Mandya
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ಎಲ್ಲವನ್ನೂ ಮಾಡಲಾಗದು ಅದರಲ್ಲಿ ದಾದಿಯರು ಮತ್ತು ತಂತ್ರಜ್ಞರ ಪಾತ್ರ ಅಪಾರವಾಗಿದೆ – ಸ್ತ್ರೀ ರೋಗ ಪ್ರಾದ್ಯಾಪಕಿ ಪೂರ್ಣಿಮಾ

ಮಂಡ್ಯ : ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ಎಲ್ಲವನ್ನೂ ಮಾಡಲಾಗದು. ಅದರಲ್ಲಿ ಪಾದಿಯರು, ಮತ್ತು ತಂತ್ರಜ್ಞರ ಪಾತ್ರ ಅಪಾರವಾಗಿದೆ. ವ್ಯಕ್ತಿ ಬದುಕಿನಲ್ಲಿ ಸೇವಾ ಕಾರ್ಯವನ್ನು ಮೈಗೂಡಿಸಿಕೊಂಡಾಗ ಮಾತ್ರ ಸಫಲತೆ ಕಾಣಲು ಸಾಧ್ಯ ಎಂದು ಮಿಮ್ಸ್‌ನ ಸ್ತ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಬಿ.ಎಲ್.ಎಸ್. ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸೈನ್ಸ್ ವಿಭಾಗದ ವತಿಯಿಂದ ನಡೆದ ಪ್ರತಿಜ್ಞಾವಿಧಿ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಾದಿಯರ ವೃತ್ತಿಯಲ್ಲಿ ಅಗತ್ಯವಾದ ಸಮರ್ಪಣಾ ಭಾವ, ಸಹಾನುಭೂತಿ, ಮಾನವೀಯತೆ, ಸೇವಾ ಮನೋಭಾವ ಸಹನೆ, ಕರುಣೆ, ತಾಳ್ಮೆ, ಭಾವನಾತ್ಮಕವಾಗಿರುವ ಸ್ಥಿರತೆ, ಶಿಸ್ತು, ಸಮಗ್ರತೆ, ಪ್ರಾಮಾಣಿಕತೆ, ಶಂಚಿತ್ರ, ಉತ್ತಮ ಸಂಪರ್ಕ, ಉತ್ತಮ ಭಾಷೆ, ವಾಗಿ, ಚುರುಕುತನ, ಧೈಯ್ಯ, ವಿಕಾಗ್ರತೆ, ಹೊಂದಾಣಿಕೆ, ಆತ್ಮವಿಶ್ವಾಸ, ಆತ್ಮಸಾಕ್ಷಿ ಇಷ್ಟು ಇದ್ದಲ್ಲಿ ಎಂತಹುದ್ದೇ ಸಂದರ್ಭ ಬಂದರೂ ಅದನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಎಲ್ಲ ಗುಣಗಳನ್ನು ಮಗೂಡಿಸಿಕೊಂಡು ವೃತ್ತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ನು ಖರಾಗಬೇಕು ಎಂದು ಅವರು ಸಲಹೆ ನೀಡಿದರು.

ನೋವಲ್ಲೂ ಧೈರ್ಯ ತುಂಬುವ ಕೈಗಳು ಕಷ್ಟದಲ್ಲಿ ಸಹಾಯ ಹಸ್ತ ನೀಡುವುದು ದಾದಿಯರು ಮಾತ್ರ. ಅವರ ತ್ಯಾಗ, ದೈರ್ಯ చిಶ್ರಾಂತಿ ರಹಿತ ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತಾರೆ. ಅವರು ಎಲೆ ಮರೆಕಾಯಿಯಂತೆ ಸೇವೆ ಮಾಡುತ್ತಿರಬಹುದು. ಆದರೆ ಎಂದಾದರೂ ಒಂದು ದಿನ ಅವರ ಕಾರ್ಯವನ್ನು ನೆನೆಯುವಂತಹ ಕಾಲವೂ ಬರಬಹುದು ಎಂದು ಅವರು ಹೇಳಿದರು.

ವಿಮ್ಸ್ ನ ವೈಧ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್.ಆಶಾಲತಾ, ಡಾ.ಕೃಷ್ಣಸ್ವಾಮಿ ಅತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
Mandya
ಮೊಟ್ಟೆಯನ್ನು ಹಿಡಿದು ನಿಂತದ್ದು ವಿಶೇಷ ಎನಿಸಿತು : ರಘುನಾಥ ಚ.ಹ
ಮಂಡ್ಯ : ನಾನು ಎಲ್ಲ ಕಾರ್ಯಕ್ರಮಗಳಲ್ಲಿ ಪುಸ್ತಕ ಹಿಡಿದು ನಿಲ್ಲುವುದು ಸಹಜ. ಆದರೆ ಇವತ್ತು ನಾನು ಮೊಟ್ಟೆಯನ್ನು ಹಿಡಿದು ನಿಂತದ್ದು ವಿಶೇಷ ಎನಿಸಿತು. ಮಂಡ್ಯವನ್ನ ಸಕ್ಕರೆ ನಗರ ಅಂತ ಕರಿತೀವಿ, ನಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು, ಬಹುಶಃ ‘ಬಾಡುನಗರ’ ಎಂದು ಕರೆಯುವುದರ ಬಗ್ಗೆ ಯೋಚನೆ ಮಾಡಬಹುದೇನೋ ಎಂದು ಹಿರಿಯ ಪತ್ರಕರ್ತ ರಘುನಾಥ ಚ.ಹ. ಅಭಿಪ್ರಾಯಪಟ್ಟರು.
ಬಾಡೂಟ ಬಳಗದ ವತಿಯಿಂದ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆದ ‘ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಭಾಗವವಹಿಸಿ ಅವರು ಮಾತನಾಡಿದರು.

ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬುದು ನಮಗೆ ಗೊತ್ತು, ವೈಯಕ್ತಿಕ ಆರೋಗ್ಯ ಮತ್ತು ಸಮಾಜಕ್ಕೆ ಬಾಡು ಅವಶ್ಯಕವಾಗಿದೆ. ಮಹೇಶ್ ಜೋಷಿ ಮಾಂಸದ ಪ್ರಸ್ತಾಪ ಮಾಡದಿದ್ದರೆ, ನಾವ್ಯಾರು ಮಾಂಸದೂಟ ಬೇಕು ಎಂದು ಹೋರಾಟ ಮಾಡುತ್ತಿರಲಿಲ್ಲ ಎನಿಸುತ್ತದೆ, ಇದು ಸ್ವತಃ ಅವರೇ ಮಾಡಿಕೊಂಡಿದ್ದು’ ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಮೊದಲಿಗೆ ಬಾಡೂಟ ಬಳಗಕ್ಕೆ ಅಭಿನಂದನೆಗಳು, 87 ವರ್ಷಗಳ ಇತಿಹಾಸದಲ್ಲಿ, ನಡೆಯದ ಪ್ರಕ್ರಿಯೆಯನ್ನು ಮಂಡ್ಯದಲ್ಲಿ ಮಾಡಿ ತೋರಿಸಿದ್ದೀರಿ. ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ಆಳುವುದು ಅಸಹಜ ಪ್ರಕ್ರಿಯೆ. ಆದರೆ ಇತಿಹಾಸದುದ್ದಕ್ಕೂ ಅಲ್ಪಸಂಖ್ಯಾತರೇ ಬಹುಸಂಖ್ಯಾತರನ್ನು ಆಳುತ್ತಾ ಬಂದಿದ್ದಾರೆ. ಅದಕ್ಕೆ ಅವರು ಬಳಸುತ್ತಿರುವ ದೊಡ್ಡ ಆಯುಧವೆಂದರೆ ಸಾಂಸ್ಕೃತಿಕ ರಾಜಕಾರಣ. ನಮ್ಮ ತಲೆಯೊಳೆಗೆ ಕೀಳರಿಮೆಯನ್ನು ಸೃಷ್ಠಿಸಿ, ಪ್ರತಿಯೊಂದರಲ್ಲೂ ಮೇಲೂ ಕೀಳನ್ನು ಸೃಷ್ಠಿಸಿ, ಸಮಾಜದಲ್ಲಿ ಮೇಲಿನವರ ಸಹಾಯವಿಲ್ಲದೇ, ನಮಗೆ ಮೋಕ್ಷವೇ ಇಲ್ಲವೇನೋ ಎಂಬ ಭಯವನ್ನು ಸೃಷ್ಠಿಸಿಕೊಂಡು ಬಂದಿದ್ದಾರೆ ಎಂದರು.

ಬಾಡೂಟ ಕೇವಲ ಒಂದು ಸಮ್ಮೇಳನಕ್ಕೆ ಸೀಮಿತವಾಗಿಲ್ಲ, ಕಳೆದ ಮೂರ್‍ನಾಲ್ಕು ದಿನಗಳಿಂದ ಪ್ರತಿಕೆಗಳನ್ನ ನೋಡಿದರೆ, ಪಂಜಾಬ್ ಸರ್ಕಾರ ಅಮೃತಸರ ಸೇರಿದಂತೆ ಮೂರು ನಗರಗಳನ್ನು ಪವಿತ್ರನಗರ ಎಂದು ಘೋಷಣೆ ಮಾಡಿ, ಅದಕ್ಕೊಂಡು ವಿಶೇಷ ಸ್ಥಾನಮಾನ ಕೊಟ್ಟು, ಮಾಂಸ, ಮದ್ಯ ಮತ್ತು ಮಾದಕ ವಸ್ತುಗಳನ್ನು ನಿಷೇಧ ಮಾಡಿದೆ. ಇದು ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಒಂದು ಬೆಳವಣಿಗೆಯಾಗಿದೆ. ಅಂದರೆ ಮದ್ಯದ ಜತೆ ಮಾಂಸವನ್ನು ಸಮೀಕರಣ ಮಾಡುವುದು ಮನುಷ್ಯ ವಿರೋಧಿ ಚಟುವಟಿಕೆ ಎನ್ನಬಹುದು ಎಂದರು.
ಸಂವಿಧಾನ ಬದಲಾವಣೆ ಮಾಡುತ್ತಿರುವವರು ನೇರವಾಗಿ ಇಂತಹ ಪ್ರಕ್ರಿಯೆ ಆಗಲ್ಲ ಎಂದು ಮಾಂಸಾಹಾರ ನಿಷೇಧ ಮಾಡುವ ಪ್ರಕ್ರಿಯೆಗೆ ಕೈ ಹಾಕಿದ್ಧಾರೆ. ಇಂತಹ ಬೆಳವಣಿಗೆಗೆ ಸಮಾಜದ ಸ್ವೀಕೃತಿಯೂ ಕೂಡ ಸಿಗುತ್ತದೆ. ನಾಳೆ ಇಲ್ಲಿನ ಹಲವು ನಗರಗಳನ್ನು ಪವಿತ್ರನಗರ ಅಂತ ಘೋಷಿಸಿದರೆ, ಅದಕ್ಕೆ ಅಷ್ಟರ ಮಟ್ಟಿಗೆ ವಿರೋಧಗಳು ಎದುರಾಗಲ್ಲ ಎಂದು ನನಗೆ ಅನಿಸುತ್ತದೆ, ಅಷ್ಟರ ಮಟ್ಟಿಗೆ ಮುಖ್ಯವಾಹಿನಿಗಳ ಮೆದುಳನ್ನು ಹ್ಯಾಕ್ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಸಂಸ್ಕೃತಿ ಚಿಂತಕ ಉಗ್ರನರಸಿಂಹೇಗೌಡ, ಸಾಹಿತಿ ಗುರುಪ್ರಸಾದ್ ಕಂಟಲಗೆರೆ, ರಂಗಕರ್ಮಿ ಸಂತೋಷ್ ಗುಡ್ಡಿಯಂಗಡಿ ಹಾಗೂ ವಕೀಲ ಜೀರಹಳ್ಳಿ ರಮೇಶ್ ಗೌಡ ಭಾಗವಹಿಸಿದ್ದರು.
Mandya
ಶ್ರೀ ವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಸಂಘವು ದೊಡ್ಡ ಹೆಜ್ಜೆ ಇಡುವಂತಾಗಲಿ : ಎಂ.ವಿನಯ್‌ಕುಮಾರ್
ಮಂಡ್ಯ: ಶ್ರೀ ವೀರಮಡಿವಾಳ ಮಾಚಿದೇವ ಸೌಹಾರ್ದ ಸಹಕಾರ ಸಂಘವು ಭವಿಷ್ಯದ ವರ್ಷಗಳಲ್ಲಿ ದೊಡ್ಡ ಸಾಧನೆಯ ಹೆಜ್ಜೆ ಇಡುವಂತಾಗಲಿ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ಎಂ.ವಿನಯ್‌ಕುಮಾರ್ ಶುಭ ಹಾರೈಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ 2026ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಂಘವು ಸಮಾಜದ ಒಳಿತಿಗೆ ಅಗತ್ಯವಿರುವ ಕೆಲಸ ಮಾಡುವಂತಾಗಲಿ. ಸದಸ್ಯರ ಸಂಖ್ಯೆ ದುಪ್ಪಟ್ಟಾಗಿ ಎಲ್ಲ ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಲೆಂದು ಆಶಯ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಗುರುರಾಜ್ ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಘ ಉತ್ತಮವಾಗಿ ನಡೆಯುತ್ತಿದ್ದು, ಇದೀಗ 587 ಸದಸ್ಯರನ್ನು ಹೊಂದಿದೆ. ಆರ್ಥಿಕವಾಗಿ ಸದಸ್ಯರಿಗೆ ಸಾಕಷ್ಟು ನೆರವಾಗಿದ್ದು, ಎಲ್ಲ ಸಹಕಾರ ಸಂಘಗಳಿಗೆ ಸಮನಾಗಿ ಕೆಲಸ ಮಾಡುತ್ತಿದೆ ಎಂದರು.
ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಸಂಘದಿಂದ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆ.ಆರ್.ಪೇಟೆ ಹಾಗೂ ಮಳವಳ್ಳಿ ತಾಲೂಕಿನಲ್ಲಿ ಸಮುದಾಯದವರ ಬೇಡಿಕೆಯಂತೆ ಘಟಕಗಳನ್ನು ತೆರಯುವ ಉದ್ದೇಶ ಹೊಂದಲಾಗಿದೆ ಎಂದು ಭರವಸೆ ನೀಡಿದರು.

ಗೋಷ್ಠಿಯಲ್ಲಿ ಸಂಘದ ಸಿಇಓ ಆಶಾ, ನಿರ್ದೇಶಕರಾದ ರಾಜು, ಮರಳಗಾಲ ಮಂಜುನಾಥ್, ನರಸಿಂಹಯ್ಯ, ಜಯಲಕ್ಷ್ಮಿ, ಮಂಜುನಾಥ್ ಇದ್ದರು.
Mandya
ನಾಳೆ ನಡೆಯಬೇಕಿದ್ದ ಆಹಾರ ಸುರಕ್ಷತಾ ಮತ್ತು ರಾಷ್ಟೀಯ ಗ್ರಾಹಕರ ದಿನಾಚರಣೆ ಜ.9ಕ್ಕೆ ಮುಂದೂಡಿಕೆ : ಹೆಚ್. ಕೃಷ್ಣ
ಮಂಡ್ಯ : ನಾಳೆ (ಡಿ. 24) ನಡೆಯಬೇಕಿದ್ದ ಆಹಾರ ಸುರಕ್ಷತಾ ಹಾಗೂ ರಾಷ್ಟೀಯ ಗ್ರಾಹಕರ ದಿನಾಚರಣೆಯನ್ನು ಕಾರಣಾಂತರದಿಂದ ಜನವರಿ 9 ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಹೆಚ್ .ಕೃಷ್ಣ ಅವರು ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಸದರಿ ಕಾರ್ಯಕ್ರಮದಲ್ಲಿ ಆಹಾರದ ಮೌಲ್ಯ ಮತ್ತು ಆಹಾರದ ಮಹತ್ವದ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಜನವರಿ. 9 ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಚರಿಸಲಾಗುವುದು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು.

14 ಇಲಾಖೆಗಳು ಒಗ್ಗೂಡಿ ಸದರಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆಹಾರ ಸುರಕ್ಷತೆ ಕುರಿತು ಅರಿವು ಮೂಡಿಸುವ 14 ಮಳಿಗೆಗಳನ್ನು ತೆರೆಯಲಾಗುವುದು. ಪ್ರಮುಖವಾಗಿ ವಿದ್ಯಾರ್ಥಿ ನಿಲಯಗಳಲ್ಲಿ, ಮದುವೆ, ಸಮಾರಂಭಗಳಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಆಹಾರ ವ್ಯರ್ಥ ಮಾಡುತ್ತಾರೆ, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಎರಡು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಮಂಡ್ಯ ಜಿಲ್ಲೆಯಲ್ಲಿ ಆಹಾರ ಜಾಗೃತಿಯನ್ನು ಮೂಡಿಸಬೇಕು. ಅಧಿಕಾರಿಗಳು ರಾಷ್ಟೀಯ ಗ್ರಾಹಕರ ದಿನಾಚರಣೆ ಹಾಗೂ ಆಹಾರ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರ್ಯ ದಕ್ಷತೆಯಿಂದ ಕೆಲಸ ನಿರ್ವಹಿಸಿ ಎಂದು ಹೇಳಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆನಂದ್ ಎಂ ಅವರು ಮಾತನಾಡಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಜಾಗೃತಿ ಕಾರ್ಯಾಗಾರ ಮಾಡಿ. ಕಡ್ಡಾಯವಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಯ ಮಾಲೀಕರು
ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಕಾನೂನು ಸಲಹೆಗಾರರಾದ ಕುಮಾರ ಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-
Chamarajanagar20 hours agoಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಸಿಲುಕಿದ ವ್ಯಕ್ತಿ
-
Hassan24 hours agoವಿದ್ಯಾರ್ಥಿನಿಗೆ ಥಳಿತ : ಶಿಕ್ಷಕನ ಮೇಲೆ ಕೇಸ್
-
Mysore24 hours agoದ್ವೇಷ ಭಾಷಣ, ಅಪರಾಧಗಳ ಪ್ರತಿಬಂಧಕ ವಿಧೇಯಕ-2026 ವಿರೋಧಿಸಿ ಬಿಜೆಪಿ ಪ್ರತಿಭಟನೆ
-
Kodagu52 minutes agoಜ್ಯೋತಿ ಪ್ರಧಾನ ಕಾರ್ಯಕ್ರಮ
-
Hassan9 hours agoತಾಯಿಯಾದ 10 ತರಗತಿ ವಿದ್ಯಾರ್ಥಿನಿ: ಕಾರಣ ಕರ್ತ ಕೀಚಕ ಪರಾರಿ
-
Hassan1 hour agoಬಂದೂಕು ಪರವಾನಗಿ ನವೀಕರಣ ವಿಳಂಬ: ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ
-
Kodagu19 hours agoಕೊಂಗಂಡ, ಕುಪ್ಪಂಡ, ಚೇಂದಿರ ಮತ್ತು ತೀತಿಮಾಡ ತಂಡಗಳು ಸೆಮಿಫೈನಲ್ಗೆ ಆಯ್ಕೆ
-
Chamarajanagar20 hours agoನಂಜೇದೇವನಪುರ: ಹುಲಿಗಳ ಪತ್ತೆಗೆ ಇನ್ನೆರಡು ಆನೆ
