Crime
ಮೇಕೆ ಮೇಯಿಸಲು ಹೋಗಿದ್ದ ವೃದ್ಧೆಯ ಅಭರಣ ದೋಚಿ ಹತ್ಯೆ – ಇಬ್ಬರು ಆರೋಪಿಗಳ ಬಂಧನ
ಹಾಸನ: ಮೇಕೆಯನ್ನು ಮೇಯಿಸಲು ಹೋಗಿದ್ದ ಸುಶೀಲಮ್ಮ ೬೫ ವರ್ಷ ವೃದ್ಧೆಯಿಂದ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಹತ್ಯೆಗೈದಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ತಿಳಿಸಿದರು.

ನಗರದ ಎನ್.ಆರ್. ವೃತ್ತ ಬಳಿ ಇರುವ ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಬಸವರಾಜಾಚಾರಿ ತಾಯಿ ಸುಶೀಲಮ್ಮ ಮತ್ತು ತಂದೆ ಭಾಸ್ಕರಚಾರಿ ಇಬ್ಬರು ನಮ್ಮಿಂದ ಪ್ರತೈಕ ಹೊರ ಹೋಗಿ ಬೇರೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ಸುಶೀಲಮ್ಮ ಅವರು ಮೇಕೆಗಳ ಮೇಯಿಸಲು ಕೆರೆಕೋಡಿ ನಾಯಿಗುಂಡಿ ಹಳ್ಳದ ಬಳಿ ಹೋಗುತ್ತಿದ್ದರು. ಸಂಜೆ ೬ ಗಂಟೆ ಸಮಯದಲ್ಲಿ ಮನೆಗೆ ಮೇಕೆಗಳು ಮಾತ್ರ ಬಂದಿದ್ದು, ಆದರೇ ತಾಯಿ ಸುಶಿಲಮ್ಮ ಮನೆಗೆ ಬಂದಿರುವುದಿಲ್ಲ ಎಂದು ಪತ್ನಿ ಅವರು ಬಸವರಾಜಾಚಾರ್ ಕರೆ ಮಾಡಿ ತಿಳಿಸಿದ್ದು, ಕೂಡಲೇ ನಾನು ಊರಿಗೆ ವಾಪಸ್ ಬಂದು ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಬೆಳಿಉಗ್ಗೆ ಸಮಯದಲ್ಲಿ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ನಾಯಿಗುಂಡಿ ಹಳ್ಳದ ಹತ್ತಿರ ಹಳ್ಳದ ನೀರಿನಲ್ಲಿ ಹೆಂಗಸಿನ ಶವ ತೇಲಾಡುತ್ತಿತ್ತು. ಶವದ ಮೇಲೆ ಒಂದು ಮರದ ದಿಮ್ಮಿ ಇದ್ದಂತೆ ಕಾಣಿಸಿತು. ಶವವನು ದಡಕ್ಕೆ ತಂದಾಗ ಆಕೆಯ ದೇಹದ ಮೇಲಿದ್ದ ಒಡವೆಗಳು ಇರಲಿಲ್ಲ. ಚಿನ್ನದ ಆಭರಣ ದೋಚುವ ಉದ್ದೇಶದಲ್ಲಿ ಉಸಿರುಗಟ್ಟಿಸಿ ಇಲ್ಲವೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದಲ್ಲದೇ ಶವ ಪತ್ತೆ ಆಗದಂತೆ ಮರದ ದಿಮ್ಮಿ ಕಟ್ಟಿ ನೀರಿನಲ್ಲಿ ಮುಳುಗಿಸಲಾಗಿತ್ತು ಎಂದರು. ಈ ಬಗ್ಗೆ ಮೃತ ತಾಯಿಯ ಪುತ್ರ ಬಸವರಾಜಾಚಾರಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರು. ಸಿಕ್ಕ ಆರೋಪಿಗಳು ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಅಡಗೂರು ಗ್ರಾಮದ ಕಾರ್ತಿಕ್ ೨೦ ವರ್ಷ ಮತ್ತು ಅದೆ ಗ್ರಾಮದ ಇನ್ನೋರ್ವ ಆರೋಪಿ ಸಾಗರ್ ೨೦ ವರ್ಷ ಎಂಬುವರನ್ನು ಬಂಧಿಸಿ ದೋಚಿದ್ದ ಒಡವೆಯನ್ನು ವಾಪಸ್ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

Crime
ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲಿ ಸಾ**ವು
ಅರಕಲಗೂಡು :ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೆರೆಕೋಡಿ ಗ್ರಾಮದ ಅನಿಲ್ (28) ಹಾಗೂ ಹೊನ್ನೇಗೌಡ (30) ಎಂಬವರು ಮೃತ ದುರ್ದೈವಿಗಳು. ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ KA-13-F-2164 ನಂ.ದ ಸರ್ಕಾರಿ ಸಾರಿಗೆ ಬಸ್ ಮತ್ತು KA-13-HE-4883 ನೋಂದಣಿ ಸಂಖ್ಯೆಯ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ.

ಡಿಕ್ಕಿಯ ರಭಸಕ್ಕೆ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ ಹೊನ್ನೇಗೌಡ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಪ್ರಾಣಬಿಟ್ಟಿದ್ದಾರೆ. ರವಾನಿಸಲಾಯಿತಾದರೂ, ಅಷ್ಟರಲ್ಲೇ
ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Crime
ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾ**ವು
ಹಾಸನ : ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಮತ್ತೋರ್ವ ಯುವಕನಿಗೆ ಗಂಭೀರ ಗಾಯ
ಚಂದನ್ (22) ಮೃತ ಎಲ್‌ಎಲ್‌ಬಿ ವಿದ್ಯಾರ್ಥಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಿರಿಅಸಡೆ ಗ್ರಾಮದ ಬಳಿ ಘಟನೆ
ಪಕ್ಕದ ಮನೆಯ ಭರತ್ ಎಂಬುವವನ ಜೊತೆ KA-46-J-4594 ನಂಬರ್‌ನ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಚಂದನ್
ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ KA-13-M-2664 ನಂಬರ್‌ನ ಜೀಪ್ ನಡುವೆ ಸಂಭವಿಸಿದ ಅಪಘಾತ
ಸ್ಥಳದಲ್ಲೇ ಬೈಕ್‌ನಲ್ಲಿದ್ದ ಚಂದನ್ ಸಾವು
ಗಾಯಾಳು ಭರತ್ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Crime
ಹೆತ್ತ ತಾಯಿ ಕೊಲ್ಲಲು ತಾನಿದ್ದ ಮನೆಗೆ ಬೆಂಕಿ ಇಟ್ಟ ದುಷ್ಟ
ಮೈಸೂರು :
ಕುಡಿಯಲು ಹಣ ನೀಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಭೂಪ…!
ಬೆಂಕಿಯಿಂದ ತಾಯಿ ಬಚಾವ್, ಆರೋಪಿ ಅಂದರ್.
ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಘಟನೆ.
ಶಿವಪ್ರಕಾಶ್ (26) ಮನೆಗೆ ಬೆಂಕಿ ಹಚ್ಚಿದ ಭೂಪ.
ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ಕಲಾವತಿ.
ಕಲಾವತಿಗೆ ಇಬ್ಬರು ಮಕ್ಕಳು. ಈ ಪೈಕಿ ಎರಡನೇ ಪುತ್ರನೇ ಶಿವಪ್ರಕಾಶ್.
ಮತ್ತೊಂದು ಮದುವೆಯಾಗಿ ಪ್ರತ್ಯೇಕವಾಗಿರುವ ಪತಿ.
ಕುಡಿತದ ಚಟಕ್ಕೆ ಒಳಗಾಗಿರುವ ಶಿವಪ್ರಕಾಶ್ ನಿಂದ ಹಣಕ್ಕಾಗಿ ಕಿರುಕುಳ.
ಎರಡು ದಿನಗಳ ಹಿಂದೆ ತಾಯಿ ಬಳಿ ಹಣ ಕೇಳಿದ್ದ ಶಿವಪ್ರಕಾಶ್.
ಹಣ ಇಲ್ಲ ಎಂದಿದ್ದಕ್ಕೆ ತಾಯಿ ಮನೆ ಒಳಗೆ ಇದ್ದಾಗಲೇ ಹೊರಗಿನಿಂದ ಮನೆಗೆ ಬೆಂಕಿ ಹಚ್ಚಿರುವ ಶಿವಪ್ರಕಾಶ್.
ಈ ವೇಳೆ ಕಲಾವತಿಯನ್ನು ರಕ್ಷಿಸಿದ ಸ್ಥಳೀಯರು.
ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಪದಾರ್ಥಗಳು ಬೆಂಕಿಗಾಹುತಿ.
ದಕ್ಷಿಣ ಠಾಣೆ ಪೊಲೀಸರಿಂದ ಆರೋಪಿ ಶಿವಪ್ರಕಾಶ್ ಬಂಧನ.
-
Hassan2 hours agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special3 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan21 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
State22 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
Hassan19 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Kodagu21 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State17 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
-
Mandya20 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
