌ನ ಎರಡು ಹೆಣ್ಣು ಮಕ್ಕಳು, ಶಾರದಮ್ಮ, ಸ್ವಾಮಿ, ಭಾಗ್ಯ, ಶೇಖರ, ಹಾಗೂ ಶೇಖರನ ಹೆಂಡತಿ ಜ್ಯೋತಿ, ಹಾಗೂ ಅವರ ಮಗ, ಇವರುಗಳು ಸೇರಿಕೊಂಡು ನನ್ನನ್ನು ಗ್ರಾಮ ಬಿಡಿಸಿ ನನ್ನ ಆಸ್ತಿ ಲಪಟಾಯಿಸಲು ಹಾಗೂ ದೇವರುಗಳಾದ ಟಿ.ಕೋಡಿಹಳ್ಳಿ ದ್ಯಾವಮ್ಮ, ತಳ್ಳುರಮ್ಮ, ಚೌಡೇಶ್ವರಿ, ಪಂಡಿತರು, ಕಲ್ಲು ಮಕಾಡೆ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರದಂತೆ ಹೋಗದಂತೆ ದೊಣ್ಣೆ, ಹಾಗೂ ಮಚ್ಚು. ಎಲ್ಲ ಹಿಡಿದುಕೊಂಡು ನನಗೆ ಬೆದರಿಕೆ ಹಾಕುತ್ತಿರುತ್ತಾರೆ ಎಂದು ದೂರಿದರು.

ನಾನು ಸುಮಾರು ಬಾರಿ ಅರ್ಜಿಯನ್ನು ಎಲ್ಲಾ ಅಧಿಕಾರಿಗಳಿಗೆ ಕೊಟ್ಟರು ಸಹ ಯಾರು ನ್ಯಾಯ ಕೊಡಿಸುತ್ತಿಲ್ಲ. ಎಸ್.ಪಿ. ಸಹ ಬರುವುದಿಲ್ಲವೆಂದು ನನಗೆ ತುಂಬಾ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ನನ್ನ ಜಮೀನನ್ನು ನನಗೆ ಬಿಡಿಸಿಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಅರಸೀಕೆರೆ ತಹಸೀಲ್ದಾರರಲ್ಲಿ ಕೈಮುಗಿದು ವೃದ್ಧೆ ಬೇಡಿದರು.

Continue Reading

Hassan

ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ಎಟಿಆರ್‌ ರಾಜಿನಾಮೆ: ಪತ್ರ ವೈರಲ್‌

Published

on

ಹಾಸನ: ರಾಜಕೀಯ ದಿಂದ ದೂರ ಸರಿದ್ರಾ ಹಿರಿಯ ರಾಜಕಾರಣಿ ಎಟಿ ರಾಮಸ್ವಾಮಿ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ.

ಏಪ್ರಿಲ್ 15 ರಂದೇ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರಗೆ ಬರೆದಿರೊ ಪತ್ರ ಎಂದು ಹೇಳಲಾಗುತ್ತಿರುವ ಈ ಪತ್ರದಲ್ಲಿಪರಿಸರ ಉಳಿವಿಗಾಗಿ ತೊಡಗಿಸಿಕೊಳ್ಳೋದಾಗಿ ಉಲ್ಲೇಖಿಸಿ ರಾಜಿನಾಮೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಹವಾಮಾನ ವೈಪರಿತ್ಯದಿಂದ ನೆರೆ ಬರ, ಭೂ ಕಂಪ ಸೃಷ್ಟಿ ಆಗುತ್ತಿದೆ. ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಅಹಾರ ವಿಷಪೂರಿತವಾಗಿದೆ. ಬೆಟ್ಟಗುಡ್ಡ ಅರಣ್ಯ ನಾಶದಿಂದ ನದಿ ತೊರೆ ಗಳು ಬತ್ತಿ ಹೋಗಿವೆ. ಈ ಹೊತ್ತಿನಲ್ಲಿ ರಾಜಕಾರಣ ಕ್ಕಿಂತ ಪರಿಸರ ದ ಉಳಿವು ಮುಖ್ಯವಾಗಿದೆ. ನಾನು ಪರಿಸರದ ಸಂರಕ್ಷಣೆಯಲ್ಲಿ ನನ್ನ ಸಂಪೂರ್ಣ ಸಮಯ ತೊಡಗಿಸಿಕೊಳ್ಳಬೇಕೆಂದಿದ್ದೇನೆ ಎಂದು ಉಲ್ಲೇಖಿಸಲಾಗಿದೆ.

ಈಗಾಗಲೆ ಪರಿಸರಕ್ಕಾಗಿ ನಾವು ಸಂಘಟನೆಯಲ್ಲಿ ರಾಜ್ಯಾದ್ಯಕ್ಷ ಹುದ್ದೆ ಅಲಂಕರಿಸಿರೊ ಎಟಿ ರಾಮಸ್ವಾಮಿ. ರಾಜ್ಯಮಟ್ಟದ ಹಲವು ಸಾಹಿತಿ ಚಿಂತಕರುಣ ಸ್ವಾಮಿಜಿಗಳು ಹೋರಾಟಗಾರ ರ ನೇತೃತ್ವದಲ್ಲಿ ಉದಯಿಸಿರೊ ಸಂಘಟನೆ ರಾಜಕೀಯದಲ್ಲಿ ಸಕ್ರಿಯರಾಗಿರೋರಿಗೆ ಸಂಘಟನೆಯಲ್ಲಿ ಅವಕಾಶ ಇಲ್ಲದ ಹಿನ್ನೆಲೆ ಸಕ್ರಿಯ ರಾಜಕಾರಣದಿಂದ ದೂರ ಸರಿದು ಪರಿಸರ ಸಂರಕ್ಷಣೆ ಯಲ್ಲಿ ತೊಡಗಿಕೊಳ್ಳಲು ತೀರ್ಮಾನ ಮಾಡಿರೊ ಬಗ್ಗೆ ಮಾಹಿತಿ ಇದ್ದು, ಹಾಗಾಗಿಯೇ ಬಿಜೆಪಿ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಲ್ಕು ಬಾರಿ ಶಾಸಕರಾಗಿ ವಿಧಾನಸಬೆಗೆ ಆಯ್ಕೆಯಾಗಿದ್ದ ಎಟಿಆರ್, ಕಳೆದ ವಿಧಾನಸಭೆ ಚುನಾವಣೆ ಹಾಲಿ ಶಾಸಕರಾಗಿದ್ದರೂ ಟಿಕೇಟ್ ನೀಡದ ಜೆಡಿಎಸ್. ಇದರಿಂದ ಮನನೊಂದು ಬಿಜೆಪಿ ಸೇರಿದ್ದ ಎಟಿ ಆರ್, ಕಾಂಗ್ರೆಸ್ ನಿಂದ ಎರಡುಬಾರಿ ಜೆಡಿಎಸ್ ನಿಂದ ಎರಡುಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಟಿ ರಾಮಸ್ವಾಮಿ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದದಿಂದ ಆಯ್ಕೆಯಾಗಿದ್ದ ಎಟಿಆರ್, 2023 ರಿಂದಲೂ ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದರು.

Continue Reading

Hassan

ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ: ಸಂಸದ ಶ್ರೇಯಸ್‌ ಪಟೇಲ್‌

Published

on

ಹಾಸನ: ನಗರದ ಹೊಸ ಬಸ್ ನಿಲ್ದಾಣದ ಎದುರಿನ ರೈಲ್ವೆ ಮೇಲ್ಸೇತುವೆ 2ನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 2026ರ ಫೆಬ್ರವರಿ ಇಲ್ಲವೇ ಮಾರ್ಚ್ ವೇಳೆಗೆ ಮುಗಿಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.

ಶನಿವಾರದಂದು ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೂ ನಿಮಾಣ ಹಂತದಲ್ಲಿರುವ ಮೇಲ್ಸೇತುವೆ ಮೇಲೆ ತೆರಳಿ ಎಲ್ಲೆಲ್ಲಿ ಕಾಮಗಾರಿ ಆಗಬೇಕು ಎಂಬುವರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹಲವು ಕಾರಣಗಳಿಂದಾಗಿ ಕೆಲ ವರ್ಷಗಳಿಂದ ಕಾಮಗಾರಿ ನಿಂತಿತ್ತು. ಇದೀಗ ತಮ್ಮ ತಮ್ಮ ಪಾಲಿನ ಅನುದಾನ ನೀಡಲು ಸಮ್ಮತಿಸಿವೆ. ಹೀಗಾಗಿ ಈಗಾಗಲೇ ಶುರುವಾಗಿರುವ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿದ್ದು, ಹೆಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲೀವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು. ಉಸುಮಾರು ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೇಂದ್ರ ಸಹ ತನ್ನ ಪಾಲಿನ ಅನುದಾನ ನೀಡಲು ಒಪ್ಪಿದೆ. ಹೀಗಾಗಿ ಮೇಲ್ಸೇತುವೆ ಕಾಮಗಾರಿ ಇನ್ನು ಮಂದೆ ಯಾವುದೇ ಅಡೆ-ತಡೆ ಇಲ್ಲದೆ ಮುನ್ನಡೆಯಲಿದೆ ಎಂದರು. ಎರಡೂ ಬದಿಯ ನಾಲ್ಕು ಪಥದ ಮೇಲ್ಸೇತುವೆ ನಿರ್ಮಾಣ ಆದರೆ ವಾಹನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading

Hassan

ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ: ಸಂಸದ ಶ್ರೇಯಸ್‌ ಪಟೇಲ್‌

Published

on

ಹಾಸನ : ನಮ್ಮದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಪಕ್ಷ ಹಾಗಾಗಿ ಇದರ ಬಗ್ಗೆ ಜವಾಬ್ದಾರಿಯುತ ತೀರ್ಮಾನವನ್ನು ಸರ್ಕಾರದ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲಾ ಸಮಾಜವನ್ನು ಸಮವಾಗಿ ನೋಡಿ ಜಾತಿಗಣತಿಯಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾತಿಗಣತಿ ವರದಿ ಗೊಂದಲ ವಿಚಾರ ಹಾಸನದಲ್ಲಿ ಸಂಸದ ಶ್ರೇಯಸ್‌ಪಟೇಲ್ ಹೇಳಿಕೆ ನೀಡಿದರು.

ಮೊನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುಬೇಕೆಂದು ಒತ್ತಾಯಿಸಿದ್ದಾರೆ‌. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗುವ ಕೆಲಸವನ್ನು ನಮ್ಮ‌ ಪಕ್ಷ ಮಾಡಲ್ಲ. ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸಮಾಜ ಮಾಡಿಲ್ಲ, ಮಾಡುವುದಿಲ್ಲ. ಜನಸ್ನೇಹಿಯಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. 2015 ರಲ್ಲಿ ಜಾತಿಗಣತಿ ನಡೆದಿತ್ತು, ಎಲ್ಲರ ಬೇಡಿಕೆ ಇತ್ತು ಜಾತಿಗಣತಿಗಾಗಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ಈಗೀನ ವರದಿಯ ನೈಜತೆಯನ್ನು, ಸತ್ಯಾಸತ್ಯತೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರದಿಯನ್ನು ಇನ್ನೂ ಮಂಡಿಸಿಲ್ಲ, ವರದಿ ಹೊರಗೆ ಬಂದ ಮೇಲೆ ಗೊತ್ತಾಗುತ್ತೆ. ಇನ್ನೂ ಯಾರಿಗೂ ವರದಿಯಲ್ಲಿದೆ ಎಂದು ಗೊತ್ತಿಲ್ಲ.

ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಯಾವಾಗಲೂ ಆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದೇ ವಿರೋಧ ಪಕ್ಷಗಳ ಗುರಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತೆ ನಮಗೂ ಆಸೆ ಇದೆ, ಆದರೆ ಸಿದ್ಧಾಂತ ಇದೆ, ಜನಸೇವೆ ಮಾಡಲು ನಾವು ಬಂದಿದ್ದೇವೆ. ಅಧಿಕಾರದ ದುರಾಸೆಗೋಸ್ಕರ ಈ ಕೆಲಸ ಮಾಡಬಹುದು.ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟು ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಸಿಇಟಿ ಪರೀಕ್ಷೆಗೆ ಹೋಗುವ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಅದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ, ಆ ತರ ಮಾಡಬಾರದು. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಒಬ್ಬ ಸಾರ್ವಜನಿಕನಾಗಿ ಹೇಳುತ್ತಿದ್ದೇನೆ. ಅವರವರ ಆಚರಣೆಗಳು, ಅವರವರ ವೈಯುಕ್ತಿಕ. ಜನಿವಾರ ತೆಗೆದು ಹೋಗಿ ಎನ್ನುವುದು ಅಪರಾಧ. ನಾನಂತು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.

Continue Reading

Trending

error: Content is protected !!