Connect with us

Hassan

ಬೇಲೂರು ಪೊಲೀಸ್ ಠಾಣೆಗೆ ನೂತನ ಜೀಪ್ ವಿತರಣೆ

Published

on

ಬೇಲೂರು: ಗೃಹ ಇಲಾಖೆ ವತಿಯಿಂದ ನೂತನವಾಗಿ ಬೇಲೂರು ಪೊಲೀಸ್ ಠಾಣೆಗೆ ಹೊಸ ಜೀಪ್ ಅನ್ನು ಒದಗಿಸಲಾಯಿತು.

ಈ ಹಿನ್ನೆಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಉಪನಿರೀಕ್ಷಕ ರೇವಣ್ಣ ಅವರು, ನೂತನ ಜೀಪ್ ದೊರಕಿರುವುದರಿಂದ ಠಾಣಾ ವ್ಯಾಪ್ತಿಯಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.


ನಂತರ ಮಾತನಾಡಿದ ಪಿಎಸ್ಐ ಎಸ್.ಜಿ. ಪಾಟೀಲ್ ಅವರು, “ಬೇಲೂರು ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ತ್ವರಿತ ಪೊಲೀಸ್ ಸೇವೆ ನೀಡಲು ಈ ನೂತನ ಜೀಪ್ ಅತ್ಯಂತ ಉಪಯುಕ್ತವಾಗಲಿದೆ.

ಸಾರ್ವಜನಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಸರ್ಕಾರ ನೀಡಿರುವ ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಅಪರಾಧ ನಿಯಂತ್ರಣ ಹಾಗೂ ಜನಸೇವೆ ಕಾರ್ಯವನ್ನು ಇನ್ನಷ್ಟು ಬಲಪಡಿಸಲಾಗುವುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Hassan

ಚೀಟಿ ಹಣ ನೀಡದೆ ಬೆದರಿಕೆ: ಮನನೊಂದು ವ್ಯಕ್ತಿ ಆತ್ಮಹ*ತ್ಯೆ

Published

on

ಹೊಳೆನರಸೀಪುರ: ಚೀಟಿ ಹಣ ಕೊಡದೆ ಸತಾಯಿಸಿದ್ದಲ್ಲದೆ ವಾಪಾಸ್‌‍ ಹಣ ಕೊಡುವಂತೆ ಬೆದರಿಸಿ ನಿಂದಿಸಿದ್ದಕ್ಕೆ ಮನನೊಂದ ವ್ಯಕ್ತಿ ವಿಷ ಸೇವಿಸಿ ಆತಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ರಾಮು (38) ಆತಹತ್ಯೆ ಮಾಡಿ ಕೊಂಡಿದ್ದಾರೆ. ಚನ್ನರಾಯ ಪಟ್ಟಣದಲ್ಲಿ  ಹಲವು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ರಾಮು ಪರಿಚಯಸ್ಥರಾದ ಗಿರೀಶ್‌, ರಾಣಿ ಮತ್ತು ಪುಷ್ಪ ಎಂಬುವವರೊಟ್ಟಿಗೆ ಆರ್ಥಿಕ ವ್ಯವಹಾರ ಇಟ್ಟುಕೊಂಡಿ ದ್ದರು. 15 ಲಕ್ಷ ರೂ. ಮೊತ್ತದ ಚೀಟಿ ನಡೆಸುತ್ತಿದ್ದರು ಎನ್ನಲಾಗಿದೆ.

ಎರಡೂವರೆ ವರ್ಷಗಳಿಂದ ಚೀಟಿ ಹಣವನ್ನು ರಾಮು ನಗದು ಹಾಗು ಯುಪಿಐ ಮೂಲಕ ನಿಯಮಿತವಾಗಿ ಪಾವತಿಸುತ್ತಿದ್ದರು. 2025ರ ನ. 25 ರಂದು 15 ಲಕ್ಷ ರೂ. ಚೀಟಿಯನ್ನು 2.70 ಲಕ್ಷ ರೂ.ಗೆ ಕೂಗಿದ್ದರು.

ಅದರಲ್ಲಿ 1 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಖಾಲಿ ಚೆಕ್‌ ಹಾಗು ಬಾಂಡ್‌ ಪೇಪರ್‌ಗೆ ಸಹಿ ಹಾಕಿಸಿಕೊಂಡು ನ. 25ರಂದು ಕೊಟ್ಟಿದ್ದ ಗಿರೀಶ್‌, ಪುಷ್ಪ ಹಾಗು ರಾಣಿ ಅವರು ಉಳಿದ 1.70 ಲಕ್ಷ ರೂ. ಕೊಟ್ಟಿರಲಿಲ್ಲ. ಅದನ್ನು ಕೇಳಲು ಹೋದಾಗ ನೀವೇ 10 ಲಕ್ಷ ರೂ. ಕೊಡಬೇಕೆಂದು ಎಚ್ಚರಿಕೆ ನೀಡಿದ್ದರು.

20 ದಿನಗಳ ಹಿಂದೆ ರಾಮು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಅವರು ಗಲಾಟೆ ಮಾಡಿ ಬ್ಯಾಂಕ್‌ನಲ್ಲಿ ಅಡವಿಟ್ಟಿರುವ ಒಡವೆ ಚೀಟಿಯನ್ನು ಕಿತ್ತುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ಕೊಡದಿದ್ದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಅವಮಾನದಿಂದ ಮನನೊಂದ ರಾಮು ಗುರುವಾರ ಜಮೀನಿನಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Hassan

ಜಮೀನಿನಲ್ಲಿ ಆಕಸ್ಮಿಕ ಬೆಂಕಿ : ಬಿದಿರು ಬೆಳೆ ಸಂಪೂರ್ಣ ಸುಟ್ಟು ಭಸ್ಮ

Published

on

ಹಾಸನ: ತಾಲೂಕಿನ ಕಲ್ಲಹಳ್ಳಿ ಗ್ರಾಮದ ರೈತ ಮಂಜುನಾಥ್ ಅವರ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಿದಿರು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಅವಘಡದಿಂದಾಗಿ ಸುಮಾರು ₹ 30 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ಹಾಗೂ ನೀರಾವರಿ ವ್ಯವಸ್ಥೆ ನಾಶವಾಗಿದೆ ಎಂದು ಅವರು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮಂಜುನಾಥ್, ಕಲ್ಲಹಳ್ಳಿ ಗ್ರಾಮದ ಸರ್ವೆ ನಂ. 163, 221, 223 ಹಾಗೂ 204 ರ ಜಮೀನಿನಲ್ಲಿ 2021–22ನೇ ಸಾಲಿನಲ್ಲಿ ಒಟ್ಟು 13,400 ಬಿದಿರು ಸಸಿಗಳನ್ನು ನಾಟಿ ಮಾಡಲಾಗಿತ್ತು . ಪ್ರತಿ ಗಿಡಕ್ಕೂ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದ್ದು, ಬೆಳೆ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದರು.

ಇನ್ನು 2025ನೇ ಸಾಲಿನಲ್ಲಿ ಸರ್ವೆ ನಂ. 225ರ ಜಮೀನಿನಲ್ಲಿ ಬೆಳೆದಿದ್ದ ಬಿದಿರಿನ ಪೈಕಿ 6,000 ಗಳಗಳನ್ನು ಪ್ರತಿ ಗಳಕ್ಕೆ ₹11ರಂತೆ ಕೂಲಿ ನೀಡಿ ಕಡಿದು ಹಾಕಲಾಗಿತ್ತು. ಆದರೆ ಜನವರಿ 30ರಂದು ಬೆಳಿಗ್ಗೆ 11.30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಸುಮಾರು 7 ಎಕರೆ ಬಿದಿರು ಬೆಳೆ, 6,000 ಗಾಳಗಳು ಹಾಗೂ ಹನಿ ನೀರಾವರಿ ವ್ಯವಸ್ಥೆ ಸಂಪೂರ್ಣ ಸುಟ್ಟು ನಾಶವಾಗಿದೆ.

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ತುರ್ತು ಸಂಖ್ಯೆ 102ಕ್ಕೆ ಕರೆ ಮಾಡಲಾಗಿದ್ದು, ಹಾಸನ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಉಳಿದ 8 ಎಕರೆ ಬಿದಿರು ಬೆಳೆಯನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದರು.

2021ರಿಂದ ಇಲ್ಲಿಯವರೆಗೆ ಬಿದಿರು ಬೆಳೆ ಬೆಳೆಸಲು ಪ್ರತಿ ಎಕರೆಗೆ ಸುಮಾರು ₹4 ಲಕ್ಷದಂತೆ ಒಟ್ಟು ₹52 ಲಕ್ಷ ವೆಚ್ಚ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಕೆನರಾ ಬ್ಯಾಂಕ್ ಶೆಟ್ಟಿಹಳ್ಳಿ ಶಾಖೆ ಹಾಗೂ ಚೌಡವಳ್ಳಿ ಸಹಕಾರ ಸಂಘದಿಂದ ₹30 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿರುವುದಾಗಿ ಹೇಳಿದರು.

ಸುಟ್ಟುಹೋಗಿರುವ ಬಿದಿರು, ಕಡಿದು ಹಾಕಿದ್ದ ಗಳಗಳು ಹಾಗೂ ನೀರಾವರಿ ವ್ಯವಸ್ಥೆಯ ಒಟ್ಟು ನಷ್ಟವು ಸುಮಾರು ₹28 ಲಕ್ಷ ಆಗಿದ್ದು, ಇದರಲ್ಲಿ ₹5 ಲಕ್ಷ ಮೌಲ್ಯದ ನೀರಾವರಿ ವ್ಯವಸ್ಥೆ ಹಾಗೂ ಗಾಳಗಳು ಸೇರಿವೆ ಎಂದರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನನಗೆ ಬದುಕು ಸಾಗಿಸಲು ಅನುಕೂಲವಾಗುವಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

Continue Reading

Hassan

ಆಟೋಗೆ ಡಿಕ್ಕಿ ಹೊಡೆದ ಕೆಎಸ್ಆರ್ಟಿಸಿ ಬಸ್

Published

on

ಅರಸೀಕೆರೆ :  ಅರಸೀಕೆರೆ  ನಗರದ ಬಿಎಚ್ ರಸ್ತೆಯಲ್ಲಿ ಇಂದು ಮುಂಜಾನೆ 6.45 ರ ಸಮಯದಲ್ಲಿ ಬಿ ಎಚ್ ರಸ್ತೆಯ ಪಿಪಿ ವೃತ್ತದಲ್ಲಿ ಬಸ್ಸು ಬರುವುದನ್ನು ಗಮನಿಸದೆ ಆಟೋ ಚಾಲಕ ತಿರುವನ್ನು ತೆಗೆದುಕೊಳ್ಳುವಾಗ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಡಿಕ್ಕಿ  ಹೊಡೆದಿದ್ದರಿಂದ ಆಟೋ ಮುಂಭಾಗ ಜಕಮ್ ಗೊಂಡಿದ್ದು, ಯಾವುದೇ ಹೆಚ್ಚಿನ ಅನಾಹುತ ಸಂಭವಿಸದೆ ಆಟೋ ಚಾಲಕ ಸ್ವಲ್ಪದರಲ್ಲಿ ಪಾಲಾಗಿದ್ದಾರೆ.  ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ,

Continue Reading

Trending

error: Content is protected !!