Connect with us

Mandya

ನಾಯಿ ಹೊತ್ತೊಯ್ದು ತಿಂದು ಹಾಕಿದ ಚಿರತೆ

Published

on

ಮಂಡ್ಯ: ಜಿಲ್ಲೆಯ ಕನಗನಹಳ್ಳಿಯಲ್ಲಿ ನಾಯಿಯೊಂದನ್ನು ಹೊತ್ತೊಯ್ದು ಚಿರತೆ ತಿಂದು ಹಾಕಿರುವ ಘಟನೆ ವರದಿಯಾಗಿದೆ.

ಶನಿವಾರ ಮುಂಜಾನೆ 3.30 ಗಂಟೆ ಸುಮಾರಿನಲ್ಲಿ ನಾಯಿಯನ್ನು ಹಿಡಿದು ಸ್ವಲ್ಪ ದೂರ ಎಳೆದೊಯ್ದು ತಿಂದು ಹಾಕಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮೈಸೂರು- ಕೆ.ಆ‌ರ್.ಪೇಟೆ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರ ಮುಂದೆ ಅಳವಡಿಸಿದರುವ ಸಿಸಿ ಕ್ಯಾಮರದಿಂದ ಚಿರತೆ ಇರುವುದು ಧೃಡಪಟ್ಟಿದೆ.

ಅಲ್ಲದೆ ಶನಿವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಜಮೀನಿನ ಬಳಿ ತೆರಳಿದ್ದ ರೈತರಿಗೆ ಚಿರತೆ ಕಾಣಿಸಿಕೊಂಡು ಜೀವಭಯ ಹುಟ್ಟಿಸಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದ ಅಸುಪಾಸಿನಲ್ಲಿ ಕಾಣಿಸಿಕೊಂಡಿರುವ ಚಿರತೆ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಕೊಡಲೇ ಬೋನು ಇರಿಸಿ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Mandya

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066 ನೇ ಜಯಂತಿ ಮಹೋತ್ಸವದ ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು

Published

on

ಮಳವಳ್ಳಿ : ಡಿ.16ರಂದು ಮಳವಳ್ಳಿ ತಾಲ್ಲೂಕಿನಲ್ಲಿ ನಡೆಯಲಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಭಾರತದ ಸನ್ಮಾನ್ಯ ರಾಷ್ಟ್ರಪತಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಕಾರ್ಯಕ್ರಮದ ಪೂರ್ವಸಿದ್ಧತೆಗಳ ಕುರಿತು ಮಳವಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾರೆಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಪ್ರದೇಶವನ್ನು ಪರಿಶೀಲಿಸಿ ಮೂರು ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಸ್ಥಳಗಳನ್ನು ಸಿದ್ಧಪಡಿಸಲಾಗಿದ್ದು, ಕೂಡಲೇ ಲ್ಯಾಂಡಿಂಗ್ ಸ್ಥಳವನ್ನು ಗುರುತಿಸಲು ಸೂಚನೆ ನೀಡಿದರು.

ಡಿಸೆಂಬರ್ 14, 2025 ರ ಭಾನುವಾರದಂದು ಕೇಂದ್ರಿಂದ ಪರಿಶೀಲನಾ ತಂಡವು ಆಗಮಿಸಲಿರುವುದರಿಂದ ಗುರುತಿಸಿರುವ ಹೆಲಿಪ್ಯಾಡ್ ಅನ್ನು ಸಮತಟ್ಟಾಗಿಸಿ, ನಿಯಮಾನುಸಾರ ಅಂತರ ಕಾಯ್ದುಕೊಳ್ಳುವುದು ಮತ್ತು ಧೂಳು ರಹಿತ ವ್ಯವಸ್ಥೆ ಕಲ್ಪಿಸಿ, ಗ್ರೀನ್ ರೂಂ ನಿರ್ಮಾಣದ ಕುರಿತು ಪರಿಶೀಲನಾ ತಂಡದ ಅಭಿಪ್ರಾಯದ ಮೇರೆಗೆ ಅಂತಿಮವಾಗಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು.

ಮಾರ್ಗಸೂಚಿಯ ನಿಯಮಾವಳಿಗಳಂತೆ ಹೈಸ್ಪೀಡ್ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸಿ, ರಾಷ್ಟ್ರಪತಿ ಪ್ರೋಟೋಕಾಲ್ ಅನುಸಾರ ವೇದಿಕೆ, ಕುಳಿತುಕೊಳ್ಳುವ ಆಸನ ಹಾಗೂ ಜಾಗದ ವ್ಯವಸ್ಥೆಯನ್ನು ಮಾಡಿ, ವೇದಿಕೆಯ ಬಳಿಯೇ ತುರ್ತು ವೈದ್ಯಕೀಯ ತಂಡ ಇರುವಂತೆ ಸಮರ್ಪಕವಾಗಿ ಸಿದ್ಧಗೊಳಿಸಿ, ರಾಷ್ಟ್ರಪತಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ವಾಹನ ನಿಲುಗಡೆ ಪ್ರದೇಶವನ್ನು ಪರಿಶೀಲಿಸಿ, ಯಾವುದೇ ಸರ್ಕಾರಿ,ಖಾಸಗಿ ವಾಹನಗಳು ಸದರಿ ಪ್ರದೇಶದಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ರಾಷ್ಟ್ರಪತಿಗಳು ಆಗಮಿಸುವ ಮಾರ್ಗ ಮತ್ತು ವಾಹನ ನಿಲುಗಡೆ ಜಾಗಗಳನ್ನು ಪರಿಶೀಲಿಸಿ, ಯಾವುದೇ ನಿಯಮಗಳು ಉಲ್ಲಂಘನೆಯಾಗದಂತೆ ಕ್ರಮ ವಹಿಸಿ, ಗಣ್ಯರಿಗೆ, ದೃಶ್ಯ ಹಾಗೂ ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿದ್ಧಪಡಿಸಿರುವ ಯೋಜನೆಯ ಪ್ರಕಾರ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಿ. ವಸ್ತು ಪ್ರದರ್ಶನ ಮತ್ತು ಊಟ ವಿತರಣಾ ಸ್ಥಳಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸುಸಜ್ಜಿತವಾಗಿ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಸಿದ್ಧಪಡಿಸಿ, ರಾಷ್ಟ್ರಪತಿಗಳ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ, ಭದ್ರತೆಯಿಂದ ಕೂಡಿರಬೇಕು ಮತ್ತು ಪ್ರೋಟೋಕಾಲ್ ಕಾಪಾಡುವ ದೃಷ್ಟಿಯಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಸಮಯ ಪಾಲನೆ ಮಾಡಿ ದೋಷರಹಿತವಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕು ಎಂದು ಹೇಳಿದರು.

ಸದರಿ ಸ್ಥಳಕ್ಕೆ ಆಗಮಿಸಿದ ಧಾರ್ಮಿಕ ನಾಯಕರಿಗೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ರೂಪರೇಷೆ ಮತ್ತು ಕೈಗೊಂಡಿರುವ ವ್ಯವಸ್ಥೆ ಸಿದ್ದತೆಗಳ ಕುರಿತು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ ಕೆ.ಅನ್ನದಾನಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಉಪ ವಿಭಾಗಾಧಿಕಾರಿ ಶಿವಮೂರ್ತಿ, ಡಿವೈಎಸ್ಪಿ ಯಶವಂತ್ ಕುಮಾರ್,ಪುರಸಭೆ ಮುಖ್ಯಾಧಿಕಾರಿ ನಾಗರತ್ನ,ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸೋಮಶೇಖರ್, ವೃತ್ತ ನಿರೀಕ್ಷಕರಾದ ಶ್ರೀದರ್, ಬಸವರಾಜು, ಜಯಂತಿ ಮಹೋತ್ಸವದ ವಿವಿದ ಸಮಿತಿಗಳ ಪದಾಧಿಕಾರಿಗಳು, ಜೆ.ಎಸ್.ಎಸ್.ವಿದ್ಯಾಪೀಠದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಗಾಂಧಿ ಹಾಗೂ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿ: ಪ್ರೊ.ಜಯಪ್ರಕಾಶಗೌಡ

Published

on

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಗಣಕ ವಿಜ್ಞಾನ ವಿಭಾಗದ ವತಿಯಿಂದ ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಗಾಂಧಿ ವಿಚಾರಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಗಾಂಧೀಜಿಯವರ ಆಶಯದಂತೆ ಇಂದು ಹೆಣ್ಣು ಮಕ್ಕಳು ಸ್ವತಂತ್ರ ಮತ್ತು ಸಮಾನತೆಯಿಂದ ಬದುಕುತ್ತಿದ್ದಾರೆ.

ಮಹಾತ್ಮ ಗಾಂಧೀಜಿಯವರು ದೇಶದ ಸ್ವತಂತ್ರಕ್ಕಾಗಿ ಹೋರಾಡಿದರೆ ಡಾ. ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಮಾನತೆಗಾಗಿ ಹೋರಾಡಿದ್ದಾರೆ.

ಗಂಡು ಮಕ್ಕಳನ್ನು ಮೀರಿ ಎಲ್ಲಾ ಕ್ಷೇತ್ರದಲ್ಲೂ ಮುಂದುವರೆಯುತ್ತಿದ್ದಾರೆ. ಪ್ರಸ್ತುತ ಮಹಿಳೆಯರು ಪ್ರವೇಶ ಮಾಡದೇಯಿರುವ ಕ್ಷೇತ್ರವಿಲ್ಲ, ಭಾರತದ ಯಶಸ್ಸಿಗೆ ಹಾಗೂ ಬದಲಾವಣೆಗಳಿಗೆ ಹೆಣ್ಣುಮಕ್ಕಳ ಸಮಾನತೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ ಎಂದರು.

ಅವರ ಚಿಂತನೆ ನಿಲುವು, ಆದರ್ಶವನ್ನು ಇಂದಿನ ಯುವ ಪೀಳಿಗೆಗಳು ಪಾಲಿಸಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಹೇಳಿದರು.

ಗಾಂಧಿಯವರು ತಿಳಿಸದ ವಿಷಯವಿಲ್ಲ ಸ್ವಚ್ಛತೆ, ಶ್ರಮ, ಕೃಷಿ, ಆಹಾರ, ಆರೋಗ್ಯ ಹಾಗೂ ಜೀವನ ಮೌಲ್ಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಗಾಂಧೀಜಿಯವರು ಸರಳತೆಯ ಜೀವನಕ್ಕೆ ಪ್ರಮುಖವಾದ ಉದಾಹರಣೆಯಾಗಿದ್ದಾರೆ. ಸರಳತೆಯೇ ಜಗತ್ತಿನ ಸಾರ ಎಂದ ಅವರು ಶಸಸ್ತ್ರ ಹಿಡಿಯದೆ, ರಕ್ತ ಪಾತವಿಲ್ಲದೆ, ದೇಶಕ್ಕೆ ಸ್ವತಂತ್ರ ತಂದು ಕೊಟ್ಟಿದ್ದಾರೆ. ವಿಶ್ವದಲ್ಲಿಯೇ ಶಾಂತಿ, ಸೌಹಾರ್ದತೆಯಿಂದ ದೇಶಕ್ಕೆ ಸ್ವತಂತ್ರ ತಂದ ನಿದರ್ಶನ ಗಾಂಧಿಯವರದ್ದು ಮಾತ್ರ ಎಂದು ಬಣ್ಣಿಸಿದರು.

ಶಿಕ್ಷಣವೆಂಬುದು ಕೇವಲ ಉದ್ಯೋಗಕ್ಕಾಗಿ ಸೀಮಿತವಾಗಿರುವುದಲ್ಲ ಶಿಕ್ಷಣದಿಂದ ಅರಿವು, ಜ್ಞಾನ, ಜೀವನದ ಮೌಲ್ಯ ಎಲ್ಲವೂ ತಿಳಿಯಲು ಸಾಧ್ಯ. ವಿದ್ಯಾರ್ಥಿಗಳಾದ ನೀವು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು, ಪ್ರಶ್ನಿಸುವುದರ ಜತೆಗೆ ಕೇಳಿಸಿಕೊಳ್ಳುವ ಆಸಕ್ತಿಯನ್ನು ಸಹ ಮೈಗೂಡಿಸಿಕೊಳ್ಳಬೇಕು.

ವಿಷಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡಾಗ ಮಾತ್ರ ವಿಷಯದ ಆಳವಾಗಿ ಮಾಹಿತಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಮಂಡ್ಯ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಕೆ.ಶಿವಚಿತ್ತಪ್ಪ ಅವರು ಮಾತನಾಡಿ ಗಾಂಧೀಜಿಯವರು ಅಂದಿಗೂ ಇಂದಿಗೂ ಎಂದೆದಿಗೂ ಎಲ್ಲರಿಗೂ ಅನ್ವಯವಾಗುವಂತವರು ಆಗಾಗಿ ಗಾಂಧಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು.

ಆರ್ಥಿಕತೆಯ ಚಿಂತಕನಾಗಿ ದೇಶದಲ್ಲಿ ಬಡತನ ನಿವಾರಣೆಯಾಗಬೇಕು ಹಾಗೂ ದೇಶ ಸುಸ್ತಿರತೆ ಕಾಣಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಮಹಿಳೆಯರು ಭೌತಿಕ, ಆರ್ಥಿಕ, ರಾಜಕೀಯ ಹಾಗೂ ಸಮಾಜಿಕವಾಗಿ ಸಬಲೀಕರ ಹೊಂದಬೇಕು ಎಂದು ಗಾಂಧಿಯವರು ಮೊದಲಿಗೆ ಹೇಳಿದ್ದರು.

ಈ ನಿಟ್ಟಿನಲ್ಲಿ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಾಗಿ ಆರ್ಥಿಕ, ರಾಜಕೀಯ ಹಾಗೂ ಸಮಾಜಿಕವಾಗಿ ಅಲ್ಲದೆ ತಂತ್ರಜ್ಞಾನದಲ್ಲೂ ಸಾಧನೆ ಮಾಡುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಜಿ.ಬಿ.ಶಿವರಾಜು ಹಾಗೂ ರಾಜ್ಯ ಸಂಪನ್ಮೂಲ ಕೇಂದ್ರ ನಿವೃತ್ತ ನಿರ್ದೇಶಕರಾದ ಎಸ್.ತುಕಾರಾಂ ಅವರು ಉಪನ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಗಾಂಧಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಸುಮಾರಾಣಿ ಶಂಭು, ಉಪ ಕುಲ ಸಚಿವರಾದ ಡಾ. ಎಂ. ವೈ ಶಿವರಾಮು, ಮೌಲ್ಯಮಾಪನ ಕುಲಸಚಿವರಾದ ಜಿ. ವಿ ವೆಂಕಟರಮಣ, ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಜಿ. ವಿ ಪ್ರೇಮ್ ಸಿಂಗ್ ಹಾಜರಿದ್ದರು.

Continue Reading

Mandya

ಎಚ್ಐವಿ ಏಡ್ಸ್ ಬಗ್ಗೆ ಭಯಬೇಡ : ಎಸ್ ಡಿ ಬೆನ್ನೂರ್

Published

on

ಶ್ರೀರಂಗಪಟ್ಟಣ : ಎಚ್ಐವಿ, ಏಡ್ಸ್ ಇದೊಂದು ಭಯಾನಕ ಕಾಯಿಲೆ ಅಲ್ಲ. ಆದರೆ ಮರಣಾಂತಿಕ ಕಾಯಿಲೆ ಆಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂನ ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ವಸತಿ ನಿಲಯದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ವಸತಿ ನಿಲಯ ಮಕ್ಕಳಿಗಾಗಿ ಏರ್ಪಡಿಸಿದ್ದ ಎಚ್ಐವಿ,ಏಡ್ಸ್ ಅರಿವು ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದ ಅವರು ಎಚ್ಐವಿ ಸೋಂಕು ಹರಡುವ ಮಾರ್ಗಗಳು, ರೋಗ ಲಕ್ಷಣಗಳ ಬಗ್ಗೆ ತಿಳಿಸಿದರು.

ಹಾಗೆಯೇ ಪ್ರತಿಯೊಬ್ಬರೂ ಎಚ್ಐವಿ ಸೋಂಕು ಹರಡುವ ಮಾರ್ಗಗಳನ್ನು ತಿಳಿದುಕೊಂಡರೆ ಈ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ಎಚ್ಐವಿ ಸೋಂಕಿತರನ್ನು ಗೌರವದಿಂದ ಕಾಣಬೇಕು ರೋಗ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದರ ಜೊತೆ ಪ್ರತಿಯೊಬ್ಬರು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಾಗ ಮಾತ್ರ ರೋಗ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ.

ಆರೋಗ್ಯದ ಅರಿವು ಹಾಗೂ ತಿಳುವಳಿಕೆ ಹೆಚ್ಚಿಸುತ್ತಾ ಹೋದಾಗ ಮಾತ್ರ ಎಚ್ಐವಿ ಎಂತಹ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಕೇವಲ ವಿದ್ಯಾವಂತರಾದರೆ ಸಾಲದು ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ನಾವು ಸಂಪೂರ್ಣವಾಗಿ, ಪರಿಪೂರ್ಣರಾಗಿ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಿದಂತಾಗುತ್ತದೆ.

ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಆರೋಗ್ಯ ಇಲಾಖೆ ನಗರದಿಂದ, ಗ್ರಾಮ ಮಟ್ಟದವರೆಗೆ ಏಡ್ಸ್ ನಿಯಂತ್ರಣ ಕುರಿತು ಜನಜಾಗೃತರಾಗಿ ಐ ಇ ಸಿ ಪ್ರಚಾರಾಂದೋಲನ ಅಭಿಯಾನದ ಅಡಿಯಲ್ಲಿ ಜಾನಪದ ಕಲಾತಂಡಗಳ ಮೂಲಕ ಅರಿವು ಮೂಡಿಸಿ ಮನೆ ಮನೆಗೆ ಮಾಹಿತಿ ತಲುಪಿಸಲಾಗುತ್ತಿದೆ.

ಹಾಗೆಯೇ ಯುವ ಸಮೂಹ ಕೇಂದ್ರೀಕರಿಸಿ,ವಸತಿ ನಿಲಯಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಸಹ ವಿವಿಧ ರೀತಿಯ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದ ಅವರು, ಬನ್ನಿ ನಾವೆಲ್ಲರೂ ಸೇರಿ ಎಚ್ಐವಿ, ಏಡ್ಸ್ ಮುಕ್ತ ಜಿಲ್ಲೆಯಾಗಿಸಲು ಪಣ ತೊಡೋಣ ಎಂದರು.

ಸದರಿ ವೇಳೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲಲಿತ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಾಣಿ ವಯಕ್ತಿಕ ಶುಚಿತ್ವ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.

ಈ ವೇಳೆ ನಿಲಯ ಮೇಲ್ವಿಚಾರಕಿ ಲತಾ ಎನ್, ಆಶಾ ಕಾರ್ಯಕರ್ತೆ ಹೇಮಾ ಹಾಗೂ ಅಡುಗೆದಾರರು ಹಾಗೂ ವಸತಿ ನಿಲಯದಲ್ಲಿ ವಾಸವಿರುವ ಎಲ್ಲಾ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Continue Reading

Trending

error: Content is protected !!