Mandya
*ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ : ನ್ಯಾ.ಎಂ.ಡಿ ರೂಪ*

*ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ : ನ್ಯಾ.ಎಂ.ಡಿ
ರೂಪ*
ಶ್ರೀರಂಗಪಟ್ಟಣ : ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯನ್ನ ಆಚರಿಸಲಾಗುತ್ತಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಂ.ಡಿ ರೂಪ ಹೇಳಿದರು.
ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ, ತಾಲೂಕು ಆಡಳಿತ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ೨೦೧೧ ರಿಂದ ಪ್ರತಿ ವರ್ಷ ಜ. ೨೫ ರಂದು ದೇಶಾದ್ಯಂತ ರಾಷ್ಟೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಹೊಸ ಮತದಾರರನ್ನು ಸೆಳೆಯುವ, ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್. ಮಹದೇವಪ್ಪ ಮಾತನಾಡಿ, ಭಾರತದ ಚುನಾವಣಾ ಆಯೋಗದ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. “ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ತಿಳುವಳಿಕೆ ನೀಡಲು ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನ್ಯಾಯಾಧೀಶರಾದ ಹರೀಶ್‌ಕುಮಾರ್, ಹನುಮಂತ ರಾಯಪ್ಪ, ತಹಸೀಲ್ದಾರ್ ಪರಶುರಾಮ್ ಸತ್ತಿಗೆರಿ, ಬಿಇಒ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ನೌಕರರು, ಕಾಲೇಜು ವಿದ್ಯಾರ್ಥಿಗಳು ಇದ್ದರು.
Mandya
ವಿರೋಧ ಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡೋದನ್ನು ಬಿಡಬೇಕು: ಎನ್.ಚಲುವರಾಯಸ್ವಾಮಿ

ಬೆಂಗಳೂರು: ವಿರೋಧ ಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡೋದನ್ನೂ ಬಿಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರಿಗೆ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಳೆ(ಜೂ.17) ಪ್ರತಿಭಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆದ ಘಟನೆಯ ಬಗ್ಗೆ ದುಃಖ ಇದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ನೋವು ತಂದಿದೆ. ಎಲ್ಲಿ ತಪ್ಪಾಗಿದೆ ಎಂದು ಕ್ರಮ ಆಗಿದೆ. ಅಲ್ಲದೇ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಎಲ್ಲಿ ಏನೇ ತೊಂದರೆಯಾದರೂ ಅದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಅಹಮದಾಬಾದ್ ವಿಮಾನ ಅಪಘಾತದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ. ಉತ್ತರಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತವಾಗಿ ಸಾವಾಗಿರುವುದಕ್ಕೆ ಯಾರು ಜವಾಬ್ದಾರಿ ತೆಗೆದುಕೊಂಡಿದ್ದರು. ನಾವೂ ಈ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇವೆ. ಅದನ್ನು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಹೀಗೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಪಾಡಿಗೆ ಅವರು ಮಾಡಿಕೊಳ್ಳಲಿ ನಾವು ಅಡ್ಡಿಪಡಿಸುವುದಿಲ್ಲ ಎಂದಿದ್ದಾರೆ.
ನಾವೂ ಕಾಲ್ತುಳಿತ ಘಟನೆಯನ್ನು ಒಪ್ಪುವುದಿಲ್ಲ. ಮುಂದೆ ಹೀಗೆ ಆಗದಂತೆ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತದೆ. ಹಲವು ಕಡೆ ಇಂತಹ ಘಟನೆ ನಡೆದಿದೆ. ನಟ ಡಾ.ರಾಜ್ ಕುಮಾರ್ ಸಾವಿನ ಸಮಯದಲ್ಲಿ ಕಾಲ್ತುಳಿತ ಆಗಿದ್ದಾಗ ಕುಮಾರಸ್ವಾಮಿ ಹೊಣೆ ಹೊತ್ತರಾ? ವಿಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Mandya
ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ: ಡಾ.ಕುಮಾರ

ಮಂಡ್ಯ : ರೋಗಿಗಳ ಆರೈಕೆಗಾಗಿ ಬರುವ ಆರೈಕೆದಾರರು ತಂಗಲು ಸಿ.ಎಸ್.ಆರ್ ಅನುದಾನ ಬಳಸಿ ಮಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಇಂದು ಮಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಧಾಮದ ಹೊಣೆಗಾರಿಕೆಯನ್ನು ನಿಭಾಯಿಸಲು ನೋಡೆಲ್ ಅಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಪಿ. ಕೃಷ್ಣಕುಮಾರ್, ಉಸ್ತುವಾರಿ ಹಾಗೂ ಮೇಲ್ವಿಚರಣೆಗೆ ಮಿಮ್ಸ್ ಆಸ್ಪತ್ರೆಯ ಸ್ಥಾನಿಯ ವೈದ್ಯಾಧಿಕಾರಿ ಡಾ.ದರ್ಶನ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಧಾಮಕ್ಕೆ ರೂ 30 ಶುಲ್ಕ
ಆರೋಗ್ಯ ಧಾಮದ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ದಾಖಲಾತಿ ವಿಭಾಗಗಳಲ್ಲಿ ಫಲಕಗಳನ್ನು ಅಳವಡಿಸಿ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪರವಾಗಿ ಬರುವ ಆರೈಕೆದಾರರು “ಆರೋಗ್ಯ ಧಾಮದಲ್ಲಿ ತಂಗಲು ಇಚ್ಚೆಪಟ್ಟಲ್ಲಿ ದಿನಕ್ಕೆ (24 ಗಂಟೆಗಳು) ರೂ.30 ಶುಲ್ಕವನ್ನು ಪಾವತಿಸಿಕೊಂಡು ರಶೀದಿ ನೀಡಬೇಕು ಎಂದು ತಿಳಿಸಿದರು.
ವಿಧಿಸಲಾಗುವ ರೂ.30 ಶುಲ್ಕವನ್ನು ಬಳಕೆದಾರರ ನಿಧಿಗೆ ಜಮೆ ಮಾಡಬೇಕು ಮತ್ತು ಈ ಮೊತ್ತದಿಂದಲೇ ಆರೋಗ್ಯಧಾಮದ ನಿರ್ವಹಣೆ ಆರೋಗ್ಯಧಾಮಕ್ಕೆ ನೇಮಿಸಿಕೊಳ್ಳಲಾಗಿರುವ ಸಿಬ್ಬಂದಿಗಳು ವೇತನ ಪಾವತಿಗೆ ವೆಚ್ಚ ಮಾಡಬೇಕು. ರೋಗಿಯು ಆಸ್ಪತ್ರೆಯಲ್ಲಿ ದಾಖಲಾದ ನಂತರ ನೀಡಲಾಗುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಅವರ ಆರೈಕೆದಾರರಿಗೆ ಕಂಪ್ಯೂಟರ್ ಆಧಾರಿತ ಪಾವತಿ ಚೀಟಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಆರೈಕೆದಾರರು ರೋಗಿಯ ದಾಖಲಾತಿ ವಿವರ, ಆರೋಗ್ಯಧಾಮಕ್ಕೆ ದಾಖಲಾದ ಆರೈಕೆದಾರರ ದಾಖಲಾತಿ ಚೀಟಿ, ಆರೈಕೆದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಿ ಆರೋಗ್ಯಧಾಮದಲ್ಲಿ ದಾಖಲಾಗಬೇಕು. ಆರೋಗ್ಯಧಾಮದಲ್ಲಿ ಸ್ವಚ್ಛತೆ ಕಾಪಾಡಬೇಕು, ಅಧಿಕಾರಿಗಳು ಆರೈಕೆದಾರರು ಆರೋಗ್ಯಧಾಮದಲ್ಲಿ ಅನುಸರಿಸಬೇಕಾದ ನಿಯಮಗಳ ಫಲಕವನ್ನು ಅಳವಡಿಸಿ, ನಿಯಮ ಉಲ್ಲಂಘಿಸಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ಆರೋಗ್ಯಧಾಮದ ವಿವರಗಳು ಮತ್ತು ದಾಖಲಾದವರ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಆರೋಗ್ಯಧಾಮದಲ್ಲಿ ಸಿಸಿಟಿವಿ ಕಣ್ಗಾವಲನ್ನು ಏರ್ಪಡಿಸಲಾಗಿದೆ. ಪ್ರತಿನಿತ್ಯವೂ ಆರೋಗ್ಯ ಧಾಮವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ, ಸಾಧ್ಯವಾದಷ್ಟು ಶೀಘ್ರವಾಗಿ ಆರೋಗ್ಯ ಧಾಮದ ದಾಖಲಾತಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುವು ಮಾಡಿ ಎಂದು ತಿಳಿಸಿದರು.
ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ನ್ಯೂನತೆಗಳನ್ನು ತಿಳಿಸಿದ್ದು, ಅವುಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಈಗಾಗಲೇ ತಿಳಿಸಲಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಪರಿಶೀಲಿಸಲು ಆಗಿಂದಾಗ ಭೇಟಿ ನೀಡಿ ಪರಿಶೀಲಿಸುವಂತೆ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರಿಗೆ ತಿಳಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಹೊರ ರೋಗಿ ವಿಭಾಗದಲ್ಲಿ ವಿಕಲಚೇತನರಿಗೆ, ಪುರುಷರಿಗೆ, ಮಹಿಳೆಯರಿಗೆ, ಹಿರಿಯ ನಾಗರೀಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕೆಲಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಆರ್.ಓ ಅಳವಡಿಕೆಯ ಕೆಲಸ ಪ್ರಗತಿಯಲ್ಲಿದೆ ಎಂದರು.
ಸಭೆಯ ನಂತರ ಜಿಲ್ಲಾಧಿಕಾರಿಗಳು ಓ.ಪಿ.ಡಿ ಹಾಗೂ ಔಷಧಿ ವಿತರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ವಾಹನ ನಿಲುಗಡೆ ಸ್ಥಳಕ್ಕೆ ಭೇಟಿ ನೀಡಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು. ಎಂಟು ಗಂಟೆಯ ಅವಧಿಗೆ ರೂ 7/- ನಿಗದಿಯಾಗಿದ್ದು, ರೂ 10/- ಚೀಟಿಗಳು ಲಭ್ಯವಿದ್ದು, ಕಂಪ್ಯೂಟರ್ ಆಧಾರಿತ ಬಿಲ್ ನೀಡಿ ಸರಿಯಾಗಿ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Mandya
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು

ವರದಿ : ಅಲ್ಲಾಪಟ್ಟಣ ಸತೀಶ್
ಮಂಡ್ಯ : ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಂಗಾರ ಬಣ್ಣದ ಗೌರಿ ಮೀನೊಂದು ಬಲೆಗೆ ಬಿದ್ದಿದ್ದು, ಬರೋಬ್ಬರಿ ಒಂದು ಸಾವಿರ ರೂಪಾಯಿಗೆ ಮಾರಾಟವಾಗಿದೆ.
ತೀರಾ ಅಪರೂಪವೆಂಬ 04 ಕೆಜಿ ತೂಕವುಳ್ಳ ಬಂಗಾರದ ಬಣ್ಣದ ಮೀನನ್ನು ನೋಡಲು ಜನತೆ ಮುಗಿ ಬೀಳುತ್ತಿದ್ದು, ವಳಗೆರೆ ಮೆಣಸದ ರಾಜು ಎಂಬುವವರು ಒಂದು ಸಾವಿರ ರೂಪಾಯಿಗೆ ಕೊಂಡುಕೊಂಡಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಇಂದು ಮುಂಜಾನೆ ರಾಮಚಂದ್ರನಾಯಕ ಎಂಬುವವರು ಬಲೆ ಬೀಸಿದ್ದಾಗ ಬಲೆಗೆ ಬಂಗಾರ ಬಣ್ಣದ ಗೌರಿ ಮೀನು ಬಿದ್ದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಂಗಾರ ಬಣ್ಣದ ಗೌರಿ ಮೀನು ಅಪರೂಪದ ತಳಿಯಾಗಿದ್ದು, ಮುಳ್ಳುಗಳಿಲ್ಲದ ತಿನ್ನಲು ರುಚಿಕರವಾದ ಈ ಮೀನಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ ಎಂದು ಮೀನು ಮಾರಾಟಗಾರ ಬಲೆರಾಮು ತಿಳಿಸಿದ್ದಾರೆ.
-
Uncategorized23 hours ago
ಸೆಕ್ಯುರಿಟಿ ಸಿಬ್ಬಂದಿಗಳಿಂದ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರ ವಿರುದ್ದ ಎಫ್ಐಆರ್ ದಾಖಲು
-
Mandya24 hours ago
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀ ನಾರಾಯಣ್ ದಂಪತಿಗಳ 48ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ: ಗಣ್ಯರಿಂದ ಶುಭಹಾರೈಕೆ
-
Hassan11 hours ago
ಹಾಸನದ ಖಾಸಗಿ ಶಾಲಾ-ಕಾಲೇಜಿಗೆ ಬಾಂಬ್ ಹಾಕುವ ಬೆದರಿಕೆ
-
State23 hours ago
SSC ಯಿಂದ 14 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಸಲು ಯಾರು ಅರ್ಹರು?
-
Kodagu9 hours ago
ಪಂಚಾಯತಿಯಲ್ಲಿ ಶೇ.25 ನಿಧಿಯಲ್ಲಿ ಹೊಲಿಗೆ ಯಂತ್ರ ವಿತರಣೆ.
-
Chikmagalur12 hours ago
ಕೊಪ್ಪ ತಾಲ್ಲೂಕಿನಲ್ಲಿ ಬೃಹತ್ ಗಾತ್ರದ ಮರ ಉರುಳಿ ರಸ್ತೆ ಬಂದ್
-
Mandya5 hours ago
ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು
-
Kodagu12 hours ago
ಕೊಡವರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ