Chikmagalur
ನಾನು ರಾಮನಗರ ಜಿಲ್ಲೆ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ: ನಿಖಿಲ್ ಕುಮಾರಸ್ವಾಮಿ
ಚಿಕ್ಕಮಗಳೂರು : ರಾಮನಗರ ಜಿಲ್ಲೆ ನಮ್ಮ ತಂದೆಯವರ ಕರ್ಮ ಭೂಮಿ, 1994ರಲ್ಲಿ ಹಾಸನದಿಂದ ಬಂದಂತಹ ದೇವೇಗೌಡರಿಗೆ ರಾಜಕೀಯವಾಗಿ ಜನ್ಮ ಕೊಟ್ಟ ಭೂಮಿಯಾಗಿದೆ. ಹಾಗಾಗಿ ನಾನು ರಾಮನಗರ ಜಿಲ್ಲೆ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಚಾಮರಾಜನಗರದಿಂದ ಸ್ಪರ್ಧೆ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಯಾವುದೇ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೂ ಇಲ್ಲ. ರಾಮನಗರದಲ್ಲಿ ನನ್ನನ್ನೇ ನಂಬಿರುವಂತಹ ಕಾರ್ಯಕರ್ತರು, ಮುಖಂಡರು, ಒಂದು ವರ್ಗವಿದ್ದು ನಮ್ಮನ್ನ ಪ್ರೀತಿಸುವ ಜನರಿದ್ದಾರೆ. ಇವತ್ತು ಜಿಲ್ಲೆಯಲ್ಲಿ ಸಣ್ಣಪುಟ್ಟ ಹಿನ್ನೆಡೆಗಳು ಆಗಿರಬಹುದು, ನಾನು ಒಪ್ಪಿಕೊಳ್ಳುತ್ತೇನೆ. ಕಳೆದ 4 ಚುನಾವಣೆಯಲ್ಲೂ ನಮ್ಮ ಜಿಲ್ಲೆಯ ಜನ ನಮ್ಮ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.

ರಾಜಕೀಯದ ಕೆಲ ಸಂದರ್ಭದಲ್ಲಿ ಚುನಾವಣೆಯಲ್ಲಿ ಏರು-ಪೇರು ಆಗಿದೆ. ನಾವು ಎಲ್ಲವನ್ನೂ ಸಮತೋಲನವಾಗಿ ತೆಗೆದುಕೊಂಡು ಹೋಗಬೇಕು, ಏಕೆಂದರೆ ಅಲ್ಲಿ ದುಡಿದಿದ್ದೇವೆ. ದೇವೇಗೌಡರ ಕುಟುಂಬ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದೆ ಎಂದಿದ್ದಾರೆ.
ದ್ವೇಷ ಭಾಷಣ ಕಾಯ್ದೆ ಜಾರಿಗೊಳಿಸಲು ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಾದು ಕುಳಿತಿದ್ದರು. ಈ ಕಾಯ್ದೆ ಪತ್ರಿಕಾ ಮಾಧ್ಯಮವನ್ನ ಕಟ್ಟಿ ಹಾಕುವಂತದ್ದು, ಪ್ರಜಾಪ್ರಭುತ್ಬದಲ್ಲಿ ಪ್ರತಿಪಕ್ಷಗಳ ಹಕ್ಕನ್ನ ಸದೆಬಡಿಯವ ಹುನ್ನಾರ. ಈ ಕಾಯ್ದೆ ಜಾರಿಯಾಗಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಮಸೂದೆ ಆಗ್ತಿತ್ತು. ರಾಜ್ಯಪಾಲರು ಈ ಎಲ್ಲಾ ಅಂಶಗಳ ಗಮನಿಸಿ ಒಳ್ಳೆ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರ ತೀರ್ಮಾನವನ್ನ ನಾವು ಸ್ವಾಗತ ಕೊರುತ್ತೇವೆ
ರಾಜ್ಯಪಾಲರ ಘನತೆಯನ್ನ ತಗ್ಗಿಸುವ ಕೆಲಸ ಸರ್ಕಾರದಿಂದ ಆಗಬಾರದು. ರಾಜ್ಯಪಾಲರನ್ನ ಮುಜುಗರಕ್ಕೆ ಸಿಲುಕಿಸಿ, ಗೌರವಕ್ಕೆ ದಕ್ಕೆ ತರುವ ಕೆಲಸವನ್ನ ಅವರಿಂದಲೇ ಮಾಡಿಸೋ ಕೆಲಸವನ್ನ ಸರ್ಕಾರ ಬಿಡಬೇಕು. ರಾಜ್ಯಪಾಲರು ಒಂದು ವಾಕ್ಯ ಓದುತ್ತಾರೋ. ಒಂದು ಪ್ಯಾರಾ ಓದಬೇಕಾ ಅಥವಾ ಒಂದು ಪದದಲ್ಲಿ ಮುಗಿಸಬೇಕಾ ಎಂಬುದು ಅವರಿಗೆ ಬಿಟ್ಟದ್ದು, ಮುಜಗರಕ್ಕೀಡು ಮಾಡುವ ಅಂಶ ಹಾಕಿದ್ರು ಅವುಗಳನ್ನ ನೋಡಿಯೇ ಅವರು ಅವರ ಘನತೆ ಉಳಿಸಿಕೊಂಡಿದ್ದಾರೆ. ಅವರ ನಿರ್ಧಾರ-ತೀರ್ಮಾನವನ್ನ ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇನ್ನೊಂದು ತಿಂಗಳಲ್ಲಿ ಜಾತಿ ಜನಗಣತಿ ಬಿಡುಗಡೆ ವಿಚಾರ
ಜಾತಿ ಜನಗಣತಿ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಹಾಗೂ ಹಿಂದುಳಿದ ವಿಚಾರಕ್ಕೆ ಆಗಬೇಕು. ಇದು ಮೇಲ್ನೋಟಕ್ಕೆ ರಾಜಕೀಯ ಉದ್ದೇಶದಿಂದ ಕೂಡಿರುವಂತಿದೆ. ಸರ್ಕಾರದ ಲೋಪದೋಶಗಳು, ಸಮಸ್ಯೆಗಳು ಎದುರಾದಾಗ ಅದರಿಂದ ಜಾರಿಕೊಳ್ಳಲು ಇವೆಲ್ಲಾ ಬರುತ್ತದೆ. ಆಗ ಜಾತಿಗಣತಿ-ಜನಗಣತಿಯನ್ನ ಮುಂದಿಟ್ಟು ಜನರ ದಿಕ್ಕು ತಪ್ಪಿಸುವುದು ಬೇಡ. ನೀವು ಮಾಡಿ ಅದಕ್ಕೆ ನಮ್ಮ ಸ್ವಾಗತವಿದೆ, ಅದರೆ ಅದು ಯಾವ ರೀತಿ ಇದೆ. ಜಾತಿಗಣತಿ ಜಾರಿ ಮಾಡುವ ಉದ್ದೇಶ ಸರಿ ಇರಬೇಕು. ನಿಮ್ಮ ವರದಿ ಜನರ ಮುಂದೆ ಪಾರದರ್ಶಕವಾಗಿರಬೇಕು ಎಂದು ಹೇಳಿದ್ದಾರೆ.
Chikmagalur
ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಬಲಿ
ಚಿಕ್ಕಮಗಳೂರು, ಜು. 21: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ.
ಮಂಜುನಾಥ್ ಅವರು ತಮ್ಮ ಮನೆಯಿಂದ ತೋಟದ ಕಡೆಗೆ ತೆರಳುತ್ತಿದ್ದ ವೇಳೆ ಹಳ್ಳಿರಸ್ತೆಯಲ್ಲಿ ಏಕಾಏಕಿ ಎದುರಾದ ಕಾಡುಕೋಣ ದಾಳಿ ನಡೆಸಿದೆ. ತೀವ್ರವಾಗಿ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಕೇವಲ 15 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಕಾಡುಕೋಣ ದಾಳಿಗೆ ಇದು ಎರಡನೇ ಬಲಿಯಾಗಿದೆ. ಕಳೆದ ಜುಲೈ 7ರಂದು ಕಳಸ ತಾಲೂಕಿನ 52 ವರ್ಷದ ಶೀಲಾ ಅವರು ಕಾಡುಕೋಣ ದಾಳಿಯಲ್ಲಿ ಮೃತಪಟ್ಟಿದ್ದರು. ನಿರಂತರವಾಗಿ ನಡೆಯುತ್ತಿರುವ ಕಾಡುಕೋಣ ದಾಳಿಗಳಿಂದ ಮಲೆನಾಡು ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
Chikmagalur
ಮೂಡಿಗೆರೆ ರೋಟರಿ ಕ್ಲಬ್‌ನಿಂದ ವನಮಹೋತ್ಸವ: ಹಳಿಕೆ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ
ಮೂಡಿಗೆರೆ: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ರೋಟರಿ ಕ್ಲಬ್ (RI Dist 3182, Zone 08) ವತಿಯಿಂದ ತಾಲೂಕಿನ ಹಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ‘ವನಮಹೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಸದಸ್ಯರು ಹಾಗೂ ಶಾಲಾ ಮಕ್ಕಳ ಜಂಟಿ ಸಹಭಾಗಿತ್ವದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪಾಸ್ಟ್ ಝೋನಲ್ ಲೆಫ್ಟಿನೆಂಟ್ ಆರ್‌ಟಿಎನ್. ಆದರ್ಶ ಅವರು, “ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದಿರಲು ಮತ್ತು ಶುದ್ಧ ಗಾಳಿಯ ಅಭಾವಕ್ಕೆ ಮರ-ಗಿಡಗಳ ಅತಿಯಾದ ನಾಶವೇ ಪ್ರಮುಖ ಕಾರಣ. ಅಭಿವೃದ್ಧಿ ಅಥವಾ ಅನಿವಾರ್ಯ ಕಾರಣಗಳಿಗೆ ಒಂದು ಮರವನ್ನು ಕಡಿದರೆ, ಅದಕ್ಕೆ ಪ್ರತಿಯಾಗಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸಬೇಕು. ಆಗ ಮಾತ್ರ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯ. ಶಾಲಾ ಹಂತದಿಂದಲೇ ಮಕ್ಕಳು ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮೂಡಿಗೆರೆ ಘಟಕದ ಅಧ್ಯಕ್ಷ ಬಿ. ಕೆ. ದಿನೇಶ್, ಕಾರ್ಯದರ್ಶಿ ಆರ್‌ಟಿಎನ್. ಸಂತೋಷ್, ನಿಕಟಪೂರ್ವ ಅಧ್ಯಕ್ಷ ಆರ್‌ಟಿಎನ್. ಪ್ರಸಾದ್, ಸದಸ್ಯರಾದ ಆರ್‌ಟಿಎನ್. ಸಂದೀಪ್, ಆರ್‌ಟಿಎನ್. ಸುಭಾಷ್, ಆರ್‌ಟಿಎನ್. ಅವಿನ್, ಆರ್‌ಟಿಎನ್. ಸುನಿಲ್ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ಶಿಕ್ಷಕಿ ರೇಣುಕಮ್ಮ, ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಸಾಥ್ ನೀಡಿದರು.

ಅಂತಿಮವಾಗಿ “ಒಂದು ಸಸಿ ನೆಡೋಣ – ಪರಿಸರ ಉಳಿಸೋಣ” ಹಾಗೂ “ಸೇವೆಯೇ ಶ್ರೇಷ್ಠ” ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಕ್ತಾಯಗೊಳಿಸಲಾಯಿತು.
Chikmagalur
ಅಪಘಾತ ಸಾವು ಪ್ರಕರಣ: ಕಡೂರು ಪೊಲೀಸ್ ಠಾಣೆ
ಕಡೂರು : ದಿನಾಂಕ: 20.07.2026 ರಂದು ಬೆಳಗ್ಗೆ 11.50 ಗಂಟೆಗೆ ಪಿರ್ಯಾದುದಾರರಾದ ಪ್ರಕಾಶ್ ಬಿನ್ ಲೇಟ್ ಮಲ್ಲೇಶಪ್ಪ.40 ವರ್ಷ, ಲಿಂಗಾಯತ ಜನಾಂಗ, ಕೂಲಿ ಕೆಲಸ. ವಾಸ- ಮಲ್ಲಘಟ್ಟ ಗ್ರಾಮ, ಸಿಂಗಟಗೆರೆ ಹೋಬಳಿ.ಕಡೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ನನಗೆ ಇಬ್ಬರು ಮಕ್ಕಳಿದ್ದು, ಮೊದಲನೇಯವಳು ದೇವಿಕಾ. ಎರಡನೇಯವಳು ಭಾವನ ಆಗಿರುತ್ತಾರೆ. ನನ್ನ ದೊಡ್ಡ ಮಗಳು ದೇವಿಕಾ ರವರು ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ ಮಾಡಿದ್ದು ನಂತರ ಮನೆಯಲ್ಲಿಯೇ ಇರುತ್ತಾಳೆ. ನಾನು ತುಮಕೂರು ಟೌನ್ ನಲ್ಲಿ ಬಸವರಾಜ್ ರವರ ಹಿಟ್ಟಿನ ಮಿಲ್ ನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇದ್ದು, ಪ್ರತಿ ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿರುತ್ತೇನೆ. ಊರಿನಲ್ಲಿ ನನ್ನ ಹೆಂಡತಿ ಅನಿತಾ, ನನ್ನ ತಾಯಿ ಗಂಗಮ್ಮ, ಹಾಗೂ ನನ್ನ ಇಬ್ಬರು ಮಕ್ಕಳು ಇರುತ್ತಾರೆ. ನನ್ನ ತಾಯಿಗೆ ಹೃದಯ ಸಂಬಂದಿ ಖಾಯಿಲೆ ಇದ್ದು ಇವರಿಗೆ ಚಿಕಿತ್ಸೆ ಕೊಡಿಸುತ್ತಿರುತ್ತೇನೆ.

ದಿನಾಂಕ: 18/07/2026 ರಂದು ರಾತ್ರಿ 09.00 ಗಂಟೆಗೆ ನನ್ನ ತಾಯಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ನನ್ನ ಹೆಂಡತಿ ನನಗೆ ಪೋನ್ ಮಾಡಿದ್ದು ನಾನು ತಾಯಿಯನ್ನು ಅರಸೀಕೆರೆ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡು ಎಂದು ತಿಳಿಸಿದೆನು, ಅದರಂತೆ ನನ್ನ ಹೆಂಡತಿ ಅನಿತಾ ರವರು ನನ್ನ ಚಿಕ್ಕ ಮಗಳು ಭಾವನ ಜೊತೆ ನನ್ನ ತಾಯಿಯನ್ನು ಕರೆದುಕೊಂಡು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಮನೆಯಲ್ಲಿ ನನ್ನ ದೊಡ್ಡ ಮಗಳು ದೇವಿಕಾ ಒಬ್ಬರೇ ಇದ್ದರು. ನಂತರ ನನ್ನ ಹೆಂಡತಿ ಮಗಳು ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿ ವಾಪಸ್ಸ್ ದಿನಾಂಕ 19.07.2026 ರಂದು ಬೆಳಗಿನ ಜಾವ 04.00 ಗಂಟೆಗೆ ಮನೆಗೆ ನನ್ನ ತಾಯಿಯನ್ನು ಕರೆದುಕೊಂಡು ಬಂದೆನು ದೊಡ್ಡ ಮಗಳು ಮನೆಯಲ್ಲಿ ಇಲ್ಲವೆಂದು ಹಾಗೂ ಅವರ ಸ್ನೇಹಿತರ ಜೊತೆ ಬರ್ತ್ ಡೇ ಆಚರಣೆಗೆ ಹೋಗಿರುತ್ತಾಳೆಂದು ನನಗೆ ಪೋನ್ ನಲ್ಲಿ ತಿಳಿಸಿದರು. ದಿನಾಂಕ 19.07.2026 ರಂದು ಮಧ್ಯಾಹ್ನ ಸುಮಾರು 03.00 ಗಂಟೆ ಸಮಯದಲ್ಲಿ ನನ್ನ ಸ್ನೇಹಿತರಾದ ನಮ್ಮ ಗ್ರಾಮದ ಆನಂದ ರವರು ನನಗೆ ಪೋನ್ ಮಾಡಿ ನಿಮ್ಮ ಮಗಳು ದೇವಿಕಾ ಹಾಗೂ ಆಕೆಯ ಸ್ನೇಹಿತ ಪ್ರೇಮ್ ರವರಿಗೆ ಅಂಚೇ ಚೋಮನಹಳ್ಳಿ ಗೇಟ್ ನ ಸಮೀಪ ರಸ್ತೆಯಲ್ಲಿ ಅಪಘಾತವಾಗಿ ಚಿಕಿತ್ಸೆಯ ಬಗ್ಗೆ ಕಡೂರು ಚೇತನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆಂದು ತಿಳಿಸಿದರು. ತಕ್ಷಣ ನಾನು ನನ್ನ ಹೆಂಡತಿ ಅನಿತಾ ರವರಿಗೆ ಸದರಿ ವಿಚಾರವನ್ನು ಪೋನ್ ನಲ್ಲಿ ತಿಳಿಸಿ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬರುವಂತೆ ತಿಳಿಸಿದೆನು.

ನನ್ನ ಹೆಂಡತಿ ಅನಿತಾ ರವರು ಮಲ್ಲಾಘಟ್ಟದಿಂದ ಕಡೂರು ಚೇತನ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯಲ್ಲಿದ್ದ ನನ್ನ ಮಗಳು ದೇವಿಕಾಳ ಬಳಿ ರಸ್ತೆ ಅಪಘಾತವಾದ ಬಗ್ಗೆ ವಿಚಾರ ಮಾಡಿ ತಿಳಿಯಲಾಗಿ, ದಿನಾಂಕ 18.07.2026 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ನನ್ನ ಮಗಳು ದೇವಿಕಾಳು ತನ್ನ ಸ್ನೇಹಿತ ಪ್ರೇಮ್ ರವರ ಜೊತೆ ಆತನ ಬೈಕ್ ನಂ KA-13 HA-3680 ರ ಸ್ಕೂಟಿಯಲ್ಲಿ ಕಡೂರಿಗೆ ಬಂದು ಕಡೂರಿನಲ್ಲಿ ಬರ್ತ್ ಡೇ ಆಚರಣೆ ಮುಗಿಸಿಕೊಂಡು ಅಲ್ಲಿಂದ ದೇವಸ್ದಾನಗಳಿಗೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ವಾಪಸ್ಸ್ ಊರಿಗೆ ಬರಲು ದಿನಾಂಕ 19.07.2026 ರಂದು ಮಧ್ಯಾಹ್ನ ಸುಮಾರು 03.30 ಗಂಟೆ ಸಮಯಲ್ಲಿ ಅವಳ ಸ್ನೇಹಿತ ಪ್ರೇಮ್ ರವರ ನಂ KA-13 HA-3680 ರ ಸ್ಕೂಟಿಯಲ್ಲಿ ಪ್ರೇಮ್ ರವರ ಚಾಲನೆಯಲ್ಲಿ ನನ್ನ ಮಗಳು ದೇವಿಕಾಳು ಸ್ಕೂಟಿ ಹಿಂಭಾಗದಲ್ಲಿ ಕುಳಿತುಕೊಂಡು ಅಂಚೆಚೋಮಹಳ್ಳಿ ಗೇಟ್ ಬಳಿ ಕಡೂರು ಕಡೆಯಿಂದ ಹೋಗುತ್ತಿರುವಾಗ ಬೈಕ್ ಚಾಲನೆ ಮಾಡುತ್ತಿದ್ದ ಪ್ರೇಮ್ ರವರು ಬೈಕ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕ್ ಚಾಲಕನ ನಿಯಂತ್ರಣಕ್ಕೆ ಬಾರದೆ ರಸ್ತೆ ಮಧ್ಯೆ ಇದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ದೇವಿಕಾ ಹಾಗೂ ಪ್ರೇಮ್ ಇಬ್ಬರು ಸ್ಕೂಟಿ ಸಮೇತ ರಸ್ತೆಯ ಮೇಲೆ ಬಿದ್ದು ನನ್ನ ಮಗಳು ದೇವಿಕಾಳ ಹೊಟ್ಟೆಗೆ, ಸೊಂಟಕ್ಕೆ, ತಲೆಗೆ ಮತ್ತು ಮೊಣ ಕಾಲಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತದೆ ಎಂಬುದಾಗಿ ನನ್ನ ಮಗಳು ತನ್ನ ತಾಯಿಗೆ ತಿಳಿಸಿರುತ್ತಾಳೆಂದು ನನ್ನ ಹೆಂಡತಿ ಅನಿತಾ ರವರು ನನಗೆ ವಿಚಾರವನ್ನು ತಿಳಿಸಿದರು.

ನಂತರ ನನ್ನ ಹೆಂಡತಿಯು ನನ್ನ ಮಗಳನ್ನು ಚೇತನ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು, ನಾನು ತುಮಕೂರಿನಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆಯಲ್ಲಿದ್ದ ನನ್ನ ಮಗಳನ್ನು ನೋಡಿ ಇನ್ನು ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಲು ನನ್ನ ಹೆಂಡತಿಯನ್ನು ಅಲ್ಲೆ ಬಿಟ್ಟು ಹಣ ತರಲು ಊರಿಗೆ ವಾಪಸ್ ಬಂದಾಗ, ದಿನಾಂಕ: 19-20/07/2026 ಮಧ್ಯೆ ರಾತ್ರಿ ಸುಮಾರು 03-00 ಗಂಟೆಗೆ ನನ್ನ ಮಗಳು ದೇವಿಕಾಳು ಮೃತಪಟ್ಟಿರುತ್ತಾಳೆಂದು ನನ್ನ ಹೆಂಡತಿ ನನಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿರುತ್ತಾರೆ. ನಾನು ಕೂಡಾ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಹೋಗಿ ನನ್ನ ಮಗಳ ಶವವನ್ನು ನೋಡಿಕೊಂಡು ದೂರು ಕೊಡಲು ವಾಪಸ್ ಕಡೂರು ಪೊಲೀಸ್ ಠಾಣೆಗೆ ಬಂದಿರುತ್ತೇನೆ. ನನ್ನ ಮಗಳ ಸ್ನೇಹಿತ ಪ್ರೇಮ್ ರವರು ತನ್ನ ನಂ: KA-13 HA-3680 ರ ಸ್ಕೂಟಿಯನ್ನು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿ ಅಪಘಾತಪಡಿಸಿದ ಪರಿಣಾಮ ನನ್ನ ಮಗಳು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ. ಆದ್ದರಿಂದ ನಂ: KA-13 HA-3680 ರ ಸ್ಕೂಟಿಯ ಚಾಲಕ ಪ್ರೇಮ್ ಬಿನ್ ಸುನಿಲ್. ವಾಸ- ಬಿ.ಜಿ. ಹಟ್ಟಿ ಅರಸೀಕೆರೆ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೋಡಬೇಕಾಗಿಕೋರಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಈ ಪ್ರಥಮ ವರ್ತಮಾನ ವರದಿ ದಾಖಲಿಸಿರುತ್ತೆ.
-
Politics20 hours agoಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: 3.68 ಲಕ್ಷಕ್ಕೂ ಅಧಿಕ ಅರ್ಜಿಗಳು – ಜಿಲ್ಲಾವಾರು ಅಂಕಿಅಂಶ ಪ್ರಕಟ!!
-
Mysore3 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Politics23 hours agoಬಿಡದಿ ಟೌನ್ಶಿಪ್ ಭೂಸ್ವಾಧೀನಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್; PIL ವಜಾ
-
Mysore9 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Chikmagalur23 hours agoಕಂಬಳದ ಕೆಸರುಗದ್ದೆಯಂತಾದ ಕೋಳೂರು ರಸ್ತೆ: ಶಾಲಾ ಮಕ್ಕಳ ಹರಸಾಹಸ, ಪಂಚಾಯತ್ ನಿರ್ಲಕ್ಷ್ಯಕ್ಕೆ ಆಕ್ರೋಶ
-
Politics24 hours agoಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣಪತ್ರ: ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ
-
Kodagu6 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Hassan21 hours agoತಾಯಿಯ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಎಚ್ ಡಿಕೆ
