Connect with us

Mandya

ಅದ್ದೂರಿ ಮೆರವಣಿಗೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ ಸ್ಟಾರ್‌ ಚಂದ್ರು

Published

on

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರು ಚುನಾವಣಾಧಿಕಾರಿ ಡಾ.ಕುಮಾರ ಅವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ, ನಗರದ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸ್ಟಾರ್ ಚಂದ್ರು ಅವರು, ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಡನೆ ಅದ್ದೂರಿ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಕಚೇರಿ ವರೆಗೂ ನಡೆಸಿದರು.

ಗಾರುಡಿ ಗೊಂಬೆ, ಪಣ ಕುಣಿತ, ಪೂಜಾ ಕುಣಿತ, ಡೊಳ್ಳು, ತಮಟೆ ಕುಣಿತದೊಂದಿಗೆ ಕಾರ್ಯಕರ್ತರು ನೃತ್ಯ ಮಾಡಿದ್ದು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರ,ಪಕ್ಷದ ಬಾವುಟ ಹಾಗೂ ಟೋಪಿಗಳು ರಾರಾಜಿಸಿದವು.

ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ಪಿಎಂ ನರೇಂದ್ರಸ್ವಾಮಿ,ಕದಲೂರು ಉದಯ್ ಹಾಗೂ ಮುಖಂಡ ದಡದಪುರ ಶಿವಣ್ಣ ಅವರ ಜೊತೆಗೂಡಿ ಸ್ಟಾರ್‌ ಚಂದ್ರು ಅವರು ಉಮೇದುವಾರಿಕೆ ಸಲ್ಲಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೀಗೌಡ ಬೆಂಗಳೂರಿನಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಭೇಟಿಯಾಗಿ ಆಶೀರ್ವಾದ ಪಡೆದು ಮಂಡ್ಯಕ್ಕೆ ಆಗಮಿಸಿದರು, ನಗರದ ವಿದ್ಯಾಗಣಪತಿ ದೇವಸ್ಥಾನಕ್ಕೆ ತೆರಳಿ ವಿಘ್ನೇಶ್ವರನಿಗೆ ಪ್ರಥಮ ಪೂಜೆ ಸಲ್ಲಿಸಿ ನಂತರ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬಳಿಕ ಶ್ರೀ ಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಜನಸ್ತೋಮದ ನಡುವೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ಅಭ್ಯರ್ಥಿ ಸ್ಟಾರ್ ಚಂದ್ರುರಿಗೆ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ರಾಜ್ಯ ಸಭೆಯ ಸದಸ್ಯ ಜಿ.ಸಿ ಚಂದ್ರಶೇಖರ್, ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ,ಕದಲೂರು ಉದಯ್, ರವಿಕುಮಾರ್ ಗಣಿಗ, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ಶರತ್ ಬಚ್ಚೇಗೌಡ, ರಮೇಶ್ ಬಾಬು ಬಂಡಿಸಿದ್ದೇಗೌಡ, ಸುನೀತಾ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ,ಮರಿತಿಬ್ಬೇಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಅಮಾಯಕರನ್ನು ವಂಚಿಸುತ್ತಿರುವವರ ವಿರುದ್ದ ಕ್ರಮಕ್ಕೆ ಮ.ರ.ವೇ ಒತ್ತಾಯ

Published

on

ಶ್ರೀರಂಗಪಟ್ಟಣ :ಅನಕ್ಷರಸ್ಥ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಪಡೆದು ವಂಚಿಸಿದ್ದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆAಟ್ (ಬಿಸಿ) ಯೋಗಾನಂದ ನನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಬಾಬುರಾಯನಕೊಪ್ಪಲಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ತೆರಳಿ ಶಾಖಾ ವ್ಯವಸ್ಥಾಪಕ ವೆಂಕಟೇಶ್‌ಬಾಬು ಅವರನ್ನ ಭೇಟಿ ಮಾಡಿ, ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾಂದ್ಯಂತ ವಂಚಸುತ್ತಿದ್ದಾರೆ. ತಾಲೂಕಿನ ಚಂದಗಾಲು ಗ್ರಾಮದ ೭೬ವರ್ಷ ವಯಸ್ಸಿನ ವೃದ್ಧ ಅನಕ್ಷರಸ್ಥ ರಂಗಣ್ಣ ಅವರಿಗೆ ಮೇಳಾಪುರ ಗ್ರಾಮದ ಬ್ಯಾಂಕ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆಂಟ್ ಯೋಗಾನಂದ ಎಂಬ ವ್ಯಕ್ತಿ ೨೪೦೦-೦೦ ಹಣ ಡ್ರಾ ಮಾಡಿ, ಕೇವಲ ೧೨೦೦-೦೦ ರು. ಹಣ ನೀಡಿ ವಂಚಿಸಿರುವುದು ಸಾಕ್ಷ್ತ ಸಮೇತ ಸಾಬೀತಾಗಿದೆ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ವೇಳ ವ್ಯವಸ್ಥಾಪಕ ವೆಂಕಟೇಶ್‌ಬಾಬು ನೋಡೋಣ, ಕಾಲಾವಕಾಶ ಕೊಡಿ, ಕ್ರಮ ವಹಿಸೋಣ ಎಂಬ ಹಾರಿಕೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಸಿಟ್ಟಿಗೆದ್ದ ಸಂಘಟನೆ ಮುಖಂಡರು, ನೆಲದ ಮೇಲೆ ಕುಳಿತು ವ್ಯವಸ್ಥಾಪಕರ ವಿರುದ್ದ ಅಸಮಧಾನ ಹೊರಹಾಕಿದರು. ವಂಚಿಸಿರುವ ವ್ಯಕ್ತಿಯೇ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದರೂ ಸಹ ವ್ಯವಸ್ಥಾಪಕರಿಂದ ಈ ರೀತಿಯ ಉಡಾಫೆ ಉತ್ತರ ಕೇಳಿಬರುತ್ತಿದೆ ಹೊರತಾಗಿ, ನ್ಯಾಯಯುತವಾಗಿ ಬಡವರ ಪರವಾದ ಒಂದೇ ಒಂದು ಮಾತು ಹೇಳದಿರುವುದು ಮಂಡ್ಯ ರಕ್ಷಣಾ ವೇದಿಕೆ ಖಂಡಿಸುತ್ತದೆ.
ಗ್ರಾಮದಲ್ಲಿನ ಬ್ಯಾಂಕ್ ರೈತರು, ಬಡವರು ಹಾಗೂ ವಿದ್ಯಾರ್ಥಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನ ನೀಡಿಲ್ಲ. ಈ ವರೆವಿಗೆ ಮುದ್ರ ಲೋನ್, ರೈತರಿಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ಕೇಳಿದರೆ ಇವರ ಬಳಿ ಯಾವುದೇ ಉತ್ತರಿವಿಲ್ಲ. ಈ ಬ್ಯಾಂಕ್ ಉಳ್ಳವರ ಪರವಾಗಿದೇ ವಿನಃ ಬಡವರ ಪರವಾಗಿಲ್ಲ. ಹಾಗಾಗಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಮುಂದೆ ಇದೇ ರೀತಿ ಏಜಂಟರ್‌ಗಳಿಂದ ವಂಚನೆಗಳಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ, ಬ್ಯಾಂಕ್‌ನ ಸಿಬ್ಬಂದಿಗಳನ್ನೇ ನೇರ ಹೊಣೆ ಮಾಡಿ, ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Continue Reading

Mandya

ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ

Published

on

ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಂದ ದಿಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿತ್ತು . ಈ ಸಮಾರಂಭದಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಮಾಕವಳ್ಳಿ ಗ್ರಾಮದ ಯುವ ಛಾಯಗ್ರಾಹಕ ಹಾಗೂ ಕಲಾವಿದರು ಆಗಿರುವಂತಹ ಸೋಮಶೇಖರ್ ಎಂ.ಕೆ. ರವರಿಗೆ ಯವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಸಿ.ಕೆ. ಸಂಧ್ಯಾ ಜಿಲ್ಲಾ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್. ಸಹಾಯಕ ನಿರ್ಧೇಶಕರು ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ ಅಲ್ಪಸಂಖ್ಯಾತರ ಸಮಾಜ ಕಲ್ಯಣ ಎಲಾಖೆ, ಹಾಗೂ ನಟರು ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ನಟಿ ಇನ್ನು ಅನೇಕ ಗಣ್ಯರುಗಳು ಇದ್ದರು..

ವರದಿ ಶಂಭು‌ ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಜಿಲ್ಲಾಧಿಕಾರಿಗಳಿಂದ ಮೇಲುಕೋಟೆ ವೈರಮುಡಿ ಉತ್ಸವದ ಸಿದ್ದತೆ ಪರಿಶೀಲನೆ

Published

on

ಮಂಡ್ಯ : ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೇಲುಕೋಟೆಯಲ್ಲಿ ನಡೆಯಲಿರುವ ವೈರಮುಡಿ ಉತ್ಸವದ ಸಿದ್ಧತೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದರು.

ಸಂಚಾರ ವ್ಯವಸ್ಥೆ ಪಾರ್ಕಿಂಗ್, ಭಕ್ತಾಧಿಗಳಿಗೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

Continue Reading

Trending

error: Content is protected !!