Uncategorized
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನರ ತಮ್ಮ ಸಮಸ್ಯೆಗಳ ಕುಂದು ಕೊರತೆಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು – ಪಿಎಸ್ಐ

ಯಳಂದೂರು:ಪರಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಪೊಲೀಸ್ ಇಲಾಖೆಯಲ್ಲಿ ಕುಂದು ಕೊರತೆಗಳ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು’ ಎಂದು ಪಿ ಎಸ್ ಐ ಹನುಮಂತುಉಪ್ಪಾರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ.ಜಾ/ಪ.ಪಂ ಜನಾಂಗದ ಕುಂದು ಕೊರತೆ ಮುಖಂಡರ ಸಭೆಯಲ್ಲಿ ಮಾತನಾಡಿಪ್ರತಿ ತಿಂಗಳಿನ ಕೊನೆಯ ಭಾನುವಾರ ಪೊಲೀಸ್ ಅಧಿಕಾರಿಗಳು ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ದಲಿತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಅವುಗಳ ನಿವಾರಣೆಗಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಿ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಇ ಸಭೆಯಲ್ಲಿ ಭಾಗವಹಿಸಿರುವ ಪರಿಶಿಷ್ಟ ಜಾತಿಹಾಗೂ ಪರಿಶಿಷ್ಟ ಪಂಗಡದ ಮುಖಂಡ ರೋಹಿ ಸಭೆಯಲ್ಲಿ ತಮ್ಮ ಸಮಸ್ಯೆಗಳು ಗ್ರಾಮದ ಸಮಸ್ಯೆಗಳು ಇದ್ದರೆ ತಿಳಿಸುವಂತೆ ಮನವಿ ಮಾಡಿದರು.

ನಂತರ ಸಭೆಯಲ್ಲಿ ಭಾಗವಹಿಸಿದ ದಲಿತ ಮುಖಂಡರುಗಳು ಮಾತನಾಡಿ ಗ್ರಾಮೀಣ ಭಾಗದಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಹೆಚ್ಚಳವಾಗಿದ್ದು ಇದರಿಂದ ಗ್ರಾಮಗಳಲ್ಲಿ ಅಶಾಂತಿ ಉಂಟಾಗುತ್ತಿದೆ, ಅಲ್ಲದೆ ಪಟ್ಟಣದಲ್ಲಿ ಟ್ರಾಫಿಕ್ ಜಾಮ್ , ಅಡ್ಡದ್ದಿಡ್ಡಿ ವಾಹನಗಳ ನಿಲುಗಡೆ ಯಿಂದ ತೊಂದರೆ, ಪಟ್ಟಣದ ಶ್ರೀರಂಗ ವೈನ್ಸ್ ನಲ್ಲಿ ಮಧ್ಯವನ್ನು ಖರೀದಿಸಿ ಹೊರಗಡೆ ರಸ್ತೆ ಬದಿ ಜಮೀನುಗಳಲ್ಲಿ ಮಧ್ಯದ ಪೌಚು ಮತ್ತು ಬಾಟಲುಗಳನ್ನು ಬಿಸಾಕಿರುವುದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ ವಯಸ್ಸಿನಲ್ಲಿ ಮಧ್ಯ ಮಾರಾಟಕ್ಕೆ ಅವಕಾಶವಿದೆ ಹೊರತು ಅಲ್ಲೇ ಕುಡಿದು ಬಿಸಾಕುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ, ಹಾಗೂ ಠಾಣೆಗೆ ಬರುವ ಪರಿಶುದ್ಧ ಜಾತಿ ಪರಿಶಿಷ್ಟ ಪಂಗಡ ದ ಬಡವರು ಸಣ್ಣಪುಟ್ಟ ಗಲಾಟೆ

ಮಾಡಿಕೊಂಡು ಬಂದರೆ ಆಯಾ ಗ್ರಾಮದ ಮುಖಂಡರಿಗೆ ತಿಳಿಸಿ ದೂರು ದಾಖಲಿಸಬೇಕು, ಗ್ರಾಮೀಣ ಪ್ರದೇಶಗಳಿಗೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು, ಪಟ್ಟಣದ ಬಳೆಪೇಟೆ ಸರ್ಕಲ್ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಸೇರಿದಂತೆ ಅನೇಕ ಸಮಸ್ಯೆಗಳನ್ನು ಪೊಲೀಸ್ ಅಧಿಕಾರಿಗಳ ಮುಂದೆ ತಿಳಿಸುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಮನವಿ ಮಾಡಿದರು.
ಈ ಸಭೆಯಲ್ಲಿ ಎ ಎಸ್ ಐ ಮಹದೇವಪ್ಪ, ಪೊಲೀಸ್ ಪೇದೆ ಬಂಡಳ್ಳಿ ಮಹೇಶ್ , ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೂರು ಎಂ ನಿರಂಜನ್,ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು, ಗಣಿಗನ್ನೂರು ಚಂದ್ರಶೇಖರ್ , ಕೃಷ್ಣರಾಜು ,ಪಟ್ಟಣ ಪಂಚಾಯ್ತಿ ಸದಸ್ಯರಾದ ಮಹೇಶ್, ಬಿಜೆಪಿ ಮುಖಂಡ ಪಿ ಮಹೇಶ್, ಭೀಮಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಜೆ.ಶ್ರೀನಿವಾಸ್, ಉಮಾಶಂಕರ್ , ಕೆಸ್ತೂರು ನಾಗರಾಜ್, ಬಳೆಪೇಟೆ ಲಿಂಗರಾಜು ಮೂರ್ತಿ, ಹೊನ್ನೂರು ಚಿನ್ನಪ್ಪ, ಗುಂಬಳ್ಳಿ ಶ್ರೀನಿವಾಸ್ ,ಕುಮಾರನಪುರ ರಂಗಸ್ವಾಮಿ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿದ್ದರು.


Uncategorized
ಮರಳಾಗಾಲ ಗ್ರಾಮದ ಜಗಧೀಶ್(53) ನಿಧನ
ಶ್ರೀರಂಗಪಟ್ಟಣ : ತಾಲ್ಲೂಕಿನ ಮರಳಾಗಾಲ ಗ್ರಾಮದ ದಿ.ಮಹದೇವು ರವರ ಮಗ ಎಂ ಜಗದೀಶ್(53) ರವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದು, ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಪ್ರಮಾಣದ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆಯನ್ನು ಅವರ ಸ್ವ-ಗ್ರಾಮ ಮರಳಾಗಾಲದಲ್ಲಿ ಮದ್ಯಾಹ್ನ ನೆರವೇರಿಸುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
Hassan
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ
50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,
ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,
*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*
ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,
ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,
ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,
ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,
ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು
Kodagu
ಉಡೋತ್ ಮೊಟ್ಟೆ : ಡಿ.6 & 7 ರಂದು ಕೊರಗಜ್ಜ ದೈವದ ನೇಮೋತ್ಸವ
ಮಡಿಕೇರಿ : ಉಡೋತ್‌ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ.
ಡಿ.6ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು. ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.

ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900931278 , 9591304757೯೫೯೧೩೦೪೭೫೭, ೯೪೮೩೩೯೯೦೭೭ ಸಂಪರ್ಕಿಸಬಹುದಾಗಿದೆ.
-
Mandya8 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
State6 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Mandya6 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Manglore23 hours agoದ.ಕ.ಜಿಲ್ಲೆಯಲ್ಲಿ ಪ್ರತೀಕಾರದ ಕೊಲೆಗೆ ಕುಮ್ಮಕ್ಕು: 16 ಇನ್ಸ್ಟ್ಗ್ರಾಮ್ ಪೇಜ್ಗಳ ವಿರುದ್ಧ FIR ದಾಖಲು
-
Sports22 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
-
Mandya24 hours agoಅಕ್ರಮ ಖಾತೆ ಮಾಡಿದ್ದಾರೆಂದು ಆರೋಪಿಸಿ ಶವವಿಟ್ಟು ಪ್ರತಿಭಟನೆ ನಡೆಸಿದ ಕುಟುಂಬಸ್ಥರು
-
Hassan3 hours agoಡಿ. 11ರಿಂದ 14 ರವರೆಗೆ ಶ್ರೀ ಮೆಳೆಯಮ್ಮದೇವಿ, ಚಿಕ್ಕಮ್ಮದೇವಿ ಅದ್ದೂರಿ ಜಾತ್ರಾ ಮಹೋತ್ಸವ
-
Chamarajanagar2 hours agoರಾಗಿ ಒಕ್ಕಣೆ ಮಿಷನ್ ನಿಂದ ಕೂಲಿ ಕಾರ್ಮಿಕಳೊಬ್ಬಳ ಕೈ ತುಂಡು
