Hassan
ಒಳ ಮೀಸಲಾತಿ ಮಾದಿಗ ಪರವಾಗಿಯೇ ತೀರ್ಪು: ಎ. ನಾರಾಯಣಸ್ವಾಮಿ ವಿಶ್ವಾಸ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಾದಿಗರು ಮುಂದೆ ಬನ್ನಿ
ಹಾಸನ : ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾಗಿ ಉನ್ನತ ಶಿಕ್ಷಣ ನೀಡುವ ಮೂಲಕ ಮಾದಿಗರು ಮುಂದೆ ಬರಬೇಕು. ಪ್ರಮುಖ ಬೇಡಿಕೆಯಾಗಿರುವ ಒಳ ಮೀಸಲಾತಿ ವಿಚಾರಣೆಯಲ್ಲಿ ತೀರ್ಪು ನಮ್ಮ ಪರವಾಗಿಯೇ ವರಲಿದೆ ಎಂದು ಭಾರತದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ಶನಿವಾರ ಬೆಳಿಗ್ಗೆ ನಡೆದ ಮಾದಿಗ ಮುನ್ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ಜನವರಿ ೧೭ ರಂದು ಮಾದಿಗರ ಒಳ ಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯದ ೭ ಜನ ನ್ಯಾಯಾಧೀಶರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಮಾದಿರ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಅಭಿಪ್ರಾಯಪಟ್ಟರು. ಮಾದಿಗರ ಒಳ ಮೀಸಲಾತಿ ಜಾರಿಯಾದ ಮೇಲೆ ದಕ್ಷಿಣ ಭಾರತದ ಮಾದಿಗರು ತಮ್ಮ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸದಿದ್ದರೇ , ಮಾದಿಗರ ಮಕ್ಕಳು ಕೂಡ ತಮ್ಮ ಹಿರಿಯರಂತೆ ಬೇರೆಯವರ ಮನೆಯಲ್ಲಿ ಜೀತ ಮಾಡಬೇಕಾಗುತ್ತದೆ. ಹಾಗು ಅವರು ನೀಡುವ ಒಂದೊತ್ತಿನ ಕೂಳು ತಿನ್ನಬೇಕಾಗುತ್ತದೆ. ಈ ಅನಿಷ್ಠ ಪದ್ಧತಿ ಹೋಗಲಾಡಿಸಲು ಮಾದಿಗರು ಮುಂದೆ ಬರಬೇಕು ಎಂದು ಕರೆ ನೀಡಿದರು. ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಜಾಬ್ ಓರಿಎಂಟೆಡ್ ಸೆಮಿನಾರ್ ಗಳು, ಉನ್ನತ ಮಟ್ಟದ ಶಿಕ್ಷಣಕ್ಕೆ ಬೇಕಾದ ತರಬೇತಿ, ಜಾಗೃತಿ ಸಮಾವೇಶಗಳು ಹಾಗು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಕೋಚಿಂಗ್ ವ್ಯವಸ್ಥೆ ಜಿಲ್ಲೆಯಲ್ಲಿ ಆಗಬೇಕು ಹಾಗು ಇಂತಹ ಸಮಾಜ ಮುಖಿ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ನವರು ಒಳಮಿಸಲಾತಿ ಬೇಕು ಅಂತ ಬಾಯಿ ಮಾತಿಗೆ ಹೇಳಿದ್ರೂ, ಆದರೆ ಕಾಂಗ್ರೆಸ್ ನವರು ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್ ನವರು ಇದೆ ರೀತಿ ನಿರ್ಲಕ್ಷ್ಯ ಮಾಡಿದರೆ ಭವಿಷ್ಯದ ದಿನದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತೆ. ಇನ್ನು ನಾವೆಲ್ಲಾ ಕೂಡ ಆರ್.ಎಸ್.ಎಸ್ ನ ಮೋಹನ್ ಭಾಗವಾತರನ್ನ ಈ ಹಿಂದೆ ಭೇಟಿ ಮಾಡಿದ್ದೆವೆ. ಮೋದಿ ಅವರು ಕೂಡ ಮಾದಿಗರ ಪರ ಇದ್ದೇನೆ ಅಂತ ಹೇಳಿದ್ದಾರೆ. ನಮಗೆ ಪಕ್ಷಕ್ಕಿಂತ ಸಮುದಾಯ ಮುಖ್ಯ ನಾರಾಯಣ ಸ್ವಾಮಿ ಎಂದು ರಾಜಕೀಯಕ್ಕಾಗಿ ಸಮುದಾಯ ಬಿಡುವುದಿಲ್ಲ ಎಂಬುದನ್ನು ಬಹಿರಂಗವಾಗೇ ಹೇಳಿದ್ದೆವೆ ಎಂದರು.
ಮಾದಿಗ ಸಮುದಾಯದ ರಾಜ್ಯ ಮುಖಂಡರು ಡಾ. ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಮಾದಿಗ ಸಮುದಾಯ ಮೀಸಲಾತಿ ವಿಚಾರವಾಗಿ ಪ್ರತಿಭಟನೆ ಹಾಗೂ ಹೋರಾಟಗಳನ್ನು ಮಾಡಲು ಮುಂದಾದ ಸಂದರ್ಭದಲ್ಲಿ ಸಮುದಾಯದ ಕಣ್ಣೊರೆಸಲು ಮುಂದಾಅಗಿದ್ದ ಅಂದಿನ ಸರ್ಕಾರ ಒಳ ಮೀಸಲಾತಿ ವಿಚಾರವಾಗಿ ಕೂಲಂಕುಷವಾಗಿ ಅಧ್ಯಯನ ಮಾಡುವ ದೃಷ್ಠಿಯಿಂದ ಒಂದು ಆಯೋಗವನ್ನು ರಚನೆ ಮಾಡಿದ್ದೂ ನಿಜವಷ್ಟೆ ಆದರೆ ಸಮಿತಿಗೆ ಅಧ್ಯಯನ ಮಾಡಲು ಒಂದು ರೂಪಾಯಿ ಅನುದಾನವನ್ನು ನೀಡದೆ ನಾಮಾಕಾವಸ್ಥೆಗೆ ಮಾತ್ರ ಆಯೋಗ ಮಾಡಿದ್ದರು. ಆದರೆ ನಂತರ ಬಂದ ಯೆಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಆಯೋಗಕ್ಕೆ ಕಚೇರಿ ಹಾಗು ಅಧ್ಯಯನಕ್ಕೆ ಪೂರಕವಾದ ಅನುಧಾನ ನೀಡಿದರು ಎಂದರು. ಇದೆ ವೇಳೆ ಮಾದಿಗರ ೩೫ ವರ್ಷಗಳ ಹೋರಾಟಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾದಿಗರ ಒಳ ಮೀಸಲಾತಿಗಾಗಿ ಒಂದು ತಂಡ ರಚನೆ ಮಾಡಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವ ದಿನಗಳು ದುರವೇನಿಲ್ಲ ಎಂದು ಹೇಳಿದರು.
ಇದೆ ವೇಳೆ ಕರ್ನಾಟಕ ಮಾದಿಗ ದಂಡೋರದ ಸಂಸ್ಥಾಪಕ ಅಧ್ಯಕ್ಷರಾದ ಎಂ. ಶಂಕರಪ್ಪ, ಸಮಾಜದ ಮುಖಂಡರಾದ ಅರಾಕಲವಾಡಿ ನಾಗೇಂದ್ರ, ದೀಪಕ್ ದೊಡ್ಡಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವತ್ಸಲಾ ಶೇಖರಪ್ಪ, ಮುಖಂಡರಾದ ನಾಗವೇದಿ ಶೇಖರಪ್ಪ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಡಿ. ಚಂದ್ರು, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಬಾಣಾವರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್, , ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ನಿಂಗರಾಜು, ಡಿ.ಎಸ್.ಎಸ್ ಸಂಚಾಲಕ ಚನ್ನರಾಯಪಟ್ಟಣ ಪ್ರಕಾಶ್, ಬೆಟ್ಟದ ಸಾತೇನಹಳ್ಳಿ ಸುರೇಶ್ ದೇಶಾಣಿ ಶಂಕರಪ್ಪ. ಕಿರಣ್ ಅರಕೆರೆ, ಎ.ಪಿ. ಚ್ನದ್ರಯ್ಯ, ಜಿಲ್ಲಾಧ್ಯಕ್ಷ ತೆರಣ್ಯ ವಿಜಯ್ ಕುಮಾರ್. ಕರಗುಂದ ರಮೇಶ್, ಕರಗುಂದ ಧನಂಜಯ್, ಗೋಪಿ ಹೊಸೂರು, ದಾಸಪ್ಪ, ಭಾಸ್ಕರ್, ಹಾಸನ್ ಮಹೇಶ್, ರಂಗಸ್ವಾಮಿ, ಜಾವಗಲ್ ಇಂದ್ರೇಶ್, ಜಾಜೂರು ಬಸವರಾಜು, ಶೇಖರಯ್ಯ, ನಂಜಪುರ ಆನಂದ್, ಮಾಡಳು ಚಂದ್ರಪ್ಪ, ಸೋಮಣ್ಣ, ಆಲೂರು ಅರಸಪ್ಪ, ಬಾಣಾವರ ಮಹೇಶ್, ದೊಡ್ಡಪುರ ಕುಮಾರಸ್ವಾಮಿ, ಅರಸೀಕೆರೆ ಜಯ ಕುಮಾರ್ ಸೇರಿಂದಂತೆ ಜಿಲ್ಲೆಯ ವಿವಿಧ ತಾಲುಕುಗಳ ಮಾದಿಗ ಸಮಾಜ ಬಾಂಧವರು, ಮುಖಂಡರು, ಯುವಕರು, ಉಪಸ್ಥಿತರಿದ್ದರು.
Hassan
ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.
ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.
ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್ ತಿಳಿಸಿದರು.
ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.
Hassan
ಅಟಲ್ ವಿರಸತ್ ಕಾರ್ಯಕ್ರಮ: ಒಡನಾಟ ಉಳ್ಳ ಹಿರಿಯರಿಗೆ ಬಿಜೆಪಿಯಿಂದ ಸನ್ಮಾನ

ಹಾಸನ: ನಗರದ ಆರ್.ಸಿ.ರಸ್ತೆ, ಶ್ರೀಗಂಧದ ಕೋಠಿ ಆವರಣದಲ್ಲಿರುವ ಖಾಸಗೀ ಹೋಟೆಲೊಂದರಲ್ಲಿ ಗುರುವಾರ ನಡೆದ ಅಟಲ್ ವಿರಸತ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ಅಟಾಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ಹಿರಿಯರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ಅಟಾಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್ ಮಾತನಾಡಿ, ಅಟಾಲ್ ಜೀ ಅವರು ಎಲ್ಲೆಲ್ಲಿ ಬಂದಿದ್ದರೂ, ಅವರ ಒಡಾಟ, ಹೋರಾಟಗಳು, ಸಂಘಟನೆಗಳು, ಅವರ ವ್ಯಕ್ತಿತ್ವ, ಒಡನಾಟ, ಅವರ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳು, ಅವರ ನೆನಪಿನ ಸ್ಪೂರ್ತಿಯನ್ನು ಸಂಗ್ರಹ ಮಾಡುವಂತಹ ಪೋಟೊ ಸಂಗ್ರಹಿಸುವ ಜೊತೆಗೆ ಯಾರು ಅಟಾಲ್ ಬಿಹಾರಿ ಜೊತೆ ಒಡನಾಟವಿತ್ತು ಅವರನ್ನು ಗುರುತಿಸಿ ಗೌರವಿಸುವ ಕೆಲಸ ನಾವು ಕಳೆದ ಒಂದು ತಿಂಗಳಿನಿಂದ ಮಾಡಿಕೊಂಡು ಈ ಹಿಂದೆಯೇ ಬಂದಿದ್ದೇವೆ ಎಂದರು.
ಅಟಲ್ ಜೀ ಪ್ರೇರಣೆಯನ್ನು ಕಾರ್ಯಕರ್ತರು ಪಡೆದಿದ್ದಾರೆ. ನಾವು ಯಾವ ದಿಕ್ಕಿನಲ್ಲಿ ರಾಜಕಾರಣ ಮಾಡಬೇಕು ಎನ್ನುವ ದಿಕ್ಸೂಜಿ ನಮಗೆ ತೊರಿಸುತ್ತದೆ ಎಂದು ಕಿವಿಮಾತು ಹೇಳಿದರು. ರಾಜಕಾರಣದಲ್ಲಿ ಕೆಲಸ ಮಾಡುವ ನಾವು ಯಾವುದು ಆದರ್ಶ ಎಂಬುದನ್ನು ತಿಳಿದಿರಬೇಕು. ಯಾವ ಮಾರ್ಗದರ್ಶನ ತಿಳಿದಿರಬೇಕು ಬಗ್ಗೆ ಜಾಗೃತಿ ಅಗತ್ಯ ಎಂದು ಸಲಹೆ ನೀಡಿದರು.
ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ವಾಜಪೇಯಿ ಕಾಲದಿಂದಲೂ ಹೋರಾಟ ಮಾಡಿದವರು ನಮ್ಮ ಸಕಲೇಶಪುರದಲ್ಲಿ ಮತ್ತು ಈ ಜಿಲ್ಲೆಯಲ್ಲಿ ಹಲವಾರು ಜನರು ಇದ್ದಾರೆ. ಬಿಜೆಪಿಯಲ್ಲಿ ಹಾಸನಕ್ಕೆ ಉತ್ತಮವಾದ ಸ್ಥಾನಮಾನವಿದೆ. ಹಿಂದಿನ ದಿನಗಳಲ್ಲಿ ಎಮರ್ಜನ್ಸಿ ಕಾಲದಲ್ಲಿ ಜೈಲಿಗೆ ಹೋಗಿದಾಗಿನಿಂದ ಹಿಡಿದು ವಾಜಪೇಯಿ ಜೊತೆ ಪಾರ್ಟಿ ಕಟ್ಟಿರುವ ಹಲವಾರು ಜನರು ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆ ಎಂದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಉಪಸ್ಥಿತರಿದ್ದರು.
Hassan
ನನ್ನ ರಕ್ಷಿಸಿ, ಆಸ್ತಿ ಉಳಿಸಿಕೊಡಿ: ಡಿಸಿ ಕಛೇರಿ ಮುಂದೆ ವೃದ್ಧೆ ಅಳಲು

ಹಾಸನ: ಗ್ರಾಮದಿಂದ ಓಡಿಸಿ ನನ್ನ ಆಸ್ತಿ ಲಪಾಟಿಯಿಸುವ ನಿಟ್ಟಿನಲ್ಲಿ ಅನೇಕ ದೇವರ ಕೈಮುಗಿದು ನನಗೆ ಹಿಂಸೆ ಕೊಡುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು ಬಂದು ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವೃದ್ಧೆ ಓರ್ವಳು ಡಿಸಿ ಕಛೇರಿ ಮುಂದೆ ತಹಸೀಲ್ದಾರಲ್ಲಿ ಮನವಿ ಮಾಡಿಕೊಂಡು ಕಣ್ಣಿರು ಹಿಟ್ಟಿದ ಪ್ರಸಂಗ ನಡೆಯಿತು.
ನಂತರ ಮಾನವಿಯತೆ ದೃಷ್ಠಿಯಲ್ಲಿ ಹಾಗೂ ನ್ಯಾಯಕೊಡಿಸುವುದಾಗಿ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರು ತಮ್ಮ ವಾಹನದಲ್ಲೆ ಕೂರಿಸಿಕೊಂಡು ಆಕೆಯ ಸ್ಥಳಕ್ಕೆ ಕರೆದೊಯ್ದರು.
ಅರಸೀಕೆರೆ ತಾಲೂಕಿನ ಕಣಕಟ್ಟೆಹಳ್ಳಿ ಗ್ರಾಮದ ನಂಜುಂಡಮ್ಮ ಎಂಬುವರೇ ನನಗೆ ರಕ್ಷಣೆ ನೀಡಿ ನನ್ನ ಆಸ್ತಿ ನಮಗೆ ಕೊಡಿಸುವಂತೆ ಮನವಿ ಮಾಡಿದ ವೃದ್ಧೆಯಾಗಿದ್ದಾರೆ. ನಡೆಯಲು ಸಾಧ್ಯವಾಗದೇ ತೆವಲುತ್ತಲೆ ಡಿಸಿ ಕಛೇರಿಗೆ ಬಂದಿದ್ದು, ಈ ವೇಳೆ ತಹಸೀಲ್ದಾರ್ ವಿಚಾರಿಸಿದಾಗ ಆಕೆ ಹೇಳಿದ್ದು ಕೇಳಿ ಅಧಿಕಾರಿಗಳು ಬೇಸರಗೊಂಡರು.
ತಹಸೀಲ್ದಾರ್ ಎದುರು ಮಾತನಾಡಿದ ವೃದ್ಧೆ, ನಮ್ಮ ಗ್ರಾಮದ ರಾಜ, ಪಾಲಾಕ್ಷಮ್ಮ, ದಿವ್ಯ, ಯೋಗೇಶ್, ಜ್ಯೋತಿ, ನಂಜುಂಡೇಗೌಡ, ಬಸವರಾಜಪ್ಪ, ಬಸವರಾಜ ಹೆಂಡತಿ ತಾಯಮ್ಮ, ಬಸವರಾಜ, ತಾಯಮ್ಮನ ಮಕ್ಕಳುಗಳು ಇಬ್ಬರು ಗಂಡು ಮಕ್ಕಳು, ಯೋಗೇಶ್‌ನ ಎರಡು ಹೆಣ್ಣು ಮಕ್ಕಳು, ಶಾರದಮ್ಮ, ಸ್ವಾಮಿ, ಭಾಗ್ಯ, ಶೇಖರ, ಹಾಗೂ ಶೇಖರನ ಹೆಂಡತಿ ಜ್ಯೋತಿ, ಹಾಗೂ ಅವರ ಮಗ, ಇವರುಗಳು ಸೇರಿಕೊಂಡು ನನ್ನನ್ನು ಗ್ರಾಮ ಬಿಡಿಸಿ ನನ್ನ ಆಸ್ತಿ ಲಪಟಾಯಿಸಲು ಹಾಗೂ ದೇವರುಗಳಾದ ಟಿ.ಕೋಡಿಹಳ್ಳಿ ದ್ಯಾವಮ್ಮ, ತಳ್ಳುರಮ್ಮ, ಚೌಡೇಶ್ವರಿ, ಪಂಡಿತರು, ಕಲ್ಲು ಮಕಾಡೆ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರದಂತೆ ಹೋಗದಂತೆ ದೊಣ್ಣೆ, ಹಾಗೂ ಮಚ್ಚು. ಎಲ್ಲ ಹಿಡಿದುಕೊಂಡು ನನಗೆ ಬೆದರಿಕೆ ಹಾಕುತ್ತಿರುತ್ತಾರೆ ಎಂದು ದೂರಿದರು.
ನಾನು ಸುಮಾರು ಬಾರಿ ಅರ್ಜಿಯನ್ನು ಎಲ್ಲಾ ಅಧಿಕಾರಿಗಳಿಗೆ ಕೊಟ್ಟರು ಸಹ ಯಾರು ನ್ಯಾಯ ಕೊಡಿಸುತ್ತಿಲ್ಲ. ಎಸ್.ಪಿ. ಸಹ ಬರುವುದಿಲ್ಲವೆಂದು ನನಗೆ ತುಂಬಾ ತೊಂದರೆ ಕೊಡುತ್ತಿರುತ್ತಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಹಾಗೂ ನನ್ನ ಜಮೀನನ್ನು ನನಗೆ ಬಿಡಿಸಿಕೊಡಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಅರಸೀಕೆರೆ ತಹಸೀಲ್ದಾರರಲ್ಲಿ ಕೈಮುಗಿದು ವೃದ್ಧೆ ಬೇಡಿದರು.
-
State24 hours ago
ಅಕ್ರಮ ಮರ ಕಡಿತಲೆಗೆ ಶಿಕ್ಷೆ ಪ್ರಮಾಣ ಹೆಚ್ಚಳ: ಈಶ್ವರ ಖಂಡ್ರೆ ಖಡಕ್ ಸೂಚನೆ
-
Special11 hours ago
ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಮನೆ ಬಾಗಿಲಿಗೆ ಬರಲಿದೆ ಉಚಿತ ಖಾತಾ : ಸರ್ಕಾರದಿಂದ ವಿನೂತನ ವ್ಯವಸ್ಥೆ
-
State24 hours ago
ಪತ್ರಕರ್ತರಿಗೆ ಮಾಧ್ಯಮ ಕಿಟ್ ವಿತರಣೆ ಮಾಡಿದ ಸಿಎಂ ಸಿದ್ದರಾಮಯ್ಯ
-
State6 hours ago
ನಂದಿನಿ ಹಾಲು ಮತ್ತಷ್ಟು ದುಬಾರಿ: ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಅನುಮೋದನೆ
-
Hassan7 hours ago
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ದೂರು
-
State8 hours ago
ಪತ್ರಿಕೋದ್ಯಮ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಅವರಿಗೆ ಡಿ.ಲಿಟ್ ಪದವಿ
-
State5 hours ago
Nation First, Party next, Self last: ಯತ್ನಾಳ್ ಹೀಗೇಳಿದ್ದೇಕೆ?
-
Kodagu4 hours ago
ಭೀಕರ ರಸ್ತೆ ಅಪಘಾತ – ಬೈಕ್ ಸವಾರ ದುರ್ಮರಣ