Connect with us

Hassan

ಶಾಸಕರಾಗಿರುವವರಿಗೆ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಬೇಡ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ನೀಡಲಿ: ವಿನಯ್ ಗಾಂಧಿ ಮನವಿ

Published

on

ಹಾಸನ: ಈಗಾಗಲೇ ಶಾಸಕರಾಗಿರುವವರಿಗೆ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ಕೊಡುವುದು ಬೇಡ. ಕಾಂಗ್ರೆಸ್ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೊಡುವಂತೆ ಈಗಾಗಲೇ ದೆಹಲಿಗೆ ತೆರಳಿ ಹೈಕಮಾಂಡ್ ಅವರಿಗೆ ಮನವಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಕಳೆದ ತಿಂಗಳು ನಿಷ್ಠಾವಂತ ಮೂಲ ಕಾಂಗ್ರೇಸ್ ಕಾರ್ಯಕರ್ತರ ನಿಯೋಗವು ನವದೆಹಲಿಗೆ ಭೇಟಿ ನೀಡಿ ಸುಮಾರು ೩೦-೪೦ ವರ್ಷಗಳ ಹೆಚ್ಚು ಕಾಲ ಸೇವೆಸಲ್ಲಿಸಿದ ಹಿರಿಯ ಕಾಂಗ್ರೇಸ್ ಮುಖಂಡರುಗಳು ಎನ್.ಎಸ್.ಯು.ಐ. ಯುವ ಕಾಂಗ್ರೇಸ್ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ಭಾಗಿಯಾಗಿರುವ ಮುಖಂಡರಿಗೆ ಇದುವರೆಗೂ ಯಾವುದೇ ನಿಗಮ ಮಂಡಳಿಯಲ್ಲಿ ಆಗಲಿ, ಎಂ.ಎಲ್.ಎ. / ಎಂ.ಪಿ. ಟಿಕೇಟ್ ಆಗಲಿ ದೊರೆತಿರುವುದಿಲ್ಲ ಹಾಗೂ ಎಂ.ಎಲ್.ಸಿ/ ರಾಜ್ಯಸಭಾ ನಾಮಿನೇಶನ್ಗಳಿಗೂ ಸಹ ಪಕ್ಷದಿಂದ ಅವಕಾಶ ದೊರೆತಿರುವುದಿಲ್ಲ. ಆ ಕಾರಣದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು. ಪಕ್ಷಕ್ಕೆ ಕಾರ್ಯಕರ್ತರೆ ಪಕ್ಷದ ಬೆನ್ನೆಲ್ಲಬು ಎಂಬುದನ್ನು ಮರೆಯಬಾರದು. ಹಾಲಿ ಶಾಸಕರುಗಳು ಕ್ಷೇತ್ರದ ಜನರ ಜೊತೆ ಸ್ಪಂದನೆ ಮಾಡಬೇಕಾಗಿರುತ್ತದೆ. ಅವರುಗಳಿಗೆ ಸಂವಿಧಾನ ಹುದ್ದೆಯಿದ್ದು, ಪುನಃ ಅವರಿಗೆ ನಿಗಮ ಮಂಡಳಿಗೆ ಅಧ್ಯಕ್ಷರಾಗಿ ನೇಮಿಸಿದರೆ ಕೇಂದ್ರ ಕಛೇರಿಯಲ್ಲಿ ಕುಳಿತು ಕ್ಷೇತ್ರದ ಜನರ ಕುಂದುಕೊರತೆಗಳಿಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ ಎಂದರು.

ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರಿಗೆ ಯಾವುದೇ ಅವಕಾಶ ಸಿಕ್ಕಿರುವುದಿಲ್ಲ. ಅವರುಗಳಿಗೆ ಅವಕಾಶ ಮಾಡಿಕೊಟ್ಟರೇ ಪಕ್ಷದ ಸಂಘಟನೆಗೆ ಸಹಾಯವಾಗುತ್ತದೆ ಹಾಗೂ ಮುಂಬರುವ ಲೋಕಸಭಾ ಟಿಕೇಟ್ ಹಾಗೂ ಎಂ.ಎಲ್.ಸಿ, ರಾಜ್ಯಸಭಾ ನಾಮಿನೇಷನ್ ನೀಡಬೇಕು ಎಂದುದಾಗಿ ರಾಹುಲ್ ಗಾಂಧಿಯವರಿಗೆ ಅಖಿಲ ಭಾರತ ಕಾಂಗ್ರೇಸ್ ಕಛೇರಿಯಲ್ಲಿ ನಮ್ಮ ಜೊತೆ ನಿಯೋಗ ಭೇಟಿಮಾಡಿ ಮನವಿ ಮಾಡಿದಕ್ಕೆ ರಾಹುಲ್ ಗಾಂಧಿಯವರು ಸಕ್ರಿಯವಾಗಿ ಸ್ಪಂಧಿಸಿದರು. ಮುಖ್ಯಮಂತ್ರಿಗಳು ಹಾಗು ಕೆ.ಪಿ.ಸಿ.ಸಿ. ಅಧ್ಯಕ್ಷರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದಾಗ ಹಾಲಿ ೩೫ ಜನ ಶಾಸಕರ ಪಟ್ಟಿಯನ್ನು ಮುಂದೆ ಇಟ್ಟಾಗ ರಾಹುಲ್ ಗಾಂಧಿಯವರು ಕರ್ನಾಟಕ ರಾಜ್ಯದಲ್ಲಿ ೧೩೬ ಶಾಸಕರನ್ನು ಗೆಲ್ಲಿಸಲು ಶ್ರಮಪಟ್ಟ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಿಯನ್ನು ಮೊದಲು ತನ್ನಿ ಎಂದು ಸೂಚಿಸಿ ಶಾಸಕರ ನಿಗಮ ಮಂಡಳಿಯ ಅಧ್ಯಕ್ಷರ ಪಟ್ಟಿಯನ್ನು ತಡೆ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಸಂತೋಷ ನೀಡಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಯವರನ್ನು ಭೇಟಿ ನೀಡಿ ನಿಯೋಗವು ಮನವಿಮಾಡಿ ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೇಟನ್ನು ನೀಡಬೇಕಾಗಿ ಮನವಿ ಮಾಡಿದಾಗ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರೊಂದಿಗೆ ಚರ್ಚಿಸಿ ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದಾರೆ. ಹಾಗೂ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ರವರು ಭೇಟಿಮಾಡಿ ಮನವಿಸಲ್ಲಿಸಲಾಯಿತು ಅವರು ಸಹ ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ, ಜಾಜ್ ವಿಲ್ಸನ್, ಸುರೇಶ್, ಮೊಹಮ್ಮದ್ ಅಲೀಮ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಆ.9 ರಂದು ದಾವಣಗೆರೆಯಲ್ಲಿ 30 ನೇ ವಿಶ್ವ ಆದಿವಾಸಿ ದಿನಾಚರಣೆ – ಪರಿಷತ್‌ನ ರಾಜ್ಯ ಕಾರ್ಯದರ್ಶಿ ಪಿ.ರಾಜೇಶ್

Published

on

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಆ.೯ ರಂದು ದಾವಣಗೆರೆಯಲ್ಲಿ ೩೦ನೇ ವಿಶ್ವ ಆದಿವಾಸಿ ದಿನಾಚರಣೆ ನಡೆಯಲಿದೆ ಎಂದು ಪರಿಷತ್‌ನ ರಾಜ್ಯ ಕಾರ್ಯದರ್ಶಿ ಪಿ.ರಾಜೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಾಗಿನೆಲೆ ಸಂಸ್ಥಾನ ಕನಕಗುರು ಪೀಠ ತಿಂತಿಣಿ, ಚಿತ್ರದುರ್ಗದ ಶ್ರೀ ಮೇದಾರ ಕೇತೇಶ್ವರ ಗುರು ಪೀಠದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವು ದಾವಣಗೆರೆ ನಗರದ ಬಂಬೂ ಬಜಾರ್‌ನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ತಿಳಿಸಿದರು.


ವೀರಗೋಟಾದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ, ಕೇತೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಸ್ವಯಂ ಪ್ರೇರಿತ ಪ್ರತ್ಯೇಕತೆ ಮತ್ತು ಆರಂಭಿಕ ಸಂಪರ್ಕದಲ್ಲಿಯ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವುದು ಘೋಷವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಆದಿವಾಸಿ ಪರಿಷತ್‌ನ ಅಧ್ಯಕ್ಷ ಕೃಷ್ಣಯ್ಯ ವಹಿಸಲಿದ್ದಾರೆ. ಬುಡಕಟ್ಟು ಜನಜೀವನದ ಬಗ್ಗೆ ಸಂಶೋಧನೆ ನಡೆಸಿ ಪಿಹೆಚ್‌ಡಿ ಪಡೆದಿರುವ ಮೂಲ ಆದಿವಾಸಿ ಸಮುದಾಯದ ೨೪ ಮಂದಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆದಿವಾಸಿ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಗೌಡ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡೆನೆರಳು ಶಂಕರ್, ಪದಾಧಿಕಾರಿಗಳಾದ ರಮೇಶ್, ಮಹೇಶ್, ಶಿವಾಜಿ, ವಿಜಯೇಂದ್ರ, ಗಿರಿ ಇತರರು ಇದ್ದರು

Continue Reading

Hassan

ಮಂಡ್ಯದಲ್ಲಿ ವಿಡಿಯೋ ತೋರಿಸಿದ ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

Published

on

ಮಂಡ್ಯ: ಮಂಡ್ಯದಲ್ಲಿ ತಮ್ಮ ಬಗ್ಗೆ ವಿಡಿಯೋಗಳನ್ನು ಪ್ರದರ್ಶಿಸಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಮೈಸೂರು ಚಲೋ ಪಾದಯಾತ್ರೆ ವೇಳೆ ನಗರದ ಸಂಜಯ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಹಳೆಯ ಚಾಳಿ ಬಿಡಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ರವರನ್ನು ಕುಟುಕಿದರು.

ನನಗೆ ಬಹಳಷ್ಟು ಜನರು ಕೊಚ್ಚೆಗಳ ಬಗ್ಗೆ ಮಾತಾಡಬಾರದು ಎಂದು ಸಲಹೆ ಕೊಟ್ಟಿದ್ದಾರೆ. ನಾನು ಮಾತನಾಡಬಾರದು ಎಂದುಕೊಂಡಿದ್ದೆ. ಮಂಡ್ಯದಲ್ಲಿ ಅವರು ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಸಿಡಿ ಶಿವು ಎಂದು ಕರೆದಿದ್ದೆ. ಅವರ ಡಿವಿಡಿ ತೋರಿಸುವ ಚಾಳಿ ಎಲ್ಲಿ ಹೋಗುತ್ತದೆ ಹೇಳಿ ಹೇಳಿ. ಅವರು ಇನ್ನೂ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ. ನಿಮ್ಮ  ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್‌ ಬಗ್ಗೆ ಏನೆಲ್ಲ ಮಾತಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಏನೆಲ್ಲಾ ಮಾತನ್ನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ? ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು.

ಸಂಸತ್ತಿನಲ್ಲಿ ಡಿಎಂಕೆ ಜತೆ ಸರಿ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ವಿರೋಧ ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದೆಹಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಡಿಸಿಎಂ ಒಂದು ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವರಾದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು ಎಂದು ನನ್ನ ಬಗ್ಗೆ ಹೇಳಿದ್ದರು. ನಾನು ಹೇಳಿದ್ದು, ನಿಮ್ಮ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ನಾಯಕರನ್ನು ಒಪ್ಪಿಸಿ. ಅದಾದ ಮೇಲೆ ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದ್ದೆ. ಆದರೆ, ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಾ ಕನ್ನಡಿಗರಿಗೆ ಮಂಕುಬೂದಿ ಎರಚುತ್ತಿದೆ ಎಂದು ಗುಡುಗಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿಯ ರೈತರ ವಾತಾವರಣಕ್ಕೆ ತಾಯಿ ಚಾಮುಂಡೇಶ್ವರಿ ಕರುಣೆಯೇ ಕಾರಣ. ನಿಮ್ಮದೇನೂ ಇಲ್ಲಿ ಇಲ್ಲ. ನಿಮಗೆ ಜನರಿಂದ ದುಡ್ಡು ಗುಂಜೋದಕ್ಕೆ ಸಮಯ ಇಲ್ಲ. ಸರಣಿ ಹಗರಣಗಳ ಮೂಲಕ ಲೂಟಿ ಹೊಡೆಯುತ್ತಿದ್ದೀರಿ ಎಂದು ಕೇಂದ್ರ ಸಚಿವರು ದೂರಿದರು.

ಕೆಆರ್ ಎಸ್ ಅಣೆಕಟ್ಟೆ ತುಂಬಿ ತಮಿಳುನಾಡಿಗೆ ನಿರರ್ಗಳವಾಗಿ ನೀರು ಹರಿದು ಹೋಯಿತು. ಆದರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೊಪ್ಪ ಸೇರಿದಂತೆ ಕೊನೆಯ ಭಾಗಕ್ಕೆ ನೀರು ಹೋಗಿಲ್ಲ. ನಿಮಗೆ ನಾಚಿಕೆ ಆಗಬೇಕು ಎಂದು ಅವರು ಟೀಕಾಪ್ರಹಾರ ನಡೆಸಿದರು.

ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ. ಆ ಸಮಯದಲ್ಲಿ ರಾಜ್ಯದವರೇ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ. ಅವರು ಯಾಕೆ ದೇವೇಗೌಡರಿಗೆ ದನಿಗೂಡಿಸಲ್ಲ? ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಕುಮ್ಮಕ್ಕಿನಿಂದಾಗಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಜನ ಶಾಪ ಹಾಕುತ್ತಿದ್ದಾರೆ:

ನಮ್ಮ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ನಡವಳಿಕೆಗಳು ಒಂದು ಒಂದಾಗಿಯೇ ಅನಾವರಣ ಆಗುತ್ತಿವೆ. ಸ್ವಚ್ಛ ಆಡಳಿತ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ದಿನದಿಂದ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದರು ಎಂದು ಅವರು ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಎಷ್ಟರ ಮಟ್ಟಿಗೆ ಹಗರಣಗಳಲ್ಲಿ ಮುಳುಗಿದೆ ಎಂದರೆ, ಜನ ಇವತ್ತು ಛೀ.. ಥೂ.. ಎಂದು ಹೃದಯದಿಂದ ಶಾಪ ಹಾಕುತ್ತಿದ್ದಾರೆ.

ಸಿಎಂ ಅವರೇ ಹೇಳಿದ್ದಾರೆ 87 ಕೋಟಿ ಅಕ್ರಮ ನಡೆಸಿದೆ ಎಂದು. ಮುಡಾದಲ್ಲಿ ನಿವೇಶನ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸಂವಿಧಾನದ ಅಡಿ ಕೆಲಸ ಮಾಡಬೇಕು ಅವರು. ಆದರೆ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂದರೆ, ಅವರ ಕುಟುಂಬವೇ ಅಕ್ರಮದಲ್ಲಿ ತೊಡಗಿದೆ. ‌ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಪಡೆದಿರುವುದರ ವಿರುದ್ಧ ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ಹಿಂದುಳಿದ ವರ್ಗದವನು, ಅದಕ್ಕೆ ಇವರೆಲ್ಲ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಕಿಡಿಕಾರಿದ ಅವರು, ಹಿಂದುಳಿದ ವರ್ಗದವರು ಎಂದು ನಾವು ನಿಮ್ಮ ವಿರುದ್ಧ ಹೋರಾಟ ಮಾಡುತ್ತಿಲ್ಲ. ಇನ್ನೂ ಒಮ್ಮೆ ಸಿಎಂ ಆಗಿ, ನಮ್ಮ ಅಭ್ಯಂತರವಿಲ್ಲ. ಹಿಂದುಳಿದ ವರ್ಗಕ್ಕೆ ಮಾತ್ರ ನೀವು ಸಿಎಂ ಆಗಿಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಅವರು ಕಟುವಾಗಿ ಟೀಕಿಸಿದರು.

ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವವರ ರಕ್ಷಣೆ ಮಾಡುತ್ತಿದ್ದೀರಿ. ಅದನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ ಅಲ್ಲವೇ? SC/ST ಹಣ ಲೂಟಿ ಮಾಡಿ ಅಂಬೇಡ್ಕರ್ ಹೆಸರಿಗೆ ಕಳಂಕ ತಂದಿದ್ದು ಕಾಂಗ್ರೆಸ್‌ ಸರ್ಕಾರ ಅಲ್ಲವೇ? ‌ ಈ ಬಗ್ಗೆ ಜನರಿಗೆ ತಿಳಿಸಲು ನಮ್ಮ ಹೋರಾಟ.
ಜನಾಂದೋಲನದ ಮೂಲಕ ನಿಮ್ಮ ತಪ್ಪು ಮುಚ್ಚಿಕೊಳ್ಳುವ ಯತ್ನ ಮಾಡುತ್ತಿದ್ದೀರಿ. ಸುಖಾ ಸುಮ್ಮನೇ ವೈಯಕ್ತಿಕ ಟೀಕೆ, ಆರೋಪ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವರು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಎರಡೂ ಪಕ್ಷಗಳ ಅನೇಕ ನಾಯಕರು, ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು.

Continue Reading

Hassan

ರಾಮನಗರಕ್ಕೆ ಮರು ನಾಮಕರಣ ಬೇಡ, ಅಕ್ರಮ ಕಳಪೆ ಮಾಂಸ ಸರಬರಾಜು ಮೇಲೆ ಕ್ರಮ, ರಾಷ್ಟ್ರಧ್ವಜದ ಗೌರವ ಕಾಪಾಡಿ

Published

on

ವಿಷಯ : ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ರಾಜ್ಯ ಸರಕಾರದ ಆದೇಶವನ್ನು ರದ್ದು ಮಾಡಬೇಕು. ಅಕ್ರಮವಾಗಿ ಬೆಂಗಳೂರಿಗೆ ಕಳಪೆ ಗುಣಮಟ್ಟದ ಮಾಂಶವನ್ನು ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಮಾಧ್ಯಮದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ಗೋವಿಂದರಾಜು ಮಾತನಾಡಿ, ರಾಜ್ಯ ಸರಕಾರವು ರಾಮನಗರ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ನಿಶ್ಚಯ ಮಾಡಿರುವ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಇದು ಶ್ರೀರಾಮನ ದ್ವೇಷದ ಪರಮಾವಧಿಯಾಗಿದೆ. ರಾಮಾಯಣದ ಕಾಲದಲ್ಲಿ ಪ್ರಭು ಶ್ರೀರಾಮಚಂದ್ರನು ವನವಾಸದಲ್ಲಿ ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ಸರಿಸುಮಾರು ಒಂದು ವರ್ಷಗಳ ಕಾಲ ವಾಸವಾಗಿದ್ದಂತಹ ಐತಿಹಾಸಿಕ ಸ್ಥಳವಾಗಿದ್ದು, ಪವಿತ್ರ ಪಾವನ ಭೂಮಿಯಾಗಿದೆ. ಅಲ್ಲಿ ಸ್ವತಃ ಸುಗ್ರೀವನು ಸ್ಥಾಪನೆ ಮಾಡಿದ ಶ್ರೀರಾಮ ಮೂರ್ತಿ ಸಮೇತ ಇರುವ ಶ್ರೀರಾಮ ಮಂದಿರ ಇದೆ. ಈ ಶ್ರೀರಾಮ ದೇವರ ಬೆಟ್ಟದ ಕಾರಣದಿಂದ ರಾಮನಗರ ಎಂಬ ಹೆಸರು ಬಂದಿತು. ಆದರೆ ಸರಕಾರವು ಶ್ರೀರಾಮನ ಬಗ್ಗೆ ಇರುವ ದ್ವೇಷದ ಕಾರಣದಿಂದ ಎಂದರು. ೫೦೦ ವರ್ಷಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಿದ ಬಳಿಕ ದೇಶಾದ್ಯಂತ ರಾಮನದ್ದೇ ಗುಣಗಾನವಿರುವಾಗ ಕರ್ನಾಟಕದಲ್ಲಿ ಮಾತ್ರ ’ರಾಮನಗರ’ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರಕಾರ ನಿರ್ಣಯ ಖೇದಕರವಾಗಿದೆ. ಶ್ರೀರಾಮನ ಭೂಮಿಯಂದೇ ಖ್ಯಾತಿ ಪಡೆದಿರುವ

ಭಾರತದಲ್ಲಿ ಶ್ರೀರಾಮನ ಹೆಸರನ್ನು ಅಳಿಸಿ ಹಾಕಿದರೆ ಅದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ನಿರ್ಧಾರವು ಹಿಂದೂಗಳ ಗಾಯಕ್ಕೆ ಉಪ್ಪು ಸವರಿದಂತಿದೆ. ಕಾಂಗ್ರೆಸ್ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದಿತ್ತು, ನಂತರ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಈಗ ರಾಮನಗರದ ಹೆಸರು ಬದಲಾಯಿಸಿದೆ. ಇದರಿಂದ ಕಾಂಗ್ರೆಸ್ಸಿನ ’ಶ್ರೀರಾಮ’ನ ಬಗ್ಗೆ ವಿರೋಧ ಸ್ಪಷ್ಟವಾಗಿದೆ ಎಂದು ದೂರಿದರು. ರಾಮನಗರದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ಕಾಂಗ್ರೆಸ್ ಪಕ್ಷವು ಮತಾಂಧ ಕ್ರೂರಿ ಔರಂಗಜೇಬನ ಹೆಸರಿರುವ ದೆಹಲಿಯ ಔರಂಗಜೇಬ ರಸ್ತೆ, ತುಘಲಕ್ ರಸ್ತೆ ಇತ್ಯಾದಿ ಆಕ್ರಮಣಕಾರಿಗಳ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದೆಯೇ? ಕರ್ನಾಟಕದಲ್ಲಿರುವ ಮಹಾನಗರಗಳು ಮತ್ತು ನಗರಗಳ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ರಾಜ್ಯ ಸರಕಾರ

ಧೈರ್ಯ ತೋರುವುದೇ ? ರಾಮನಗರ ಹೆಸರು ಬದಲಾವಣೆಗೆ ಹಿಂದೂ ಸಮಾಜವು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ರಾಮನಗರದ ಹೆಸರನ್ನು ಬದಲಾವಣೆ ಮಾಡಬಾರದು ಮತ್ತು ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ ಹಿಂದೂ ಸಮಾಜವು ಬೀದಿಗಿಳಿಯದೆ ಸುಮ್ಮನಿರುವುದಿಲ್ಲ. ತಾವು ಸಹ ರಾಮನಗರದ ಹೆಸರು ಬದಲಾವಣೆಯ ರಾಜ್ಯ ಸರಕಾರದ ಆದೇಶಕ್ಕೆ ಅಂಕಿತ ಹಾಕಬಾರದೆಂದು ಆಗ್ರಹ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸವನ್ನು ಸರಬುರಾಜು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಮತ್ತು ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಪೋಲಿಸ್ ಎಸಿಪಿ ಚಂದನ್ ಕುಮಾರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬೆಂಗಳೂರಿಗೆ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಸಿಟಿ ರೈಲ್ವೇ ನಿಲ್ದಾಣದ ಮೂಲಕ ಬೇರೆ ರೆಸ್ಟೋರೆಂಟ್, ಪ್ರತಿಷ್ಠಿತ ಹೊಟೆಲ್ ಗಳಿಗೆ ಸರಬುರಾಜು ಆಗುತ್ತಿದೆ. ಈ ಮಾಂಸವನ್ನು ಅಕ್ರಮವಾಗಿ ಆಹಾರ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಥರ್ಮಾಕೋಲ್ ಬಾಕ್ಸ್ ಮೂಲಕ ಸರಬುರಾಜು ಮಾಡಲಾಗುತ್ತದೆ. ಮಾಂಸದ ವ್ಯಾಪಾರಸ್ತರು ಕಳೆದ ತಿಂಗಳು ಸರಕಾರದ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದರೂ ಸಹ, ಅಕ್ರಮ ಮಾಂಸದ ದಂದೆಯು ನಡೆಯುತ್ತಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದು ಆರೋಪಿಸಿದರು. ೨೬ ಜುಲೈ ರಂದು ಸಂಜೆ ಬೆಂಗಳೂರು ಮ್ಯಾಜೆಸ್ಟಿಕ್ ರೈಲ್ವೇ ಸ್ಟೇಷನ್‌ನಲ್ಲಿ ರಾಜಸ್ಥಾನದಿಂದ ೯೦ ಬಾಕ್ಸ್‌ಗಳಲ್ಲಿ ಮಾಂಸವು ಬಂದಿದ್ದು, ಅದನ್ನು ರೈಲ್ವೇ ಪಾರ್ಸೆಲ್ ಆಪೀಸ್ ಗೆ ಕಳುಹಿಸದೇ ಹಿಂದಿನ ಗೇಟ್ ಮೂಲಕ ಹೊರಗೆ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿ ಟಾಟಾಎಸ್ ಗಾಡಿ ಮೂಲಕ ತೆಗೆದುಕೊಂಡು ಹೋಗುವಾಗ ಸಾರ್ವಜನಿಕರು ತಡೆದಿದ್ದಾರೆ. ಈ ಮಾಂಸದ ದುರ್ವಾಸನೆ

ಬರುತಿದ್ದು, ಅದರ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕೆಂದು ಜನರು ಪಟ್ಟು ಹಿಡಿದರೂ ಅಲ್ಲಿ ಅಬ್ದುಲ್ ರಜಾಕ್ ಎಂಬ ಮಾಂಸದ ವ್ಯಾಪಾರಿಯು ಅಧಿಕಾರಿಗಳಿಗೆ ಅವಕಾಶ ನೀಡಲಿಲ್ಲ ಎಂದರು. ಈ ಘಟನೆಯನ್ನು ನೋಡಿದಾಗ ಇದೊಂದು ಕೊಟ್ಯಾಂತರ ರೂಪಾಯಿಗಳ ಅಕ್ರಮ ಮಾಂಸದ ದಂದೆಯಾಗಿದ್ದು, ಹಣಕ್ಕಾಗಿ ಅತ್ಯಂತ ಕಳಪೆ ಮಟ್ಟದ ಆಹಾರವನ್ನು ಸಾರ್ವಜನಿಕರಿಗೆ ??. ಅವರ ಆರೋಗ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. ಆದರೆ ಪೋಲಿಸ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಅಕ್ರಮ ಮಾಂಸದ ರೂವಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದು ಅತ್ಯಂತ ಅನೇಕ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ದಯಮಾಡಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಅಕ್ರಮ ಮಂಸದ ರೂವಾರಿಯನ್ನು ಬಂಧನ ಮಾಡಬೇಕೆಂದು ಆಗ್ರಹ ಮಾಡುತ್ತೇವೆ ಎಂದು ಹೇಳಿದರು.

ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ! ಈ ರಾಷ್ಟ್ರೀಯ ಧ್ವಜಗಳನ್ನು ಆಗಸ್ಟ್ ೧೫ ಮತ್ತು ೨೬ ಜನವರಿಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಕಾಣಬೇಕಾಗಿದೆ. ರಾಷ್ಟ್ರಧ್ವಜದ ಈ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ ದೂರು ಕೊಡಲಾಗಿದ್ದು, ಈ ಸಂಬಂಧ ವಿಚಾರಣೆ ವೇಳೆ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರ ಪ್ರಕಾರ, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇದು ’ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ತಡೆ) ಕಾಯಿದೆ, ೧೯೫೦ ಮತ್ತು ’ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ ೧೯೭೧’ ಉಲ್ಲಂಘನೆಯಾಗಿದೆ ಎಂದರು. ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ತಡೆಯಲು ಕೃತಿ ಸಮಿತಿಯನ್ನು ಸ್ಥಾಪಿಸಿಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಸಮಿತಿಯು ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಪ್ರಶೋತ್ತರ ಸ್ಪರ್ಧೆಗಳನ್ನು ಆಯೋಜಿಸುವುದು, ಕರಪತ್ರಗಳನ್ನು ವಿತರಿಸುವುದು, ಪೋಸ್ಟರ್- ಪ್ಲೆಕ್ಸ್ ಗಳನ್ನು ಹಾಕುವುದು, ಸ್ಥಳೀಯ ಕೇಬಲ್ ಚಾನೆಲ್ಗಳಲ್ಲಿ ವಿಡಿಯೊಗಳನ್ನು (ಸಿಡಿ) ತೋರಿಸುವುದು, ರಸ್ತೆಗಳಲ್ಲಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಮ್ಮ ಉದ್ದೇಶವನ್ನು ತಿಳಿಸಿದರು.

ಇದೆ ವೇಳೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪುಟ್ಟಸ್ವಾಮಿ, ಸುಜಾತ, ಸಿದ್ದಪ್ಪ ಚಾರ್, ಅನಂತರಾಜು, ಸುರೇಶ್, ಬ್ಯಾಟಚಾರ್, ರಾಜೇಂದ್ರನ್, ರಾಘವಚಾರ್, ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Continue Reading

Trending

error: Content is protected !!