Mandya
ಎನ್ ಡಿಎ ಅಭ್ಯರ್ಥಿ ಎರಡು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ – ಗುರುಪಾದಸ್ವಾಮಿ
ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ರವರು 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿ ಪ್ರಧಾನಿ ನರೇಂದ್ರ ಮೋದಿ ರವರ ಸರ್ಕಾರದ ಸಂಪುಟ ಆಡಳಿತದಲ್ಲಿ ಕೇಂದ್ರ ಸಚಿವರಾಗಲಿದ್ದಾರೆ ಎಂದು ಹಳೇ ಮೈಸೂರು ಭಾಗದ ವೀರಶೈವ ಹಾಗೂ ಬಿಜೆಪಿ ಮುಖಂಡ ಗುರುಪಾದಸ್ವಾಮಿ ಅಭಿಮತ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪ್ರಧಾನಿ ನರೇಂದ್ರ ಮೋದಿ ರವರ ಉತ್ತಮ ಆಡಳಿತದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ, ಕೇಂದ್ರ ಸರ್ಕಾರದ ಹತ್ತು ವರ್ಷದ ಸಾಧನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿದೆ, ಯುವ ಉದ್ಯಮಗಳ ಸ್ಥಾಪಕರಿಗೆ ಪ್ರೋತ್ಸಾಹ, ರೈತಾಪಿ ಕೃಷಿಕರು ಶ್ರಮಿಕ ವರ್ಗದವರನ್ನ ಮುಖ್ಯವಾಹಿನಿಗೆ ತರಲು ಮೋದಿಯವರು ವಿಶ್ವಕರ್ಮ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ, ಸಮಸ್ಥ ಸಮುದಾಯದವರನ್ನು ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಸಮಾನವಾಗಿ
ತೆಗೆದುಕೊಂಡು ಸಮಗ್ರ ಆಡಳಿತದ ಮೂಲಕ ಭಾರತವನ್ನು ವಿಶ್ವಗುರು ಎಂಬ ಹೆಗ್ಗಳಿಕೆಗೆ ಕಾರಣಕರ್ತರು ಮೋದಿಯವರು , ಈ ಭಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಹೆಚ್. ಡಿ ಕುಮಾರಸ್ವಾಮಿ ರವರನ್ನ 2 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆಯಿಂದ ಜಯಗಳಿಸುವಂತೆ ಮಂಡ್ಯ ಜನತೆ ಮುಂದಾಗಬೇಕಿದೆ. ಮಂಡ್ಯ ಎಂದರೆ ಇಂಡಿಯಾಗೆ ಗೊತ್ತು ಹಾಗಾಗಿ ಮಂಡ್ಯದ ಅಸ್ಮಿತೆ ಕೃಷಿ ರೈತಾಪಿ ಚಟುವಟಿಕೆಗಳು ಕಲೆ ಸಾಂಸ್ಕೃತಿಕತೆಯನ್ನು ಪ್ರವಾಸೋದ್ಯಮವನ್ನ ಅಭಿವೃದ್ಧಿ ಪಡಿಸಲು ಜಾಗತಿಕ ಮಟ್ಟದಲ್ಲಿ ಮಂಡ್ಯವನ್ನು ಮುಖ್ಯವಾಹಿನಿಯತ್ತ ಸೆಳೆಯಲು ಮಣ್ಣಿನ ಮಗ ಪ್ರತಿಯೊಬ್ಬ ರೈತರ ಕಷ್ಟಸುಖಗಳ ತಿಳಿದಿರುವ ಹೆಚ್.ಡಿ.ಕುಮಾರಸ್ವಾಮಿ ರವರು ಅತ್ಯುತ್ತಮ ಸಂಸದರಾಗಿ ಭವಿಷ್ಯದ ಸಚಿವರಾಗಿ ಕನ್ನಡಿಗರ ಕೀರ್ತಿಪತಾಕೆಯನ್ನ ಹಾರಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ರಾಜೇಂದ್ರ , ನವೀನ್ ಕುಮಾರ್, ರಂಗನಾಥ್ , ಪ್ರಭು ಸ್ವಾಮಿ , ರಾಜೇಶ್, ಪ್ರಸನ್ನ ಹಾಜರಿದ್ದರು.


Mandya
ಕೈಗಾರಿಕೆ ಅಭಿವೃದ್ಧಿ| ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲ ಶಾಸಕರ ಸಭೆ ಆಯೋಜಿಸಿ : ಡಿ.ಸಿ.ತಮ್ಮಣ್ಣ
ಮಂಡ್ಯ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಆಯೋಜಿಸಿ. ಆಹ್ವಾನಿಸಿದರೆ ಮಂಡ್ಯ ವಿಧಾನಸಭ ಕ್ಷೇತ್ರದ ಎಲ್ಲಾ ಮಾಜಿ, ಹಾಲಿ ಶಾಸಕರನ್ನು ಸಭೆಗೆ ಕರೆತರುತ್ತೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ತರಲಾಗದೇ ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎನ್ನುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಹೇಳಿಕೆ ಬಾಲಿಶವಾದುದ್ದು. ರಾಜ್ಯ ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗುವಂತೆ ತಾಕೀತು ಮಾಡಿದರು.

ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಗಳ ನಡುವೆ ಪೈಪೋಟೊ ಹೆಚ್ಚಾಗಿದೆ. ಈ ನಡುವೆ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸರ್ಕಾರ ಎಡವಿದೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಮಂಡ್ಯ ಜಿಲ್ಲೆ ಸೂಕ್ತವಾಗಿದೆ. ಆದರೆ ಇಲ್ಲಿ ಕೈಗಾರಿಕೆ ಸ್ಥಾಪಿಸಿ, ಉದ್ಯೋಗಾವಕಾಶ ಸೃಷ್ಠಿಸಲು ಸರಕಾರ ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ಮಂಡ್ಯ ಜಿಲ್ಲೆ ಬೆಂಗಳೂರು- ಮೈಸೂರು ಜಿಲ್ಲೆಗಳ ನಡುವಿನಲ್ಲಿದೆ. ಅಷ್ಟ ಪಥದ ರಸ್ತೆ, ದ್ವಿಪಥ ರೈಲು ಸಂಚಾರ ವ್ಯವಸ್ಥೆ, ನೀರಾವರಿ ಸೌಲಭ್ಯವಿದ್ದರೂ. ಕೈಗಾರಿಕೆಗೆ ಸೂಕ್ತ ಅವಕಾಶ ನಿರ್ಮಿಸಿಕೊqಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.

ಮಿಮ್ಸ್‌ಗೆ ಸಂಬಂಧ ಪಟ್ಟ ಸ್ಥಳ ಒತ್ತುವರಿ ತೆರವಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಇಚ್ಚಾಸಕ್ತಿ ತೋರುತ್ತಿಲ್ಲ. ಅವರಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವುದು ಬೇಕಾಗಿಲ್ಲ. ಆದ್ದರಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವರನ್ನು ಭೇಟಿ ಮಾಡುತ್ತಿರುವ ದೇಶದ ಇತರೇ ರಾಜ್ಯಗಳ ಸರಕಾರಗಳು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಜಿಲ್ಲೆಯಿಂದ ಆಯ್ಕೆಯಾದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಉದ್ಯೋಗ ಸಮಸ್ಯೆ ಬಗೆಹರಿಸಲು ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಅವರು ಕೇಂದ್ರ ಸಚಿವರ ಬಳಿಗೆ ತೆರಳಬೇಕೋ ಅಥವಾ ಕೇಂದ್ರ ಸಚಿವರೇ ಇವರ ಬಳಿಗೆ ಬರಬೇಕೋ. ಅವರು ಬಾರದೇ ಇದ್ದರೂ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು. ಆದರೆ ಜಿಲ್ಲಾ ಮಂತ್ರಿಗಳಾಗಿ ಸಭ್ಯತೆ ತೋರಬೇಕೆಂದರು.
2004ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಕ್ಯಮಂತ್ರಿ ಆದಮೇಲೆ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು, ಐಟಿ ಕಾಲೇಜುಗಳು, ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಏನು ಮಾಡಬೇಕು ಅದಕ್ಕೆ ರಾಜ್ಯ ಸರಕಾರ ಏನು ಸವಲತ್ತು ನೀಡಬೇಕು ಎಂದು ಚರ್ಚಿಸಲು ಸಭೆ ಆಯೋಜಿಸುವಂತೆ ಸಲಹೆ ನೀಡಿದರು.
ಬಾಯಿ ಇದೆ ಎಂಬ ಕಾರಣಕ್ಕೆ ಪತ್ರಕರ್ತರಿಗೆ ಬೆದರಿಕೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟ ಬಂದಂತೆ ಮಾತನಾಡ ಮಾತನಾಡಬೇಡಿ. ಅಧಿಕಾರ ಶಾಶ್ವತವಲ್ಲ. ಧರ್ಪ ಬಿಟ್ಟು ಸೌಜನ್ಯದಿಂದ ನಡೆದುಕೊಳ್ಳುವಂತೆ ಎಚ್ಚರಿಸಿದರು.
ಮಾಜಿ ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ನಾನಿರುವ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅಧಿಕಾರದಲ್ಲಿದ್ದು ಇದೀಗ ಬಹಳ ಎತ್ತರದಲ್ಲಿದ್ದಾರೆ. ಅವರು ಪತ್ರಕರ್ತರೊಂದಿಗೆ ನಡೆದುಕೊಂಡ ರೀತಿ ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದರು.
ಮಳವಳ್ಳಿ ಕಾರ್‍ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ದೊರೆತ ಗೌರವ, ಚಪ್ಪಾಳೆ, ಸೀಟಿಗಳ ಜೈಕಾರದ ಪರಿಣಾಮ ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮಗಳ ಮೇಲೆ ಕೋಪ ತೋರಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸಚಿವರ ಸಹಕಾರ ಬೇಡ ಎಂದು ರಾಜ್ಯ ಸರಕಾರ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಮಂಡ್ಯ ಜಿಲ್ಲೆಯಲ್ಲಿ ಆಡಳಿತಯಂತ್ರ ಸತ್ತಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳು- ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರಕಾರದಿಂದ ವೇತನ ದೊರೆಯುತ್ತದೆಯೋ, ಅಥವಾ ರಾಜ್ಯದ ಸಚಿವರೇ ವೇತನ ನೀಡುತ್ತಿದ್ದಾರೆಯೋ ತಿಳಿಯದಾಗಿದೆ. ನಾಗಮಂಗಲದಲ್ಲಿ ಸಾವಿರಾರು ಕೋಟಿ ರೂ ಮೌಲ್ಯದ ಗಣಿ ಲೂಟಿ ಮಾಡಲಾಗುತ್ತಿದೆ. ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಜಿಲ್ಲೆಯ ಅಧಿಕಾರಿಗಳೇ ರಸ್ತೆ ಮಾಡಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ನಾಗಮಂಗಲದಲ್ಲಿ 4600 ಎಕರೆ ಭೂಮಿಯನ್ನು ಬೇಕಾದವರಿಗೆ ಮಂಜೂರು ಮಾಡಿಕೊಡಲಾಗುತ್ತಿದೆ. ಸ್ಥಳೀಐ ಗುತ್ತಿಗೆದಾರರಿಗೆ ಟೆಂಡರ್ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಗುತ್ತಿಗೆದಾರರು ಸಾಯುವಂತಾಗಿದ್ದರೂ ಜಿಲ್ಲಾಧಿಕಾರಿಗಳು ಸುಮ್ಮನಿದ್ದಾರೆ. ಆಡಳಿತ ವ್ಯವಸ್ಥೆ ಜಿಲ್ಲೆಯಲ್ಲಿ ರೋಲ್‌ಕಾಲ್ ಕೆಲಸ ಮಾಡುತ್ತಿದೆ ಎಂದು ದೂರಿದರು.
ತುರವೇಕೆರೆಯಿಂದ ನಾಗಮಂಗಲ ರಸ್ತೆ ಆಧುನೀಕರಣ ಗುತ್ತಿಗೆಯನ್ನು ಸ್ಥಳಿಯ ಗುತ್ತಿಗೆದಾರರರಿಗೆ ನೀಡದೇ ಅನ್ಯರಿಗೆ ನೀಡಲಾಗುತ್ತಿದೆ. ಬೇನಾಮಿಯಾಗಿ ತಾವೇ ಗುತ್ತಿಗೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ನಾಗಮಂಗಲ ಕ್ಷೇತ್ರಕ್ಕೆ ತಾವು ವಿಪಕ್ಷದಲ್ಲಿದ್ದರೂ ಹೋರಾಡಿ ತಂದ ಅಭಿವೃದ್ಧಿ ಕಾರ್‍ಯಗಳು ಪೂರ್ಣಗೊಳ್ಳವಷ್ಟರಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬಂದು ಸಚಿವರು ತಮ್ಮದೆನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಒದಗಿಸಲು ಸರಕಾರಕ್ಕೆ ನಾನೆ ಪತ್ರ ಬರೆದಿದ್ದು, ಅದನ್ನು ಯಾರೋ ಶಾಸಕ ಎನ್ನಲಾಗುತ್ತಿದೆ. ಜಿಲ್ಲೆಗೆ ಕೈಗಾರಿಕೆಗಳ ಬಂದಲ್ಲಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಹೆಸರು ಬರಲಿದೆ ಎಂಬ ಕಾರಣಕ್ಕೆ ಸರಕಾರ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು, ಬೀಮ್ ಆರ್ಮಿ ಸಂಘಟನೆಯ ಅಂದಾನಿ ಇದ್ದರು.
Mandya
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಿರುವ ಹಾಗೇ ಸರ್ಕಾರ ಮುಂದಾಗಬೇಕು: ಎನ್.ನಾಗೇಶ್
ಮಂಡ್ಯ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದೇ, ಇರುವ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಸಲುವಾಗಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚಿ 15 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆ ತೆರಯುವುದು ಖಂಡನೀಯ ಎಂದರು.

ರಾಜ್ಯದ ಶೈಕ್ಷಣಿಕ ವಿಷಯದಲ್ಲಿ ರಾಮಕೃಷ್ಣ ಹೆಗಡೆ ಅವರ ಆಡಳಿತ ಮಹತ್ವದ್ದಾಗಿತ್ತು. 80ರ ದಶಕದ ಅವರ ಆಡಳತಾವಧಿಯ ವೇಳೆ ರಾಜ್ಯದಲ್ಲಿ 70-80 ಸಾವಿರ ಸರ್ಕಾರಿ ಶಾಲೆಗಳಿದ್ದವು. ಆದರೆ ಈಗ ಅದರ ಶೇ.50ರಷ್ಟಿವೆ. ಪ್ರತಿ ವರ್ಷ ರಾಜ್ಯದ ಶೈಕ್ಷಣಿಕ ಬಜೆಟ್‌ನಲ್ಲಿ 45-50 ಸಾವಿರ ಕೋಟಿ ಅನುದಾನ ಮೀಸಲಿಡಲಾಗುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಶೌಚಾಲಯ ಒದಗಿಸಲು ಪ್ರತಿವರ್ಷ 2-3 ಕೋಟಿ ರೂ. ಬಳಸಲಾಗುತ್ತಿದೆ. ಹಾಗಾದರೆ ಎಷ್ಟು ಶಾಲೆಗಳಲ್ಲಿ ಸಮರ್ಪಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದರು.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ವಾಣಿ ಎನ್.ಶೆಟ್ಟಿ ಮಾತನಾಡಿ, ಗ್ರಾಮಗಳಲ್ಲಿ ಶಾಲೆ ಇದ್ದರೂ ಕೇವಲ 10 ತಿಂಗಳ ಅವಧಿಯಲ್ಲಿ 26 ಸಾವಿರಕ್ಕೂ ಹೆಚ್ಚು ಬಾಲಗರ್ಭಿಣಿಯರು ಪತ್ತೆಯಾಗಿದ್ದಾರೆ. 4 ತಿಂಗಳಲ್ಲಿ 979 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ವರದಿಯಾಗಿದೆ ಎಂದು ತಿಳಿಸಿದರು.

ಇದಕ್ಕೆ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡದಿರುವುದೇ ಕಾರಣ. ಪ್ರಸ್ತಾಪಿತ ಯೋಜನೆಯಂತೆ ಶಾಲೆಗಳನ್ನು ಮುಚ್ಚಿ ದೂರದೂರಿಗೆ ಮಕ್ಕಳು ತೆರೆಳಬೇಕಾದರೆ ಇನ್ನೂ ಶೋಚನೀಯ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಎಸ್‌ಟಿ ಘಟಕದ ಅಧ್ಯಕ್ಷ ದೇವರಾಜ್, ಕಾರ್ಯಾಧ್ಯಕ್ಷ ಡಿ.ಎಂ.ಮಾದೇಗೌಡ, ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್‍ಯದರ್ಶಿ ರಿಯಾಜ್ ಅಹಮದ್, ಸಂಘಟನಾ ಕಾರ್‍ಯದರ್ಶಿ ಜಿ.ಮಂಜುನಾಥ್ ಇದ್ದರು.
Mandya
ಪೌತಿ ಖಾತಾ ಆಂದೋಲನದಲ್ಲಿ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡಿ : ಎನ್. ಚಲುವರಾಯಸ್ವಾಮಿ
ಮಂಡ್ಯ : ಜಿಲ್ಲೆಯಲ್ಲಿ ಸದರಿ ವರ್ಷ ಒಟ್ಟು 151 ಮನೆಗಳು ಮುಂಗಾರಿನಲ್ಲಿ ಹಾನಿಗೊಳಗಾಗಿದ್ದು, ಈಗಾಗಲೇ ಅರ್ಹರಿಗೆ 60.36 ಲಕ್ಷ ಪರಿಹಾರ ಧನವನ್ನು ನೀಡಲಾಗಿದೆ. ಅಧಿಕಾರಿಗಳು ಮನೆ ಹಾನಿಗೊಳಗಾದವರ ವಿವರಗಳನ್ನು ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್ ನಲ್ಲಿ ನಮೂದಿಸಿ ಶೀಘ್ರವಾಗಿ ಮನೆ ನಿರಾಶ್ರಿತರಿಗೆ ಪರಿಹಾರ ಒದಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನಿರಾವರಿ ನಿಗಮದ ಕೆರೆಗಳು ಶೇ 80 ರಷ್ಟು ತುಂಬಿದೆ. ಮಳೆ ಆಶ್ರಿತ ಕೆರೆಗಳು ಮಾತ್ರ ಕಡಿಮೆ ನೀರಿನ ಪ್ರಮಾಣವನ್ನು ಹೊಂದಿದೆ. ಜಿಲ್ಲೆಯಲ್ಲಿ 407 ಕೆರೆಗಳು ಶೇ 100 ರಷ್ಟು ಭರ್ತಿಯಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದರು.

ಹಿಂದೆ ದರಖಾಸ್ತ್ ಪೋಡಿ ಮಾಡಲು ಕನಿಷ್ಠ 5 ದಾಖಲೆಗಳ ಆಗತ್ಯ ಇತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ದಾಖಲೆ ಇದ್ದರೆ ಸಾಕು ದರಖಾಸ್ತ್ ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದಲ್ಲಿ ಸದರಿ ಅರ್ಜಿ ದಾರರ ಊರಿಗೆ ಹೋಗಿ ಪರಿಶೀಲನೆ ಮಾಡಿ ಯಾವುದೇ ಅಡಚಣೆ ಇಲ್ಲದೆ ಇದ್ದಲ್ಲಿ ಅವರಿಗೆ ದರಖಾಸ್ತ್ ಪೋಡಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸದರಿ ಯೋಜನೆಯನ್ನು ಜಾರಿಗೆ ತರಲಾಗುವುದು. ಮುಂದಿನ ಆರು ತಿಂಗಳೊಳಗಾಗಿ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡಿ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ 3.67.739 ಫಲಾನುಭವಿಗಳು ಇದ್ದು ಮಾಸಿಕ 37.58 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಸದರಿ ವರ್ಷ ಮೃತಪಟ್ಟವರು ಹಾಗೂ ಅನರ್ಹ 15.387 ಫಲಾನುಭವಿಗಳನ್ನು ರದ್ದು ಪಡಿಸಲಾಗಿದೆ. ಅಧಿಕಾರಿಗಳು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಸೆಪ್ಟೆಂಬರ್ ಮಾಹೆಯಿಂದ ಡಿಸೆಂಬರ್ 17 ರವರೆಗೂ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ 69.79 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು. 198 ಫಲಾನುಭವಿಗಳಿಗೆ 18.16 ಲಕ್ಷ ಪರಿಹಾರ ಧನ ವಿತರಣೆ ಮಾಡಲಾಗಿದೆ. ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಸಿ.ಡಿ.ಎಸ್ ನಾಲೆ ಒಡೆದು ಉಂಟಾಗಿದ್ದ ಬೆಳೆ ಹಾನಿಗೂ ಪರಿಹಾರ ನೀಡಲಾಗಿದೆ. ಎಸ್.ಡಿ.ಎಂ .ಎಫ್ ಅನುದಾನವನ್ನು ರೂ 5.50 ಕೋಟಿ ಮೊತ್ತದ 4 ಕಾಮಗಾರಿಗಳಲ್ಲಿ 1 ಪೂರ್ಣಗೊಂಡಿದ್ದು ಉಳಿದ 3 ಕಾಮಗಾರಿಗಳು ಶೇ 50 ರಷ್ಟು ಪೂರ್ಣಗೊಂಡಿದೆ ಎಂದರು.

ಜಲಧಾರೆ ಮತ್ತು ಜಲ್ ಜೀವನ್ ವಿಷನ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ. ವೇಗವಾಗಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಕಾಮಗಾರಿಯ ವೇಗವನ್ನು ಹೆಚ್ಚಿಸಿ. ಎಲ್ಲಿ ಸಮಸ್ಯೆ ಉಂಟಾಗಿದೆ ಅಧಿಕಾರಿಗಳು ನನ್ನ ಗಮನಕ್ಕೆ ತನ್ನಿ. ಜಿಲ್ಲೆಯಲ್ಲಿ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಿ ಇಲ್ಲದ ಪಕ್ಷದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ನರೇಂದ್ರ ಸ್ವಾಮಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಾವಿನ ಪ್ರಮಾಣ ಸಂಖ್ಯೆ ಕಳೆದ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಇಲ್ಲಿಯವರೆಗೂ ಮಂಡ್ಯ ವ್ಯಾಪ್ತಿಯಲ್ಲಿ 1.86 ಲಕ್ಷ ಜನರು ರಸ್ತೆ ನಿಯಮವನ್ನು ಉಲ್ಲಂಘಿಸಿದ್ದಾರೆ. ಇಲ್ಲಿಯವರೆಗೂ 4.53 ಕೋಟಿ ದಂಡವನ್ನು ವಸೂಲಾತಿ ಮಾಡಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆ 5 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಂಕ್ಷನ್ ಇರುವ ಕಡೆ ಹಾಗೂ ಹಳ್ಳಿಗಳಿಂದ ಹೈ ವೇ ಮುಟ್ಟುವ ಸ್ಥಳಗಳಲ್ಲಿ ದೀಪದ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.

ಜಲಧಾರೆ ಮತ್ತು ಜಲ ಜೀವನ್ ವಿಷನ್ ಯೋಜನೆಯಡಿ ಪೈಪ್ ಅಳವಡಿಸಲು ಕಾಂಕ್ರೀಟ್ ರಸ್ತೆ ಹಾಗೂ ಡಾಂಬರು ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಜನರಿಗೆ ಇದರಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ಜನಪ್ರತಿನಿಧಿಗಳು ಜನಸಾಮಾನ್ಯರೊಡನೆ ಸಂಪರ್ಕ ಹೊಂದಿದಾಗ ಜನರು ಇದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸದರಿ ರಸ್ತೆಯನ್ನು ಫೆಬ್ರವರಿ ಕೊನೆಯಲ್ಲಿ ಸರಿಪಡಿಸಬೇಕು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ವೃದ್ಧಿಸಲು ಡೀಸಿ ಮತ್ತು ಸಿ.ಇ.ಓ ವಿಶೇಷ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಳ್ಳಿ. ಕಳೆದ ಬಾರಿಗಿಂತ ಸದರಿ ವರ್ಷ ಫಲಿತಾಂಶ ವೃದ್ಧಿಸಬೇಕು. ಎಲ್ಲಾ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಠ್ಯಗಳನ್ನು ಮಾಡಿದ ಶಿಕ್ಷಕರ ವಿರುದ್ಧ ಕ್ರಮ ವಹಿಸಿ. ಶಿಥಿಲಗೊಂಡ ಶಾಲೆಗಳತ್ತ ಗಮನ ಹರಿಸಿ ಕ್ರಮವಹಿಸಿ. ಅಗತ್ಯವಿದ್ದಲ್ಲಿ ಶಾಸಕರ ಅನುದಾನದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, 2014ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸರ್ವೇ ಮಾಡಲಾಗಿದ್ದು ಜಿಲ್ಲೆಯಲ್ಲಿ 32,958.95 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸರ್ವೇ ಮಾಡಲಾಗಿದೆ. ಆದರೆ ಸದರಿ ಸಮೀಕ್ಷೆಯಲ್ಲಿ ಕೆಲವು ಲೋಪಗಳು ಕಂಡು ಬಂದಿದ್ದು. ಮತ್ತೆ ಹೋಬಳಿ ಮಟ್ಟದಲ್ಲಿ ಸರ್ವೇ ಅಧಿಕಾರಿಗಳನ್ನು ನೇಮಿಸಿ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಶೇ 42 ರಷ್ಟು ಸರ್ವೇ ನಡೆಸಲಾಗಿದೆ. ಮೂರು ತಿಂಗಳ ಒಳಗಾಗಿ ಸಮೀಕ್ಷೆಯನ್ನು ಮುಗಿಸಲಾಗುವುದು. ರಾಜ್ಯ ಡೀಮ್ಡ್ ಫಾರೆಸ್ಟ್ ಸರ್ವೇಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಪೌತಿಖಾತೆ ಆಂದೋಲನದಲ್ಲಿ ಆಫ್ ಲೈನ್ ನಲ್ಲಿ 67.659 ಖಾತೆಗಳನ್ನು ವಿಲೇವಾರಿ ಮಾಡಲಾಗಿದೆ. ಆನ್ಲೈನ್ ನಲ್ಲಿ 59.528 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪೌತಿ ಖಾತೆ ಆಂದೋಲನದಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದೆಯೂ ಸದರಿ ಸ್ಥಾನವನ್ನು ಕಾಪಾಡಿಕೊಳ್ಳಲಗುವುದು ಎಂದು ಹೇಳಿದರು.
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸದರಿ ವರ್ಷ ಜಿಲ್ಲೆಯಲ್ಲಿ 14 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ 9 ಅರ್ಹ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 4 ಪ್ರಕರಣಗಳು ತಿರ್ಮಾನ ಮಾಡಲು ಬಾಕಿ ಇದು 1 ಪ್ರಕರಣ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ, ಬೂದು ನೀರು ನಿರ್ವಹಣೆಯಲ್ಲಿ 1012 ಗುರಿ ಇದ್ದು ಇಲ್ಲಿಯವರೆಗೂ 687 ಕಾಮಗಾರಿಗಳನ್ನು. ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ವೃದ್ಧಿಸಲು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬರುವ ಸಂಭವನೀಯ ಪ್ರಶ್ನೆಗಳ ಬುಕ್ ಲೇಟ್ ( ಸ್ಟೂಡೆಂಟ್ ಕಾರ್ನರ್) ಮಾಡಿ ಮಕ್ಕಳಿಗೆ ಕಲಿಕೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಟಿ ಮಂಜು, ವಿಧಾನಪರಿಷತ್ ಶಾಸಕ ಕೆ. ವಿವೇಕಾನಂದ, ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ,ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, , ಕೆ.ಡಿ.ಪಿ ನಾಮ ನಿರ್ದೇಶನ ಸದಸ್ಯರುಗಳಾದ ನಟರಾಜು, ಆಶಾ, ದೇವಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
-
Hassan8 hours agoಜ. 1ಕ್ಕೆ ಹಾಸನದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ: ಹರೀಶ್
-
National9 hours agoಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರು ಅನಾರೋಗ್ಯದಿಂದ ನಿಧನ
-
Manglore6 hours agoನಾಪತ್ತೆಯಾಗಿದ್ದ ಯುವಕ ಮೃತದೇಹವಾಗಿ ಪತ್ತೆ
-
Mandya24 hours agoಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರಲ್ಲದ ಕೆಲವರಿಂದ ಗೊಂದಲ ಸೃಷ್ಠಿ ಆಯಿತು: ಎಂ.ಎಲ್.ಸುರೇಶ್
-
State6 hours agoಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಶಾಲೆಯನ್ನು ಸರ್ಕಾರ ಮುಚ್ಚೋದಿಲ್ಲ: ಮಧು ಬಂಗಾರಪ್ಪ
-
National5 hours agoಕೋಗಿಲು ಅತಿಕ್ರಮಣದಾರರಿಗೆ 2 ದಿನದಲ್ಲಿ ಪರಿಹಾರ ವ್ಯವಸ್ಥೆ: ಸರ್ಕಾರದ ಕ್ರಮಕ್ಕೆ ಪ್ರಹ್ಲಾದ್ ಜೋಶಿ ವ್ಯಂಗ್ಯ
-
Kodagu2 hours ago‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ಯ ಅಂತಿಮ ಪಂದ್ಯ : ಗೆದ್ದು ಬೀಗಿದ ಚೆಪ್ಪುಡಿರ, ಸೋಲೊಪ್ಪಿಕೊಂಡ ಕುಲ್ಲೇಟಿರ
-
Hassan2 hours agoವೈಕುಂಠ ಏಕಾದಶಿ: ತಾಲೂಕಿನಾದ್ಯಂತ ಶ್ರೀ ವೆಂಕಟೇಶ್ವರನಿಗೆ ವಿಶೇಷ ಪೂಜೆ
