Mysore
ಕೆಲಸ ನಿಮಿತ್ತ ಹಳ್ಳಿಯಿಂದ ಬಂದು ತಾಲೂಕು ಕಚೇರಿ ಆವರಣದಲ್ಲಿ ಕುಳಿತ ವೃದ್ಧ ಮಹಿಳೆ ಮೇಲೆ ಸೀಲಿಂಗ್ ಕಳಚಿ ಬಿದ್ದಿದೆ.
ಹುಣಸೂರು, ತಾಲೂಕಿನ ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಪಲು ಗ್ರಾಮದ ನಿವಾಸಿಯಾದ ನಾಗಮ್ಮ ಕೊಂ ಮಹಾದೇವ ಎಂಬ ಮಹಿಳೆ ರಿಜಿಸ್ಟರ್ ಗೆ ನಗರದ ತಾಲೂಕು ಕಚೇರಿಯ ಆವರಣದಲ್ಲಿ ಮಧ್ಯಾಹ್ನ ಕಾದು ಕುಳಿತಿದ್ದ ಸಮಯದಲ್ಲಿ ಉಪ ವಿಭಾಗಾಧಿಕಾರಿಗಳ ಮೇಲಂತಸ್ತಿನಿಂದ ಕಟ್ಟಡದ ಸೀಲಿಂಗ್ ಉದುರಿ ಮಹಿಳೆ ಮೇಲೆ ಬಿದ್ದಿದ ಪರಿಣಾಮ ವೃದ್ದೆಯ ಕಾಲಿನ ಬೆರಳು ಕಟ್ಟಾಗಿದ್ದು ಅಲ್ಲಿ ನೆರೆದಿದ್ದ ಸಾರ್ವಜನಿಕರು ಆ ಮಹಿಳೆಗೆ ನೀರು ಕುಡಿಸಿ ಸಮಾಧಾನ ಹೇಳಿದ್ದಾರೆ ನಂತರ ಸಮಯಕ್ಕೆ ಸರಿಯಾಗಿ ಬಂದ ಗಾವಡಗೆರೆ ಉಪತಹಸಿಲ್ದಾರ್ ಅರುಣ್ ಕುಮಾರ್ ರವರು ಆಂಬುಲೆನ್ಸ್ ಗೆ ಕರೆ ಮಾಡಿದರು ಯಾವ ಆಂಬುಲೆನ್ಸ್ ಕೂಡ ಬರದೆ ಸ್ವಂತ ಕಾರಿನಲ್ಲಿ ತಾವೇ ವೃದ್ದ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೂಡಿಸಿ ಮಾನವೀಯತೆ ಮೆರೆದಿದ್ದಾರೆ ನಂತರ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ರವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.
Mysore
ಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
ವರದಿ : ಮಹದೇವಸ್ವಾಮಿ ಪಟೇಲ್
ನಂಜನಗೂಡು : ನಂಜನಗೂಡು ನಗರಸಭೆ ವ್ಯಾಪ್ತಿಯ ಫುಟ್‌ಪಾತ್‌ಗಳಲ್ಲಿ ಪಾದಚಾರಿಗಳಿಗೆ ತೊಂದರೆ ನೀಡುತ್ತಿರುವ ತಳ್ಳುವಗಾಡಿ ಸೇರಿ ಅಕ್ರಮ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಎಂ. ಬಸವರಾಜು ಎಚ್ಚರಿಕೆ ನೀಡಿದ್ದಾರೆ.

ಹಲವು ವರ್ಷಗಳಿಂದ ಮಾರುಕಟ್ಟೆ ಸೇರಿ ನಗರಸಭೆಯ ಹಲವು ರಸ್ತೆಗಳ ಫುಟ್‌ಪಾತ್ ಜಾಗ ಒತ್ತುವರಿಯಾಗಿದೆ. ಈ ವಿಚಾರವಾಗಿ ವ್ಯಾಪಾರಸ್ಥರುಗಳಿಗೆ ನೋಟಿಸ್ ನೀಡುತ್ತ ಬಂದಿದ್ದರೂ, ಅವರುಗಳನ್ನು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆಗದಂತೆ ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ.

ಫುಟ್‌ಬಾತ್‌ನಲ್ಲಿ ಜನರು ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವಾಗಿ ಅನೇಕ ದೂರುಗಳು ಬಂದಿದೆ. ಹೀಗಾಗಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಸ್ಥರುಗಳಿಗೆ ನೋಟಿಸ್ ನೀಡಿದ್ದೇವೆ. ಒತ್ತುವರಿ ತೆರವುಗೊಳಿಸದಿದ್ದರೇ ಅಂತಹವ ವಿರುದ್ಧ ದಂಡ ಹಾಕಿ, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ, ನಗರಸಭೆ ಅಧಿಕಾರಿಗಳಾದ ವಸಂತ , ಮಹೇಶ್, ಪೊಲೀಸ್ ಇಲಾಖೆ, ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.
Mysore
ಕಸಕ್ಕೆ ಪದೇ ಪದೇ ಬೆಂಕಿ: ಕೇಳುವವರಿಲ್ಲ ಕುವೆಂಪುನಗರ ನಿವಾಸಿಗಳ ಗೋಳು
ಮೈಸೂರು: ಕುವೆಂಪುನಗರ ಸಮೀಪದ ಇಸ್ಕಾನ್ ದೇವಾಲಯದ ಬಳಿ ಖಾಲಿ ಜಾಗದಲ್ಲಿ ನಿತ್ಯವೂ ಕಸ ಸುರಿಯುವುದು ಮತ್ತು ಅದಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.
ಇಸ್ಕಾನ್ ದೇವಾಲಯ ಹಿಂಭಾಗದ ಕೆರೆಯ ಜಾಗದಲ್ಲಿ ಎಲ್ಲೆಲ್ಲಿಂದಲೋ ತಂದ ಕಸ ಕಡ್ಡಿಗಳನ್ನು ತುಂಬುತ್ತಾರೆ. ಇಸ್ಕಾನ್ ಎದುರಿನ ಗುಜರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಸಾಮಾನುಗಳನ್ನು ಶೇಖರಿಸಿದ್ದು, ಅಲ್ಲಿನ ನಿರುಪಯುಕ್ತ ವಸ್ತುಗಳನ್ನೂ ಕಸದ ರಾಶಿಗೆ ಬಿಸಾಡಲಾಗುತ್ತಿದೆ.

ಕಸಕ್ಕೆ ಬೆಂಕಿ ಹಾಕುತ್ತಿರುವುದರಿಂದ ಕುವೆಂಪು ನಗರ ನಿವಾಸಿಗಳ ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಎಷ್ಟೇ ಕೇಳಿಕೊಂಡರು ಮೋರಿಗೆ ಕಸ ಸುರಿಯುವುದು ಹಾಗೂ ಬೆಂಕಿ ಹಾಕುವುದು ತಪ್ಪುತ್ತಿಲ್ಲ. ಅಲ್ಲಿ ಮಹಾನಗರ ಪಾಲಿಕೆಯವರು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಅದು ನೆಪಕ್ಕೆ ಮಾತ್ರಿದ್ದು, ಪ್ರತಿನಿತ್ಯ ಬೆಳಗ್ಗೆ ಹಾಗೂ ರಾತ್ರಿ ಕತ್ತಲಾದೊಡನೆ ಬೇರೆ ಬೇರೆ ಬಡಾವಣೆಗಳಿಂದ ಕಸ ತಂದು ಕಾರು, ಸ್ಕೂಟರ್‌ಗಳಲ್ಲಿ ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಷ್ಟೇ ದೂರು ಕೊಟ್ಟರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಾಲದ್ದಕ್ಕೆ ಕಸ ಸುರಿಯಬಾರದು ಎಂದು ಎಚ್ಚರಿಕೆ ಫಲಕವನ್ನೇ ಕಿತ್ತು ಹಾಕಿದ್ದಾರೆ. ಕೂಡಲೇ ಅಧಿಕಾರಿಗಳು ಕಸ ಬಿಸಾಡುವವರು ಮತ್ತು ಬೆಂಕಿ ಹಚ್ಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುವೆಂಪುನಗರ ಕೆ ಬ್ಲಾಕ್ ನಿವಾಸಿಗಳು ಒತ್ತಾಯಿಸಿದ್ದಾರೆ.
Mysore
ಸಿಎಂ ತವರಿನಲ್ಲೇ 1.20 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ಮೈಸೂರು: ನಗರ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 1.20 ಲಕ್ಷ ರೂ. ಮೌಲ್ಯದ 11.90 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉದಯಗಿರಿ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ದಾಳಿ ನಡೆಸಲಾಯಿತು.

ಅಮೀರ್ ಖಾನ್, ಸೈಯದ್ ಇಮ್ರಾನ್, ಮಹಮ್ಮದ್ ನಬೀಲ್ ಎಂಬವರನ್ನು ಬಂಧಿಸಲಾಗಿದೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂರು ಆರೋಪಿಗಳ ಪೈಕಿ ಆರೋಪಿ ಅಮೀರ್ ಖಾನ್ ವಿರುದ್ಧ ಈ ಹಿಂದೆ ಕೂಡ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ. ಎಸ್ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿತ್ತು.
-
Politics17 hours agoಆಡಳಿತ- ವಿಪಕ್ಷಗಳ ಜಿದ್ದಾಜಿದ್ದಿಗೆ ಬಲಿಯಾದ ವಿಧಾನ ಪರಿಷತ್ ಕಲಾಪ
-
Kodagu23 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Kodagu23 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
Special46 minutes agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
Hassan15 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
National18 hours agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Hassan19 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
Mysore18 hours agoಜಿಲ್ಲಾ ಪೊಲೀಸರಿಂದ ಗೋದಾಮು, ಕೈಗಾರಿಕಾ ಶೋಧ
