Sports
ನ್ಯೂ ಮಂಗಳೂರು ಪೋರ್ಟ್ ನಲ್ಲಿ ಮರೈನ್ ಇಂಜಿನಿಯರ್ ಹುದ್ದೆಗಳ ನೇಮಕಾತಿ : ಸಂಬಳ ₹83,000 ರವರೆಗೆ
ನ್ಯೂ ಮಂಗಳೂರು ಪೋರ್ಟ್ ನಲ್ಲಿ ಮರೈನ್ ಇಂಜಿನಿಯರ್ ಹುದ್ದೆಗಳ ನೇಮಕಾತಿ : ಸಂಬಳ ₹83,000 ರವರೆಗೆ
New Mangalore Port Authority Recruitment 2024 –
ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಮಂಗಳೂರಿನಲ್ಲಿ ಖಾಲಿ ಇರುವಂತ ಮೆರೈನ್ ಇಂಜಿನಿಯರ್ ಮತ್ತು ಇಂಜಿನಿಯರ್ ಗ್ರೇಡ್ II ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ನೇಮಕಾತಿಗಾಗಿ ನೀವು ಅರ್ಹರಿದ್ದರೆ, ಅಗತ್ಯ ದಾಖಲಾತಿಗಳೊಂದಿಗೆ ಕೆಳಗಿನ ವಿಳಾಸಕ್ಕೆ ಫೆಬ್ರವರಿ 14, 2025 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.
ವಿಳಾಸ :
The Chamber of The Person,
New Mangalore Port Authority,
Panambur, Mangaluru, Karnataka – 575010
ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನದ ವಿವರ :
• ಮೆರೈನ್ ಇಂಜಿನಿಯರ್ ಹುದ್ದೆಗಳಿಗೆ – 83,000ರೂ.
• ಇಂಜಿನಿಯರ್ ಗ್ರೇಡ್ II ಹುದ್ದೆಗಳಿಗೆ – 60,000ರೂ.
ಈ ಹುದ್ದೆಗಳ ನೇಮಕಾತಿಗಾಗಿ ನಿಗದಿಪಡಿಸಿದ ಅರ್ಹತೆಗಳ ವಿವರ, ಶೈಕ್ಷಣಿಕ ಅರ್ಹತೆಗಳು ಹಾಗೂ ಹುದ್ದೆಗಳ ನೇಮಕಾತಿಯ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಅಧಿಕೃತ ಜಾಲತಾಣ –
https://newmangaloreport.gov.in/vacancy
Sports
ICC ವರ್ಷದ ಪುರುಷರ ತಂಡ ಪ್ರಕಟ: ಸ್ಥಾನ ಪಡೆಯದ ಟೀಂ ಇಂಡಿಯಾ ಆಟಗಾರರು
ಬೆಂಗಳೂರು: ಐಸಿಸಿ (ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಅಂತಿಮವಾಗಿ ತನ್ನ ವರ್ಷದ ಪುರುಷರ ಏಕದಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಅಚ್ಚರಿಯಂಬಂತೆ ಈ ತಂಡದಲ್ಲಿ ಭಾರತ ತಂಡದ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇತ್ತ ಮಹಿಳೆಯರ ವರ್ಷದ ಏಕದಿನ ತಂಡ ಪ್ರಕಟಿಸಿದ್ದು, ಇದರಲ್ಲಿ ಇಬ್ಬರು ಭಾರತೀಯ ಮಹಿಳಾ ಆಟಗಾರ್ತಿಯರು ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನು ವರ್ಷದ ಪುರುಷರ ಏಕದಿನ ತಂಡದಲ್ಲಿ ನಾಲ್ವರು ಶ್ರೀಲಂಕಾ ಆಟಗಾರರು ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಈ ತಂಡದಲ್ಲಿ ಅಚ್ಚರಿಯಂಬಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ದಕ್ಷಿಣಾ ಆಫ್ರಿಕಾದ ಯಾವೊಬ್ಬ ಆಟಗಾರನು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಇತ್ತ ಮಹಿಳೆಯರ ವರ್ಷದ ಏಕದಿನ ತಂಡದಲ್ಲಿ ಭಾರತ ತಂಡದ ಸ್ಮೃತಿ ಮಂದನಾ ಹಾಗೂ ದೀಪ್ತಿ ಶರ್ಮಾ ಸ್ಥಾನ ಪಡೆದಿದ್ದಾರೆ.
ಐಸಿಸಿ ವರ್ಷದ ಪುರುಷರ ಏಕದಿನ ತಂಡ ಇಂತಿದೆ:
ಚರಿತ ಹಸಲಂಕ (ನಾಯಕ, ಶ್ರೀಲಂಕಾ), ಸೈಮ್ ಆಯುಬ್ (ಪಾಕ್), ರೆಹಮತ್ತುಲ್ಲಾ ಗುರ್ಬಾಜ್ (ಅಫ್ಘಾನ್), ಪಾತುಮ್ ನಿಸ್ಸಾಂಕ (ಶ್ರೀಲಂಕಾ), ಶೆರ್ಫಾನೆ ರುಥರ್‌ಫರ್ಡ್ (ವೆಸ್ಟ್ ಇಂಡೀಸ್), ಕುಶಾಲ್ ಮೆಂಡೀಸ್ (ಶ್ರೀಲಂಕಾ), ಅಜ್ಮತುಲ್ಲಾ ಓಮರ್ಜಾಯ್ (ಅಫ್ಘಾನ್), ವನಿಂದು ಹಸರಂಗ (ಶ್ರೀಲಂಕಾ), ಶಾಹೀನ್ ಶಾ ಅಫ್ರಿದಿ (ಪಾಕ್), ಹ್ಯಾರೀಸ್ ರೌಫ್ (ಪಾಕ್), ಘಜನ್‌ಫರ್ (ಅಫ್ಘಾನ್)
Sports
Ranji Trophy: ಕಳಪೆ ಫಾರ್ಮ್ ಮುಂದುವರಿಸಿದ ಹಿಟ್‌ಮ್ಯಾನ್
ಮುಂಬೈ: ಇಲ್ಲಿನ ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಜಮ್ಮು ಕಾಶ್ಮೀರ ನಡುವಣ ರಣಜಿ ಪಂದ್ಯದಲ್ಲಿ ಮುಂಬೈ ಪರವಾಗಿ ಬ್ಯಾಟ್ ಬೀಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಲ್ಲಿಯೂ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್ ಹಾಗೂ ಹಿಟ್ ಮ್ಯಾನ್ ಮುಂಬೈಗೆ ವರವಾಗಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲ ಕಳಪೆ ಫಾರ್ಮ್‌ನಿಂದಾಗಿ ರಣಜಿ ಆಡುವುದಾಗಿ ಹೇಳಿದ್ದರು.
ಇನ್ನು ಈ ಪಂದ್ಯದಲ್ಲಿಯೂ ಫ್ಲಾಪ್ ಆಗಿರುವ ರೋಹಿತ್ ಶರ್ಮಾ 19 ಎಸೆತ ಎದುರಿಸಿ ಕೇವಲ 3 ರನ್ ಬಾರಿಸಿ ಔಟಾಗಿದ್ದಾರೆ. ಜಮ್ಮು ಬೌಲರ್ ಉಮರ್ ನಝೀರ್ ಅವರ ಬೌಲಿಂಗ್‌ನಲ್ಲಿ ಮಿಡ್ ಆಫ್ ಫೀಲ್ಡರ್ ಪರಾಸ್ ದೋಗ್ರಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
2015ರಲ್ಲಿ ರೋಹಿತ್ ಶರ್ಮಾ ಉತ್ತರ ಪ್ರದೇಶ ವಿರುದ್ಧ ಕೊನೆಯ ಬಾರಿ ರಣಜಿ ಆಡಿದ್ದರು. ಈಗ ದಶಕಗಳ ಬಳಿಕ ಹಿಟ್‌ಮ್ಯಾನ್ ಜಮ್ಮು ಕಾಶ್ಮೀರ ವಿರುದ್ಧ ಪಂದ್ಯವಾಡಿದರು. ಈ ಪಂದ್ಯದಲ್ಲಿಯೂ ರೋಹಿತ್ ಫ್ಲಾಪ್ ಆಗಿದ್ದಾರೆ.
Sports
ರಣಜಿಗೆ ದಶಕಗಳ ಬಳಿಕ ಎಂಟ್ರಿಕೊಟ್ಟ ರೋಹಿತ್: ಹಿಟ್ ಮ್ಯಾನ್ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ರಹಾನೆ
ಮುಂಬೈ: ತಮ್ಮ ಕಳಪೆ ಫಾರ್ಮ್‌ನಿಂದ ನಿರಂತರ ಟೀಕೆಗೆ ಒಳಗಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ರಣಜಿ ಆಡುವುದಾಗಿ ಘೋಷಿಸಿದ್ದರು. ಈ ನಡುವೆ ರೋಹಿತ್ ಅವರು ಫಾರ್ಮ್ ಬಾರದೇ ತಂಡದಿಂದ ಅವರನ್ನು ಕೈಬಿಡಲಾಗುವುದು ಎಂದು ಹೇಳಲಾಗುತ್ತಿತ್ತು. ಇವೆಲ್ಲಾ ಟೀಕೆಗಳಿಗೂ ಉತ್ತರ ಎಂಬಂತೆ ರಣಜಿಯ ಮುಂಬೈ ತಂಡದ ನಾಯಕ ಅಜಿಂಕೆ ರಹಾನೆ ಅವರು ರೋಹಿತ್ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ.
ಸುಮಾರು ಒಂದು ದಶಕದ ಬಳಿಕ ರಣಜಿ ಆಡಲು ಸಜ್ಜಾಗಿರುವ ರೋಹಿತ್ ಶರ್ಮಾ ಮೇಲೆ ಎಲ್ಲರ ದೃಷ್ಠಿ ನೆಟ್ಟಿದ್ದು, ರಣಜಿಯಲ್ಲಾದರೂ ರೋಹಿತ್ ಮಿಂಚಲಿದ್ದಾರೆಯೇ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಹಾನೆ, ರೋಹಿತ್ ಅವರಿಗೆ ಯಾವ ರೀತಿ ಆಡಬೇಕು ಎಂಬುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಸದ್ಯದಲ್ಲೇ ಅವರ ದೊಡ್ಡ ಮೊತ್ತ ಪೇರಿಸಲಿದ್ದಾರೆ. ಯಾವಾಗಲೂ ರಿಲ್ಯಾಕ್ಸ್ ಮೂಡ್‌ನಲ್ಲಿ ರೋಹಿತ್ ಇರುತ್ತಾರೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿಯೂ ರೋಹಿತ್ ಹೀಗೆ ಇರುತ್ತಾರೆ. ಅವರ ಆಟದ ಬಗ್ಗೆ ನಮಗೆಲ್ಲರಿಗೂ ನಂಬಿಕೆಯಿದ್ದು, ಅವರು ಶೀಘ್ರದಲ್ಲಿಯೇ ಫಾರ್ಮ್‌ಗೆ ಮರಳಿದ್ದಾರೆ ಎಂದರು.
ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಏರಿಳಿತವನ್ನು ಕಾಣುತ್ತಾರೆ. ಆದರೆ ವಿಫಲರಾಗುವುದಿಲ್ಲ. ನೆಟ್ಸ್‌ನಲ್ಲಿ ರೋಹಿತ್ ಉತ್ತಮವಾಗಿ ಕಾಣುತ್ತಿದ್ದು, ಬೃಹತ್ ಮೊತ್ತ ದಾಖಲಿಸುವ ಭರವಸೆ ನಮಗಿದೆ.
-
Mysore23 hours ago
ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
-
Education24 hours ago
Free Coaching : ಮಾಸಿಕ 5,000ರೂ. ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರದಿಂದ ಉಚಿತ ತರಬೇತಿ
-
Cinema24 hours ago
ಬಿಗ್ಬಾಸ್ ಸೀಸನ್ 11: ಮೀಸಲಾತಿ ಮೂಲಕ ಹನುಮಂತು ಫೈನಲ್ಸ್ ತಲುಪಿದ್ದಾರೆ ಎಂದ ನಟಿ ಹಂಸ
-
Mysore8 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Kodagu9 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu9 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Mysore6 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu7 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ